MS Dhoni: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಎಂ. ಎಸ್ ಧೋನಿ ವಿದಾಯ ಹೇಳಿ ಇಂದಿಗೆ ಒಂದು ವರ್ಷ!

| Updated By: Vinay Bhat

Updated on: Aug 15, 2021 | 7:43 AM

MS Dhoni retirement: ಆಗಸ್ಟ್ 15, 2020 ಅಂದರೆ ಇದೇ ದಿನ ಸರಿಯಾಗಿ ಒಂದು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತಿ ಘೋಷಿಸಿದರು.

MS Dhoni: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಎಂ. ಎಸ್ ಧೋನಿ ವಿದಾಯ ಹೇಳಿ ಇಂದಿಗೆ ಒಂದು ವರ್ಷ!
MS Dhoni
Follow us on

ಅದು ಆಗಸ್ಟ್ 15, 2020 ಅಂದರೆ ಸರಿಯಾಗಿ ಒಂದು ವರ್ಷಗಳ ಹಿಂದೆ ಹದಿನಾರು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ಮಹೇಂದ್ರ ಸಿಂಗ್ ಧೋನಿ (MS Dhoni) ದಿಢೀರ್ ವಿದಾಯ ಹೇಳುವ ಮೂಲಕ ಕ್ರೀಡಾಭಿಮಾನಿಗಳಿಗೆ ಅಚ್ಚರಿ ತಂದಿದ್ದರು. ಅನಿರೀಕ್ಷಿತ ನಿರ್ಧಾರಗಳಿಂದಲೇ ಗಮನ ಸೆಳೆದ ಧೋನಿ ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತಿ ಘೋಷಿಸಿದರು. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೃತ್ತಿ ಬದುಕಿನ ಸ್ಮರಣೀಯ ಫೋಟೋಗಳನ್ನು ಒಳಗೊಂಡ ವಿಡಿಯೋಗೆ ಭಾವನಾತ್ಮಕ ಹಾಡೊಂದನ್ನು ಜೋಡಿಸಿ ವಿದಾಯದ ಸಂದೇಶ ಬರೆದಿದ್ದರು.

“ನನ್ನ ವೃತ್ತಿ ಜೀವನದಲ್ಲಿ ನೀವು ತೋರಿದ ಪ್ರೀತಿ ಹಾಗೂ ಸಹಕಾರಕ್ಕೆ ಧನ್ಯವಾದಗಳು. 1929 ಗಂಟೆಗಳ ಬಳಿಕ ನಾನು ನಿವೃತ್ತಿ ಹೊಂದುತ್ತಿದ್ದೇನೆ.” ಎಂದು ಎರಡು ಬಾರಿ ವಿಶ್ವಕಪ್‌ ವಿಜೇತ ನಾಯಕ ಎಂಎಸ್‌ ಧೋನಿ ಇನ್‌ಸ್ಟಾಗ್ರಾಮ್‌ ಪೋಸ್ಟ್ ಮಾಡಿದ್ದರು.

ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಯೊಂದಿಗೆ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ಧೋನಿ ಸಾರಥ್ಯದಲ್ಲಿ ಭಾರತ ತಂಡ 2007ರ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ, 2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಮತ್ತು 2013ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳನ್ನು ಗೆದ್ದಿದೆ. ಐಸಿಸಿ ಆಯೋಜಿಸುವ ಮೂರೂ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಏಕಮಾತ್ರ ಆಟಗಾರ ಎಂಬ ಹೆಗ್ಗಳಿಕೆ ಕ್ಯಾಪ್ಟನ್‌ ಕೂಲ್‌ ಅವರದ್ದು.

ರನ್‌ಔಟ್‌ನಿಂದ ಆರಂಭ, ರನ್‌ಔಟ್‌ನಿಂದ ಕೊನೆ!

ಹೌದು, ಧೋನಿ 2019 ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತ ಬಳಿಕ ತಂಡದಿಂದ ಹೊರಗುಳಿಸಿದ್ದರು. ಅದು ಅವರ ವೃತ್ತಿ ಜೀವನದ 350ನೇ ಒಡಿಐ ಎಂಬುದು ವಿಶೇಷ. ಇನ್ನು 2004ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಧೋನಿ, ಆಡಿದ ಮೊದಲ ಪಂದ್ಯದಲ್ಲೇ ರನ್‌ಔಟ್‌ ಆಗಿದ್ದರು. ಕಳೆದ ವರ್ಷ ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲೂ ಧೋನಿ ರನ್‌ಔಟ್‌ ಆಗಿದ್ದರು. ಪರಿಣಾಮ ಭಾರತ ತಂಡ ವಿಶ್ವಕಪ್‌ ರೇಸ್‌ನಿಂದ ಹೊರಬಿದ್ದಿತ್ತು. ಹೀಗೆ ರನ್‌ಔಟ್‌ನಲ್ಲಿ ಆರಂಭವಾದ ಧೋನಿಯ ಅಂತರರಾಷ್ಟ್ರೀಯ ಕ್ರಿಕೆಟ್‌ ಲೈಫ್‌ ರನ್‌ಔಟ್‌ನಲ್ಲೇ ಕೊನೆಗೊಂಡಿದೆ.

ಧೋನಿ, ಭಾರತದ ಪರ 90 ಟೆಸ್ಟ್‌, 350 ಒಡಿಐ ಮತ್ತು 98 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 4876, 10773 ಮತ್ತು 1617 ರನ್‌ಗಳನ್ನು ಗಳಿಸಿದ್ದಾರೆ, ಟೆಸ್ಟ್‌ನಲ್ಲಿ 256 ಕ್ಯಾಚ್‌ ಮತ್ತು 38 ಸ್ಟಂಪಿಂಗ್‌, ಒಡಿಐನಲ್ಲಿ 321 ಕ್ಯಾಚ್‌ 123 ಸ್ಟಂಪಿಂಗ್‌ ಹಾಗೂ ಟಿ20-ಐನಲ್ಲಿ 57 ಕ್ಯಾಚ್‌ ಮತ್ತು 34 ಸ್ಟಂಪಿಂಗ್‌ ಗಳನ್ನು ಮಾಡಿದ ಕೀರ್ತಿ ಧೋನಿಯದ್ದು.

ರೈನಾ ಕೂಡ ನಿವೃತ್ತಿ

ಧೋನಿ ಬೆನ್ನಲ್ಲೇ ಟೀಮ್‌ ಇಂಡಿಯಾ ಅವಕಾಶ ವಂಚಿತ ಸ್ಟಾರ್‌ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಕೂಡ ಇದೇ ಆಗಸ್ಟ್ 15 ರಂದೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಧೋನಿ ನಿರ್ಧಾರ ತಿಳಿಸಿದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯ ತಿಳಿಸಿದ ರೈನಾ, ತಾವೂ ಕೂಡ ತಮ್ಮ ನೆಚ್ಚಿನ ನಾಯಕನ ಜೊತೆಗೇ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು.

ಪೃಥ್ವಿ ಶಾ ಮತ್ತು ಸೂರ್ಯಕುಮಾರ ಯಾದವ್ ಕ್ವಾರಂಟೀನ್ ಅವಧಿ ಮುಗಿದಿದೆ, ಮುಂದಿನ ಟೆಸ್ಟ್​ಗಳ ಆಯ್ಕೆಗೆ ಇಬ್ಬರೂ ಲಭ್ಯ!

ದೇಶ ತಲೆ ಎತ್ತುವಂತೆ ಮಾಡಿದ್ದೀರಿ; ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರನ್ನು ಭೇಟಿಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್

(MS Dhoni retirement Exactly a year ago on August 15 2020 MS Dhoni announced retirement for international cricket)

Published On - 7:19 am, Sun, 15 August 21