ಬಹುನಿರೀಕ್ಷಿತ ಟಿ 20 ವಿಶ್ವಕಪ್ ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಪಂದ್ಯಾವಳಿಗೆ ಎರಡು ತಿಂಗಳ ಮೊದಲು, ನ್ಯೂಜಿಲೆಂಡ್ ಕ್ರಿಕೆಟ್ ತಂಡವು ತಮ್ಮ ವಿಶ್ವಕಪ್ ತಂಡವನ್ನು ಘೋಷಿಸಿತು. ಕೆನ್ ವಿಲಿಯಮ್ಸನ್ಗೆ ನಾಯಕತ್ವವನ್ನು ನೀಡಲಾಗಿದೆ. ತಂಡದಲ್ಲಿ ಕೆಲವು ಹಳೆಯ ಮತ್ತು ಕೆಲವು ಹೊಸ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ. ಏತನ್ಮಧ್ಯೆ, ಸ್ಫೋಟಕ ಆರಂಭಿಕ ಆಟಗಾರ ಕಾಲಿನ್ ಮುನ್ರೊ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತದ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತಂಡದಲ್ಲಿ ಕಾಲಿನ್ ಅವರನ್ನು ಸೇರಿಸಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಕಾಲಿನ್ ಟಿ 20 ವಿಶ್ವಕಪ್ ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದರು.
ಕಾಲಿನ್ ಮನ್ರೋ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನಗೆ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ನನಗೆ ನಿರಾಶೆಯಾಗಿದೆ. ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ನನ್ನ ಗುರಿಯಾಗಿತ್ತು. ಆದರೆ ಈಗ ನಾನು ತಂಡಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದೇನೆ ಎಂದು ತೋರುತ್ತದೆ. ಕಾಲಿನ್ ಕೊನೆಯದಾಗಿ ಆಡಿದ್ದು ಫೆಬ್ರವರಿ, 2020 ರಲ್ಲಿ. ಆ ನಂತರ, ತಂಡವು ಅವರರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಅವರು ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ 1,724 ರನ್ ಗಳಿಸಿದ್ದಾರೆ ಮತ್ತು ಮೂರು ಟಿ 20 ಐ ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ ವಿಶ್ವದಾದ್ಯಂತದ ಟಿ 20 ಲೀಗ್‌ಗಳಲ್ಲಿ, ಪಾಕಿಸ್ತಾನ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಬಿಗ್ ಬ್ಯಾಶ್ ಲೀಗ್‌ನಲ್ಲಿ ಚೆನ್ನಾಗಿ ಆಡಿದ್ದಾರೆ.
ತರಬೇತುದಾರ ಹೇಳುವುದೇನು?
ಕಾಲಿನ್ ತಂಡದಿಂದ ಹೊರಗುಳಿದ ನಂತರ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದೇನೆಂದರೆ, ಕಾಲಿನ್ ಟಿ 20 ವಿಶ್ವಕಪ್‌ಗೆ ಮಾತ್ರ ಲಭ್ಯವಿದ್ದರು. ಇದು ಇತರ ಪ್ರವಾಸಗಳಿಗೆ ಅವರು ಲಭ್ಯವಿಲ್ಲದ ಕಾರಣ, ನಾವು ಬೇರೆ ಆಯ್ಕೆ ಸೂಕ್ತವೆಂದು ಪರಿಗಣಿಸಿದ್ದೇವೆ. ಕಳೆದ 6 ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಟಿ 20 ವಿಶ್ವಕಪ್‌ಗಾಗಿ ನ್ಯೂಜಿಲೆಂಡ್ ತಂಡ
ಕೆನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಡೆವೊನ್ ಕಾನ್ವೇ, ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡಾರಿಲ್ ಮಿಚೆಲ್, ಕೈಲ್ ಜಾಮಿಸನ್, ಲಕ್ಕಿ ಫರ್ಗುಸನ್, ಮಾರ್ಕ್ ಚಾಪ್ಮನ್.
ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಮಾಜಿ ಕ್ರಿಕೆಟಿಗ