ಐಸಿಸಿ ಏಕದಿನ ವಿಶ್ವಕಪ್ 2023ರ (ICC World Cup 2023) 11ನೇ ಪಂದ್ಯದಲ್ಲಿ ಇಂದು ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಝಿಲೆಂಡ್ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಕಿವೀಸ್ ಪಡೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ಗಳಲ್ಲಿ 245 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ನ್ಯೂಝಿಲೆಂಡ್ ಕೇನ್ ವಿಲಿಯಮ್ಸನ್ ಅವರ 78 ಹಾಗೂ ಡೆರಿಯಲ್ ಮಿಚೆಲ್ ಅವರ ಅಜೇಯ 89 ರನ್ಗಳ ನೆರವಿನಿಂದ 42.5 ಓವರ್ಗಳಲ್ಲಿ ಜಯ ಸಾಧಿಸಿತು.
ನ್ಯೂಝಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಬಾಂಗ್ಲಾದೇಶ ಪ್ಲೇಯಿಂಗ್ XI: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕಿಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದೊಯ್, ಮೊಹಮ್ಮದುಲ್ಲ, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್.
ನ್ಯೂಝಿಲೆಂಡ್ ತಂಡ: ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ವಿಲ್ ಯಂಗ್, ಟಿಮ್ ಸೌಥಿ, ಇಶ್ ಸೋಧಿ, ಜೇಮ್ಸ್ ನೀಶಮ್.
ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದೊಯ್, ಮಹೇದಿ ಹಸನ್, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ತನ್ಝಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಮಹಮ್ಮದುಲ್ಲಾ.
ಬಾಂಗ್ಲಾ ವಿರುದ್ಧ ನ್ಯೂಝಿಲೆಂಡ್ಗೆ 8 ವಿಕೆಟ್ಗಳ ಜಯ
ಬಾಂಗ್ಲಾದೇಶ 50 ಓವರ್ಗಳಲ್ಲಿ 245-9 (50 ಓವರ್)
ಮುಶ್ಫಿಕರ್ ರಹೀಮ್ 66, ಮೊಹಮ್ಮದುಲ್ಲ ಅಜೇಯ 41
ನ್ಯೂಝಿಲೆಂಡ್ 42.5 ಓವರ್ಗಳಲ್ಲಿ 246-2
ಡೆರಿಯಲ್ ಮಿಚೆಲ್ ಅಜೇಯ 89, ವಿಲಿಯಮ್ಸನ್ 78
ಕೇನ್ ವಿಲಿಯಮ್ಸನ್ ಗಾಯಗೊಂಡು ಮೈದಾನ ತೊರೆದಿದ್ದಾರೆ
107 ಎಸೆತಗಳಲ್ಲಿ 78 ರನ್ ಗಳಿಸಿದ ಕೇನ್
ನ್ಯೂಝಿಲೆಂಡ್ ಗೆಲುವಿಗೆ ಬೇಕು 19 ರನ್ಸ್
ಡೆರಿಯಲ್ ಮಿಚೆಲ್ 76 ರನ್ ಸಿಡಿಸಿ ಕ್ರೀಸ್ನಲ್ಲಿದ್ದಾರೆ
ನ್ಯೂಝಿಲೆಂಡ್: 227-2 (41 ಓವರ್)
ಡೆರಿಯಲ್ ಮಿಚೆಲ್ ಆಕರ್ಷಕ ಅರ್ಧಶತಕ
43 ಎಸೆತಗಳಲ್ಲಿ 50 ರನ್ ಸಿಡಿಸಿದ ಮಿಚೆಲ್
ಮಿಚೆಲ್ ಬ್ಯಾಟ್ನಿಂದ 2 ಫೋರ್, 2 ಸಿಕ್ಸರ್ ಬಂದಿದೆ
ನ್ಯೂಝಿಲೆಂಡ್: 191-2 (37.1 ಓವರ್)
ನ್ಯೂಝಿಲೆಂಡ್ ಗೆಲುವಿನತ್ತ ದಾಪುಗಾಲಿಡುತ್ತಿದೆ
34 ಓವರ್ ಮುಕ್ತಾಯಗೊಂಡಿದ್ದು ಕಿವೀಸ್ 169-2
ಕೇನ್ 73 ರನ್ ಗಳಿಸಿ ಕ್ರೀಸ್ ಕಚ್ಚಿ ನಿಂತಿದ್ದಾರೆ
ಡೆರಿಯಲ್ ಮಿಚೆಲ್ ಕೂಡ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ
ನ್ಯೂಝಿಲೆಂಡ್ ಗೆಲುವಿಗೆ ಇನ್ನು 77 ರನ್ಗಳು ಬೇಕಾಗಿದೆ
ಕೇನ್ ವಿಲಿಯನ್ಸ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ
81 ಎಸೆತಗಳಲ್ಲಿ 50 ರನ್ ಪೂರೈಸಿದ ಕೇನ್
ನ್ಯೂಝಿಲೆಂಡ್ ಗೆಲುವಿಗೆ 112 ರನ್ಗಳ ಅವಶ್ಯಕತೆ ಇದೆ
ನ್ಯೂಝಿಲೆಂಡ್: 134-2 (28.4 ಓವರ್)
ಅರ್ಧಶತಕದ ಅಂಚಿನಲ್ಲಿ ಎಡವಿದ ಕಾನ್ವೆ
ನ್ಯೂಝಿಲೆಂಡ್ನ 2 ವಿಕೆಟ್ ಪತನ
ಶಕಿಬ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾ ಕಾನ್ವೆ (45)
ನ್ಯೂಝಿಲೆಂಡ್: 113-2 (23 ಓವರ್)
ಕಾನ್ವೆ-ಕೇನ್ ಅರ್ಧಶತಕ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ
ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿರುವ ಕೇನ್-ಕಾನ್ವೆ
ಅರ್ಧಶತಕದತ್ತ ದಾಪುಗಾಲಿಡುತ್ತಿದ್ದಾರೆ ಕಾನ್ವೆ
ನ್ಯೂಝಿಲೆಂಡ್: 92-1 (20 ಓವರ್)
1 ವಿಕೆಟ್ ಕಳೆದುಕೊಂಡ ಕಿವೀಸ್ಗೆ ಕೇನ್-ಕಾನ್ವೆ ಆಸರೆ
ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿರುವ ಕೇನ್-ಕಾನ್ವೆ
10ನೇ ಓವರ್ನ ಇಸ್ಲಾಂ ಬೌಲಿಂಗ್ 2 ಫೋರ್ ಸಿಡಿಸಿದ ಕೇನ್
ನ್ಯೂಝಿಲೆಂಡ್: 37-1 (10 ಓವರ್)
ನ್ಯೂಝಿಲೆಂಡ್ ಮೊದಲ ವಿಕೆಟ್ ಪತನ
ರಚಿನ್ ರವೀಂದ್ರ 9 ರನ್ ಗಳಿಸಿ ಔಟ್
ಮುಸ್ತಫಿಜುರ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದ ರವೀಂದ್ರ
ನ್ಯೂಝಿಲೆಂಡ್: 18-1 (6.5 ಓವರ್)
ನ್ಯೂಝಿಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದೆ
ಬಾಂಗ್ಲಾದೇಶ ನೀಡಿರುವ 246 ರನ್ಗಳ ಟಾರ್ಗೆಟ್ ಬೆನ್ನಟ್ಟುತ್ತಿದೆ
ರಚಿನ್ ರವೀಂದ್ರ ಹಾಗೂ ಡೆವೋನ್ ಕಾನ್ವೆ ಕ್ರೀಸ್ನಲ್ಲಿದ್ದಾರೆ
ನ್ಯೂಝಿಲೆಂಡ್: 8-0 (2.3 ಓವರ್)
ಬಾಂಗ್ಲಾದೇಶ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿದೆ
ಮುಶ್ಫಿಕರ್ ರಹೀಮ್ 66 ಹಾಗೂ ಮೊಹಮ್ಮದುಲ್ಲ ಅಜೇಯ 41 ರನ್ ಗಳಿಸಿದರು
ನ್ಯೂಜಿಲೆಂಡ್ ಪರ ಲೂಕಿ ಫರ್ಗುಸನ್ 3 ವಿಕೆಟ್ ಕಿತ್ತರು
ದಿಢೀರ್ ಕುಸಿತದಿಂದ ಬಾಂಗ್ಲಾ ರನ್ ಗಳಿಸಲು ಪರದಾಡುತ್ತಿದೆ
ಮೊಹಮ್ಮದುಲ್ಲ ಮತ್ತು ಟಸ್ಕನ್ ಅಹ್ಮದ್ ಕ್ರೀಸ್ನಲ್ಲಿದ್ದಾರೆ
44 ಓವರ್ ಅಂತ್ಯಕ್ಕೆ ಬಾಂಗ್ಲಾದೇಶ 213-7
ಬಾಂಗ್ಲಾದೇಶ ದಿಢೀರ್ ಕುಸಿತ ಕಂಡಿದೆ
7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ
ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ಮುಶ್ಫಿಕರ್ ರಹೀಮ್ 66 ರನ್ಗೆ ಔಟ್
ತೌಹಿದ್ ಹೃದೊಯ್ 13 ರನ್ಗೆ ನಿರ್ಗಮನ
ಈ ಮೂಲಕ ಏಕದಿನ ದಿನದಲ್ಲಿ 200ನೇ ವಿಕೆಟ್ ಪಡೆದ ಬೌಲ್ಟ್
ಬಾಂಗ್ಲಾದೇಶ: 180-7 (38 ಓವರ್)
ತಂಡಕ್ಕೆ ಆಸರೆಯಾಗಿದ್ದ ನಾಯಕ ಶಕಿಬ್ ಔಟ್
40 ರನ್ ಗಳಿಸಿ ಕೀಪರ್ಗೆ ಕ್ಯಾಚ್ ನೀಡಿದ ಶಕಿಬ್
ಲೂಕಿ ಫರ್ಗುಸನ್ಗೆ 3ನೇ ವಿಕೆಟ್
ಬಾಂಗ್ಲಾದೇಶ: 156-5 (31 ಓವರ್)
ಬಾಂಗ್ಲಾದೇಶ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತದೆ
ರಹೀಮ್ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ
ಶಕಿನ್-ರಹಿಮ್ ಜೊತೆಯಾಟ ಶತಕದತ್ತ ಸಾಗುತ್ತಿದೆ
ಬಾಂಗ್ಲಾದೇಶ: 133-4 (20 ಓವರ್)
ಶಕಿಬ್ ಹಾಗೂ ರಹೀಮ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ
ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿರುವ ಶಕಿಬ್-ರಹೀಮ್
ಬಾಂಗ್ಲಾದೇಶ: 93-4 (20 ಓವರ್)
4 ವಿಕೆಟ್ ಕಳೆದುಕೊಂಡ ಬಾಂಗ್ಲಾಕ್ಕೆ ಶಕಿಬ್-ರಹೀಮ್ ಆಸರೆ
ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಿರುವ ಶಕಿಬ್-ರಹೀಮ್
ಬಾಂಗ್ಲಾದೇಶ: 73-4 (15 ಓವರ್)
ಬಾಂಗ್ಲಾದೇಶದ 4ನೇ ವಿಕೆಟ್ ಪತನಗೊಂಡಿದೆ
ಕಾನ್ವೆ ಹಿಡಿದ ರೋಚಕ ಕ್ಯಾಚ್ಗೆ ಬಲಿಯಾದ ಹೊಸೈನ್ ಶಾಂಟೊ
ಡೈವ್ ಬಿದ್ದು ಅದ್ಭುತ ಕ್ಯಾಚ್ ಹಿಡಿದ ಡೆವೊನ್ ಕಾನ್ವೆ
ಗ್ಲೆನ್ ಪಿಲಿಪ್ಸ್ ಬೌಲಿಂಗ್ನಲ್ಲಿ ಔಟಾದ ಶಾಂಟೊ (7 ರನ್)
ಬಾಂಗ್ಲಾದೇಶ: 57-4 (13 ಓವರ್)
ನ್ಯೂಜಿಲೆಂಡ್ ಬೌಲರ್ಗಳು ಭರ್ಜರಿ ಆಟವಾಡುತ್ತಿದ್ದಾರೆ
ಬಾಂಗ್ಲಾದೇಶದ 3ನೇ ವಿಕೆಟ್ ಪತನಗೊಂಡಿದೆ
ಉತ್ತಮ ಫಾರ್ಮ್ನಲ್ಲಿದ್ದ ಮೆಹಿದಿ ಹಸನ್ ಮಿರಾಜ್ (30) ಔಟ್ ಆಗಿದ್ದಾರೆ
ಫರ್ಗುಸನ್ ಬೌಲಿಂಗ್ನಲ್ಲಿ ಹೆನ್ರಿಗೆ ಕ್ಯಾಚಿತ್ತು ನಿರ್ಗಮಿಸಿದ ಮೆಹಿದಿ
ಬಾಂಗ್ಲಾದೇಶ: 56-3 (11.5 ಓವರ್)
ಬಾಂಗ್ಲಾದೇಶದ ಎರಡನೇ ವಿಕೆಟ್ ಪತನಗೊಂಡಿದೆ
16 ರನ್ ಗಳಿಸಿ ತಂಝಿದ್ ಹಸನ್ ಔಟ್
ತಂಝಿದ್ ವಿಕೆಟ್ ಕಿತ್ತ ಕಿವೀಸ್ ವೇಗಿ ಫರ್ಗುಸನ್
ಬಾಂಗ್ಲಾದೇಶ: 40-2 (8 ಓವರ್)
ಬಾಂಗ್ಲಾದೇಶ ಆರಂಭಿಕ ಆಘಾತದಿಂದ ಕಮ್ಬ್ಯಾಕ್ ಮಾಡಿದೆ
ಮೊದಲ 5 ಓವರ್ನಲ್ಲಿ 30 ರನ್ ಕಲೆಹಾಕಿದೆ
ಮೆಹಿದಿ ಹಸನ್ (17) ಹಾಗೂ ತಂಝಿದ್ ಹಸನ್ (12) ಕ್ರೀಸ್ನಲ್ಲಿದ್ದಾರೆ
ಬಾಂಗ್ಲಾದೇಶ: 30-1 (5 ಓವರ್)
ಬಾಂಗ್ಲಾದೇಶ ಮೊದಲ ಓವರ್ನಲ್ಲಿ ವಿಕೆಟ್ ಕಳೆದುಕೊಂಡರೂ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದೆ.
ಎರಡನೇ ಓವರ್ನ ಮ್ಯಾಟ್ ಹೆನ್ರಿ ಬೌಲಿಂಗ್ನಲ್ಲಿ ಹಸರ್ರಿಂದ ಫೋರ್.
ಬಾಂಗ್ಲಾದೇಶ: 10-1 (2 ಓವರ್)
ಮೊದಲ ಓವರ್ನ ಮೊದಲ ಎಸೆತದಲ್ಲೇ ಲಿಟ್ಟನ್ ದಾಸ್ ಔಟ್
ಬೌಲ್ಟ್ ಬೌಲಿಂಗ್ನಲ್ಲಿ ಮ್ಯಾಟ್ ಹೆನ್ರಿಗೆ ಕ್ಯಾಚ್ ನೀಡಿ ನಿರ್ಗಮಿಸಿದ ದಾಸ್
ಬಾಂಗ್ಲಾದೇಶ: 0-1 (0.1 ಓವರ್)
ಬಾಂಗ್ಲಾದೇಶ ಪರ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಲಿಟ್ಟನ್ ದಾಸ್ ಹಾಗೂ ತಂಜಿದ್ ಹಸನ್.
ನ್ಯೂಝಿಲೆಂಡ್ ಪರ ಮೊದಲ ಓವರ್ ಬೌಲಿಂಗ್ ಮಾಡುತ್ತಿರುವ ಟ್ರೆಂಟ್ ಬೌಲ್ಟ್.
ಬಾಂಗ್ಲಾದೇಶ ಪ್ಲೇಯಿಂಗ್ XI: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕಿಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದೊಯ್, ಮೊಹಮ್ಮದುಲ್ಲ, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್.
ನ್ಯೂಝಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ನ 11ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 1:33 pm, Fri, 13 October 23