Musheer Khan: ರಸ್ತೆ ಅಪಘಾತದಲ್ಲಿ ಯುವ ಆಟಗಾರ ಮುಶೀರ್ ಖಾನ್​ಗೆ ಗಂಭೀರ ಗಾಯ

|

Updated on: Sep 28, 2024 | 10:25 AM

Musheer Khan: ಭಾರತ ಟೆಸ್ಟ್ ತಂಡದ ಆಟಗಾರ ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಲಕ್ನೋಗೆ ಪ್ರಯಾಣಿಸುವ ವೇಳೆ ಮುಶೀರ್ ಇದ್ದ ವಾಹನ ಅಪಘಾತಕ್ಕೀಡಾಗಿದ್ದು, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Musheer Khan: ರಸ್ತೆ ಅಪಘಾತದಲ್ಲಿ ಯುವ ಆಟಗಾರ ಮುಶೀರ್ ಖಾನ್​ಗೆ ಗಂಭೀರ ಗಾಯ
Musheer Khan
Follow us on

ಮುಂಬೈ ತಂಡದ ಯುವ ಬ್ಯಾಟರ್ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ತಂದೆ ನೌಶನ್ ಖಾನ್ ಅವರೊಂದಿಗೆ ವಾಹನದಲ್ಲಿ ಅಜಂಗಢದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು, ಈ ವೇಳೆ ಅವರ ಮೂಳೆ ಮುರಿತಕ್ಕೊಳಗಾಗಿದೆ. ಹೀಗಾಗಿ ಮುಂಬರುವ ಇರಾನಿ ಕಪ್ ಪಂದ್ಯಕ್ಕೆ ಮುಶೀರ್ ಖಾನ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಮುಶೀರ್ ಖಾನ್ ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಗಳಾಗಿದ್ದವು. ಅಲ್ಲದೆ ಮುಂಬರುವ ಇರಾನಿ ಕಪ್ ಪಂದ್ಯದಲ್ಲಿ ಮುಶೀರ್ ಖಾನ್ ಮುಂಬೈ ಪರ ಕಣಕ್ಕಿಳಿಯಬೇಕಿತ್ತು. ಆದರೀಗ ಗಾಯಗೊಂಡ ಕಾರಣ ಅವರು ಅಕ್ಟೋಬರ್ 1 ರಿಂದ ಶುರುವಾಗಲಿರುವ ಇರಾನಿ ಕಪ್​ನಿಂದ ಹೊರಗುಳಿಯುವುದು ಬಹುತೇಕ ಖಚಿತ. ಅಲ್ಲದೆ ರಣಜಿ ಟೂರ್ನಿಯ ಆರಂಭಿಕ ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಈವರೆಗೆ 9 ಪಂದ್ಯಗಳನ್ನಾಡಿರುವ ಮುಶೀರ್ ಖಾನ್ 3 ಶತಕ ಹಾಗೂ 1 ಅರ್ಧಶತಕದೊಂದಿಗೆ ಒಟ್ಟು 716 ರನ್ ಕಲೆಹಾಕಿದ್ದಾರೆ. ಅಲ್ಲದೆ ಕಳೆದ ಬಾರಿ ರಣಜಿ ಟ್ರೋಫಿ ಫೈನಲ್​ನಲ್ಲಿ ಮುಂಬೈ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ 19 ವರ್ಷದ ಮುಶೀರ್ ಪ್ರಮುಖ ಪಾತ್ರವಹಿಸಿದ್ದರು.

ಹೀಗಾಗಿಯೇ ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೀಗ ಗಾಯದ ಕಾರಣ ಯುವ ಆಟಗಾರ ಇರಾನಿ ಕಪ್ ಹಾಗೂ ರಣಜಿ ಟೂರ್ನಿ ಪಂದ್ಯಗಳಿಂದ ಹೊರಗುಳಿಯುವಂತಾಗಿದೆ.

ಇರಾನಿ ಕಪ್ ಪಂದ್ಯ ಯಾವಾಗ ಶುರು?

ಈ ಬಾರಿಯ ಇರಾನಿ ಕಪ್ ಪಂದ್ಯವು ಅಕ್ಟೋಬರ್ 1 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದೆ. ಈ ಮೊದಲು ಈ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ನಿಗದಿಯಾಗಿತ್ತು. ಆದರೀಗ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಅದರಂತೆ ಈ ಬಾರಿಯ ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ಶೇಷ ಭಾರತ ತಂಡಗಳು ಸೆಣಸಲಿವೆ. ಈ ತಂಡಗಳಿಗೆ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ , ಆಯುಷ್ ಮ್ಹಾತ್ರೆ, ಮುಶೀರ್ ಖಾನ್, ಶ್ರೇಯಸ್ ಅಯ್ಯರ್, ಸಿದ್ಧೇಶ್ ಲಾಡ್, ಸೂರ್ಯಾಂಶ್ ಶೆಡ್ಗೆ, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸಿದ್ದಾಂತ್ ಅದ್ಧತ್ರಾವ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಹಿಮಾಂಶು ಸಿಂಗ್, ಶಾರ್ದೂಲ್ ಠಾಕೂರ್, ಮೊಹಿತ್ ಅವಸ್ತಿ, ಜುನೆದ್ ಖಾನ್, ರಾಯಿಸ್ಟನ್ ಡಯಾಸ್, ಸರ್ಫರಾಝ್ ಖಾನ್*.

ಇದನ್ನೂ ಓದಿ: IPL 2025 ರಲ್ಲಿ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಇಲ್ಲಿದೆ ಮಾಹಿತಿ

ಶೇಷ ಭಾರತ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೇಲ್ (ವಿಕೆಟ್ ಕೀಪರ್)*, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಸರನ್ಶ್ ಜೈನ್, ಪ್ರಸಿದ್ಧ್ ಕೃಷ್ಣ, ಮುಕೇಶ್ ಕುಮಾರ್, ಯಶ್ ದಯಾಲ್*, ರಿಕಿ ಭುಯಿ, ಶಾಶ್ವತ್ ರಾವತ್, ಖಲೀಲ್ ಅಹ್ಮದ್, ರಾಹುಲ್ ಚಹರ್.