ಲಕ್ಷ ರೂ. ಜೇಬಿನಲ್ಲಿರಲಿ; ಭಾರತ- ಪಾಕ್ ಪಂದ್ಯ ನೋಡಲು ಅಹಮದಾಬಾದ್​ಗೆ ಪ್ರಯಾಣಿಸುವವರ ಗಮನಕ್ಕೆ

India Vs Pakistan, ICC World Cup 2023: ಈ ಪಂದ್ಯದ ಟಿಕೆಟ್ ಪಡೆದು ಅಹಮದಾಬಾದ್​ಗೆ ತೆರಳುತ್ತಿರುವ ಅಭಿಮಾನಿಗಳು ತಮ್ಮ ಪರ್ಸ್​ ಭಾರವನ್ನು ಕೊಂಚ ಹೆಚ್ಚೆ ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕೆ ಕಾರಣವೂ ಇದ್ದು, ಅಹಮದಾಬಾದ್​ಗೆ ವಿಮಾನ ಹತ್ತುವುದರಿಂದ ಹಿಡಿದು, ಭಾರತ- ಪಾಕ್ ಪಂದ್ಯದ ಟಿಕೆಟ್, ಹೋಟೆಲ್​ ರೂಮ್​ಗಳ ಬೆಲೆ 10 ಪಟ್ಟು ಹೆಚ್ಚಾಗಿದೆ.

ಲಕ್ಷ ರೂ. ಜೇಬಿನಲ್ಲಿರಲಿ; ಭಾರತ- ಪಾಕ್ ಪಂದ್ಯ ನೋಡಲು ಅಹಮದಾಬಾದ್​ಗೆ ಪ್ರಯಾಣಿಸುವವರ ಗಮನಕ್ಕೆ
ಭಾರತ- ಪಾಕಿಸ್ತಾನ
Follow us
ಪೃಥ್ವಿಶಂಕರ
|

Updated on:Oct 13, 2023 | 9:17 AM

ಭಾರತ ಮತ್ತು ಪಾಕಿಸ್ತಾನ (IND vs PAK) ವಿಶ್ವಕಪ್ ಮುಖಾಮುಖಿಗೆ ಅಕ್ಟೋಬರ್ 14ಕ್ಕಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium in Ahmedabad) ವಿಶ್ವಕಪ್‌ನ (ICC World Cup 2023) ಈ ಅಮೋಘ ಪಂದ್ಯ ನಡೆಯಲಿದೆ. ಎಂದಿನಂತೆ ಈ ಪಂದ್ಯಕ್ಕೆ ಕುತೂಹಲ ಕೆರಳಿಸಿದ್ದು, ಅದರಲ್ಲೂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಖಚಿತವಾಗಿದೆ. ಈ ಪಂದ್ಯಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಸಹ ಕ್ರೀಡಾಂಗಣದಲ್ಲಿ ಉಪಸ್ಥಿತರಿರುತ್ತಾರೆ. ಹೀಗಾಗಿ ಕ್ರಿಕೆಟ್​ ಲೋಕದ ಈ ಮಹಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಹಮದಾಬಾದ್​ಗೆ ತೆರಳುತ್ತಿರುವ ಕ್ರಿಕೆಟ್ ಅಭಿಮಾನಿಗಳು ಕೊಂಚ ಈ ಸುದ್ದಿಯತ್ತ ಕಣ್ಣಾಯಿಸುವುದು ಅವಶ್ಯಕವಾಗಿದೆ.

ಎಲ್ಲವೂ ದುಬಾರಿ

ಕ್ರಿಕೆಟ್ ಲೋಕದಲ್ಲಿ ಭಾರತ- ಪಾಕಿಸ್ತಾನ ಪಂದ್ಯವೆಂದರೆ ಅದಕ್ಕಿರುವ ಮಹತ್ವವೇ ಬೇರೆ. ಅದರಲ್ಲೂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಹೀಗಾಗಿ ಈ ಪಂದ್ಯದ ಬಿಸಿ ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿದೆ. ಇದರ ತೀವ್ರತೆಯನ್ನು ಅರಿತ ಕ್ರಿಕೆಟ್​ ಅಭಿಮಾನಿಗಳು ಈಗಾಗಲೇ ಟಿಕೆಟ್ ಖರೀದಿ ಇಂದ ಹಿಡಿದು, ಅಹಮದಾಬಾದ್​ನಲ್ಲಿ ಹೋಟೆಲ್ ಬುಕ್ ಮಾಡುವುದರವರೆಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿದ್ದಾರೆ.

2 ಸಾವಿರಕ್ಕೆ ಖರೀದಿಸಿ 22 ಸಾವಿರಕ್ಕೆ ಮಾರಾಟ..! ಗಗನಕ್ಕೇರಿದ ಭಾರತ- ಪಾಕ್ ಪಂದ್ಯದ ಟಿಕೆಟ್ ಬೆಲೆ

10 ಪಟ್ಟು ಹೆಚ್ಚಾಗಿದೆ

ಆದರೆ ಇತ್ತೀಚೆಗೆ ಈ ಪಂದ್ಯದ ಟಿಕೆಟ್ ಪಡೆದು ಅಹಮದಾಬಾದ್​ಗೆ ತೆರಳುತ್ತಿರುವ ಅಭಿಮಾನಿಗಳು ತಮ್ಮ ಪರ್ಸ್​ ಭಾರವನ್ನು ಕೊಂಚ ಹೆಚ್ಚೆ ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕೆ ಕಾರಣವೂ ಇದ್ದು, ಅಹಮದಾಬಾದ್​ಗೆ ವಿಮಾನ ಹತ್ತುವುದರಿಂದ ಹಿಡಿದು, ಭಾರತ- ಪಾಕ್ ಪಂದ್ಯದ ಟಿಕೆಟ್, ಹೋಟೆಲ್​ ರೂಮ್​ಗಳ ಬೆಲೆ 10 ಪಟ್ಟು ಹೆಚ್ಚಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಕದನವನ್ನು ಕ್ರೀಡಾಂಗಣದಲ್ಲಿ ನೋಡಲಿಚ್ಚಿಸುವ ಅಭಿಮಾನಿಗಳು ತಮ್ಮ ಜೇಬಿನಲ್ಲಿ ಲಕ್ಷಕ್ಕೂ ಅಧಿಕ ಹಣವನ್ನು ಇಟ್ಟುಕೊಳ್ಳುವುದು ಸೂಕ್ತ.

Planning travel to Ahmedabad for India vs Pakistan World Cup game? Ready to lose a kidney, IND vs PAK tickets selling at lakhs

10,000 ರೂ. ಗೆ ಏರಿಕೆಯಾಗಿದೆ

ಅಕ್ಟೋಬರ್ 14 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಈ ಪಂದ್ಯವನ್ನು ನೋಡಲಿಚ್ಚಿಸುವವರು, ಹೋಟೆಲ್​ನಲ್ಲಿ ತಂಗುವುದಕ್ಕಾಗಿಯೇ ಎರಡು ರಾತ್ರಿಗಳಿಗೆ 43,000 ರೂಗಳಿಗೂ ಅಧಿಕ ಹಣವನ್ನು ವ್ಯಯಿಸಬೇಕಾಗಿದೆ. ಹಾಗೆಯೇ ಈ ಹಿಂದೆ ದೆಹಲಿಯಿಂದ ಅಹಮದಾಬಾದ್​ಗೆ ತೆರಳಲು ವಿಮಾನ ದರ 3 ಸಾವಿರ ರೂ ಇತ್ತು. ಆದರೀಗ ಅದರ ಬೆಲೆ 10,000 ರೂ. ಗೆ ಏರಿಕೆಯಾಗಿದೆ. ಇನ್ನು ಭಾರತ- ಪಾಕ್ ಪಂದ್ಯದ ಟಿಕೆಟ್​ಗಳನ್ನು ಕಾಳಸಂತೆಯಲ್ಲಿ ಖರೀದಿಸುವವರು ಟಿಕೆಟ್​ನ ಮೂಲ ಬೆಲೆಗಿಂತ 10 ಪಟ್ಟು ಅಧಿಕ ಹಣವನ್ನು ವ್ಯಯಿಸಬೇಕಾಗಿದೆ.

Planning travel to Ahmedabad for India vs Pakistan World Cup game? Ready to lose a kidney, IND vs PAK tickets selling at lakhs

ಐಫೋನ್ 15 ಗಿಂತ ದುಬಾರಿ

ವರದಿಯಾಗಿರುವಂತೆ, ಪಂದ್ಯದ ದಿನದಂದು ಅಹಮದಾಬಾದ್​ಗೆ ಹೋಗಲು ಯೋಜಿಸುತ್ತಿರುವವರು ಮೇಕ್‌ಮೈಟ್ರಿಪ್‌ನಲ್ಲಿ ದೆಹಲಿಯಿಂದ ಅಹಮದಾಬಾದ್‌ಗೆ ವಿಮಾನ ದರ 10,000 ರಿಂದ 12,000 ರೂ. ವ್ಯಯಿಸಬೇಕಾಗಿದೆ. ಅಲ್ಲದೆ ಅಹಮದಾಬಾದ್‌ನಲ್ಲಿ ತ್ರಿ ಸ್ಟಾರ್ ಹೋಟೆಲ್​ನಲ್ಲಿ ಎರಡು ರಾತ್ರಿ ತಂಗಲು 40,000‘ ಕ್ಕೂ ಅಧಿಕ ಹಣ ವ್ಯಯಿಸಬೇಕಿದೆ. ಹಾಗೆಯೇ ಸಾಮಾನ್ಯ ಹೋಟೆಲ್​ಗಳಲ್ಲಿ ಅಕ್ಟೋಬರ್ 13 ರಿಂದ ಅಕ್ಟೋಬರ್ 15 ರವರೆಗೆ ಪ್ರತಿ ರಾತ್ರಿಗೆ 6,000 ರಿಂದ 24,000 ರೂ. ಚಾರ್ಚ್​ ಮಾಡಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:13 am, Fri, 13 October 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ