PV Sindhu: ದಾಖಲೆಯೊಂದಿಗೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು: ಪ್ರಧಾನಿ ಮೋದಿ ಅಭಿನಂದನೆ

ಪಿ.ವಿ ಸಿಂಧು ಅವರು ಭಾನುವಾರ ಸ್ವಿಟ್ಜರ್ಲೆಂಡ್​ನ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆಯಲ್ಲಿ ನಡೆದ ಸ್ವಿಸ್ ಓಪನ್-2022 ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

PV Sindhu: ದಾಖಲೆಯೊಂದಿಗೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು: ಪ್ರಧಾನಿ ಮೋದಿ ಅಭಿನಂದನೆ
PM Narendra Modi and PV Sindhu
Follow us
TV9 Web
| Updated By: Vinay Bhat

Updated on: Mar 28, 2022 | 9:05 AM

ಒಲಿಂಪಿಕ್​ ಕಂಚು ಪದಕ ವಿಜೇತೆ, ಭಾರತದ ಹೆಮ್ಮೆಯ ಷಟ್ಲರ್ ಪಿ.ವಿ ಸಿಂಧು (PV Sindhu) ಅವರು ಭಾನುವಾರ ಸ್ವಿಟ್ಜರ್ಲೆಂಡ್​ನ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆಯಲ್ಲಿ ನಡೆದ ಸ್ವಿಸ್ ಓಪನ್-2022 ಟೂರ್ನಿಯಲ್ಲಿ (Swiss Open Super 300) ಮಹಿಳಾ ಸಿಂಗಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಹೊಸ ದಾಖಲೆ ಆಗಿದ್ದು, ಸ್ವಿಸ್ ಓಪನ್ ಗೆದ್ದ ಎರಡನೇ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ. ಥಾಯ್ಲೆಂಡ್‌ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ (Busanan Ongbamrungphan) ಅವರನ್ನು 21-16, 21-8 ಸೆಟ್​​ಗಳಿಂದ ಸಿಂಧು ಸೋಲಿಸಿದ್ದಾರೆ. ಆದರೆ ಪುರುಷರ ವಿಭಾಗದ ಫೈನಲ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಕಠಿನ ಹೋರಾಟದಲ್ಲಿ ಸೋತು ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಬುಸಾನನ್ ವಿರುದ್ಧ ಪಿ.ವಿ. ಸಿಂಧು ಅವರು 17 ಪಂದ್ಯಗಳನ್ನು ಆಡಿದ್ದು, 16 ಬಾರಿಯೂ ಇವರಿಗೆ ಜಯ ಒದಗಿ ಬಂದಿದೆ. 2019ರ ಹಾಂಗ್ ಕಾಂಗ್ ಓಪನ್‌ನಲ್ಲಿ ಒಮ್ಮೆ ಮಾತ್ರ ಥಾಯ್ ಆಟಗಾರ್ತಿ ಪಿ.ವಿ. ಸಿಂಧು ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಫೈಟ್‌ನಲ್ಲಿ ಅಬ್ಬರಿಸಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಸೈನಾ ನೆಹ್ವಾಲ್ ಬಳಿಕ ಸ್ವಿಸ್ ಓಪನ್ ಗೆದ್ದ ಭಾರತದ ಎರಡನೇ ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿದ್ದಾರೆ. ಸೈನಾ ನೆಹ್ವಾಲ್ 2011ರಲ್ಲಿ ಸ್ವಿಸ್ ಓಪನ್ ಗೆದ್ದಿದ್ದರು.

ಆರಂಭದಲ್ಲಿ 7–5ರಿಂದ ಮುನ್ನಡೆ ಗಳಿಸಿದ್ದ ಸಿಂಧು ಅವರಿಗೆ ತಿರುಗೇಟು ನೀಡಿದ ಬುಸಾನನ್‌ 16–15 ಪಾಯಿಂಟ್‌ಗೆ ತಲುಪಿದ್ದರು. ಆದರೆ, ಸಿಂಧು ಚುರುಕಿನ ಆಟದ ಎದುರು ಬುಸಾನನ್‌ ಮಂಕಾದರು. ಮೊದಲ ಗೇಮ್‌ನಲ್ಲಿ 21–16ರಿಂದ ಸಿಂಧು ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಪಾಯಿಂಟ್‌ಗಳಿಕೆ ಅವಕಾಶ ನೀಡದ ಸಿಂಧು 21–8ರಲ್ಲಿ ನೇರ ಸೆಟ್‌ಗಳಿಂದ ಗೆಲುವು ತಮ್ಮದಾಗಿಸಿಕೊಂಡರು.

ಇದು ಸಿಂಧುಗೆ ಸ್ವಿಸ್ ಓಪನ್‍ನಲ್ಲಿ ಸತತ 2ನೇ ಫೈನಲ್ ಆಗಿತ್ತು. ಕಳೆದ ಬಾರಿ ಅವರು ಫೈನಲ್‍ನಲ್ಲಿ ಸ್ಪೇನ್‍ನ ಕ್ಯಾರೊಲಿನಾ ಮರೀನ್ ವಿರುದ್ಧ ಸೋತಿದ್ದರು. 26ರ ಹರೆಯದ ಹೈದರಾಬಾದ್ ಆಟಗಾರ್ತಿ ಈ ಹಿಂದೆ ಬಾಸೆಲ್‌ನಲ್ಲಿ ಸಂತೋಷದ ಕ್ಷಣವನ್ನು ಕಳೆದಿದ್ದರು. ಇದೇ ಸ್ಥಳದಲ್ಲಿ 2019ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಯಿಸಿದ್ದರು. ಸಿಂಧು ಈ ವರ್ಷದ ಜನವರಿಯಲ್ಲಿ ಲಕ್ನೊದಲ್ಲಿ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಪ್ರಶಸ್ತಿಯನ್ನು ಜಯಿಸಿದ್ದರು.

ಮೋದಿ ಅಭಿನಂದನೆ:

ಸ್ವಿಸ್‌ ಓಪನ್‌ ಪ್ರಶಸ್ತಿ ಗೆದ್ದ ಸಿಂಧು ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. 2022ನೇ ಸಾಲಿನ ಸ್ವಿಸ್ ಓಪನ್‌ ಪ್ರಶಸ್ತಿ ಜಯಿಸಿದ ಪಿ.ವಿ. ಸಿಂಧು ಅವರಿಗೆ ಅಭಿನಂದನೆಗಳು. ಅವರ ಈ ಸಾಧನೆಯು ದೇಶದ ಯುವ ಜನತೆಗೆ ಸ್ಪೂರ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಎಚ್‌.ಎಸ್‌.ಪ್ರಣಯ್‌ ರನ್ನರ್‌-ಅಪ್‌ ಪ್ರಶಸ್ತಿ ತೃಪ್ತಿಪಟ್ಟುಕೊಂಡರು. ಫೈನಲ್‌ನಲ್ಲಿ ಅವರು ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ, ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿವಿರುದ್ಧ 12-21, 18-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. 2017ರಲ್ಲಿ ಯುಸ್‌ ಓಪನ್‌ ಗೆದ್ದ ಬಳಿಕ ಪ್ರಣಯ್‌ ಯಾವುದೇ ಪ್ರಶಸ್ತಿ ಗೆದ್ದಿಲ್ಲ.

IPL 2022, GT vs LSG: ಐಪಿಎಲ್​ನಲ್ಲಿಂದು ಕುತೂಹಲಕಾರಿ ಕದನ: ಲಖನೌ-ಗುಜರಾತ್ ಪದಾರ್ಪಣೆಗೆ ಸಜ್ಜು

IPL 2022, PBKS vs RCB: ಪಂದ್ಯ ಸೋತರೂ ಎದುರಾಳಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಆರ್​​ಸಿಬಿ: ಏನದು ಗೊತ್ತೇ?

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್