Asian Badminton Championship: ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು..!

Asian Badminton Championship: ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು..!
ಪಿವಿ ಸಿಂಧು

Asian Badminton Championship: ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಪ್ರಬಲ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

TV9kannada Web Team

| Edited By: pruthvi Shankar

Apr 29, 2022 | 5:12 PM

ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ (Asian Badminton Championship) ತಮ್ಮ ಪ್ರಬಲ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದಿರುವ ಸಿಂಧು ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಹಿ ಬಿಂಗ್ ಜಿಯಾವೊ ಅವರನ್ನು ಕಠಿಣ ಪಂದ್ಯದಲ್ಲಿ ಸೋಲಿಸಿದರು. ಸಿಂಧು ಈ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಬಳಿಕ ಈ ಪಂದ್ಯಾವಳಿಯನ್ನು ಆಡಲಾಗುತ್ತಿದೆ.

ನಾಲ್ಕನೇ ಶ್ರೇಯಾಂಕದ ಸಿಂಧು 2014ರ ಗಿಮ್ಚಿಯಾನ್ ಹಂತದಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಂದು ಗಂಟೆ 16 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ಐದನೇ ಶ್ರೇಯಾಂಕದ ಚೈನೀಸ್ ಅವರನ್ನು 21-9, 13-21, 21-19 ರಿಂದ ಸೋಲಿಸಿದರು. ವಿಶ್ವದ ನಂ. 7ನೇ ಶ್ರೇಯಾಂಕದ ಸಿಂಧು ಬಿಂಗ್ ಕ್ಸಿಯಾವೋ ವಿರುದ್ಧ 7-9 ಅಂಕಗಳ ಗೆಲುವಿನ ದಾಖಲೆಯನ್ನು ಹೊಂದಿದ್ದು, ಈ ಹಿಂದೆ ಸಿಂಧು ಕಳೆದ ಎರಡು ಮುಖಾಮುಖಿಗಳಲ್ಲಿ ಚೈನೀಸ್ ಅವರನ್ನು ಸೋಲಿಸಿದ್ದರು. ಸೆಮಿಫೈನಲ್‌ನಲ್ಲಿ ಸಿಂಧು ಥಾಯ್ಲೆಂಡ್‌ನ ಪೋರ್ನ್‌ಪಾವೀ ಚೊಚುವಾಂಗ್‌ ಅವರನ್ನು 9-21, 21-15, 21-17ರಿಂದ ಸೋಲಿಸಿದ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.

ಸಿಂಧು ಮುನ್ನಡೆ ಮೊದಲ ಗೇಮ್​ನಲ್ಲಿ 11-2 ರಿಂದ ಮುನ್ನಡೆ ಸಾಧಿಸಿದ ಸಿಂಧು ನಂತರ ಮೊದಲ ಗೇಮ್ ಗೆದ್ದು ಮೊದಲ ಗೇಮ್​ನಲ್ಲಿ 1-0 ಮುನ್ನಡೆ ಸಾಧಿಸಿದರು. ವಿರಾಮದವರೆಗೂ ಅವರು ಈ ಮುನ್ನಡೆಯನ್ನು 11-10ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ವಿರಾಮದ ನಂತರ ಚೀನಾ ಆಟಗಾರ್ತಿ ಸತತ ಐದು ಪಾಯಿಂಟ್ಸ್ ಗಳಿಸಿ 19-12ರ ಮುನ್ನಡೆ ಪಡೆದರು. ಸಿಂಧು ಇಲ್ಲಿಂದ ಪುನರಾಗಮನ ಮಾಡಲು ಸಾಧ್ಯವಾಗದೆ ಎರಡನೇ ಗೇಮ್​ನಲ್ಲಿ ಸೋತು ಪಂದ್ಯದಲ್ಲಿ 1-1 ಡ್ರಾ ಸಾಧಿಸಿದರು.

ನಿರ್ಣಾಯಕ ಆಟ ಬಹಳ ರೋಚಕವಾಗಿತ್ತು. ಇಬ್ಬರೂ ಆಟಗಾರ್ತಿಯರು ಉತ್ತಮ ಆರಂಭ ಪಡೆದರು. ಪಂದ್ಯದ ಆರಂಭದಲ್ಲಿ ಸ್ಕೋರ್ 2-2 ರಲ್ಲಿ ಸಮವಾಗಿತ್ತು, ಆದರೆ ಸಿಂಧು ತಮ್ಮ ಕ್ರಾಸ್-ಕೋರ್ಟ್ ಸ್ಮ್ಯಾಶ್‌ನೊಂದಿಗೆ ಪಾಯಿಂಟ್‌ ಸಂಗ್ರಹಿಸಿದರು. ಇದಕ್ಕೆ ಚೀನಾ ಆಟಗಾರ್ತಿ ಬಳಿ ಉತ್ತರವಿಲ್ಲ. ವಿರಾಮದವರೆಗೂ ಸಿಂಧು 11-5ರಲ್ಲಿ ಮುನ್ನಡೆಯಲ್ಲಿದ್ದರು. ಬಿಂಗ್ ಕ್ಸಿಯಾವೊ, ವಿರಾಮದ ನಂತರ ಸಿಂಧು ಮುನ್ನಡೆಗೆ ಕಡಿವಾಣ ಹಾಕಿದರು. ಸಿಂಧು ಒಂದು ಬಾರಿ 15-9 ಮುನ್ನಡೆಯಲ್ಲಿದ್ದರು ಆದರೆ ವೇಗ ಕಳೆದುಕೊಂಡ ಕಾರಣ 16-15 ಸೆಟ್​ ತಲುಪಿದರು. ಇದಾದ ಬಳಿಕ 18-16 ಸೆಟ್​ಗಳಲ್ಲಿ ಮುನ್ನಡೆಯಲ್ಲಿದ್ದ ಸಿಂಧು ನಾಲ್ಕು ಮ್ಯಾಚ್ ಪಾಯಿಂಟ್ಸ್ ಪಡೆದು ಪಂದ್ಯ ಗೆದ್ದರು.

ಇದಕ್ಕೂ ಮುನ್ನ ಸಿಂಧು ಸಿಂಗಾಪುರದ ಯುಯಿ ಯಾನ್ ಜೆಸ್ಲಿನ್ ಹುಯಿ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಸಿಂಧು ವಿಶ್ವದ 100ನೇ ಶ್ರೇಯಾಂಕಿತ ಆಟಗಾರ್ತಿ ಜೆಸ್ಲಿನ್ ಹುಯಿ ಅವರನ್ನು 21-16 21-16 ಸೆಟ್‌ಗಳಿಂದ 42 ನಿಮಿಷಗಳಲ್ಲಿ ಸೋಲಿಸಿದರು.

ಇದನ್ನೂ ಓದಿ:ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್ ಆಯೋಜನೆಗೆ ಮುಂದಾದ ಕ್ರಿಕೆಟ್ ಸೌತ್ ಆಫ್ರಿಕಾ! ಟೂರ್ನಿ ಯಾವಾಗ ಆರಂಭ?

Follow us on

Related Stories

Most Read Stories

Click on your DTH Provider to Add TV9 Kannada