Asia cup 2023 IND vs NEP Live Score: ಟೀಮ್ ಇಂಡಿಯಾಗೆ ಅಮೋಘ ಗೆಲುವು

| Updated By: ಝಾಹಿರ್ ಯೂಸುಫ್

Updated on:Sep 04, 2023 | 11:36 PM

Asia cup 2023 India vs Nepal Live Score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 230 ರನ್​ಗಳಿಗೆ ಆಲೌಟ್ ಆಯಿತು. ಆದರೆ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಡಕ್​ವರ್ತ್ ಲೂಯಿಸ್ ನಿಯಮದಂತೆ ಟಾರ್ಗೆಟ್ ನೀಡಲಾಯಿತು.

Asia cup 2023 IND vs NEP Live Score: ಟೀಮ್ ಇಂಡಿಯಾಗೆ ಅಮೋಘ ಗೆಲುವು
IND vs NEP

ಏಷ್ಯಾಕಪ್​ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಶ್ರೀಲಂಕಾದ ಪಲ್ಲೆಕಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 230 ರನ್​ಗಳಿಗೆ ಆಲೌಟ್ ಆಯಿತು. ಆದರೆ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಡಕ್​ವರ್ತ್ ಲೂಯಿಸ್ ನಿಯಮದಂತೆ ಟಾರ್ಗೆಟ್ ನೀಡಲಾಯಿತು. ಅದರಂತೆ 23 ಓವರ್​ಗಳಲ್ಲಿ 145 ರನ್​ಗಳ ಗುರಿ ಪಡೆದ ಭಾರತ ತಂಡದ ಪರ ರೋಹಿತ್ ಶರ್ಮಾ (74) ಹಾಗೂ ಶುಭ್​ಮನ್ ಗಿಲ್ (67) ಭರ್ಜರಿ ಬ್ಯಾಟಿಂಗ್ ನಡೆಸಿದರು. ಅಲ್ಲದೆ 20.1 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟುವ ಮೂಲಕ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿತು.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ.

ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಮಹಮದ್ ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜ್‌ಬಂಶಿ, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಗುಲ್ಶನ್ ಕುಮಾರ್ ಝಾ, ಆರಿಫ್ ಶೇಖ್, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ಕಿಶೋರ್ ಮಹತೋ, ಸಂದೀಪ್ ಜೊರ , ಅರ್ಜುನ್ ಸೌದ್, ಶ್ಯಾಮ್ ಧಾಕಲ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).

LIVE Cricket Score & Updates

The liveblog has ended.
  • 04 Sep 2023 11:32 PM (IST)

    IND vs NEP Live Score: 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

    NEP 230 (48.2)

    IND 147/0 (20.1)

    ಡಕ್​ವರ್ತ್ ಲೂಯಿಸ್ ನಿಯಮದಂತೆ 23 ಓವರ್​ಗಳಲ್ಲಿ 145 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ 20.1 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಟಾರ್ಗೆಟ್ ಅನ್ನು ಚೇಸ್ ಮಾಡಿದೆ. ಈ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

    ರೋಹಿತ್ ಶರ್ಮಾ ಅಜೇಯ- 74 ರನ್

    ಶುಭ್​ಮನ್ ಗಿಲ್ ಅಜೇಯ- 67 ರನ್​

  • 04 Sep 2023 11:26 PM (IST)

    IND vs NEP Live Score: ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 5 ರನ್​ಗಳ ಅವಶ್ಯಕತೆ

    ಗುಲ್ಶನ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ. ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 5 ರನ್​ಗಳ ಅವಶ್ಯಕತೆ.

    IND 140/0 (19)

      

  • 04 Sep 2023 11:09 PM (IST)

    IND vs NEP Live Score: ಅರ್ಧಶತಕ ಸಿಡಿಸಿ ಶುಭ್​ಮನ್ ಗಿಲ್

    47 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಶುಭ್​ಮನ್ ಗಿಲ್. ಗೆಲುವಿನತ್ತ ಭಾರತ…ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್​ ಗಿಲ್ ಉತ್ತಮ ಬ್ಯಾಟಿಂಗ್.

    IND 118/0 (15.3)

    ಡಿಎಲ್​​ಎಸ್ ನಿಯಮದಂತೆ  ಭಾರತಕ್ಕೆ ಗೆಲ್ಲಲು 45 ಎಸೆತಗಳಲ್ಲಿ 27 ರನ್​ಗಳ ಅವಶ್ಯಕತೆ

  • 04 Sep 2023 11:02 PM (IST)

    IND vs NEP Live Score: ಹಿಟ್​ಮ್ಯಾನ್​ ಬ್ಯಾಟ್​ನಿಂದ ರಾಕೆಟ್ ಶಾಟ್

    ರಾಜಬನ್ಶಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ. 4ನೇ ಸಿಕ್ಸ್ ಸಿಡಿಸಿದ ಹಿಟ್​ಮ್ಯಾನ್, ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.

    IND 109/0 (14.1)

      

  • 04 Sep 2023 10:55 PM (IST)

    IND vs NEP Live Score: ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ

    39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ. ಗೆಲುವಿನತ್ತ ಟೀಮ್ ಇಂಡಿಯಾ. ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್.

    IND 96/0 (12.5)

      

  • 04 Sep 2023 10:49 PM (IST)

    IND vs NEP Live Score: ಹಿಟ್​ಮ್ಯಾನ್ ಅಬ್ಬರ ಶುರು

    ಸಂದೀಪ್ ಲಾಮಿಚಾನೆ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.  ಗೆಲುವಿನತ್ತ ಮುನ್ನಡೆಯುತ್ತಿರುವ ಭಾರತ. ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 76/0 (11)

      

  • 04 Sep 2023 10:41 PM (IST)

    IND vs NEP Live Score: ಶುಭ್​-ಸಿಕ್ಸ್: ಗಿಲ್​ ಬ್ಯಾಟ್​ನಿಂದ ಭರ್ಜರಿ ಹೊಡೆತ

    ಸಂದೀಪ್ ಲಾಮಿಚಾನೆ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್. ಟೀಮ್ ಇಂಡಿಯಾ ಮೊತ್ತ 60 ಕ್ಕೆ ಏರಿಕೆ. ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.

    IND 60/0 (8.5)

      

  • 04 Sep 2023 10:35 PM (IST)

    IND vs NEP Live Score: ಆಕರ್ಷಕ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ

    ಸಂದೀಮ್ ಲಾಮಿಚಾನೆ ಎಸೆತದಲ್ಲಿ ಲೆಗ್ ಸೈಡ್​ನತ್ತ ಸ್ವೀಪ್ ಶಾಟ್ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ. 7 ಓವರ್​ ಮುಕ್ತಾಯಕ್ಕೆ ಟೀಮ್ ಇಂಡಿಯಾ ಮೊತ್ತ 45. ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.

    IND 45/0 (7)

      

  • 04 Sep 2023 10:20 PM (IST)

    IND vs NEP Live Score: 23 ಓವರ್​ಗಳ ಪಂದ್ಯ: 3 ಓವರ್ ಮುಕ್ತಾಯ

    3 ಓವರ್​ಗಳ ಮುಕ್ತಾಯ. ಮೂರು ಓವರ್​ಗಳಲ್ಲಿ 19 ರನ್ ಕಲೆಹಾಕಿದ ಟೀಮ್ ಇಂಡಿಯಾ. ಇನ್ನು 20 ಓವರ್​ಗಳಲ್ಲಿ 126 ರನ್​ಗಳ ಗುರಿ. ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 19/0 (3)

      

  • 04 Sep 2023 10:07 PM (IST)

    IND vs NEP Live Score: 10.15 ಕ್ಕೆ ಪಂದ್ಯ ಶುರು: 23 ಓವರ್​ಗಳ ಮ್ಯಾಚ್

    10.15 ರಿಂದ ಪಂದ್ಯ ಶುರುವಾಗಲಿದ್ದು, ಪಂದ್ಯವನ್ನು 23 ಓವರ್​ಗಳವರೆಗೆ ಸೀಮಿತಗೊಳಿಸಲಾಗಿದೆ. ಅದರಂತೆ ಟೀಮ್ ಇಂಡಿಯಾ 23 ಓವರ್​ಗಳಲ್ಲಿ 145 ರನ್​ಗಳಿಸಬೇಕಿದೆ.

    ಸದ್ಯ 2.1 ಓವರ್​ಗಳಲ್ಲಿ ಟೀಮ್ ಇಂಡಿಯಾ 17 ರನ್​ ಕಲೆಹಾಕಿದ್ದು, ಇನ್ನುಳಿದ 20.5 ಓವರ್​ಗಳಲ್ಲಿ 128 ರನ್​ಗಳಿಸಬೇಕಿದೆ.

    IND 17/0 (2.1)

      

  • 04 Sep 2023 09:48 PM (IST)

    IND vs NEP Live Score: ಮಳೆ ಸ್ಥಗಿತ: 10 ಗಂಟೆಗೆ ಪಂದ್ಯ ಆರಂಭ ಸಾಧ್ಯತೆ

    ಸದ್ಯ ಮಳೆ ಸ್ಥಗಿತಗೊಂಡಿದ್ದು, ಇದೀಗ ಮೈದಾನದಲ್ಲಿನ ನೀರನ್ನು ತೆರವುಗೊಳಿಸಲಾಗುತ್ತಿದೆ. ಹೀಗಾಗಿ 10 ಗಂಟೆಯಿಂದ ಪಂದ್ಯ ಶುರುವಾಗುವ ಸಾಧ್ಯತೆಯಿದೆ ಎಂದು ಅಂಪೈರ್ ತಿಳಿಸಿದ್ದಾರೆ.

    ಇನ್ನು ಪಂದ್ಯ ಆರಂಭವಾದರೂ ಓವರ್​ಗಳ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ 25 ಓವರ್​ಗಳ ಪಂದ್ಯ ನಡೆದರೂ ಅಚ್ಚರಿಪಡಬೇಕಿಲ್ಲ.

  • 04 Sep 2023 09:20 PM (IST)

    IND vs NEP Live Score: ಮಳೆ ನಿಂತರೆ ಟೀಮ್ ಇಂಡಿಯಾದ ಡಿಎಲ್​ಎಸ್ ಗುರಿ ಎಷ್ಟು?

    ಒಂದು ವೇಳೆ ಮಳೆ ನಿಂತರೆ ಓವರ್​ಗಳ ಕಡಿತದೊಂದಿಗೆ ಪಂದ್ಯ ಮುಂದುವರೆಯಲಿದೆ. ಇಲ್ಲಿ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ಗುರಿ ನೀಡಲಾಗುತ್ತದೆ. ಅದರಂತೆ ಟೀಮ್ ಇಂಡಿಯಾದ ಗುರಿ ಹೀಗಿರಲಿದೆ.

    • 45 ಓವರ್​ಗಳ ಪಂದ್ಯ ನಡೆದರೆ 220 ರನ್​ಗಳ ಗುರಿ
    • 40 ಓವರ್​ಗಳ ಪಂದ್ಯ ನಡೆದರೆ 207 ರನ್​ಗಳ ಗುರಿ
    •  35 ಓವರ್‌ಗಳ ಪಂದ್ಯ ನಡೆದರೆ 192 ರನ್​ಗಳ ಗುರಿ
    • 30 ಓವರ್‌ಗಳ ಪಂದ್ಯ ನಡೆದರೆ 174  ರನ್​ಗಳ ಗುರಿ
    • 20 ಓವರ್‌ಗಳ ಪಂದ್ಯ ನಡೆದರೆ 130 ರನ್​ಗಳ ಗುರಿ ನೀಡಲಾಗುತ್ತದೆ.
  • 04 Sep 2023 09:17 PM (IST)

    IND vs NEP Live Score: ಮುಂದುವರೆದ ಮಳೆ: ಪಂದ್ಯ ಆರಂಭ ವಿಳಂಬ

    ಶ್ರೀಲಂಕಾದ ಪಲ್ಲೆಕಲೆಯಲ್ಲಿ ಮಳೆ ಮುಂದುವರೆದಿದ್ದು, ಹೀಗಾಗಿ ಮೈದಾನದಲ್ಲಿ ಕವರ್​ಗಳಿಂದ ಹೊದಿಸಲಾಗಿದೆ. ಅಲ್ಲದೆ ಮಳೆ ನಿಂತರೂ ಪಂದ್ಯ ಆರಂಭವಾಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.

    ಒಂದು ವೇಳೆ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಲಿದೆ. ಅತ್ತ ನೇಪಾಳ ತಂಡವು ಏಷ್ಯಾಕಪ್​ನಿಂದ ಹೊರಬೀಳಲಿದೆ.

  • 04 Sep 2023 08:22 PM (IST)

    IND vs NEP Live Score: ಪಂದ್ಯಕ್ಕೆ ಮಳೆ ಅಡ್ಡಿ: ಮ್ಯಾಚ್ ಸ್ಥಗಿತ

    3ನೇ ಓವರ್​ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ. ಟೀಮ್ ಇಂಡಿಯಾ ಇನಿಂಗ್ಸ್​ ಸ್ಥಗಿತ. 2.1 ಓವರ್​ಗಳಲ್ಲಿ 17 ರನ್ ಕಲೆಹಾಕಿರುವ ಟೀಮ್ ಇಂಡಿಯಾ. ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (12) ಹಾಗೂ ರೋಹಿತ್ ಶರ್ಮಾ (4) ಬ್ಯಾಟಿಂಗ್.

    ನೇಪಾಳ- 230 (48.2)

    ಭಾರತ- 17/0 (2.1)

      

     

  • 04 Sep 2023 08:20 PM (IST)

    IND vs NEP Live Score: ಒಂದೇ ಓವರ್​ನಲ್ಲಿ ಮೂರು ಫೋರ್ ಬಾರಿಸಿದ ಗಿಲ್

    ಸೋಂಪಲ್ ಕಮಿ ಎಸೆದ 2ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಸಿಡಿಸಿದ ಶುಭ್​ಮನ್ ಗಿಲ್. 5ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಗಿಲ್. ಒಂದೇ ಓವರ್​ನಲ್ಲಿ 12 ರನ್​ ಕಲೆಹಾಕಿದ ಟೀಮ್ ಇಂಡಿಯಾ.

    ಕರಣ್ ಎಸೆದ ಮೂರನೇ ಓವರ್​ನ ಮೊದಲ ಎಸೆತದಲ್ಲೇ ಹಿಟ್​ಮ್ಯಾನ್ ಬ್ಯಾಟ್​ನಿಂದ ಆಕರ್ಷಕ ಬೌಂಡರಿ.

    IND 17/0 (2.1)

      

      

  • 04 Sep 2023 08:14 PM (IST)

    IND vs NEP Live Score: ಮೊದಲ ಓವರ್​ನಲ್ಲಿ 1 ರನ್ ನೀಡಿದ ಕರಣ್

    ಮೊದಲ ಓವರ್​ನಲ್ಲೇ ರೋಹಿತ್ ಶರ್ಮಾರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಕರಣ್ ಕೆ.ಸಿ. ಕೇವಲ 1 ರನ್ ನೀಡಿ ನೇಪಾಳ ತಂಡಕ್ಕೆ ಶುಭಾರಂಭ ಒದಗಿಸಿದ ಯುವ ವೇಗಿ. ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್

    IND 1/0 (1)

      

  • 04 Sep 2023 07:38 PM (IST)

    IND vs NEP Live Score: ನೇಪಾಳ ಆಲೌಟ್: ಟೀಮ್ ಇಂಡಿಯಾಗೆ ಸುಲಭ ಗುರಿ

    ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನೇಪಾಳ ತಂಡವು 48.2 ಓವರ್​ಗಳಲ್ಲಿ 230 ರನ್​ಗಳಿಗೆ ಆಲೌಟ್ ಆಗಿದೆ.  ನೇಪಾಳ ಪರ ಆಸಿಫ್ ಶೇಖ್ (58) ಅರ್ಧಶತಕ ಬಾರಿಸಿದರೆ, ಸೋಂಪಲ್ ಕಮಿ 48 ರನ್​ಗಳ ಕೊಡುಗೆ ನೀಡಿದರು.

    ಇನ್ನು ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

    NEP 230 (48.2)

      

  • 04 Sep 2023 07:31 PM (IST)

    IND vs NEP Live Score: ನೇಪಾಳ ತಂಡದ 8ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಸೋಂಪಲ್ ಕಮಿ. 56 ಎಸೆತಗಳಲ್ಲಿ 48 ರನ್ ಬಾರಿಸಿ ಅರ್ಧಶತಕ ವಂಚಿತರಾದ ಸೋಂಪಲ್. ಟೀಮ್ ಇಂಡಿಯಾಗೆ 8ನೇ ಯಶಸ್ಸು. ಕ್ರೀಸ್​ನಲ್ಲಿ ಸಂದೀಪ್ ಲಾಮಿಚಾನೆ ಹಾಗೂ ಕರಣ್ ಬ್ಯಾಟಿಂಗ್.

    NEP 228/8 (47.2)

      

  • 04 Sep 2023 07:28 PM (IST)

    IND vs NEP Live Score: ಮತ್ತೊಂದು ಸಿಕ್ಸ್ ಸಿಡಿಸಿದ ಸೋಂಪಲ್

    ಮೊಹಮ್ಮದ್ ಸಿರಾಜ್ ಎಸೆದ 47ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದ ಸೋಂಪಲ್ ಕಮಿ. ಸ್ಪರ್ಧಾತ್ಮಕ ಮೊತ್ತದತ್ತ ಸಾಗುತ್ತಿರುವ ನೇಪಾಳ ತಂಡದ ಸ್ಕೋರ್. ಕ್ರೀಸ್​ನಲ್ಲಿ ಸಂದೀಪ್ ಲಾಮಿಚಾನೆ ಹಾಗೂ ಸೋಂಪಲ್ ಬ್ಯಾಟಿಂಗ್.

    NEP 227/7 (47)

      

  • 04 Sep 2023 07:23 PM (IST)

    IND vs NEP Live Score: ಭರ್ಜರಿ ಸಿಕ್ಸ್ ಸಿಡಿಸಿದ ಸೋಂಪಲ್

    ಹಾರ್ದಿಕ್ ಪಾಂಡ್ಯ ಎಸೆದ 46ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೋಂಪಲ್ ಕಮಿ. ಈ ಸಿಕ್ಸ್​ನೊಂದಿಗೆ ನೇಪಾಳ ತಂಡ ಮೊತ್ತ 216 ಕ್ಕೆ ಏರಿಕೆ.

    ಕ್ರೀಸ್​ನಲ್ಲಿ ಸೋಂಪಲ್ – ಸಂದೀಪ್ ಲಾಮಿಚಾನೆ ಬ್ಯಾಟಿಂಗ್.

    NEP 216/7 (46)

      

  • 04 Sep 2023 07:11 PM (IST)

    IND vs NEP Live Score: ದ್ವಿಶತಕ ಪೂರೈಸಿದ ನೇಪಾಳ

    44ನೇ ಓವರ್​ನಲ್ಲಿ ದ್ವಿಶತಕ ಪೂರೈಸಿದ ನೇಪಾಳ ತಂಡ. ಕ್ರೀಸ್​ನಲ್ಲಿ ಸೋಂಪಲ್ ಕಮಿ ಹಾಗೂ ಸಂದೀಪ್ ಲಾಮಿಚಾನೆ ಬ್ಯಾಟಿಂಗ್. 7 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ಬೌಲರ್​ಗಳು. ಕೊನೆಯ 3 ವಿಕೆಟ್​ಗಳೊಂದಿಗೆ ಸ್ಪರ್ಧಾತ್ಮಕ ಮೊತ್ತ ಪೇರಿಸುವತ್ತ ನೇಪಾಳ ತಂಡ.

    NEP 200/7 (43.3)

      

  • 04 Sep 2023 07:01 PM (IST)

    IND vs NEP Live Score: ನೇಪಾಳ ತಂಡದ 7ನೇ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದ ದೀಪೇಂದ್ರ ಸಿಂಗ್. 25 ಎಸೆತಗಳಲ್ಲಿ 29 ರನ್ ಬಾರಿಸಿ ನಿರ್ಮಿಸಿದ ದೀಪೇಂದ್ರ, ಟೀಮ್ ಇಂಡಿಯಾಗೆ 7ನೇ ಯಶಸ್ಸು.

    NEP 194/7 (41.1)

      

  • 04 Sep 2023 06:47 PM (IST)

    IND vs NEP Live Score: ಮಳೆ ಸ್ಥಗಿತ: ಭಾರತ-ನೇಪಾಳ ಪಂದ್ಯ ಶುರು

    38 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿದ ನೇಪಾಳ ತಂಡ. ಕ್ರೀಸ್​ನಲ್ಲಿ ಸೋಂಪಲ್ ಕಮಿ (11) ಹಾಗೂ ದೀಪೇಂದ್ರ ಸಿಂಗ್ (27) ಬ್ಯಾಟಿಂಗ್. ಕೊನೆಯ 12 ಓವರ್​ಗಳಲ್ಲಿ ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿ ನೇಪಾಳ ಬ್ಯಾಟರ್​ಗಳು.

    NEP 178/6 (38)

      

  • 04 Sep 2023 06:42 PM (IST)

    Asia cup 2023 IND vs NEP Live Score: ಮಳೆ ಸ್ಥಗಿತವಾಗಿದ್ದು, ಶೀಘ್ರದಲ್ಲೇ ಪಂದ್ಯ ಶುರು

    ಪ್ರಸ್ತುತ ಮಾಹಿತಿ ಪ್ರಕಾರ, ಮಳೆಯು ಸ್ಥಗಿತವಾಗಿದ್ದು, ಮೈದಾನದಲ್ಲಿನ ಕವರ್​ಗಳನ್ನು ತೆಗೆಯಲಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಪಂದ್ಯ ಆರಂಭವಾಗುವುದು ಖಚಿತ.

    ಇನ್ನು ಮಳೆಯಿಂದ ಪಂದ್ಯಕ್ಕೆ ಅಡಚಣೆಯಾಗಿದ್ದರೂ ಓವರ್​ಗಳ ಕಡಿತ ಮಾಡಲಾಗುತ್ತಿಲ್ಲ. ಅದರಂತೆ ನೇಪಾಳ ತಂಡವು 50 ಓವರ್​ಗಳವರೆಗೆ ಬ್ಯಾಟ್ ಮಾಡಲಿದೆ.

    NEP 178/6 (37.5)

      

  • 04 Sep 2023 06:39 PM (IST)

    Asia cup 2023 IND vs NEP Live Score: ಪಲ್ಲೆಕಲೆಯಲ್ಲಿ ಮುಂದುವರೆದ ಮಳೆ

    ಶ್ರೀಲಂಕಾದ ಪಲ್ಲೆಕಲೆಯಲ್ಲಿ ಮಳೆ ಮುಂದುವರೆದಿದ್ದು, ಹೀಗಾಗಿ ಭಾರತ- ನೇಪಾಳ ನಡುವಣ ಪಂದ್ಯವು ಅರ್ಧದಲ್ಲೇ ಸ್ಥಗಿತಗೊಂಡಿದೆ. ಇನ್ನು 6.45 ರೊಳಗೆ ಪಂದ್ಯ ಆರಂಭವಾದರೆ ಮಾತ್ರ ಯಾವುದೇ ಓವರ್ ಕಡಿತವಿಲ್ಲದೆ ಮ್ಯಾಚ್ ಮುಂದುವರೆಯಲಿದೆ. 7 ಗಂಟೆಯ ಬಳಿಕ ಶುರುವಾದರೆ ಓವರ್​ಗಳ ಕಡಿತ ಮಾಡಲಾಗುತ್ತದೆ.

  • 04 Sep 2023 05:46 PM (IST)

    IND vs NEP Live Score: ಮಳೆಯ ಕಾರಣ ಭಾರತ-ನೇಪಾಳ ಪಂದ್ಯ ಸ್ಥಗಿತ

    38ನೇ ಓವರ್​ ವೇಳೆ ಮಳೆ ಬಂದಿದ್ದರಿಂದ ಭಾರತ-ನೇಪಾಳ ನಡುವಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

    37.5 ಓವರ್​ಗಳ ಮುಕ್ತಾಯದ ವೇಳೆಗೆ ನೇಪಾಳ ತಂಡವು 178 ರನ್​ಗಳಿಸಿದೆ.

    ಇತ್ತ 6 ವಿಕೆಟ್ ಕಬಳಿಸುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಶಸ್ವಿಯಾಗಿದ್ದಾರೆ.

    ಕ್ರೀಸ್​ನಲ್ಲಿ ದೀಪೇಂದ್ರ ಸಿಂಗ್ (27) ಹಾಗೂ ಸೊಂಪಲ್ (11) ಬ್ಯಾಟಿಂಗ್

    NEP 178/6 (37.5)

      

  • 04 Sep 2023 05:30 PM (IST)

    IND vs NEP Live Score: 150 ರನ್ ಪೂರೈಸಿದ ನೇಪಾಳ ತಂಡ

    34 ಓವರ್​ಗಳ ಮುಕ್ತಾಯದ ವೇಳೆಗೆ 151 ರನ್ ಕಲೆಹಾಕಿದ ನೇಪಾಳ ತಂಡ.

    6 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ

    ಕ್ರೀಸ್​ನಲ್ಲಿ ದೀಪೇಂದ್ರ ಸಿಂಗ್ ಹಾಗೂ ಸೋಂಪಲ್ ಕಮಿ ಬ್ಯಾಟಿಂಗ್.

    NEP 151/6 (34)

      

  • 04 Sep 2023 05:05 PM (IST)

    IND vs NEP Live Score: ಟೀಮ್ ಇಂಡಿಯಾಗೆ 5ನೇ ಯಶಸ್ಸು

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ನೀಡಿದ ಆಸಿಫ್ ಶೇಖ್. ಫ್ರಂಟ್ ಫೀಲ್ಡ್​ನಲ್ಲಿದ್ದ ವಿರಾಟ್ ಕೊಹ್ಲಿ ಒಂದೇ ಕೈಯಲ್ಲಿ ಅತ್ಯುತ್ತಮ ಕ್ಯಾಚ್…ಆಸೀಸ್ ಶೇಖ್ ಔಟ್.

    97 ಎಸೆತಗಳಲ್ಲಿ 58 ರನ್ ಬಾರಿಸಿ ನಿರ್ಗಮಿಸಿದ ಆಸಿಫ್ ಶೇಖ್. ಕ್ರೀಸ್​ನಲ್ಲಿ ಗುಲ್ಶನ್ ಹಾಗೂ ದೀಪೇಂದ್ರ ಸಿಂಗ್ ಬ್ಯಾಟಿಂಗ್

    NEP 133/5 (29.5)

      

  • 04 Sep 2023 05:02 PM (IST)

    IND vs NEP Live Score: ವೆಲ್ಕಂ ಬೌಂಡರಿ: ಗುಲ್ಶನ್ ಬ್ಯಾಟ್​ನಿಂದ ಫೋರ್

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಹಿಂಬದಿಯತ್ತ ಲೇಟ್ ಕಟ್ ಫೋರ್ ಬಾರಿಸಿದ ಗುಲ್ಶನ್ ಜಾ. ಕ್ರೀಸ್​ನಲ್ಲಿ ಆಸಿಫ್ ಶೇಖ್ (58) ಹಾಗೂ ಗುಲ್ಶನ್ ಜಾ (18).

    ಟೀಮ್ ಇಂಡಿಯಾ ಪರ 3 ವಿಕೆಟ್ ಕಬಳಿಸಿರುವ ರವೀಂದ್ರ ಜಡೇಜಾ. 1 ವಿಕೆಟ್ ಪಡೆದಿರುವ ಶಾರ್ದೂಲ್ ಠಾಕೂರ್.

    NEP 131/4 (29.1)

      

  • 04 Sep 2023 04:54 PM (IST)

    IND vs NEP Live Score: ಅರ್ಧಶತಕ ಪೂರೈಸಿದ ಆಸಿಫ್ ಶೇಖ್

    88 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆಸಿಫ್ ಶೇಖ್. ಈ ಮೂಲಕ ಟೀಮ್ ಇಂಡಿಯಾ ವಿರುದ್ದ ಹಾಫ್ ಸೆಂಚುರಿ ಸಿಡಿಸಿದ ನೇಪಾಳ ತಂಡದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಆಸಿಫ್ ಶೇಖ್ ಪಾತ್ರರಾಗಿದ್ದಾರೆ.

    NEP 119/4 (27.5)

      

  • 04 Sep 2023 04:45 PM (IST)

    IND vs NEP Live Score: 25 ಓವರ್ ಮುಕ್ತಾಯ: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    • 25 ಓವರ್​ಗಳ ಮುಕ್ತಾಯದ ವೇಳೆಗೆ 109 ರನ್​ ಕಲೆಹಾಕಿದ ನೇಪಾಳ
    • 4 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ
    • ಮೊದಲ ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್
    • ಆ ಬಳಿಕ 3 ವಿಕೆಟ್ ಉರುಳಿಸಿದ ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟ ರವೀಂದ್ರ ಜಡೇಜಾ.

    NEP 109/4 (25)

      

  • 04 Sep 2023 04:34 PM (IST)

    IND vs NEP Live Score: ನೇಪಾಳ ತಂಡದ 4ನೇ ವಿಕೆಟ್ ಪತನ

    ರವೀಂದ್ರ ಜಡೇಜಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಕುಶಾಲ್ ಮಲ್ಲ (2). ಟೀಮ್ ಇಂಡಿಯಾಗೆ 4ನೇ ಯಶಸ್ಸು. ಕೇವಲ 8 ರನ್​ಗಳ ಒಳಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ನೇಪಾಳ ತಂಡ. ಕ್ರೀಸ್​ನಲ್ಲಿ ಆಸಿಫ್ ಶೇಖ್ ಬ್ಯಾಟಿಂಗ್.

    NEP 101/4 (21.5)

      

  • 04 Sep 2023 04:27 PM (IST)

    IND vs NEP Live Score: ನೇಪಾಳ ತಂಡದ 3ನೇ ವಿಕೆಟ್ ಪತನ

    ರವೀಂದ್ರ ಜಡೇಜಾ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್. 8 ಎಸೆತಗಳಲ್ಲಿ 5 ರನ್​ಗಳಿಸಿ ನಿರ್ಗಮಿಸಿದ ಪೌಡೆಲ್.

    20 ಓವರ್​ ಮುಕ್ತಾಯದ ವೇಳೆಗೆ 93 ರನ್​ ಕಲೆಹಾಕಿದ ನೇಪಾಳ ತಂಡ. 3 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ.

    NEP 93/3 (20)

      

  • 04 Sep 2023 04:11 PM (IST)

    IND vs NEP Live Score: ನೇಪಾಳ ತಂಡದ 2ನೇ ವಿಕೆಟ್ ಪತನ

    ರವೀಂದ್ರ ಜಡೇಜಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಭೀಮ್ ಶರ್ಕಿ (5). ಟೀಮ್ ಇಂಡಿಯಾಗೆ 2ನೇ ಯಶಸ್ಸು.  ಕ್ರೀಸ್​ನಲ್ಲಿ ಆಸಿಫ್ ಶೇಖ್ ಹಾಗೂ ರೋಹಿತ್ ಪೌಡೆಲ್ ಬ್ಯಾಟಿಂಗ್.

    ಮೊದಲ ವಿಕೆಟ್​ಗೆ ಶಾರ್ದೂಲ್ ಠಾಕೂರ್​ಗೆ, 2ನೇ ವಿಕೆಟ್​ ಪಡೆದ ರವೀಂದ್ರ ಜಡೇಜಾ.

    NEP 77/2 (16)

      

  • 04 Sep 2023 04:08 PM (IST)

    IND vs NEP Live Score: 15 ಓವರ್ ಮುಕ್ತಾಯ: ಟೀಮ್ ಇಂಡಿಯಾಗೆ ಏಕೈಕ ಯಶಸ್ಸು

    15 ಓವರ್​ಗಳಲ್ಲಿ ಕೇವಲ 1 ವಿಕೆಟ್ ಪಡೆದ ಟೀಮ್ ಇಂಡಿಯಾ. 73 ರನ್ ಬಾರಿಸಿದ ನೇಪಾಳ ತಂಡ. ಕ್ರೀಸ್​ನಲ್ಲಿ ಆಸಿಫ್ ಶೇಖ್ (26) ಹಾಗೂ ಭೀಮ್ ಶರ್ಕಿ (5) ಬ್ಯಾಟಿಂಗ್.

    ಮೊದಲ 15 ಓವರ್​ಗಳಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ವಿರುದ್ಧ ಮೇಲುಗೈ ಸಾಧಿಸಿದ ನೇಪಾಳ ತಂಡ.

    NEP 73/1 (15)

      

  • 04 Sep 2023 03:56 PM (IST)

    IND vs NEP Live Score: 12 ಓವರ್ ಮುಕ್ತಾಯ: ನೇಪಾಳ ತಂಡದ ಉತ್ತಮ ಬ್ಯಾಟಿಂಗ್

    12 ಓವರ್ ಮುಕ್ತಾಯದ ವೇಳೆಗೆ 67 ರನ್ ಕಲೆಹಾಕಿದ ನೇಪಾಳ ತಂಡ. ಈ ವೇಳೆ ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದ ಟೀಮ್ ಇಂಡಿಯಾ ಬೌಲರ್​ಗಳು. ಕ್ರೀಸ್​ನಲ್ಲಿ ಆಸಿಫ್ ಶೇಖ್ ಹಾಗೂ ಭೀಮ್ ಶರ್ಕಿ ಬ್ಯಾಟಿಂಗ್.

    NEP 67/1 (12)

      

  • 04 Sep 2023 03:47 PM (IST)

    IND vs NEP Live Score: ಟೀಮ್ ಇಂಡಿಯಾಗೆ ಮೊದಲ ಯಶಸ್ಸು

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕುಶಾಲ್ ಭುರ್ಟೆಲ್​. 25 ಎಸೆತಗಳಲ್ಲಿ 38 ರನ್​ ಬಾರಿಸಿ ನಿರ್ಗಮಿಸಿದ ಕುಶಾಲ್. ಕ್ರೀಸ್​ನಲ್ಲಿ ಆಸಿಫ್ ಶೇಖ್ ಹಾಗೂ ಭೀಮ್ ಶರ್ಕಿ ಬ್ಯಾಟಿಂಗ್.

    NEP 65/1 (9.5)

      

  • 04 Sep 2023 03:45 PM (IST)

    IND vs NEP Live Score: ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್ ಭುರ್ಟೆಲ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್ ಭುರ್ಟೆಲ್. ಕ್ರೀಸ್​ನಲ್ಲಿ ಆಸಿಫ್ ಶೇಖ್ ಹಾಗೂ ಕುಶಾಲ್ ಭರ್ಜರಿ ಬ್ಯಾಟಿಂಗ್. ವಿಕೆಟ್​ಗಾಗಿ ಟೀಮ್ ಇಂಡಿಯಾ ವೇಗಿಗಳ ಪರದಾಟ.

    NEP 65/0 (9.4)

      

  • 04 Sep 2023 03:42 PM (IST)

    IND vs NEP Live Score: ಅರ್ಧಶತಕ ಪೂರೈಸಿದ ನೇಪಾಳ

    ಹಾರ್ದಿಕ್ ಪಾಂಡ್ಯ ಎಸೆದ 9ನೇ ಓವರ್​ನ 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಆಸಿಫ್ ಶೇಖ್. ಈ ಫೋರ್​ನೊಂದಿಗೆ ಅರ್ಧಶತಕ ಪುರೈಸಿದ ನೇಪಾಳ ತಂಡ. ಕ್ರೀಸ್​ನಲ್ಲಿ ಕುಶಾಲ್ ಭುರ್ಟೆಲ್ (29) ಹಾಗೂ ಆಸಿಫ್ ಶೇಖ್ (20) ಬ್ಯಾಟಿಂಗ್.

    NEP 53/0 (9)

      

  • 04 Sep 2023 03:40 PM (IST)

    IND vs NEP Live Score: ಕುಶಾಲ್ ಭರ್ಜರಿ ಬ್ಯಾಟಿಂಗ್: ಲೆಗ್​ಸೈಡ್​ನತ್ತ ಫೋರ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಫೋರ್ ಬಾರಿಸಿದ ಕುಶಾಲ್ ಭುರ್ಟೆಲ್. ನೇಪಾಳ ತಂಡದ ಉತ್ತಮ ಆಟ. ಕ್ರೀಸ್​ನಲ್ಲಿ ಆಸಿಫ್ ಶೇಖ್ ಹಾಗೂ ಕುಶಾಲ್ ಭುರ್ಟೆಲ್ ಭರ್ಜರಿ ಬ್ಯಾಟಿಂಗ್ ಮುಂದುವರಿಕೆ. ವಿಕೆಟ್ ಕಬಳಿಸಲು ಟೀಮ್ ಇಂಡಿಯಾ ಬೌಲರ್​ಗಳ ಹರಸಾಹಸ.

    NEP 46/0 (8.2)

     

  • 04 Sep 2023 03:37 PM (IST)

    IND vs NEP Live Score: 3 ಕ್ಯಾಚ್ ಕೈಚೆಲ್ಲಿದ ಟೀಮ್ ಇಂಡಿಯಾ

    • ಮೊಹಮ್ಮದ್ ಶಮಿ ಎಸೆದ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಸ್ಲಿಪ್​ನಲ್ಲಿ ಕುಶಾಲ್ (3) ಕ್ಯಾಚ್ ಕೈಚೆಲ್ಲಿದ ಶ್ರೇಯಸ್ ಅಯ್ಯರ್
    • ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲೇ ಆಸೀಫ್ ಶೇಖ್ ಕ್ಯಾಚ್ ಕೈ ಬಿಟ್ಟ ಫ್ರಂಟ್ ಫೀಲ್ಡರ್ ವಿರಾಟ್ ಕೊಹ್ಲಿ
    • ಶಮಿ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಕುಶಾಲ್ ಕ್ಯಾಚ್ ಡ್ರಾಪ್ ಮಾಡಿದ ವಿಕೆಟ್ ಕೀಪರ್ ಇಶಾನ್ ಕಿಶನ್.

    NEP 42/0 (8)

     

  • 04 Sep 2023 03:25 PM (IST)

    IND vs NEP Live Score: ನೇಪಾಳ ತಂಡದ ಭರ್ಜರಿ ಬ್ಯಾಟಿಂಗ್

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್ ಭುರ್ಟೆಲ್. ನೇಪಾಳ ತಂಡದ ಅತ್ಯುತ್ತಮ ಬ್ಯಾಟಿಂಗ್. ಕ್ರೀಸ್​ನಲ್ಲಿ ಕುಶಾಲ್ ಹಾಗೂ ಆಸಿಫ್ ಶೇಖ್ ಬ್ಯಾಟಿಂಗ್.

    NEP 33/0 (5.3)

     

  • 04 Sep 2023 03:13 PM (IST)

    IND vs NEP Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    3 ಓವರ್ ಮುಕ್ತಾಯ. 18 ಎಸೆತಗಳಲ್ಲಿ 12 ರನ್​ ಕಲೆಹಾಕಿದ ನೇಪಾಳ ತಂಡ. ಆರಂಭಿಕರಾದ ಆಸಿಫ್ ಶೇಖ್ ಹಾಗೂ ಕುಶಾಲ್ ಉತ್ತಮ ಬ್ಯಾಟಿಂಗ್. ಇದುವರೆಗೆ ಇಂದೇ ಒಂದು ಫೋರ್ ನೀಡದ ಟೀಮ್ ಇಂಡಿಯಾ ಬೌಲರ್​ಗಳು.

    NEP 12/0 (3)

     

     

  • 04 Sep 2023 02:48 PM (IST)

    IND vs NEP Live Score: ಭಾರತದ ಪರ ಕಣಕ್ಕಿಳಿಯುವ ಕಲಿಗಳು

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

  • 04 Sep 2023 02:43 PM (IST)

    IND vs NEP Live Score: ನೇಪಾಳ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ

  • 04 Sep 2023 02:36 PM (IST)

    IND vs NEP Live Score: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

    ಜಸ್​ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕೆ.

  • 04 Sep 2023 02:33 PM (IST)

    IND vs NEP Live Score: ಟಾಸ್ ಗೆದ್ದ ಟೀಮ್ ಇಂಡಿಯಾ

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ನೇಪಾಳ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

    ಪಾಕಿಸ್ತಾನ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಿತ್ತು. ಆದರೆ ಮಳೆಯ ಕಾರಣ ಆ ಪಂದ್ಯ ರದ್ದಾಗಿದ್ದರಿಂದ ಬೌಲಿಂಗ್ ಮಾಡಿರಲಿಲ್ಲ. ಇದೀಗ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 04 Sep 2023 02:29 PM (IST)

    IND vs NEP Live Score: ಭಾರತ ತಂಡಕ್ಕೆ ನೇಪಾಳ ಸವಾಲು

    ಇದೇ ಮೊದಲ ಬಾರಿಗೆ ಭಾರತ ಮತ್ತು ನೇಪಾಳ ತಂಡಗಳ ಮುಖಾಮುಖಿ.

  • Published On - Sep 04,2023 2:24 PM

    Follow us
    ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
    ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
    ‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
    ‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
    ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
    ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
    ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
    ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
    ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
    ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
    ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
    ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
    ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
    ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
    ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
    ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
    ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
    ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
    Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
    Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ