Happy Birthday MS Dhoni: ಕ್ಲಾಸಿಗೆ ಚಕ್ಕರ್ ಆಟಕ್ಕೆ ಹಾಜರ್; ಧೋನಿ ಸ್ಟಡೀಸ್​ನಲ್ಲಿ ಹೇಗಿದ್ದರು ಗೊತ್ತಾ?

Happy Birthday MS Dhoni: ಓದುವುದರಲ್ಲಿ ನಾನು ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದು ಧೋನಿ ಹೇಳಿಕೊಂಡಿದ್ದಾರೆ. 10ನೇ ತರಗತಿಯಲ್ಲಿ ಶೇ 66 ಮತ್ತು 12ನೇ ತರಗತಿಯಲ್ಲಿ ಶೇ 56 ಅಂಕ ಪಡೆದಿದ್ದರು.

TV9 Web
| Updated By: ಪೃಥ್ವಿಶಂಕರ

Updated on:Jul 07, 2022 | 4:34 PM

ಧೋನಿ ತಮ್ಮ ಶಾಲಾ ದಿನಗಳಿಂದಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು, ಆದರೆ ಭಾರತ ತಂಡದ ಭಾಗವಾಗಲು ಅವರಿಗೆ ಹಲವು ವರ್ಷಗಳೇ ಬೇಕಾಯಿತು. ಧೋನಿಗೆ ನಮ್ಮ ದೇಶದ ಪರ ಆಡುವ ಅವಕಾಶ ಸಿಕ್ಕಿದ ತಕ್ಷಣ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ನಿಧಾನವಾಗಿ ಕ್ರಿಕೆಟ್ ಜಗತ್ತಿನಲ್ಲಿ ನೆಲೆಯೂರಿದರು. ಟೀಂ ಇಂಡಿಯಾದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನು ಕ್ರಿಕೆಟ್ ಪಿಚ್‌ನಲ್ಲಿ ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಆದರೆ ಅವರು ಅಧ್ಯಯನದಲ್ಲಿ ಹೇಗಿದ್ದರು ಗೊತ್ತಾ?

1 / 5
ಭಾರತದ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ 1981 ರಲ್ಲಿ ಜನಿಸಿದ ಧೋನಿ ತಮ್ಮ ಆರಂಭಿಕ ಶಿಕ್ಷಣವನ್ನು ಡಿಎವಿ ಜವಾಹರ್ ವಿದ್ಯಾ ಮಂದಿರ ಶಾಲೆಯಲ್ಲಿ ಪಡೆದರು. 12ನೇ ತರಗತಿ ಓದಿದ ಬಳಿಕ ಕ್ಸೇವಿಯರ್ ಕಾಲೇಜು ಸೆಟ್‌ಗೆ ಸೇರಿಕೊಂಡಿದ್ದರು. ಆದರೆ ಕ್ರಿಕೆಟ್‌ಗಾಗಿ, ಧೋನಿ ತನ್ನ ಅಧ್ಯಯನದೊಂದಿಗೆ ರಾಜಿ ಮಾಡಿಕೊಳ್ಳಬೇಕಾಯಿತು. ಹೀಗಾಗಿ ಧೋನಿ ತನ್ನ ಅಧ್ಯಯನವನ್ನು ಮಧ್ಯದಲ್ಲಿಯೇ ಕೈಬಿಡಬೇಕಾಯಿತು.

2 / 5
Happy Birthday MS Dhoni: ಕ್ಲಾಸಿಗೆ ಚಕ್ಕರ್ ಆಟಕ್ಕೆ ಹಾಜರ್; ಧೋನಿ ಸ್ಟಡೀಸ್​ನಲ್ಲಿ ಹೇಗಿದ್ದರು ಗೊತ್ತಾ?

2017 ರಲ್ಲಿ, ಮಹೇಂದ್ರ ಸಿಂಗ್ ಧೋನಿ ಶಾಲೆಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಈ ವೇಳೆ ಅವರು ತಮ್ಮ ಶಿಕ್ಷಣ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಓದುವುದರಲ್ಲಿ ನಾನು ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದು ಧೋನಿ ಹೇಳಿಕೊಂಡಿದ್ದಾರೆ. 10ನೇ ತರಗತಿಯಲ್ಲಿ ಶೇ 66 ಮತ್ತು 12ನೇ ತರಗತಿಯಲ್ಲಿ ಶೇ 56 ಅಂಕ ಪಡೆದಿದ್ದರು. ಧೋನಿ 12ನೇ ತರಗತಿಯಲ್ಲಿ ಮೊದಲ ಬಾರಿಗೆ ಕ್ಲಾಸ್​ಗೆ ಬಂಕ್ ಮಾಡಿದರು ಎಂದು ಹೇಳಿದರು. ಧೋನಿ ಕ್ರಿಕೆಟ್‌ಗೆ ಬರುವ ಮೊದಲು ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಈ ವಿಷಯ ಎಲ್ಲರಿಗೂ ಗೊತ್ತು. ಈ ಸಮಯದಲ್ಲಿ ಅವರು ಬಂಗಾಳದ ಖರಗ್‌ಪುರ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

3 / 5
Happy Birthday MS Dhoni: ಕ್ಲಾಸಿಗೆ ಚಕ್ಕರ್ ಆಟಕ್ಕೆ ಹಾಜರ್; ಧೋನಿ ಸ್ಟಡೀಸ್​ನಲ್ಲಿ ಹೇಗಿದ್ದರು ಗೊತ್ತಾ?

ಧೋನಿ 12 ನೇ ತರಗತಿಯಲ್ಲಿದ್ದಾಗ ಪರೀಕ್ಷೆಯ ಸಮಯದಲ್ಲಿ ಧೋನಿ, ರಾಂಚಿಯಿಂದ ಹೊರಗೆ ಹೋಗಿ ಪಂದ್ಯಗಳನ್ನು ಆಡಬೇಕಾಗಿತ್ತು. ಆ ವೇಳೆಗೆ ತಂದೆಯಿಂದ ಅನುಮತಿ ಪಡೆಯಬೇಕಿತ್ತು. ತಡಬಡಾಯಿಸಿ ತಾಯಿಯ ಮೂಲಕ ತಂದೆಗೆ ವಿಷಯ ತಿಳಿಸಿದ್ದಾರೆ. ವರ್ಷವಿಡೀ ತಯಾರಿ ನಡೆಸಿದರೆ ಒಂದು ದಿನವೂ ವ್ಯತ್ಯಾಸವಾಗುವುದಿಲ್ಲ ಎಂದು ಅವರ ತಂದೆ ಪಾನ್ ಸಿಂಗ್ ಹೇಳಿದ್ದರಂತೆ. ಇದನ್ನು ಹೇಳುತ್ತಾ ಧೋನಿ, ಶಾಲೆಯಲ್ಲಿ ನೀವು ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಮತ್ತು ಯಾವ ಕ್ರೀಡೆಯಲ್ಲಿ ನೀವು ಯಾವ ಕೆಲಸದಲ್ಲಿ ನಿಪುಣರಾಗಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಧೋನಿ ಹೇಳಿದರು.

4 / 5
Happy Birthday MS Dhoni: ಕ್ಲಾಸಿಗೆ ಚಕ್ಕರ್ ಆಟಕ್ಕೆ ಹಾಜರ್; ಧೋನಿ ಸ್ಟಡೀಸ್​ನಲ್ಲಿ ಹೇಗಿದ್ದರು ಗೊತ್ತಾ?

2018 ರಲ್ಲಿ ಧೋನಿ, ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದರು. 2009 ರಲ್ಲಿ, ಅವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಸಹ ಪಡೆದರು. 2007-2008ರಲ್ಲಿ ಅವರಿಗೆ ಭಾರತದ ಅತ್ಯುನ್ನತ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ನಂತರ 2008 ಮತ್ತು 2009 ರಲ್ಲಿ ICC ODI ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದರು. ಧೋನಿ 2006, 2008, 2009, 2010, 2011, 2012, 2013, 2014 ವರ್ಷಗಳಲ್ಲಿ ICC ವಿಶ್ವ ODI XI ಪ್ರಶಸ್ತಿಯನ್ನು ಪಡೆದರು. ಜೊತೆಗೆ 2009, 2010 ಮತ್ತು 2013 ರಲ್ಲಿ ICC ಟೆಸ್ಟ್ XI ಪ್ರಶಸ್ತಿಯನ್ನು ಸಹ ಪಡೆದರು. 2011 ರಲ್ಲಿ, ಧೋನಿ ವರ್ಷದ ಕ್ಯಾಸ್ಟ್ರೋಲ್ ಇಂಡಿಯನ್ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದರು. 2006 ರಲ್ಲಿ, ಮಹೀಯನ್ನು ವರ್ಷದ MTV ಯೂತ್ ಐಕಾನ್ ಎಂದು ಹೆಸರಿಸಲಾಯಿತು. 2013 ರಲ್ಲಿ, ಧೋನಿಗೆ ಎಲ್ಜಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ನೀಡಲಾಯಿತು.

5 / 5

Published On - 4:34 pm, Thu, 7 July 22

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ