MI vs DC Prediction Playing XI: ಕೊನೆಯ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ? ತಂಡಗಳ ಸಂಭಾವ್ಯ 11

TV9 Digital Desk

| Edited By: ಪೃಥ್ವಿಶಂಕರ

Updated on: May 20, 2022 | 6:38 PM

MI vs DC Prediction Playing XI IPL 2022: ಕಳೆದ ಪಂದ್ಯಗಳಲ್ಲಿ ಕೀರನ್ ಪೊಲಾರ್ಡ್ ಅವರನ್ನು ಹೊರಗಿಟ್ಟು ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ದರು. ಹೀಗಿರುವಾಗ ರೋಹಿತ್ ಕೊನೆಯ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಬಹುದು.

MI vs DC Prediction Playing XI: ಕೊನೆಯ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ? ತಂಡಗಳ ಸಂಭಾವ್ಯ 11
ರೋಹಿತ್, ಪಂತ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡವನ್ನು ಎದುರಿಸಲಿದೆ. ಮುಂಬೈ ಈಗಾಗಲೇ ಈ ಋತುವಿನ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದೆ ಆದರೆ ದೆಹಲಿ ತಂಡ ಇನ್ನೂ ರೇಸ್‌ನಲ್ಲಿದೆ. ಐಪಿಎಲ್-2022 (IPL 2022) ರ ಪ್ಲೇಆಫ್‌ಗೆ ಡೆಲ್ಲಿ ಪ್ರವೇಶ ಪಡೆಯಬೇಕಾದರೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲಬೇಕು, ಆಗ ಮಾತ್ರ ಪ್ಲೇಆಫ್‌ಗೆ ಹೋಗಬಹುದು. ಡೆಲ್ಲಿ ಸದ್ಯ 13 ಪಂದ್ಯಗಳಿಂದ 14 ಅಂಕ ಹೊಂದಿದೆ. ಇದು ಅವರ ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅವರು ಒಟ್ಟು 16 ಅಂಕಗಳನ್ನು ಸಂಪಾಧಿಸಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಕೂಡ 16 ಅಂಕಗಳನ್ನು ಹೊಂದಿದೆ, ಆದರೆ ದೆಹಲಿಯ ನಿವ್ವಳ ರನ್ ರೇಟ್ ಬೆಂಗಳೂರಿಗಿಂತ ಉತ್ತಮವಾಗಿದೆ.

ಡೆಲ್ಲಿ ತಂಡಕ್ಕೆ ಈ ಸೀಸನ್​ ಅಷ್ಟಾಗಿ ಉತ್ತಮವಾಗಿರಲಿಲ್ಲ. ಆರಂಭದಲ್ಲಿ ಈ ತಂಡ ಪ್ಲೇಆಫ್‌ ರೇಸ್‌ನಿಂದ ಹೊರಗುಳಿಯುವಂತೆ ತೋರುತ್ತಿತ್ತು. ಆದರೆ ಅವರು ತನ್ನ ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ರೇಸ್‌ನಲ್ಲಿ ತನ್ನನ್ನು ತಾನೇ ಉಳಿಸಿಕೊಂಡರು. ಕೊನೆಯ ಎರಡು ಪಂದ್ಯಗಳಲ್ಲಿ ಡೆಲ್ಲಿ, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಮುಂಬೈ ವಿರುದ್ಧ ದೆಹಲಿಯ ಪ್ರಯತ್ನ ತನ್ನ ಗೆಲುವಿನ ಓಟವನ್ನು ಮುಂದುವರಿಸುವುದಾಗಿದೆ. ಮತ್ತೊಂದೆಡೆ, ನಾವು ಮುಂಬೈ ಬಗ್ಗೆ ಮಾತನಾಡಿದರೆ, ಅದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದ ತಂಡವು ಗೆಲುವಿನೊಂದಿಗೆ ಈ ಋತುವನ್ನು ಕೊನೆಗೊಳಿಸಬೇಕಾಗಿದೆ, ಅದು ಯಶಸ್ವಿಯಾದರೆ ಡೆಲ್ಲಿ ಸಂಕಷ್ಟಕ್ಕೆ ಸಿಲುಕುತ್ತದೆ.

ಇದನ್ನೂ ಓದಿ:Thailand Open 2022: ರೋಚಕ ಪಂದ್ಯದಲ್ಲಿ ಯಮಗುಚಿಯನ್ನು ಮಣಿಸಿ ಸೆಮಿಫೈನಲ್ ಟಿಕೆಟ್ ಗೆದ್ದ ಪಿವಿ ಸಿಂಧು

ಇದನ್ನೂ ಓದಿ

ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ! ಕಳೆದ ಕೆಲವು ಪಂದ್ಯಗಳಲ್ಲಿ ಮುಂಬೈ ಹೊಸ ಆಟಗಾರರಿಗೆ ಅವಕಾಶ ನೀಡಿದೆ. ರೋಹಿತ್ ಶರ್ಮಾ ತಮ್ಮ ಲೀಗ್‌ನ ಕೊನೆಯ ಪಂದ್ಯದಲ್ಲಿ ಇತರ ಕೆಲವು ಬದಲಾವಣೆಗಳನ್ನು ಮಾಡಬಹುದು. ಅಂತಹ ಸೂಚನೆಗಳನ್ನು ಅವರು ನಿರಂತರವಾಗಿ ನೀಡುತ್ತಿದ್ದಾರೆ. ಹಾಗಾಗಿಯೇ ಕಳೆದ ಪಂದ್ಯಗಳಲ್ಲಿ ಕೀರನ್ ಪೊಲಾರ್ಡ್ ಅವರನ್ನು ಹೊರಗಿಟ್ಟು ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ದರು. ಹೀಗಿರುವಾಗ ರೋಹಿತ್ ಕೊನೆಯ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಬಹುದು.

ಡೆಲ್ಲಿ ತಂಡದಲ್ಲಿ ಬದಲಾವಣೆ! ಮತ್ತೊಂದೆಡೆ, ನಾವು ಡೆಲ್ಲಿ ಬಗ್ಗೆ ಮಾತನಾಡಿದರೆ, ನಾಯಕ ರಿಷಬ್ ಪಂತ್ ತಮ್ಮ ವಿಜೇತ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುವುದಿಲ್ಲ. ಹೌದು, ಪೃಥ್ವಿ ಶಾ ಚೇತರಿಸಿಕೊಂಡರೆ ಸರ್ಫರಾಜ್ ಖಾನ್ ಔಟ್ ಆಗಬೇಕಾಗಬಹುದು. ಶಾ ಟೈಫಾಯಿಡ್ ನಿಂದ ಬಳಲುತ್ತಿದ್ದು, ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಜೊತೆಗೂಡಿ ಸರ್ಫರಾಜ್ ಇನಿಂಗ್ಸ್ ಆರಂಭಿಸಿದ್ದರು. ಸರ್ಫರಾಜ್ ಅದ್ಭುತ ಬ್ಯಾಟಿಂಗ್ ಮಾಡಿದರು. ಎನ್ರಿಕ್ ನಾರ್ಖಿಯಾ ಕೂಡ ಈ ಋತುವಿನಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ಮತ್ತು ಈ ಪ್ರಮುಖ ಪಂದ್ಯದಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರ ಸ್ಥಾನದಲ್ಲಿ ಅವಕಾಶ ಪಡೆಯಬಹುದು.

ಎರಡೂ ತಂಡಗಳ ಸಂಭಾವ್ಯ 11 ಮುಂಬೈ ಇಂಡಿಯನ್ಸ್:- ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ಟ್ರಿಸ್ಟಾನ್ ಸ್ಟಬ್ಸ್, ಡೇನಿಯಲ್ ಸಾಮ್ಸ್, ಸಂಜಯ್ ಯಾದವ್, ರಮಣದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮಯಾಂಕ್ ಮಾರ್ಕಾಂಡೆ, ಅರ್ಜುನ್ ತೆಂಡೂಲ್ಕರ್.

ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಡೇವಿಡ್ ವಾರ್ನರ್, ಸರ್ಫರಾಜ್ ಖಾನ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada