RaviShatri: AskRavi ಎಂದ ಟೀಮ್ ಇಂಡಿಯಾ ಕೋಚ್: ಅಭಿಮಾನಿಗಳು ಏನೆಲ್ಲ ಪ್ರಶ್ನೆ ಕೇಳಿದ್ರು ನೋಡಿ

ರವಿಶಾಸ್ತ್ರಿ #AskRavi ಎಂದು ಟ್ವಿಟರ್​​ನಲ್ಲಿ ಬರೆದುಕೊಂಡು ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದಾರೆ. ಇದಕ್ಕೆ ಫ್ಯಾನ್ಸ್​ ಕೂಡ ಭರ್ಜರಿ ಕಮೆಂಟ್ ಮಾಡಿದ್ದಾರೆ.

RaviShatri: AskRavi ಎಂದ ಟೀಮ್ ಇಂಡಿಯಾ ಕೋಚ್: ಅಭಿಮಾನಿಗಳು ಏನೆಲ್ಲ ಪ್ರಶ್ನೆ ಕೇಳಿದ್ರು ನೋಡಿ
Ravi Shastri
Follow us
TV9 Web
| Updated By: Vinay Bhat

Updated on:May 21, 2022 | 11:37 AM

ಕ್ರಿಕೆಟ್​ನಿಂದ ವಿರಾಮ ಪಡೆದುಕೊಂಡಿರುವ ಟೀಮ್ ಇಂಡಿಯಾದ (Team India) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಈಗೀಗ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗರುವು ಶಾಸ್ತ್ರಿ ಟ್ವಿಟರ್​ನಲ್ಲಿ ಫುಲ್ ಟ್ರೆಂಡಿಂಗ್​ನಲ್ಲಿದ್ದಾರೆ. ಮೊನ್ನೆಯಷ್ಟೆ ತಮ್ಮ ಟ್ವಿಟರ್​ನಲ್ಲಿ (Twitter) ವಿಶೇಷ ಗೆಟಪ್​ನಲ್ಲಿ 3 ಫೋಟೋಗಳನ್ನ ಶೇರ್ ಮಾಡಿ ಕಾಣಿಸಿಕೊಂಡಿದ್ದರು. ನಿನ್ನೆ #AskRavi ಎಂದು ಟ್ವಿಟರ್​​ನಲ್ಲಿ ಬರೆದುಕೊಂಡು ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದಾರೆ. ಇದಕ್ಕೆ ಫ್ಯಾನ್ಸ್​ ಕೂಡ ಭರ್ಜರಿ ಕಮೆಂಟ್ ಮಾಡಿದ್ದಾರೆ.

ಅನೇಕ ಅಭಿಮಾನಿಗಳು ರವಿ ಶಾಸ್ತ್ರಿ ಅವರ ಈ ಟ್ವೀಟ್​ಗೆ ತಮಾಷೆಯಾಗಿ ರಿಪ್ಲೇ ಕೊಟ್ಟಿದ್ದಾರೆ. ವಿಶೇಷ ಎಂದರೆ ಕೆಲ ಕಮೆಂಟ್​ಗೆ ಶಾಸ್ತ್ರಿ ಅವರು ಕೂಡ ಉತ್ತರ ನೀಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಫ್ಯಾನ್ ಒಬ್ಬರು, ಟೀಮ್ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ ಅಥವಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪೈಕಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಕೇಳಿ ಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಶಾಸ್ತ್ರಿ, ಯಾರ ಜೊತೆ ನಾನು ಹೆಚ್ಚು ಎಂಜಾಯ್ ಮಾಡುತ್ತೇನೋ ಅವರು ಎಂದು ಫನ್ನಿ ಆಗಿ ಹೇಳಿದ್ದಾರೆ.

ಇದನ್ನೂ ಓದಿ
Image
R Ashwin: ನನ್ನೊಳಗೆ ಆ ಆಟಗಾರ ಬಂದಿದ್ದ: ವಿಚಿತ್ರ ಸೆಲೆಬ್ರೇಷನ್ ಬಗ್ಗೆ ಅಶ್ವಿನ್​ರಿಂದ ಶಾಕಿಂಗ್ ಹೇಳಿಕೆ
Image
IPL 2022: ಐಪಿಎಲ್ 15ನೇ ಆವೃತಿಯ ಆಟಗಾರರು ಕ್ಯಾಮರಾ ಕಣ್ಣಿಗೆ ಸೆರೆಯಾದ ದೃಶ್ಯಗಳು
Image
RR vs CSK Highlights, IPL 2022: ಜೈಸ್ವಾಲ್ ಅರ್ಧಶತಕ; ಚೆನ್ನೈ ಮಣಿಸಿ 2ನೇ ಸ್ಥಾನಕ್ಕೇರಿದ ರಾಜಸ್ಥಾನ
Image
MI vs DC Prediction Playing XI: ಕೊನೆಯ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ? ತಂಡಗಳ ಸಂಭಾವ್ಯ 11

ಇನ್ನೊಬ್ಬರು, ರವಿಶಾಸ್ತ್ರಿ ಅವರೆ ನಿಮ್ಮ ಚಿತ್ರವನ್ನು ಡ್ರಾಯಿಂಗ್ ಮಾಡಿದ್ದೇನೆ, ಹೇಗಿದೆ ಎಂದು ಕೇಳಿದ್ದಾರೆ. ಇದಕ್ಕೆ ಶಾಸ್ತ್ರಿ ರಿಪ್ಲೇ ದಯವಿಟ್ಟು ಅಳಿಸಿ ಹಾಕು ಎಂದಿತ್ತು. ಹೀಗೆ ಅನೇಕರು ಫನ್ನಿ ಆಗಿ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಶಾಸ್ತ್ರಿ ಕೂಡ ಕೋಪಗೊಳ್ಳದೆ ಖುಷಿಯಿಂದ ಉತ್ತರಿಸಿದ್ದಾರೆ.

IPL 2022 Points Table: ಮೂರು ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ: ಪಾಯಿಂಟ್ ಟೇಬಲ್, ಆರೆಂಕ್, ಪರ್ಪಲ್ ಕ್ಯಾಪ್ ಮಾಹಿತಿ ಇಲ್ಲಿದೆ

ರವಿ ಶಾಸ್ತ್ರಿ ಎರಡು ದಿನಗಳ ಹಿಂದೆಯಷ್ಟೆ ತಮ್ಮ ಟ್ವಿಟರ್​ನಲ್ಲಿ 3 ಫೋಟೋಗಳನ್ನ ಶೇರ್ ಮಾಡಿದ್ದರು. ವಿಶೇಷ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಶಾಸ್ತ್ರಿ, ಒಂದು ಫೋಟೋದಲ್ಲಿ Flashy jacket ಧರಿಸಿದ್ದಾರೆ. ಕಪ್ಪು ಕನ್ನಡಕ, ಕುತ್ತಿಗೆಗೆ ಚೈನ್ ಧರಿಸಿ ವಿಭಿನ್ನವಾಗಿ ಪೋಸ್ ನೀಡಿರುವ ಫೋಟೋವನ್ನ ಶೇರ್​ ಮಾಡಿ, ‘ನೀವು ನಿದ್ರೆ ಮಾಡದಿದ್ದಾಗ Good Morning ಆಪ್ಸನಲ್’ ಎಂದು ಶೀರ್ಷಿಕೆ ನೀಡಿದ್ದಾರೆ. ಅದೇ ರೀತಿ ಮತ್ತೊಂದು ಫೋಟೋದಲ್ಲಿ, ‘ನನ್ನ ಕುಟುಂಬ ಮುಂಬೈನಲ್ಲಿದೆ. ನಾನೂ ಕೂಡ ಅಲ್ಲಿದ್ದೇನೆ’ ಎಂದಿದ್ದಾರೆ.

ಇನ್ನೊಂದು ಫೋಟೋದಲ್ಲಿ ಶಾಸ್ತ್ರಿ ಗುಲಾಬಿ ಬಣ್ಣದ ಕೋಟ್ ಧರಿಸಿದ್ದಾರೆ. ರವಿ ಶಾಸ್ತ್ರಿಯ ಈ ಪೋಸ್ಟ್‌ಗಳ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಫ್ಯಾನ್ಸ್ ಮಾತ್ರ ಫುಲ್ ಖುಷ್ ಆಗಿದ್ದಾರೆ. ಕೆಲವರಿ ಇವರನ್ನು ಹಾರ್ದಿಕ್ ಪಾಂಡ್ಯಗೆ ಹೋಲಿಕೆ ಮಾಡಿದರೆ, ಇನ್ನೂ ಕೆಲವರು ರಣವೀರ್ ಸಿಂಗ್ ಜೊತೆ ಲಿಂಕ್ ಮಾಡಿದ್ದಾರೆ. ಕಳೆದ ನವೆಂಬರ್​​ವರೆಗೆ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಸದ್ಯ ಐಪಿಎಲ್​ನಲ್ಲಿ ಕಾಮೆಂಟರಿ ಮಾಡುವುದರಲ್ಲಿ ಬ್ಯುಸಿ ಇದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:37 am, Sat, 21 May 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ