ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿ ಇಂದಿಗೆ ಒಂದು ವರ್ಷ. ಟೀಮ್ ಇಂಡಿಯಾಗೆ ವಿದಾಯ ಹೇಳಿದರೂ ಧೋನಿಯ ಕ್ರೇಜ್ ಇನ್ನೂ ಕೂಡ ಹಾಗೆ ಉಳಿದಿದೆ. ಹೀಗಾಗಿಯೇ ಧೋನಿ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕ್ಕೊಳ್ಳುತ್ತಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಧೋನಿಗೆ ಅಭಿಮಾನಿಗಳ ದಂಡೇ ಇದೆ. ಆದರೆ ಇಲ್ಲೊಬ್ಬರು ಅಭಿಮಾನಿ ಇದ್ದಾರೆ. ಅವರು ಅಂತಿಂಥ ಫ್ಯಾನ್ ಅಲ್ಲ. ಮಹೇಂದ್ರ ಸಿಂಗ್ ಧೋನಿಗಾಗಿ ಜೀವ ಕೊಡಲು ರೆಡಿಯಿರುವ ಅಪ್ಪಟ ಅಭಿಮಾನಿ.
ಹೌದು, ಆತನ ಹೆಸರು ಅಜಯ್ ಗಿಲ್. ಧೋನಿಯನ್ನು ಭೇಟಿಯಾಗಲು ಈತ ಹರ್ಯಾಣದಿಂದ ರಾಂಚಿಗೆ ನಡೆದುಕೊಂಡೇ ಬಂದಿದ್ದಾನೆ. ಧೋನಿ ನಿವೃತ್ತಿ ಘೋಷಿಸಿದ ಆಗಸ್ಟ್ 15 ರಂದು ಧೋನಿಯನ್ನು ಭೇಟಿಯಾಗುವ ಉದ್ದೇಶದೊಂದಿಗೆ ಕಾಲ್ನಡಿಗೆ ಶುರು ಮಾಡಿಕೊಂಡಿದ್ದ. ಅದರಂತೆ 16 ದಿನಗಳ ಬಳಿಕ ಧೋನಿಯ ತವರು ರಾಂಚಿಗೆ ತಲುಪಿದ್ದಾರೆ. ಅದು ಕೂಡ ಬರೋಬ್ಬರಿ 1400 ಕಿ.ಮೀ ನಡೆದುಕೊಂಡು ಬಂದು ಎಂಬುದು ವಿಶೇಷ.
18 ವರ್ಷದ ಅಜಯ್ ಗಿಲ್ ವೃತ್ತಿಯಲ್ಲಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ತನ್ನ ಕೆಲಸಕ್ಕೆ ರಜೆ ಹಾಕಿ ಜುಲೈ 29 ರಂದು ಪ್ರಯಾಣವನ್ನು ಆರಂಭಿಸಿದ್ದ. ಧೋನಿ ಭೇಟಿಯ ಕಾಲ್ನಡಿಗೆ ಆರಂಭವಾಗುವ ಮುನ್ನ ತನ್ನ ಕೂದಲಿಗೆ ಹಳದಿ, ಕಿತ್ತಳೆ ಮತ್ತು ತಿಳಿ-ಕಡು ನೀಲಿ ಬಣ್ಣವನ್ನು ನೀಡಿ, ತಲೆಯ ಮೇಲೆ ‘ಧೋನಿ’ ಮತ್ತು ‘ಮಾಹಿ’ ಬರೆದುಕೊಂಡು ಅಭಿಮಾನ ಮೆರೆದಿದ್ದ. ತಮ್ಮ ಕಾಲ್ನಡಿಗೆ ವೇಳೆ ಎಲ್ಲರೂ ನನ್ನ ಲುಕ್ ಗಮನಿಸುತ್ತಿದ್ದರು. ಅದರಲ್ಲೂ ಕೆಲ ಧೋನಿ ಅಭಿಮಾನಿಗಳು ನನ್ನ ಮಾತನಾಡಿಸುತ್ತಿದ್ದರು ಎಂದು ಗಿಲ್ ಸಂತಸ ವ್ಯಕ್ತಪಡಿಸಿದ್ದಾನೆ.
ಇನ್ನು ಕ್ರಿಕೆಟ್ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಗಿಲ್ಗೂ ಧೋನಿಯಂತೆ ಕ್ರಿಕೆಟಿಗನಾಗಬೇಕೆಂಬ ಆಸೆಯಿದೆ. ಅದರಂತೆ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದ. ಆದರೆ ಕಳೆದ ವರ್ಷ ಧೋನಿ ನಿವೃತ್ತಿಯಾದ ಬಳಿಕ, ಕ್ರಿಕೆಟ್ ಆಟವಾಡುವುದನ್ನು ಬಿಟ್ಟಿದ್ದಾನಂತೆ. ಇನ್ನು ಧೋನಿಯನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದ ನಂತರ ಹೊಸದಾಗಿ ಇನಿಂಗ್ಸ್ ಆರಂಭಿಸಬೇಕೆಂದು ಬಯಸಿದ್ದಾನೆ. ಇದೇ ಆಸೆಯೊಂದಿಗೆ 1400 ಕಿ.ಮೀ ದೂರ ನಡೆದುಕೊಂಡು ಬಂದಿದ್ದ.
ಅದಾಗ್ಯೂ ಅಜಯ್ಗೆ ತನ್ನ ನೆಚ್ಚಿನ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗಲು ಮಾತ್ರ ಸಾಧ್ಯವಾಗಿಲ್ಲ. ಅದಾಗಲೇ ಧೋನಿ ಐಪಿಎಲ್ಗಾಗಿ ಚೆನ್ನೈಗೆ ತೆರಳಿ ಅಲ್ಲಿಂದ ಯುಎಇಗೆ ಪ್ರಯಾಣ ಬೆಳೆಸಿದ್ದರು. ಕೂಲ್ ಕ್ಯಾಪ್ಟನ್ನನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ನೋವನ್ನು ಗಮನಿಸಿದ ಅನುರಾಗ್ ಚಾವ್ಲಾ ಎನ್ನುವವರು ಹಾಗೂ ಆತನ ಸ್ನೇಹಿತರು ಅಜಯ್ಗೆ ಮನೆಗೆ ಹಿಂತಿರುಗಲು ಟಿಕೆಟ್ ತೆಗೆದುಕೊಟ್ಟು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(MS Dhoni fan walks 1400 kilometers from haryana to ranchi only to meet his favorite Cricketer)