AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್ ಆಯೋಜನೆಗೆ ಮುಂದಾದ ಕ್ರಿಕೆಟ್ ಸೌತ್ ಆಫ್ರಿಕಾ! ಟೂರ್ನಿ ಯಾವಾಗ ಆರಂಭ?

ಸಿಎಸ್‌ಎ ಹೇಳಿಕೆ ಪ್ರಕಾರ ವಿದೇಶಿ ಆಟಗಾರರೂ ಈ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಆಟಗಾರರನ್ನು ಆಯ್ಕೆ ಮಾಡಲು ಹರಾಜು ಆಯೋಜಿಸಲಾಗುವುದು. ಐಪಿಎಲ್‌ನಲ್ಲಿರುವಂತೆ, ಪ್ರತಿ ತಂಡವು ತಮ್ಮ ಪ್ಲೇಯಿಂಗ್-11 ರಲ್ಲಿ ಗರಿಷ್ಠ ನಾಲ್ಕು ವಿದೇಶಿ ಆಟಗಾರರಿಗೆ ಆಡಲು ಅನುಮತಿ ನೀಡಲಾಗುವುದು.

ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್ ಆಯೋಜನೆಗೆ ಮುಂದಾದ ಕ್ರಿಕೆಟ್ ಸೌತ್ ಆಫ್ರಿಕಾ! ಟೂರ್ನಿ ಯಾವಾಗ ಆರಂಭ?
ದಕ್ಷಿಣ ಆಫ್ರಿಕಾ
TV9 Web
| Updated By: ಪೃಥ್ವಿಶಂಕರ|

Updated on: Apr 29, 2022 | 4:40 PM

Share

ಕ್ರಿಕೆಟ್ ಜಗತ್ತಿನಲ್ಲಿ ಫ್ರಾಂಚೈಸ್ ಆಧಾರಿತ ಟಿ 20 ಲೀಗ್ ಅನ್ನು ಹುಟ್ಟುಹಾಕಿದ ಕೀರ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ಸಲ್ಲಬೇಕಿದೆ. ಈ ಟೂರ್ನಿಯ ಯಶಸ್ಸನ್ನು ಕಂಡ ಇತರ ದೇಶಗಳು ಸಹ ಭಾರತವನ್ನು ಹೊರತುಪಡಿಸಿ ಐಪಿಎಲ್ ಮಾದರಿಯಲ್ಲಿ ಲೀಗ್‌ಗಳನ್ನು ಪ್ರಾರಂಭಿಸಿದವು. ಆಸ್ಟ್ರೇಲಿಯಾವು ಬಿಗ್ ಬ್ಯಾಷ್ ಲೀಗ್ (Big Bash League) ಅನ್ನು ಪ್ರಾರಂಭಿಸಿತು, ವೆಸ್ಟ್ ಇಂಡೀಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನವು ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಪ್ರಾರಂಭಿಸಿತು. ಇದೀಗ ದಕ್ಷಿಣ ಆಫ್ರಿಕಾ ಕೂಡ ಅಂತಹ ಲೀಗ್ ಅನ್ನು ಪ್ರಾರಂಭಿಸಲು ಹೊರಟಿದೆ. ಕ್ರಿಕೆಟ್ ಸೌತ್ ಆಫ್ರಿಕಾ ಶುಕ್ರವಾರದಂದು ಹೊಸ ಫ್ರಾಂಚೈಸ್ ಆಧಾರಿತ T20 ಲೀಗ್ (CSA T20 League ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಲೀಗ್‌ನ ಮೊದಲ ಆವೃತ್ತಿಯನ್ನು ಜನವರಿ 2023 ರಲ್ಲಿ ಆಡಲಾಗುತ್ತದೆ. ಈ ಕುರಿತು ಸಿಎಸ್‌ಎ ಹೇಳಿಕೆ ನೀಡಿ ಮಾಹಿತಿ ನೀಡಿದೆ.

ಸಿಎಸ್‌ಎ ಹೇಳಿಕೆ ಪ್ರಕಾರ ವಿದೇಶಿ ಆಟಗಾರರೂ ಈ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಆಟಗಾರರನ್ನು ಆಯ್ಕೆ ಮಾಡಲು ಹರಾಜು ಆಯೋಜಿಸಲಾಗುವುದು. ಐಪಿಎಲ್‌ನಲ್ಲಿರುವಂತೆ, ಪ್ರತಿ ತಂಡವು ತಮ್ಮ ಪ್ಲೇಯಿಂಗ್-11 ರಲ್ಲಿ ಗರಿಷ್ಠ ನಾಲ್ಕು ವಿದೇಶಿ ಆಟಗಾರರಿಗೆ ಆಡಲು ಅನುಮತಿ ನೀಡಲಾಗುವುದು. CSA ಮತ್ತು Supportsport ಈ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಇಬ್ಬರು ಒಟ್ಟಾಗಿ ಈ ಲೀಗ್ ಅನ್ನು ಆಯೋಜಿಸುವ ಕಂಪನಿಯನ್ನು ರಚಿಸಲಿದ್ದಾರೆ.

ಆರು ತಂಡಗಳು ಭಾಗವಹಿಸಲಿವೆ ಆದರೆ, ಐಪಿಎಲ್‌ಗೆ ಹೋಲಿಸಿದರೆ ಈ ಲೀಗ್‌ನಲ್ಲಿ ತಂಡಗಳ ಸಂಖ್ಯೆ ಕಡಿಮೆ ಇರುತ್ತದೆ. ಈ ಲೀಗ್‌ನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಲೀಗ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡವು ಪ್ರತಿ ತಂಡದ ಎದುರು ಎರಡು ಪಂದ್ಯಗಳನ್ನು ಆಡುತ್ತದೆ. ಅಗ್ರ ಮೂರು ತಂಡಗಳು ಪ್ಲೇ ಆಫ್‌ಗೆ ಹೋಗುತ್ತವೆ. ಮೂರರಿಂದ ನಾಲ್ಕು ವಾರಗಳ ಕಾಲ ಲೀಗ್ ನಡೆಯಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ.

CSAA CEO ಮಾತನಾಡಿ, ನಾವು ಆಫ್ರಿಕಾ ಕ್ರಿಕೆಟ್​ನಲ್ಲಿ ಹೊಸದನ್ನು ಮುಂಚೂಣಿಗೆ ತರಲು ಉತ್ಸುಕರಾಗಿದ್ದೇವೆ. ಇದು ಖಾಸಗಿ ಹೂಡಿಕೆದಾರರಿಗೆ ಫ್ರಾಂಚೈಸಿಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. CSA ಈಗಾಗಲೇ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.

ಸೂಪರ್‌ಸ್ಪೋರ್ಟ್ ಸಿಇಒ ಹೇಳಿದ್ದಿದು ಸೂಪರ್‌ಸ್ಪೋರ್ಟ್‌ನ ಸಿಇಒ ಮಾರ್ಕ್ ಜ್ಯೂರಿ ಮಾತನಾಡಿ, ದಕ್ಷಿಣ ಆಫ್ರಿಕಾದ ಕ್ರಿಕೆಟ್‌ನ ಅದೃಷ್ಟವನ್ನು ಬದಲಾಯಿಸಬಹುದಾದ ಯೋಜನೆಯಲ್ಲಿ ಹೂಡಿಕೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಆರಂಭದಲ್ಲಿ ಕ್ರಿಕಟ್ ಕ್ಯಾಲೆಂಡರ್‌ನಲ್ಲಿ ಸಾಕಷ್ಟು ಅಂತರವಿತ್ತು. ಈ ಲೀಗ್​ನಿಂದ ಈಗ ಆ ಅಂತರವನ್ನು ಸರಿದೂಗಿಸಬಹುದಾಗಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬದಲಾವಣೆಯ ಪರ್ವವನ್ನು ಎದುರಿಸುತ್ತಿದ್ದು, ಆರ್ಥಿಕ ಸಂಕಷ್ಟದಿಂದ ಬಳುತ್ತಿದೆ. ಹಾಗಾಗಿ ಈ ಲೀಗ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಅನ್ನು ಸುಧಾರಿಸುವ ಕೆಲಸ ಮಾಡಬಹುದು. ಸೂಪರ್ ಸ್ಪೋರ್ಟ್ ಈ ಲೀಗ್ ಅನ್ನು ಪ್ರಸಾರ ಮಾಡುವ ಜವಬ್ದಾರಿ ಹೊತ್ತಿದ್ದು, ಅಂತರರಾಷ್ಟ್ರೀಯ ಟಿವಿ ಮಾರುಕಟ್ಟೆಗೂ ಪ್ರಸಾರಕ್ಕೆ ಅನುವು ಮಾಡಿಕೊಡುವ ಸಿದ್ದತೆಯಲ್ಲಿ ತೊಡಗಿದೆ.

ಇದನ್ನೂ ಓದಿ:RR vs MI, Head to Head: ಮೊದಲ ಗೆಲುವಿಗಾಗಿ ಕಾಯುತ್ತಿರುವ ಮುಂಬೈಗೆ ಬಲಿಷ್ಠ ರಾಜಸ್ಥಾನ ಎದುರಾಳಿ! ಮುಖಾಮುಖಿ ವರದಿ ಇಲ್ಲಿದೆ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್