PV Sindhu: ಸಿಂಧುಗೆ ಅನ್ಯಾಯ? ಆಟದ ಮಧ್ಯದಲ್ಲೇ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಸಿಂಧು! ವಿಡಿಯೋ ನೋಡಿ
PV Sindhu: ನಾನು ಸರ್ವ್ ಮಾಡುವ ವೇಳೆ ಯಮಗುಚಿ ಸಿದ್ಧರಿರಲಿಲ್ಲ ಹೀಗಾಗಿ ನಾನು ಸರ್ವ್ ಮಾಡುವುದನ್ನು ವಿಳಂಬ ಮಾಡಿದೆ ಎಂದು ಸಿಂಧು ಮುಖ್ಯ ತೀರ್ಪುಗಾರರೊಂದಿಗೆ ಬಹಳ ಸಮಯ ಚರ್ಚೆ ನಡೆಸಿದರು. ಆದರೆ ಮುಖ್ಯ ತೀರ್ಪುಗಾರರು ಸಿಂಧು ಮಾತು ಕೇಳಲು ಸಿದ್ದರಿರಲಿಲ್ಲ.
ಭಾರತದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ (Badminton Asia Championships) ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋತರು. ಮೊದಲ ಗೇಮ್ ಗೆದ್ದರೂ ಸಿಂಧು ಮುಂದಿನ 2 ಗೇಮ್‌ಗಳಲ್ಲಿ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಚೇರ್ ಅಂಪೈರ್ ಪಿವಿ ಸಿಂಧು ವಿರುದ್ಧ ಪಾಯಿಂಟ್ ಪೆನಾಲ್ಟಿ ನೀಡಿದರು. ಇದಾದ ಬಳಿಕ ಸಿಂಧು ನಿಯಂತ್ರಣ ಕಳೆದುಕೊಂಡು ಚೇರ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಪಿವಿ ಸಿಂಧು ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ.
ಸೆಮಿಫೈನಲ್‌ನಲ್ಲಿ ಪಿವಿ ಸಿಂಧು ಜಪಾನ್‌ನ ಯಮಗುಚಿ ವಿರುದ್ಧ 21-13, 19-21, 16-21 ಸೆಟ್‌ಗಳಿಂದ ಸೋತರು. ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದುಕೊಂಡ ಸಿಂಧು ಎರಡನೇ ಗೇಮ್‌ನಲ್ಲಿ 14-12ರಲ್ಲಿ ಮುನ್ನಡೆ ಸಾಧಿಸಿದ್ದರು. ಏತನ್ಮಧ್ಯೆ, ಸರ್ವ್ ವಿಳಂಬದಿಂದಾಗಿ ಪಿವಿ ಸಿಂಧುಗೆ ಅಂಪೈರ್ ದಂಡ ವಿಧಿಸಿದರು. ಇದರ ಫಲವಾಗಿ ಎದುರಾಳಿ ಷಟ್ಲರ್‌ಗೆ ಪಾಯಿಂಟ್ ಸಿಕ್ಕಿತು. ಇದಾದ ನಂತರ ಪಿವಿ ಸಿಂಧು ಕೋಪಗೊಂಡು, ನೇರವಾಗಿ ಚೇರ್ ಅಂಪೈರ್ ಬಳಿಗೆ ಹೋಗಿ ಅವರೊಂದಿಗೆ ವಾಗ್ವಾದಕ್ಕಿಳಿದರು. ಪ್ರಕರಣ ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಮುಖ್ಯ ತೀರ್ಪುಗಾರರು ನೆರವಿಗೆ ಬಂದರು. ಪಿವಿ ಸಿಂಧು ಅವರು ಮುಖ್ಯ ರೆಫರಿ ಜೊತೆ ಬಹಳ ಹೊತ್ತು ವಾಗ್ವಾದ ನಡೆಸಿದರು. ನಾನು ಸರ್ವ್ ಮಾಡುವ ವೇಳೆ ಯಮಗುಚಿ ಸಿದ್ಧರಿರಲಿಲ್ಲ ಹೀಗಾಗಿ ನಾನು ಸರ್ವ್ ಮಾಡುವುದನ್ನು ವಿಳಂಬ ಮಾಡಿದೆ ಎಂದು ಸಿಂಧು ಮುಖ್ಯ ತೀರ್ಪುಗಾರರೊಂದಿಗೆ ಬಹಳ ಸಮಯ ಚರ್ಚೆ ನಡೆಸಿದರು. ಆದರೆ ಮುಖ್ಯ ತೀರ್ಪುಗಾರರು ಸಿಂಧು ಮಾತು ಕೇಳಲು ಸಿದ್ದರಿರಲಿಲ್ಲ.
Nice umpiring! #BAC2022 pic.twitter.com/3EgLS4kW7n
— Sammy (@Sammy58328) April 30, 2022
ಇದು ತಪ್ಪು ಎಂದು ಪದೇ ಪದೇ ಹೇಳುತ್ತಿದ್ದರೂ ಕೇಳಲಿಲ್ಲ: ಪಿವಿ ಸಿಂಧು ನಾನು ಸರ್ವ್ ಮಾಡುವ ವೇಳೆ ಯಮಗುಚಿ ಸಿದ್ಧರಿರಲಿಲ್ಲ ಹೀಗಾಗಿ ನಾನು ಸರ್ವ್ ಮಾಡುವುದನ್ನು ವಿಳಂಬ ಮಾಡಿದೆ ಎಂದು ನಾನು ಅಂಪೈರ್ಗೆ ಮನವರಿಕೆ ಮಾಡಿದರೂ ಅವರು ಇದನ್ನು ಕೇಳಲು ಸಿದ್ದರಿರಲಿಲ್ಲ. ಹೀಗಾಗಿ ಈ ಘಟನೆ ನನ್ನ ಸೋಲಿಗೆ ಕಾರಣವಾಗಿವೆ ಎಂದು ಪಂದ್ಯದ ನಂತರ ಪಿವಿ ಸಿಂಧು ಹೇಳಿದರು. ಎರಡನೇ ಗೇಮ್‌ನಲ್ಲಿ ನಾನು ಆ ಸಮಯದಲ್ಲಿ ಮುಂದಿದೆ ಹೀಗಾಗಿ ಎರಡನೇ ಗೇಮ್ ಅನ್ನು ನಾನು ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ಪಂದ್ಯದ ಮಧ್ಯದಲ್ಲಿ ನಡೆದ ಘಟನೆ ನನ್ನ ಲಯದ ಮೇಲೂ ದೊಡ್ಡ ಪರಿಣಾಮ ಬೀರಿತು ಎಂದು ಸಿಂಧು ತಿಳಿಸಿದ್ದಾರೆ.
ಈ ಟೂರ್ನಿಯಲ್ಲಿ ಪಿವಿ ಸಿಂಧುಗೆ ಎರಡನೇ ಬಾರಿಗೆ ಕಂಚಿನ ಪದಕ ಈ ವಿವಾದದ ನಂತರ ಯಮಗುಚಿ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಸತತ 2 ಗೇಮ್‌ಗಳನ್ನು ಗೆದ್ದು ಫೈನಲ್‌ಗೆ ತಲುಪುವ ಪಿವಿ ಸಿಂಧು ಕನಸನ್ನು ಮುರಿದರು. ಗಮನಾರ್ಹವೆಂದರೆ, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ:Asian Badminton Championship: ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು..!
Published On - 5:07 pm, Mon, 2 May 22