Thailand Open 2022: ರೋಚಕ ಪಂದ್ಯದಲ್ಲಿ ಯಮಗುಚಿಯನ್ನು ಮಣಿಸಿ ಸೆಮಿಫೈನಲ್ ಟಿಕೆಟ್ ಗೆದ್ದ ಪಿವಿ ಸಿಂಧು

Thailand Open 2022: ರೋಚಕ ಪಂದ್ಯದಲ್ಲಿ ಯಮಗುಚಿಯನ್ನು ಮಣಿಸಿ ಸೆಮಿಫೈನಲ್ ಟಿಕೆಟ್ ಗೆದ್ದ ಪಿವಿ ಸಿಂಧು
ಪಿವಿ ಸಿಂಧು

Thailand Open 2022: ಕಳೆದ ಬಾರಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಸೆಮಿ-ಫೈನಲ್‌ನಲ್ಲಿ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದಾಗ, ತಂತ್ರಗಾರಿಕೆಯಲ್ಲಿ ವಿಳಂಬ ಮಾಡಿದ್ದಕ್ಕಾಗಿ ಸಿಂಧು ಅವರಿಗೆ ಅಂಪೈರ್ ಒಂದು ಪಾಯಿಂಟ್ ದಂಡ ವಿಧಿಸಿದ್ದರು.

TV9kannada Web Team

| Edited By: pruthvi Shankar

May 20, 2022 | 5:54 PM

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿ (Thailand Open Super 500 tournament) ಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸ್ಟಾರ್ ಆಟಗಾರ್ತಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್​ನ ಅಕಾನೆ ಯಮಗುಚಿ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು . ಆರನೇ ಶ್ರೇಯಾಂಕದ ಸಿಂಧು, 21-15, 20-22, 21-13 ರಿಂದ ಎರಡನೇ ಶ್ರೇಯಾಂಕದ ಜಪಾನ್‌ ಅವರನ್ನು 51 ನಿಮಿಷಗಳಲ್ಲಿ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಯು ಫೀ ಅವರನ್ನು ಎದುರಿಸಲಿದ್ದಾರೆ. ಉಬರ್ ಕಪ್ 2022 ರಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿರಲಿಲ್ಲ, ಈ ಪಂದ್ಯಾವಳಿಯಲ್ಲಿ ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತಿದ್ದರು.

ಕಳೆದ ಬಾರಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಸೆಮಿ-ಫೈನಲ್‌ನಲ್ಲಿ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದಾಗ, ತಂತ್ರಗಾರಿಕೆಯಲ್ಲಿ ವಿಳಂಬ ಮಾಡಿದ್ದಕ್ಕಾಗಿ ಸಿಂಧು ಅವರಿಗೆ ಅಂಪೈರ್ ಒಂದು ಪಾಯಿಂಟ್ ದಂಡ ವಿಧಿಸಿದ್ದರು. ಆದರೆ ಈ ಪಂದ್ಯದಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್‌ನ ವಿರುದ್ಧ ತಮ್ಮ 14 ನೇ ಗೆಲುವು ಸಾಧಿಸಲು ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರು.

ಸತತ ಏಳು ಅಂಕ ಗಳಿಸಿದ ಸಿಂಧು ಆರಂಭದಲ್ಲಿ, ಸಿಂಧು ತನ್ನ ಕ್ರಾಸ್ ಕೋರ್ಟ್ ಹೊಡೆತದಿಂದ ಯಮಗುಚಿಗೆ ತೊಂದರೆ ನೀಡಡಿದರು. ನಂತರ ವಿರಾಮದ ವೇಳೆಗೆ ಭಾರತದ ಆಟಗಾರ್ತಿ 11-9 ರಿಂದ ಮೂರು ಪಾಯಿಂಟ್‌ಗಳ ಮುನ್ನಡೆಯನ್ನು ಕಳೆದುಕೊಂಡರು. ನಂತರ ಸಿಂಧು ಸತತ ಏಳು ಅಂಕ ಗಳಿಸಿ 19-14 ಅಂಕ ಗಳಿಸಿದರು. ಎರಡನೇ ಗೇಮ್‌ನಲ್ಲಿ ಯಮಗುಚಿ ಸ್ವಲ್ಪವೂ ಕ್ರಿಯಾಶೀಲರಾಗಿ ಕಾಣಲಿಲ್ಲ, ಇದರ ಲಾಭ ಪಡೆದ ಸಿಧು ವಿರಾಮದವರೆಗೆ 11-5 ಮುನ್ನಡೆ ಸಾಧಿಸಿದರು, ಇದರಲ್ಲಿ ಅವರು ಯಾವುದೇ ತೊಂದರೆಯಿಲ್ಲದೆ ಕೊನೆಯ 11 ಪಾಯಿಂಟ್‌ಗಳಲ್ಲಿ 10 ಪಾಯಿಂಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ

ಮೂರನೇ ಗೇಮ್​ನಲ್ಲಿ ಆರಂಭದಿಂದಲೇ ಮುನ್ನಡೆ ವಿರಾಮದ ನಂತರ ಸಿಂಧು ಸರ್ವ್​ ಕಳೆದುಕೊಂಡರು. ಶೀಘ್ರದಲ್ಲೇ ಯಮಗುಚಿ ಉತ್ತಮ ಹೊಡೆತಗಳ ಮೂಲಕ ಸಮ ಅಂಕ ಗಳಿಸಿದರು. ವೇಗದ ಸ್ಮ್ಯಾಷ್‌ಗಳು ಮತ್ತು ನಿಖರವಾದ ರಿಟರ್ನ್‌ಗಳು ಜಪಾನ್ ಆಟಗಾರ್ತಿಗೆ ಎರಡು ಅಂಕಗಳನ್ನು ತಂದುಕೊಟ್ಟವು. ಆದರೆ ಸಿಂಧು ಎರಡು ಪಾಯಿಂಟ್‌ಗಳನ್ನು ಉಳಿಸಿಕೊಂಡರು ಆದರೆ ಸರ್ವಿಸ್‌ನಲ್ಲಿ ತಪ್ಪು ಮಾಡಿದ್ದರಿಂದ ಇದು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಿತು. ಮೂರನೇ ಗೇಮ್‌ನಲ್ಲಿ, ಸಿಂಧು ಆರು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದರು. ಈ ವೇಳೆ ಯಮಗುಚಿ ಅವರ ಇಂಜುರಿ ಸನಸ್ಯೆ ಅವರ ಸ್ಟ್ರೋಕ್‌ಪ್ಲೇ ಮೇಲೆ ಪರಿಣಾಮ ಬೀರಿತು. ಯಮಗುಚಿ ಅವರ ತಪ್ಪಿನಿಂದಾಗಿ ಸಿಂಧು 15-11ರ ಮುನ್ನಡೆ ಪಡೆದರು. ಇದರೊಂದಿಗೆ ಭಾರತದ ಆಟಗಾರ್ತಿ ತನ್ನ ಸ್ಮ್ಯಾಷ್‌ ಮತ್ತು ನಿಖರವಾದ ಹೊಡೆತಗಳ ಮೂಲಕ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

Follow us on

Related Stories

Most Read Stories

Click on your DTH Provider to Add TV9 Kannada