ಪೃಥ್ವಿ ಶಾ ಮತ್ತು ಸೂರ್ಯಕುಮಾರ ಯಾದವ್ ಕ್ವಾರಂಟೀನ್ ಅವಧಿ ಮುಗಿದಿದೆ, ಮುಂದಿನ ಟೆಸ್ಟ್​ಗಳ ಆಯ್ಕೆಗೆ ಇಬ್ಬರೂ ಲಭ್ಯ!

ಕೊಲಂಬೋದಿಂದ ಹೊರಟು ಲಂಡನ್ ತಲುಪಿದ ಶಾ ಮತ್ತು ಸೂರ್ಯ ಅಲ್ಲಿಂದ ನೇರವಾಗಿ ನಾಟಿಂಗ್​ಹ್ಯಾಮ್​ಗೆ  ಹೋಗಿ ಅಲ್ಲೇ ಹತ್ತು ದಿನಗಳ ಕಡ್ಡಾಯ ಕ್ವಾರಂಟೀನ್​ಗೊಳಗಾದರು. ಟೀಮಿನಲ್ಲಿ ಆಯ್ಕೆ ಲಭ್ಯರಾಗಬೇಕಾದರೆ ಅವರು ಕ್ವಾರಂಟೀನ್ ಅವಧಿ ಪೂರ್ತಿಗೊಳಿಸುವುದು ಅನಿವಾರ್ಯವಾಗಿತ್ತು.

ಪೃಥ್ವಿ ಶಾ ಮತ್ತು ಸೂರ್ಯಕುಮಾರ ಯಾದವ್ ಕ್ವಾರಂಟೀನ್ ಅವಧಿ ಮುಗಿದಿದೆ, ಮುಂದಿನ ಟೆಸ್ಟ್​ಗಳ ಆಯ್ಕೆಗೆ ಇಬ್ಬರೂ ಲಭ್ಯ!
ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್
TV9kannada Web Team

| Edited By: Arun Belly

Aug 15, 2021 | 1:49 AM

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೆ ಹೊಸದಾಗಿ ಸೇರ್ಪಡೆಯಾಗಿರುವ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ 10-ದಿನಗಳ ಕ್ವಾರಂಟೀನ್ ಅವಧಿ ಪೂರೈಸಿದ ನಂತರ ಶನಿವಾರ ಲಾರ್ಡ್ಸ್ ಮೈದಾನದಲ್ಲಿ ತಂಡದ ಇತರ ಸದಸ್ಯರನ್ನು ಸೇರಿಕೊಂಡರು. ಐತಿಹಾಸಿಕ ಲಾರ್ಡ್ಸ್ ಮೈದಾನದ ಬಾಲ್ಕನಿಗಳಲ್ಲಿ ಮುಂಬೈನ ಈ ಇಬ್ಬರು ಬ್ಯಾಟ್ಸ್ಮನ್ಗಳು ಕೂತಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಷಯವನ್ನು ಖಾತ್ರಿಪಡಿಸಿದೆ. ಶನಿವಾರ ಭಾರತ-ಇಂಗ್ಲೆಂಡ್ ನಡುವೆ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾಗಿತ್ತು.

ಸೀಮಿತ ಓವರ್​ಗಳ  ಎರಡು ಸರಣಿಗಳಿಗಾಗಿ ಭಾರತದ ಮತ್ತೊಂದು ತಂಡದ ಭಾಗವಾಗಿ ಶ್ರೀಲಂಕಾ ಪ್ರವಾಸ ತೆರಳಿದ್ದ ಶಾ ಮತ್ತು ಸೂರ್ಯ ಕೊನೆಯ ಎರಡು ಟಿ20 ಪಂದ್ಯಗಳನ್ನು ಆಡಲಿಲ್ಲ. ಕೋವಿಡ್-19 ಸೋಂಕಿಗೊಳಗಾಗಿದ್ದ ಕೃಣಾಲ್ ಪಾಂಡ್ಯ ಅವರೊಂದಿಗೆ ಹತ್ತಿರದ ಸಂಪರ್ಕದಲ್ಲಿದ್ದ ಇವರಿಬ್ಬರನ್ನು ಆಡುವ ಇಲೆವೆನ್ ನಿಂದ ಹೊರಗಿಡಲಾಗಿತ್ತು. ಈ ಅಂಶ ಅವರ ಇಂಗ್ಲೆಂಡ್ ಪ್ರಯಾಣದ ಮೇಲೆ ಪ್ರಭಾವ ಬೀರಿತಾದರೂ ಕೊನೆಗೂ ಆಗಸ್ಟ್ 3 ರಂದು ಲಂಡನ್ಗೆ ಹೊರಟ ವಿಮಾನ ಹತ್ತುವಲ್ಲಿ ಸಫಲರಾದರು.

ಕೊಲಂಬೋದಿಂದ ಹೊರಟು ಲಂಡನ್ ತಲುಪಿದ ಶಾ ಮತ್ತು ಸೂರ್ಯ ಅಲ್ಲಿಂದ ನೇರವಾಗಿ ನಾಟಿಂಗ್​ಹ್ಯಾಮ್​ಗೆ  ಹೋಗಿ ಅಲ್ಲೇ ಹತ್ತು ದಿನಗಳ ಕಡ್ಡಾಯ ಕ್ವಾರಂಟೀನ್ಗೊಳಗಾದರು. ಟೀಮಿನಲ್ಲಿ ಆಯ್ಕೆ ಲಭ್ಯರಾಗಬೇಕಾದರೆ ಅವರು ಕ್ವಾರಂಟೀನ್ ಅವಧಿ ಪೂರ್ತಿಗೊಳಿಸುವುದು ಅನಿವಾರ್ಯವಾಗಿತ್ತು. ನಾಟಿಂಗ್​ಹ್ಯಾಮ್​ನಲ್ಲಿ  ಮೊದಲ ಟೆಸ್ಟ್ ಆಡಿದ ನಂತರ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯ ಎರಡನೇ ಟೆಸ್ಟ್​ಗೋಸಕರ್ ಲಂಡನ್​ಬೆ ಪ್ರಯಾಣ ಬೆಳೆಸಿದರೂ ಶಾ ಮತ್ತು ಸೂರ್ಯ ಅಲ್ಲೇ ಉಳಿದು ಶನಿವಾರದಂದು ತಂಡವನ್ನು ಸೇರಿಕೊಂಡರು.

ಈಗ ಅವರಿಬ್ಬರು ಆಗಸ್ಟ್ 24 ರಿಂದ ಲೀಡ್ಸ್ ಹೆಡಿಂಗ್ಲೀಯಲ್ಲಿ ನಡೆಯುವ ಮೂರನೇ ಟೆಸ್ಟ್ ನಲ್ಲಿ ಆಯ್ಕೆಗೆ ಲಭ್ಯರಿದ್ದಾರೆ. ಎರಡನೆ ಟೆಸ್ಟ್ ಅಂತ್ಯ ಮತ್ತು ಮೂರನೇ ಟೆಸ್ಟ್ ಆರಂಭದ ನಡುವೆ 9 ದಿನಗಳ ಅಂತರವಿದೆ. ಹಾಗಾಗಿ ಚೆನ್ನಾಗಿ ತಯಾರಾಗಲು ಮತ್ತು ಅಲ್ಲಿನ ಪ್ಲೇಯಿಂಗ್ ಕಂಡೀಶನ್​ಗಳಿಗೆ ಹೊಂದಿಕೊಳ್ಳಲು ಶಾ ಮತ್ತು ಸೂರ್ಯ ಅವರಿಗೆ ಸಾಕಷ್ಟು ಸಮಯವಿದೆ. ಶಾ ಈಗಾಗಲೇ ಭಾರತದ ಪರ ಟೆಸ್ಟ್ ಆಡಿದ್ದಾರೆ. ಸೂರ್ಯ ಒಂದು ದಿನದ ಅಂತರರಾಷ್ಟ್ರೀಯ ಮತ್ತು ಟಿ20ಐ ಆವೃತ್ತಿಗೆ ಪಾದಾರ್ಪಣೆ ಮಾಡಿರುವರಾದರೂ ಟೆಸ್ಟ್​ಗೆ ಇನ್ನೂ ಆರಂಗ್ರೇಟಂ ಆಗಿಲ್ಲ, ಒಂದು ಪಕ್ಷ ಅವರು ಅಂತಿಮ ಇಲೆವೆನ್​ನಲ್ಲಿ ಸ್ಥಾನ ಪಡೆದರೆ, ಸಾಂಪ್ರದಾಯಿಕ ಅವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸುವ 303 ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್​ಗೆ ತೆರಳಿದ ಮೂಲ 20-ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ದುರದೃಷ್ಟವಶಾತ್ ವಿಫಲರಾದ ಶಾ, ಸರಣಿ ಆರಂಭವಾಗುವ ಮೊದಲೇ ಗಾಯಗೊಂಡ ಆರಂಭ ಆಟಗಾರ ಶುಭ್ಮನ್ ಗಿಲ್ ಅವರ ಸ್ಥಾನದಲ್ಲಿ ಬದಲೀ ಆಟಗಾರನಾಗಿ ಹೋಗಿದ್ದಾರೆ. ಅವರಂತೆಯೇ ಗಾಯಗೊಂಡ ವಾಷಿಂಗ್ಟನ್ ಸುಂದರ್ ಅವರಿಗೆ ಬದಲೀ ಆಟಗಾರನಾಗಿ ಸೂರ್ಯ ಹೋಗಿದ್ದಾರೆ.

ಶಾ ಇದುವರೆಗೆ 5 ಟೆಸ್ಟ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಡಿಸೆಂಬರ್ 2020 ರಲ್ಲಿ ಆಡಿದ ಪಂದ್ಯ ಅವರ ಕೊನೆಯ ಟೆಸ್ಟ್ ಆಗಿದೆ. ಈ ಟೆಸ್ಟ್​ಗಳಲ್ಲಿ ಅವರು 0 ಮತ್ತು 2 ರನ್ ಗಳಿಸಿದ್ದರು.

ಇದನ್ನೂ ಓದಿ:  India vs England: 88 ರನ್​ಗೆ 7 ವಿಕೆಟ್: ಭಾರತದ ಮಧ್ಯಮ ಕ್ರಮಾಂಕದಿಂದ ತೀರಾ ಕಳಪೆ ಪ್ರದರ್ಶನ!

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada