ನೇಪಾಳ ಆಟಗಾರನ ಕನಸನ್ನು ನನಸು ಮಾಡಿದ ಕೊಹ್ಲಿ: ನೇಪಾಳ ಡ್ರೆಸ್ಸಿಂಗ್ ರೂಮ್​ನಲ್ಲಿ ಏನೆಲ್ಲ ಆಯ್ತು ನೋಡಿ

|

Updated on: Sep 05, 2023 | 11:03 AM

Virat Kohli in Nepal Dressing Room: ಕೊಹ್ಲಿ ಅವರು ನೇಪಾಳ ಡ್ರೆಸ್ಸಿಂಗ್ ರೂಮ್​ನಲ್ಲಿ ಕೆಲ ಸಮಯ ಕಳೆದರು. ಎಲ್ಲ ಆಟಗಾರರ ಜೊತೆ ಮಾತನಾಡಿ ಕೆಲ ಟಿಪ್ಸ್ ನೀಡಿದರು. ಮುಖ್ಯವಾಗಿ ಕೊಹ್ಲಿ ನೋಡಬೇಕು, ಮಾತನಾಡಬೇಕು ಎಂದು ಕಾದು ಕುಳಿತಿದ್ದ ನೇಪಾಳ ಆಟಗಾರ ಸೋಂಪಾಲ್ ಕಾಮಿ ಅವರ ಶೂಗೆ ಸಹಿ ಮಾಡಿ ಅವರ ಕನಸನ್ನು ನನಸು ಮಾಡಿದರು.

ನೇಪಾಳ ಆಟಗಾರನ ಕನಸನ್ನು ನನಸು ಮಾಡಿದ ಕೊಹ್ಲಿ: ನೇಪಾಳ ಡ್ರೆಸ್ಸಿಂಗ್ ರೂಮ್​ನಲ್ಲಿ ಏನೆಲ್ಲ ಆಯ್ತು ನೋಡಿ
Virat Kohli Nepal Dressing room
Follow us on

ಏಷ್ಯಾಕಪ್ 2023 ರಲ್ಲಿ ನೇಪಾಳ ವಿರುದ್ಧ ಡಕ್ವರ್ತ್ ಯೂಯಿಸ್ ನಿಯಮದ ಅನ್ವಯ 10 ವಿಕೆಟ್​ಗಳ ಅಮೋಘ ಜಯ ಸಾಧಿಸಿದ ಭಾರತ (India vs Nepal) ತಂಡ ಸೂಪರ್ -4 ಹಂತಕ್ಕೆ ಪ್ರವೇಶಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅಜೇಯ ಅರ್ಧಶತಕ ಸಿಡಿಸಿ ಗೆಲುವು ತಂದಿಟ್ಟರು. ಪಂದ್ಯ ಮುಗಿದ ಬಳಿಕ ಭಾರತ ತಂಡದ ಆಟಗಾರರು ನೇಪಾಳ ತಂಡದ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಮಾತುಕತೆ ನಡೆಸಿದರು. ಅದರಲ್ಲೂ ವಿರಾಟ್ ಕೊಹ್ಲಿ ನೇಪಾಳ ಆಟಗಾರನಿಗೆ ಮರೆಯಲಾಗದ ಒಡುಗೊರೆ ನೀಡಿದರು.

ಕೊಹ್ಲಿ ಅವರು ನೇಪಾಳ ಡ್ರೆಸ್ಸಿಂಗ್ ರೂಮ್​ನಲ್ಲಿ ಕೆಲ ಸಮಯ ಕಳೆದರು. ಎಲ್ಲ ಆಟಗಾರರ ಜೊತೆ ಮಾತನಾಡಿ ಬ್ಯಾಟಿಂಗ್  ಟಿಪ್ಸ್ ನೀಡಿದರು. ಮುಖ್ಯವಾಗಿ ಕೊಹ್ಲಿಯನ್ನು ನೋಡಬೇಕು, ಮಾತನಾಡಬೇಕು ಎಂದು ಕಾದು ಕುಳಿತಿದ್ದ ನೇಪಾಳ ಆಟಗಾರ ಸೋಂಪಾಲ್ ಕಾಮಿ ಅವರ ಶೂಗೆ ಸಹಿ ಮಾಡಿ ಅವರ ಕನಸನ್ನು ನನಸು ಮಾಡಿದರು. ಕೊಹ್ಲಿ ಅವರು ಸೋಂಪಾಲ್ ಅವರ ಶೂಗೆ ಹಸ್ತಾಕ್ಷರ ಹಾಕಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೇಪಾಳಿ ವೇಗಿ ಇದು ನನ್ನ ಕನಸು ನನಸಾದ ಕ್ಷಣ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಏಷ್ಯಾಕಪ್​ನಲ್ಲಿಂದು ಲಂಕಾ-ಅಫ್ಘಾನ್ ಮುಖಾಮುಖಿ: ಸೂಪರ್-4 ನತ್ತ ಶನಕಾ ಪಡೆ
ಒಂದೇ ಪಂದ್ಯದಲ್ಲಿ ಬರೋಬ್ಬರಿ ನಾಲ್ಕು ದಾಖಲೆ ಬರೆದ ರೋಹಿತ್ ಶರ್ಮಾ
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಂದು ಭಾರತ ತಂಡ ಪ್ರಕಟ: ಎಷ್ಟು ಗಂಟೆಗೆ?
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ

ಸೋಂಪಾಲ್ ಕಾಮಿ ಅವರ ಶೂಗೆ ಸಹಿ ಮಾಡುತ್ತಿರುವ ವಿರಾಟ್ ಕೊಹ್ಲಿ:

 

ಭಾರತ ವಿರುದ್ಧದ ಪಂದ್ಯದ ಹಿಂದಿನ ದಿನ ಮಾತನಾಡಿದ ನೇಪಾಳ ನಾಯಕ ರೋಹಿತ್ ಪೌಡೆಲ್, “ನಾವೆಲ್ಲರೂ ಭಾರತ ವಿರುದ್ಧ ಆಡಲು ತುಂಬಾ ಉತ್ಸುಕರಾಗಿದ್ದೇವೆ. ಅಂತಹ ಅವಕಾಶಗಳು ನಮಗೆ ಹೆಚ್ಚಾಗಿ ಸಿಗುವುದಿಲ್ಲ. ಆದ್ದರಿಂದ, ನಮ್ಮ ದೇಶವನ್ನು ದೊಡ್ಡ ವೇದಿಕೆಯಲ್ಲಿ ಪ್ರತಿನಿಧಿಸಲು ನಮಗೆಲ್ಲರಿಗೂ ಇದು ಉತ್ತಮ ಅವಕಾಶವಾಗಿದೆ. ಪಾಕಿಸ್ತಾನ ಮತ್ತು ಭಾರತ ವಿರುದ್ಧ ಎರಡು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಾವು ಅಂತಹ ಅವಕಾಶಗಳನ್ನು ಬಳಸಿಕೊಳ್ಳಲು ಬಯಸುತ್ತೇವೆ ಇದರಿಂದ ಕ್ರಿಕೆಟ್ ಜಗತ್ತು ನಮ್ಮತ್ತ ಗಮನ ಹರಿಸಲಿದೆ,” ಎಂದು ಹೇಳಿದ್ದರು.

VIDEO: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಗೌತಮ್ ಗಂಭೀರ್

ಸೂಪರ್-4 ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ:

ನೇಪಾಳ ವಿರುದ್ಧ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೆ ತಲುಪಿದೆ. ಇದಕ್ಕೂ ಮುನ್ನ ಪಾಕಿಸ್ತಾನ ಮುಂದಿನ ಸುತ್ತಿಗೆ ಪ್ರವೇಶಿಸಿತ್ತು. ಇದೀಗ ಸೂಪರ್-4 ಹಂತದಲ್ಲಿ ಒಟ್ಟು 4 ತಂಡಗಳು ಪರಸ್ಪರ ಸೆಣಸಲಿದೆ. ಇಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 10 ರಂದು ಮುಖಾಮುಖಿಯಾಗುವುದು ಖಚಿತವಾಗಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹೈವೋಲ್ಟೇಜ್ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಕ್ಕೂ ಮುನ್ನ ನಡೆದ ಮೊದಲ ಮುಖಾಮುಖಿಯು ಮಳೆಗೆ ಅಹುತಿಯಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ