Glenn Maxwell Vini Raman Wedding: ಮ್ಯಾಕ್ಸ್​ವೆಲ್ ವೆಡ್ಡಿಂಗ್ ಪಾರ್ಟಿಯಲ್ಲಿ ಆರ್​ಸಿಬಿ ಪ್ಲೇಯರ್ಸ್​ ಏನೆಲ್ಲ ಮಾಡಿದ್ರು?: ಫೋಟೋ ನೋಡಿ

IPL 2022: ಮ್ಯಾಕ್ಸ್ ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಜೊತೆ ಮದುವೆಯಾಗಿ ಏಪ್ರಿಲ್ 27ಕ್ಕೆ ಒಂದು ತಿಂಗಳಾಗಿದೆ. ಈ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋಬಬಲ್ ಅಡಿಯಲ್ಲಿ ಆಟಗಾರರಿಗೆ ಪಾರ್ಟಿ ಹಮ್ಮಿಕೊಂಡಿತ್ತು.

Apr 29, 2022 | 11:51 AM
Vinay Bhat

|

Apr 29, 2022 | 11:51 AM

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ತಮಿಳುನಾಡಿನ ವಿನಿ ರಾಮನ್ ಅವರನ್ನು ಕಳೆದ ತಿಂಗಳು ಮಾರ್ಚ್ 27 ರಂದು ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಇದಕ್ಕೂ ಮುನ್ನ ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು.

1 / 9
ಮ್ಯಾಕ್ಸ್ ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಜೊತೆ ಮದುವೆಯಾಗಿ ಏಪ್ರಿಲ್ 27ಕ್ಕೆ ಒಂದು ತಿಂಗಳಾಗಿದೆ. ಈ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋಬಬಲ್ ಅಡಿಯಲ್ಲಿ ಆಟಗಾರರಿಗೆ ಪಾರ್ಟಿ ಹಮ್ಮಿಕೊಂಡಿತ್ತು.

ಮ್ಯಾಕ್ಸ್ ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಜೊತೆ ಮದುವೆಯಾಗಿ ಏಪ್ರಿಲ್ 27ಕ್ಕೆ ಒಂದು ತಿಂಗಳಾಗಿದೆ. ಈ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋಬಬಲ್ ಅಡಿಯಲ್ಲಿ ಆಟಗಾರರಿಗೆ ಪಾರ್ಟಿ ಹಮ್ಮಿಕೊಂಡಿತ್ತು.

2 / 9
ಈ ವೇಳೆ ವಿರಾಟ್ ಕೊಹ್ಲಿ ಅವರು, ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದಾರೆ. ಕಪ್ಪು ಕುರ್ತಾ ಧರಿಸಿದ್ದ ವಿರಾಟ್, ಸಹ ಆಟಗಾರರೊಂದಿಗೆ 'ಹೂ ಅಂತಿಯಾ ಮಾಮ, ಊ ಹೂ ಅಂತಿಯಾ?' ಗೀತೆಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

3 / 9
ಕಾರ್ಯಕ್ರಮದಲ್ಲಿ ಆರ್ಸಿಬಿ ಎಲ್ಲಾ ಆಟಗಾರರು ಭಾಗವಹಿಸಿದ್ದು, ವಿವಿಧ ಬಣ್ಣದ ಕುರ್ತಾದಲ್ಲಿ ಮಿಂಚುತ್ತಿದ್ದರು. ವಿರಾಟ್ ಕೊಹ್ಲಿ ಕಪ್ಪು ಬಣ್ಣದ ಕುರ್ತಾದಲ್ಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

4 / 9
ಮುಂಬೈ ಹೋಟೆಲ್ ವೊಂದರಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೊಹ್ಲಿ ಸೇರಿದಂತೆ ಬಹುತೇಕ ಪ್ಲೇಯರ್ಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

5 / 9
ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಪಿಂಕ್ ಬಣ್ಣದ ಕುರ್ತಾದ ಜೊತೆಗೆ ಹೆಂಡತಿ ಮತ್ತು ಮಗುವಿನೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

6 / 9
ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರು, ಪಾರ್ಟಿಯಲ್ಲಿ ಹಾಜರಾದ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

7 / 9
ವಿನಿ ರಾಮನ್ ತಮಿಳುನಾಡು ಮೂಲದವರಾದವರೂ ಹುಟ್ಟಿ ಬೆಳೆದದ್ದೆಲ್ಲಾ ಆಸ್ಟ್ರೇಲಿಯಾದಲ್ಲೇ. ಮೆಡಿಕಲ್ ಸೈನ್ಸ್ ಓದಿರುವ ಇವರು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

8 / 9
ಗ್ಲೆನ್ ಮತ್ತು ವಿನಿ ರಾಮನ್ ಮೊದಲು ಪರಿಚಯ ಆಗಿದ್ದು 2013ರಲ್ಲಿ. ಮೆಲ್ಬೋರ್ನ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಇಬ್ಬರ ಪರಿಚಯ ಆಗಿದೆ. 2017 ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು.

9 / 9

Follow us on

Most Read Stories

Click on your DTH Provider to Add TV9 Kannada