MS Dhoni: ಐಪಿಎಲ್ 2023 ರಲ್ಲಿ ಆಡ್ತೀರಾ? ಕೇಳಿದ್ದಕ್ಕೆ ಎಂಎಸ್ ಧೋನಿ ನೀಡದ ಉತ್ತರವೇನು ನೋಡಿ

| Updated By: Vinay Bhat

Updated on: May 21, 2022 | 12:26 PM

CSK: ಐಪಿಎಲ್ 2023 (IPL 2023) ರಲ್ಲಿ ಚೆನ್ನೈ ತಂಡದ ಪರ ಎಂಎಸ್ ಧೋನಿ (MS Dhoni) ಆಡ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲಿ ಹುಟ್ಟಿತ್ತು. ಇದಕ್ಕೆ ಸ್ವತಃ ಧೋನಿ ಅವರೇ ಉತ್ತರಿಸಿದ್ದಾರೆ.

MS Dhoni: ಐಪಿಎಲ್ 2023 ರಲ್ಲಿ ಆಡ್ತೀರಾ? ಕೇಳಿದ್ದಕ್ಕೆ ಎಂಎಸ್ ಧೋನಿ ನೀಡದ ಉತ್ತರವೇನು ನೋಡಿ
MS Dhoni
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಕ್ಕೆ ಶುಭವಾಗಿರಲಿಲ್ಲ. ಸತತ ಪಂದ್ಯಗಳನ್ನು ಸೋತು ಬಳಿಕ ನಾಯಕನ ಬದಲಾವಣೆ ಮಾಡಿಯೂ ಎರಡನೇ ತಂಡವಾಗಿ ನಾಕೌಟ್​ ರೇಸ್​ನಿಂದ ಹೊರಬಿದ್ದಿದೆ. ಇದೀಗ ಮುಂದಿನ ಸೀಸನ್​ ಅನ್ನು ಸಿಎಸ್​ಕೆ ಎದುರು ನೋಡುತ್ತಿದೆ. ಆದರೆ, ಐಪಿಎಲ್ 2023 (IPL 2023) ರಲ್ಲಿ ಚೆನ್ನೈ ತಂಡದ ಪರ ಎಂಎಸ್ ಧೋನಿ (MS Dhoni) ಆಡ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲಿ ಹುಟ್ಟಿತ್ತು. ಇದಕ್ಕೆ ಸ್ವತಃ ಧೋನಿ ಅವರೇ ಉತ್ತರಿಸಿದ್ದಾರೆ. ಐಪಿಎಲ್‌ 2022 ಟೂರ್ನಿಯ 68ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಳಿಕ ಮಾತನಾಡಿದ ಎಂಎಸ್‌ ಧೋನಿ, ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಮುಂದಿನ ವರ್ಷವೂ ಆಡುವುದಾಗಿ ಖಚಿತಪಡಿಸಿದ್ದಾರೆ.

ಮುಂದಿನ ವರ್ಷವೂ ಅಭಿಮಾನಿಗಳಿಗೆ ಸಿಎಎಸ್​​ಕೆ ಸಮವಸ್ತ್ರದಲ್ಲಿ ನೋಡಲು ಸಾಧ್ಯವೇ ಎಂದು ಕೇಳಿದಾಗ ‘ಖಂಡಿತವಾಗಿಯೂ’ ಎಂದು ಧೋನಿ ಉತ್ತರಿಸಿದ್ದಾರೆ. “ಖಂಡಿತಾ ಆಡುತ್ತೇನೆ. ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಸಿಎಸ್‌ಕೆ ಅಭಿಮಾನಿಗಳ ಎದುರು ಆಡದೇ ಹೋದರೆ ಖಂಡಿತಾ ಒಳ್ಳೆಯದ್ದಲ್ಲ. ನನಗೆ ಅಲ್ಲಿ ಅತಿ ಹೆಚ್ಚು ಪ್ರೀತಿ ಸಿಕ್ಕಿದೆ. ಅಲ್ಲಿ ಆಡಿದರೆ, ಅವರೆಲ್ಲರಿಗೂ ಧನ್ಯವಾದ ಹೇಳಿದಂತೆ. ಇದು ನನ್ನ ಕೊನೆಯ ವರ್ಷ ಹೌದೋ ಅಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ,” ಎಂದು ಟಾಸ್‌ ಬಳಿಕ ಇಯಾನ್‌ ಬಿಷಪ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

RaviShatri: AskRavi ಎಂದ ಟೀಮ್ ಇಂಡಿಯಾ ಕೋಚ್: ಅಭಿಮಾನಿಗಳು ಏನೆಲ್ಲ ಪ್ರಶ್ನೆ ಕೇಳಿದ್ರು ನೋಡಿ

ಇದನ್ನೂ ಓದಿ
IPL 2022 Points Table: ಮೂರು ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ: ಪಾಯಿಂಟ್ ಟೇಬಲ್, ಆರೆಂಕ್, ಪರ್ಪಲ್ ಕ್ಯಾಪ್ ಮಾಹಿತಿ ಇಲ್ಲಿದೆ
R Ashwin: ನನ್ನೊಳಗೆ ಆ ಆಟಗಾರ ಬಂದಿದ್ದ: ವಿಚಿತ್ರ ಸೆಲೆಬ್ರೇಷನ್ ಬಗ್ಗೆ ಅಶ್ವಿನ್​ರಿಂದ ಶಾಕಿಂಗ್ ಹೇಳಿಕೆ
IPL 2022: ಐಪಿಎಲ್ 15ನೇ ಆವೃತಿಯ ಆಟಗಾರರು ಕ್ಯಾಮರಾ ಕಣ್ಣಿಗೆ ಸೆರೆಯಾದ ದೃಶ್ಯಗಳು
RR vs CSK Highlights, IPL 2022: ಜೈಸ್ವಾಲ್ ಅರ್ಧಶತಕ; ಚೆನ್ನೈ ಮಣಿಸಿ 2ನೇ ಸ್ಥಾನಕ್ಕೇರಿದ ರಾಜಸ್ಥಾನ

ಮೂರು ಐಸಿಸಿ ಪ್ರಶಸ್ತಿಗಳ ಹೊರತಾಗಿ, ಧೋನಿ ಚೆನ್ನೈ ತಂಡದ ಪರವಾಗಿ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಮತ್ತು ಒಂದು ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಧೋನಿಗೆ ಪ್ರತಿ ವರ್ಷ ವಯಸ್ಸಾಗುತ್ತಿದೆ ಮತ್ತು ಪ್ರತಿ ವರ್ಷ ಐಪಿಎಲ್‌ನಲ್ಲಿ ಅವರ ನಿವೃತ್ತಿಗೆ ಸಂಬಂಧಿಸಿದಂತೆ ಧೋನಿ ಮುಂದಿನ ವರ್ಷ ಮತ್ತೆ ಚೆನ್ನೈ ಪರವಾಗಿ ಆಡುತ್ತಾರೆಯೇ ಎಂದು ಪ್ರತಿಸಾರಿಯೂ ಕೇಳಲಾಗುತ್ತದೆ. ಅದರಂತೆ ಈ ಬಾರಿಯೂ ಕೇಳಿದಾಗ ಅವರ ನೀಡಿದ ಉತ್ತರದಿಂದ ಅಭಿಮಾನಿಗಳಂತು ಸಂತಸಗೊಂಡಿದ್ದಾರೆ.

“ಮುಂದಿನ ವರ್ಷ ತಂಡಗಳು ಮತ್ತೆ ವಿವಿಧ ನಗರಗಳಿಗೆ ಪಯಣಿಸಲಿವೆ ಎಂದು ನಾನು ಭಾವಿಸುತ್ತೇನೆ. ಈ ಮೂಲಕ ವಿವಿಧ ನಗರಗಳಲ್ಲಿ ಧನ್ಯವಾದ ಸಲ್ಲಿಸಬಹುದಾಗಿದೆ. ಮುಂದಿನ ವರ್ಷ ಕೊನೆಯ ಐಪಿಎಲ್ ಆಗಿರಲಿದೆಯೇ ಎಂಬುದನ್ನು ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಖಂಡಿತವಾಗಿಯೂ ಮುಂದಿರ್ಷ ಮತ್ತಷ್ಟು ಬಲಶಾಲಿಯಾಗಿ ಪುನರಾಗಮನ ಮಾಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಮಹಿ ತಿಳಿಸಿದ್ದಾರೆ.

ಐಪಿಎಲ್ 2022 ಟೂರ್ನಿಯ ಆರಂಭಕ್ಕೆ ಇನ್ನು 48 ಗಂಟೆಗಳು ಬಾಕಿ ಇರುವಾಗ ಚೆನ್ನೈ ನಾಯಕತ್ವವನ್ನು ಆಲ್‌ರೌಂಡರ್‌ ರವೀಂದ್ರ ಜಡೇಜಾಗೆ ನೀಡಲಾಯಿತು. ಆದರೆ, ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಆಡಿದ ಮೊದಲ 8 ಪಂದ್ಯಗಳಿಂದ ಕೇವಲ 2 ಜಯ ಮಾತ್ರವೇ ದಾಖಲಿಸಲು ಶಕ್ತವಾಯಿತು. ಪ್ಲೇ-ಆಫ್ಸ್‌ ಆಸೆ ತಂಡಕ್ಕೆ ಬಹುತೇಕ ಮುಚ್ಚಿದ್ದ ಸಂದರ್ಭದಲ್ಲಿ ಜಡೇಜಾ ನಾಯತ್ವವನ್ನು ಮರಳಿ ಧೋನಿಗೆ ವಹಿಸಿದರು. ಇದರಿಂದ ತಂಡಕ್ಕೆ ಹೆಚ್ಚೇನು ಅನುಕೂಲವಾಗಲಿಲ್ಲ. ಧೋನಿ ನಾಯಕತ್ವದಲ್ಲೂ ಸಿಎಸ್‌ಕೆ 7 ಪಂದ್ಯಗಳಲ್ಲಿ 2 ಜಯ ದಾಖಲಿಸಲಷ್ಟೇ ಶಕ್ತವಾಗು ಟೂರ್ನಿಯಿಂದ ಹೊರಬಿದ್ದಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:26 pm, Sat, 21 May 22