48 ವರ್ಷಗಳ ಬಳಿಕ ಪೂರ್ವಜರು ನೆಲೆಸಿದ್ದ ಮನೆ ತೊರೆದ ಗಂಗೂಲಿ! ಖರೀದಿಸಿದ್ದು ಎಷ್ಟು ಕೋಟಿಯ ಬಂಗಲೆ ಗೊತ್ತಾ?
Sourav Ganguly: ಮನೆಯನ್ನು ಖರೀದಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಗರದ ಮಧ್ಯದಲ್ಲಿ ವಾಸಿಸುವುದು ಆರಾಮದಾಯಕ ಎಂದು ನಾನು ಭಾವಿಸುತ್ತೇನೆ ಆದರೆ 48 ವರ್ಷಗಳಿಂದ ವಾಸಿಸುತ್ತಿರುವ ಮನೆಯನ್ನು ಬಿಡುವುದು ಅತ್ಯಂತ ಕಷ್ಟಕರವಾದ ವಿಷಯ ಎಂದಿದ್ದಾರೆ.
ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬೆಳೆದ ಸ್ಟಾರ್ ಕ್ರಿಕೆಟರ್. ಕಳೆದ 48 ವರ್ಷಗಳಿಂದ ದಾದಾ ತಮ್ಮ ಪೂರ್ವಜರು ವಾಸಿಸುತ್ತಿದ್ದ ಅರಮನೆಯಂತಹ ಮನೆಯಲ್ಲಿ ತುಂಬು ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆದರೆ ಈಗ ಗಂಗೂಲಿ ತಮ್ಮ ಪೂರ್ವಜರು ನೆಲೆಸಿದ್ದ ಮನೆಯನ್ನು ತೊರೆದಿದ್ದು, ಹೊಸ ಮನೆಗೆ ಕಾಲಿಡಲಿದ್ದಾರೆ.
1 / 5
ಸೌರವ್ ಗಂಗೂಲಿ ಅವರ ತಂದೆ ಚಂಡಿದಾಸ್ ಗಂಗೂಲಿ ಮುದ್ರಣ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ಅವರು ನಗರದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಬಾಲ್ಯದಿಂದಲೂ ಸೌರವ್ ನವಾಬರಂತೆ ಬೆಳೆದದ್ದು ಇದೇ ಕಾರಣಕ್ಕೆ. ಅವರ ತಂದೆ ಕೋಲ್ಕತ್ತಾದ ಬೆಹಲಾ ಪ್ರದೇಶದಲ್ಲಿ ತನಗಾಗಿ ಅಲಿಶನ್ ಮನೆಯನ್ನು ನಿರ್ಮಿಸಿದರು, ಅದು ಇಂದು ಕೋಟಿ ಬೆಲೆಬಾಳುತ್ತಿದೆ. ಗಂಗೂಲಿ ಬಾಲ್ಯದಿಂದಲೂ ಇದೇ ಮನೆಯಲ್ಲಿ ವಾಸವಾಗಿದ್ದರು.
2 / 5
ಮಾಧ್ಯಮ ವರದಿಗಳ ಪ್ರಕಾರ, ಸೌರವ್ ಗಂಗೂಲಿ ಅವರು 40 ಕೋಟಿ ವೆಚ್ಚದ ಹೊಸ ಮನೆಯನ್ನು ಖರೀದಿಸಿದ್ದಾರೆ. ಟೆಲಿಗ್ರಾಫ್ ಜೊತೆ ಮಾತನಾಡಿದ ಗಂಗೂಲಿ, ನನ್ನ ಮನೆಯನ್ನು ಖರೀದಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಗರದ ಮಧ್ಯದಲ್ಲಿ ವಾಸಿಸುವುದು ಆರಾಮದಾಯಕ ಎಂದು ನಾನು ಭಾವಿಸುತ್ತೇನೆ ಆದರೆ 48 ವರ್ಷಗಳಿಂದ ವಾಸಿಸುತ್ತಿರುವ ಮನೆಯನ್ನು ಬಿಡುವುದು ಅತ್ಯಂತ ಕಷ್ಟಕರವಾದ ವಿಷಯ ಎಂದಿದ್ದಾರೆ.
3 / 5
ಹೊಸ ಮನೆಗಾಗಿ ಗಂಗೂಲಿ ಖರೀದಿಸಿರುವ ಆಸ್ತಿ 16ವರೆ ಸಾವಿರ ಚದರ ಅಡಿ. ಇದು ಲೋವರ್ ರೌಡನ್ ಸ್ಟ್ರೀಟ್‌ನಲ್ಲಿದೆ, ಇದು ಕೋಲ್ಕತ್ತಾದ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿದೆ. ಈ ಮನೆ ನಗರದ ಹೃದಯ ಭಾಗದಲ್ಲಿದ್ದು, ಅಲ್ಲಿಂದ ಗಂಗೂಲಿ ಮತ್ತು ಅವರ ಕುಟುಂಬಕ್ಕೆ ಎಲ್ಲಿ ಬೇಕಾದರೂ ಪ್ರಯಾಣಿಸಲು ತುಂಬಾ ಸುಲಭವಾಗುತ್ತದೆ. ಅದೇ ಸಮಯದಲ್ಲಿ, ಇಡೀ ಪ್ರದೇಶವು ಸಾಕಷ್ಟು ಶಾಂತವಾಗಿದೆ.
4 / 5
ಭಾರತದ ಮಾಜಿ ನಾಯಕ ಈ ಸ್ಥಳವನ್ನು ಉದ್ಯಮಿ ಅನುಪನಾ ಬಗ್ಡಿ, ಕೇಶವ್ ದಾಸ್ ಬಿನಾನಿ ಮತ್ತು ನಿಕುಂಜ್ ದಾಸ್ ಬಿನಾನಿ ಅವರಿಂದ ಖರೀದಿಸಿದ್ದಾರೆ. ಗಂಗೂಲಿ ಅವರಲ್ಲದೆ, ಅವರ ಪತ್ನಿ ಡೋನಾ ಗಂಗೂಲಿ, ಮಗಳು ಸನಾ ಗಂಗೂಲಿ ಮತ್ತು ತಾಯಿ ನಿರುಪಾ ಗಂಗೂಲಿ ಇದರ ಪಾಲುದಾರರಾಗಿದ್ದಾರೆ.