Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ವಿಶ್ವಕಪ್​ನಿಂದ ಭಾರತದ ಆರ್ಥಿಕತೆಗೆ 22,000 ಕೋಟಿ ರೂ ಹರಿದುಬರುತ್ತಾ? ಇದು ಹೇಗೆ ಸಾಧ್ಯ?

ICC World Cup Effect On Indian Economy: ಅಕ್ಟೋಬರ್ 5ರಂದು ಭಾರತದಲ್ಲಿ ಶುರುವಾದ ಐಸಿಸಿ ಕ್ರಿಕೆಟ್ ವಿಶ್ವಕಪ್ ನವೆಂಬರ್ 19ರವರೆಗೂ ನಡೆಯಲಿದೆ. 10 ತಂಡಗಳು ಪಾಲ್ಗೊಂಡಿರುವ ಈ ವಿಶ್ವಕಪ್​ನಿಂದ ಭಾರತದ ಆರ್ಥಿಕತೆಗೆ 22,000 ಕೋಟಿ ರೂ ಆದಾಯ ಬರಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಭಾರತಕ್ಕೆ ಯಾವ್ಯಾವ ರೀತಿಯಲ್ಲಿ ಈ ವಿಶ್ವಕಪ್ ಲಾಭ ತಂದುಕೊಡಬಹುದು ಎಂಬ ಬಗ್ಗೆ ವರದಿ ಇಲ್ಲಿದೆ...

ಕ್ರಿಕೆಟ್ ವಿಶ್ವಕಪ್​ನಿಂದ ಭಾರತದ ಆರ್ಥಿಕತೆಗೆ 22,000 ಕೋಟಿ ರೂ ಹರಿದುಬರುತ್ತಾ? ಇದು ಹೇಗೆ ಸಾಧ್ಯ?
ಐಸಿಸಿ ವಿಶ್ವಕಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 13, 2023 | 11:29 AM

ನವದೆಹಲಿ, ಅಕ್ಟೋಬರ್ 13: ಭಾರತದಲ್ಲಿ ಕ್ರಿಕೆಟ್​ಗೆ ಅಪ್ಪಟ ಪ್ರೀತಿ ಇದೆ. ಕ್ರಿಕೆಟ್ ಹಬ್ಬವಾದ ಐಸಿಸಿ ವಿಶ್ವಕಪ್ಗೆ (ICC Cricket World Cup 2023) ಭಾರತ ಆತಿಥ್ಯ ವಹಿಸಿದೆ. 10 ತಂಡಗಳು ಪಾಲ್ಗೊಂಡಿರುವ ಮತ್ತು ನವೆಂಬರ್ 19ರವರೆಗೂ ನಡೆಯಲಿರುವ 50 ಓವರ್​ಗಳ ಈ ಮಹಾ ಟೂರ್ನಿ ಕ್ರಿಕೆಟ್ ಪ್ರೇಮಿಗಳಿಗೆ ಅಕ್ಷರಶಃ ರಸದೌತಣ ನೀಡುತ್ತಿದೆ. ಸ್ಟೇಡಿಯಂ ಟಿಕೆಟ್​ಗಳಿಗೆ, ಅದರಲ್ಲೂ ಭಾರತ ಆಡುವ ಪಂದ್ಯಗಳ ಟಿಕೆಟ್​ಗಳು ಚಿನ್ನಕ್ಕಿಂತ ದುಬಾರಿ ದರದಲ್ಲಿ ಮಾರಾಟವಾಗುತ್ತಿವೆ. ಪ್ರಾಯೋಜಕತ್ವ, ಮೀಡಿಯಾ ಹಕ್ಕು, ಹೋಟೆಲ್, ವಿಮಾನ ಪ್ರಯಾಣ ಹೀಗೆ ಸಾಕಷ್ಟು ಸೈಡ್ ಎಫೆಕ್ಟ್​ಗಳು ಈ ವಿಶ್ವಕಪ್​ನಿಂದ ಆಗುತ್ತವೆ. ಇವೆಲ್ಲದರಿಂದ ಸಾಕಷ್ಟು ಲಾಭ ಆಗುತ್ತದೆ ಎಂದು ಸಹಜವಾಗಿ ಭಾವಿಸಬಹುದು. ಬ್ಯಾಂಕ್ ಆಫ್ ಬರೋಡಾದ ತಜ್ಞರು ಅಂದಾಜಿಸಿದ ಪ್ರಕಾರ ಈ ಬಾರಿಯ ವಿಶ್ವಕಪ್​ನಿಂದ ಭಾರತದ ಆರ್ಥಿಕತೆಗೆ ಬರೋಬ್ಬರಿ 22,000 ಕೋಟಿ ರೂ ಲಾಭ ಆಗಬಹುದು ಎನ್ನಲಾಗಿದೆ.

ವಿಶ್ವಕಪ್ ಮೂಲಕ ಎಲ್ಲೆಲ್ಲಿಂದ ಎಷ್ಟೆಷ್ಟು ಆದಾಯ ಬರುತ್ತೆ?

  • ಸ್ಪಾನ್ಸರ್​ಶಿಪ್ ಮೂಲಕ ಬರೋಬ್ಬರಿ 1,250 ಕೋಟಿ ರೂ ಆದಾಯ ಸಿಗುತ್ತದೆ.
  • ಟಿವಿ ಮತ್ತು ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಈ ಬಾರಿಯ ವಿಶ್ವಕಪ್​ಗೆ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಜಾಹೀರಾತಿಗೆ ಭಾರೀ ಬೇಡಿಕೆ ಇರುತ್ತದೆ. ಒಂದು ಸೆಕೆಂಡ್​ಗೆ ಸರಾಸರಿಯಾಗಿ 3,600 ರೂನಂತೆ ಜಾಹೀರಾತು ಬೆಲೆಗಳು ಇರುತ್ತವೆ.
  • ಟಿವಿ ಪ್ರಸಾರ ಹಕ್ಕು ಮತ್ತು ಪಾಯೋಜಕತ್ವದಿಂದ ಸುಮಾರು 12,000 ಕೋಟಿ ರೂ ಆದಾಯ ಸಿಗಬಹುದು.
  • ಸ್ಟೇಡಿಯಂ ಟಿಕೆಟ್​ಗಳ ಮಾರಾಟದಿಂದ 800 ಕೋಟಿ ರೂ ಆದಾಯ ಬರಬಹುದು.
  • ಕ್ರಿಕೆಟ್ ಪಂದ್ಯಗಳು ಆಯೋಜನೆ ಆಗುತ್ತಿರುವ 10 ನಗರಗಳಲ್ಲಿ ವಿಮಾನ ಟಿಕೆಟ್, ಹೋಟೆಲ್ ಬಾಡಿಗೆ, ಸ್ಥಳೀಯ ಸಾರಿಗೆ ಇತ್ಯಾದಿ ಎಲ್ಲದಕ್ಕೂ ಪುಷ್ಟಿ ಸಿಗುತ್ತದೆ. ಪರೋಕ್ಷವಾಗಿ ವಿವಿಧ ಉದ್ದಿಮೆಗಳಿಗೆ ಲಾಭ ಆಗಬಹುದು.

ಇದನ್ನೂ ಓದಿ: ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಎಚ್​ಸಿಎಲ್ ಷೇರಿಗೆ ಬೇಡಿಕೆ, ಇನ್ಫೋಸಿಸ್ ಷೇರುಬೆಲೆ ಕುಸಿತ

ಐಸಿಸಿ ಆದಾಯದಲ್ಲಿ ಬಿಸಿಸಿಐ ಪಾಲೆಷ್ಟು?

ಕ್ರಿಕೆಟ್ ವಿಶ್ವಕಪ್ ಅನ್ನು ಐಸಿಸಿ ಆಯೋಜಿಸುತ್ತದೆ. ಮುಂದಿನ ನಾಲ್ಕು ವರ್ಷದಲ್ಲಿ ಐಸಿಸಿ ಗಳಿಸುವ ಆದಾಯದಲ್ಲಿ ಶೇ. 40ರಷ್ಟು ಪಾಲು ಬಿಸಿಸಿಐಗೆ ಸಿಗುತ್ತದೆ. ಐಸಿಸಿಗೆ ಪ್ರತೀ ವರ್ಷ 600 ಮಿಲಿಯನ್ ಡಾಲರ್ ಆದಾಯ ಬರುವ ನಿರೀಕ್ಷೆ ಇದೆ. ಇದರಲ್ಲಿ ಬಿಸಿಸಿಐಗೆ 230 ಮಿಲಿಯನ್ ಡಾಲರ್ ಸಿಗಬಹುದು.

ಆದಾಯ ಹಂಚಿಕೆ ಸೂತ್ರ ಹೇಗೆ?

ಐಸಿಸಿ ತನಗೆ ಬರುವ ಆದಾಯವನ್ನು ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುತ್ತದೆ. ಅದಕ್ಕೆ ನಾಲ್ಕು ಅಂಶಗಳು ಪರಿಗಣನೆಗೆ ಬರುತ್ತವೆ. ಅವು ಈ ಕೆಳಕಂಡಂತಿವೆ:

  1. ದೇಶದ ಕ್ರಿಕೆಟ್ ಇತಿಹಾಸ
  2. ಕಳೆದ 16 ವರ್ಷಗಳಲ್ಲಿ ತಂಡದ ಸಾಧನೆ
  3. ಆದಾಯಸೃಷ್ಟಿಯಲ್ಲಿ ಕೊಡುಗೆ
  4. ಪೂರ್ಣಾವಧಿ ಸದಸ್ಯತ್ವ

ಇದನ್ನೂ ಓದಿ: ಲಕ್ಷ ರೂ. ಜೇಬಿನಲ್ಲಿರಲಿ; ಭಾರತ- ಪಾಕ್ ಪಂದ್ಯ ನೋಡಲು ಅಹಮದಾಬಾದ್​ಗೆ ಪ್ರಯಾಣಿಸುವವರ ಗಮನಕ್ಕೆ

ಐಸಿಸಿಗೆ ಅತಿಹೆಚ್ಚು ಆದಾಯ ತಂದುಕೊಡುವುದು ಭಾರತವೇ. ಹಾಗೆಯೇ, ಕಳೆದ 16 ವರ್ಷದಲ್ಲಿ ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ತೋರಿದೆ. ನಾಲ್ಕೂ ಮಾನದಂಡಗಳು ಬಿಸಿಸಿಐಗೆ ಒಗ್ಗುತ್ತವೆ. ಹೀಗಾಗಿ, ಐಸಿಸಿಯ ಆದಾಯದಲ್ಲಿ ಬಿಸಿಸಿಐಗೆ ಸಿಂಹಪಾಲು ಹೋಗುತ್ತದೆ.

2018ರಿಂದ 2022ರವರೆಗೆ ಬಿಸಿಸಿಐ ಬರೋಬ್ಬರಿ 27,411 ಕೋಟಿ ರೂ ಆದಾಯ ಗಳಿಸಿದೆ. ಮುಂದಿನ ನಾಲ್ಕು ವರ್ಷದಲ್ಲಿ ಪ್ರತೀ ವರ್ಷ ಐಸಿಸಿಯಿಂದ ಬಿಸಿಸಿಐ 1,914 ಕೋಟಿ ರೂ ಪಾಲು ಗಳಿಸುತ್ತದೆ. ಅದರ ಜೊತೆಗೆ ಟಿವಿ ಪಂದ್ಯಗಳ ಪ್ರಸಾರ ಹಕ್ಕು ಇತ್ಯಾದಿ ಮೂಲಕ ಬಿಸಿಸಿಐಗೆ ಹೇರಳ ಲಾಭ ಸಿಗುತ್ತದೆ. ಅಂತೆಯೇ, ಬಿಸಿಸಿಐ ವಿಶ್ವದ ಅತಿಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ