MS Dhoni: ಕ್ಯಾಪ್ಟನ್ ಕೂಲ್​ ಧೋನಿಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್! ಕಾರಣವೇನು?

| Updated By: ಪೃಥ್ವಿಶಂಕರ

Updated on: Jul 25, 2022 | 5:06 PM

MS Dhoni: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ . ಅಮ್ರಪಾಲಿ ಪ್ರಕರಣದಲ್ಲಿ ಈ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲ, ಆಮ್ರಪಾಲಿ ಗ್ರೂಪ್ ಪ್ರಕರಣದಲ್ಲಿ ಆರಂಭಿಸಲಾಗಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ.

MS Dhoni: ಕ್ಯಾಪ್ಟನ್ ಕೂಲ್​ ಧೋನಿಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್! ಕಾರಣವೇನು?
ಈಗ ಧೋನಿಯವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಹಿ ಯಾವಾಗ ಪೊಲೀಸ್ ಆದರು ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಆದರೆ ಈ ಫೋಟೋದ ಹಿಂದಿನ ಕಹಾನಿ ಏನೆಂದರೆ, ಧೋನಿ ಒಂದು ಜಾಹೀರಾತು ಶೂಟ್‌ಗಾಗಿ ಪೊಲೀಸ್ ವೇಶದಲ್ಲಿ ಕಾಣಿಸಿಕೊಂಡಿದ್ದಾರೆ.
Follow us on

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ (MS Dhoni) ಸುಪ್ರೀಂ ಕೋರ್ಟ್ (Supreme Court) ನೋಟಿಸ್ ನೀಡಿದೆ . ಅಮ್ರಪಾಲಿ ಪ್ರಕರಣದಲ್ಲಿ ಈ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲ, ಆಮ್ರಪಾಲಿ ಗ್ರೂಪ್ ಪ್ರಕರಣದಲ್ಲಿ ಆರಂಭಿಸಲಾಗಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಧೋನಿ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಮಧ್ಯಸ್ಥಿಕೆಗೆ ಆದೇಶಿಸಿತ್ತು. ಆಮ್ರಪಾಲಿ ಗ್ರೂಪ್ (Amrapali Group) ತನ್ನ ಶುಲ್ಕವನ್ನು ಪಾವತಿಸಿಲ್ಲ ಎಂದು ಧೋನಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಹೈಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಕೋರಿದ್ದರು. ಇದೀಗ ಈ ಪ್ರಕರಣದಲ್ಲಿ ಧೋನಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಧೋನಿ ಆ ಅರ್ಜಿಯ ನಂತರ ಆಮ್ರಪಾಲಿ ಗ್ರೂಪ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಧೋನಿ ಒಂದು ಕಾಲದಲ್ಲಿ ಆಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕಾದ ವಿಷಯ. ಆದರೆ, 2016ರಲ್ಲಿ ಆಮ್ರಪಾಲಿ ಗ್ರೂಪ್‌ನಿಂದ ಬೇರ್ಪಟ್ಟ ಧೋನಿ ತನಗೆ ಶುಲ್ಕದ ರೀತಿಯಲ್ಲಿ ಬರಬೇಕಾದ 40 ಕೋಟಿ ರೂ.ಗಳನ್ನು ಕೊಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಮ್ರಪಾಲಿ ಗ್ರೂಪ್‌ನ ವಿವಿಧ ಯೋಜನೆಗಳಲ್ಲಿ ಮನೆಗಳನ್ನು ಖರೀದಿಸಿದ ಧೋನಿ ಸೇರಿದಂತೆ 1800 ಜನರಿಗೆ ಸುಪ್ರೀಂ ಕೋರ್ಟ್ ನೇಮಿಸಿರುವ ರಿಸೀವರ್ ನೋಟಿಸ್ ಕಳುಹಿಸಿದ್ದಾರೆ. ಇವರೆಲ್ಲರಿಗೂ 15 ದಿನದೊಳಗೆ ಹಣ ಜಮಾ ಮಾಡುವಂತೆ ಸೂಚಿಸಲಾಗಿದೆ.

ಕೈಗಾರಿಕಾ ಜಗತ್ತಿನಲ್ಲೂ ಬಲಿಷ್ಠ ಬ್ಯಾಟಿಂಗ್

ಇದನ್ನೂ ಓದಿ
Hardik Pandya: ಟೀಂ ಇಂಡಿಯಾ ವಿಶ್ವಕಪ್ ಸೋಲಲು ಹಾರ್ದಿಕ್ ಪಾಂಡ್ಯ ಕಾರಣ! ರವಿಶಾಸ್ತ್ರಿ ಶಾಕಿಂಗ್ ಹೇಳಿಕೆ
IND vs WI: ಕೆರಿಬಿಯನ್ ದೈತ್ಯರನ್ನು ಮಣಿಸಿ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ದಂಡದ ಬರೆ ಎಳೆದ ಐಸಿಸಿ..!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಎಸೆದ ಮೂವರು ದಿಗ್ಗಜ ಬೌಲರ್‌ಗಳು ಯಾರು ಗೊತ್ತಾ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬಿಸಿನೆಸ್ ಲೋಕದಲ್ಲಿ ಹಾಗೂ ಕ್ರಿಕೆಟ್ ಪಿಚ್‌ನಲ್ಲಿ ಸಖತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಧೋನಿ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕ್ರಿಕೆಟ್ ಪಿಚ್‌ನಂತೆ ಇಲ್ಲೂ ಹೊಸ ಆಟಗಾರರ ಮೇಲೆ ನಂಬಿಕೆ ಇಟ್ಟಂತಿದೆ. ಅದಕ್ಕಾಗಿಯೇ ಧೋನಿ ಅನೇಕ ಸ್ಟಾರ್ಟಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕಾರ್ಸ್ 24, ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಕಂಪನಿ ಮತ್ತು ಒಳಾಂಗಣ ಅಲಂಕಾರ ಕಂಪನಿಯಾದ ಹೋಮ್‌ಲೇನ್‌ನಲ್ಲಿ ಡ್ರೋನ್ ತಯಾರಕ ಗರುಡಾ ಏರೋಸ್ಪೇಸ್‌ನಂತಹ ಹಲವಾರು ಕಂಪನಿಗಳಲ್ಲಿ ಅವರು ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದಾರೆ. ಇದಲ್ಲದೇ ರಾಂಚಿಯಲ್ಲಿ ಹೋಟೆಲ್ ಕೂಡ ಹೊಂದಿದ್ದಾರೆ. ಸಾವಯವ ಕೃಷಿಯನ್ನೂ ಮಾಡುತ್ತಾರೆ.

ಡ್ರೋನ್‌ಗಳನ್ನು ತಯಾರಿಸುವ ಕಂಪನಿಯಲ್ಲಿ ಹೂಡಿಕೆ

ಗರುಡ ಏರೋಸ್ಪೇಸ್ ಭಾರತದ ಮಾಜಿ ನಾಯಕರಾಗಿರುವ ಧೋನಿ ಅವರ ಪೋರ್ಟ್‌ಫೋಲಿಯೊದಲ್ಲಿರುವ ಹೊಸ ಕಂಪನಿಯಾಗಿದೆ. ಧೋನಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಡ್ರೋನ್ ವ್ಯವಹಾರದಲ್ಲಿ ಹೂಡಿಕೆಯನ್ನು ಘೋಷಿಸಿದರು. ಅವರು ಈ ಕಂಪನಿಯಲ್ಲಿ ಹೂಡಿಕೆ ಮಾಡಿರುವುದು ಮಾತ್ರವಲ್ಲದೆ ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಆದರೆ, ಅವರು ಗರುಡ ಏರೋಸ್ಪೇಸ್‌ನಲ್ಲಿ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಕಂಪನಿಯನ್ನು 2015 ರಲ್ಲಿ ಪ್ರಾರಂಭಿಸಲಾಗಿದ್ದು, ಕಡಿಮೆ ಬಜೆಟ್ ಡ್ರೋನ್ ಸಂಬಂಧಿತ ಪರಿಹಾರಗಳನ್ನು ಒದಗಿಸುವುದರ ಮೇಲೆ ಕಂಪನಿಯ ಗಮನವನ್ನು ಹೊಂದಿದೆ. ಗರುಡ ಏರೋಸ್ಪೇಸ್ ಸ್ಯಾನಿಟೈಸೇಶನ್, ಕೃಷಿ, ಮ್ಯಾಪಿಂಗ್, ಭದ್ರತೆ, ವಿತರಣೆ ಮುಂತಾದ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ.