T20 World Cup 2024: ಭಾರತ ಟಿ20 ವಿಶ್ವಕಪ್ ಗೆದ್ದು ಇಂದಿಗೆ 1 ತಿಂಗಳು; ವಿಶೇಷ ವಿಡಿಯೋ ಹಂಚಿಕೊಂಡ ಬಿಸಿಸಿಐ
T20 World Cup 2024: 2024 ರ ಟಿ20 ವಿಶ್ವಕಪ್ ಮುಗಿದು ಇಂದಿಗೆ ಸರಿಯಾಗಿ ಒಂದು ತಿಂಗಳು ಮುಗಿದಿದೆ. ಜೂನ್ 29 ರಂದು ವೆಸ್ಟ್ ಇಂಡೀಸ್ನಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 6 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ ದಾಖಲೆಯ 2ನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
2024 ರ ಟಿ20 ವಿಶ್ವಕಪ್ ಮುಗಿದು ಇಂದಿಗೆ ಸರಿಯಾಗಿ ಒಂದು ತಿಂಗಳು ಮುಗಿದಿದೆ. ಜೂನ್ 29 ರಂದು ವೆಸ್ಟ್ ಇಂಡೀಸ್ನಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 6 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ ದಾಖಲೆಯ 2ನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವಾಸ್ತವವಾಗಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಟೀಂ ಇಂಡಿಯಾ ಕೈಯಿಂದ ಭಾಗಶಃ ಜಾರಿ ಹೋಗಿತ್ತು. ಆದರೆ ಕೊನೆವರೆಗೂ ಹೋರಾಟ ಬಿಡದ ಟೀಂ ಇಂಡಿಯಾ ಆಟಗಾರರು ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಿದ್ದರು.
ವಾಸ್ತವವಾಗಿ ಆಫ್ರಿಕಾ ಗೆಲುವಿಗೆ 30 ಎಸೆತಗಳಲ್ಲಿ 29 ರನ್ ಬೇಕಿತ್ತು. ಅಲ್ಲದೆ ಕ್ರಿಸ್ನಲ್ಲಿ ಎನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳಿದ್ದರು. ಹೀಗಾಗಿ ಈ ಬಾರಿ ಆಫ್ರಿಕಾ ತಂಡವೇ ಟಿ20 ವಿಶ್ವಕಪ್ ಚಾಂಪಿಯನ್ ಆಗಲಿದೆ ಎಂಬುದು ಅಲ್ಲರ ಅಭಿಪ್ರಾಯವಾಗಿತ್ತು. ಆದರೆ ಭಾರತದ ಬೌಲರ್ಗಳ ಶತಪ್ರಯತ್ನದಿಂದಾಗಿ ಕೊನೆಯಲ್ಲಿ ಪಂದ್ಯ ಭಾರತದತ್ತ ವಾಲಿತ್ತು. ಅದಕ್ಕೆ ಪ್ರಮುಖ ಕಾರಣ 20ನೇ ಓವರ್ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ದೊಡ್ಡ ಹೊಡೆತವನ್ನು ಸೂರ್ಯಕುಮಾರ್ ಯಾದವ್ ಕ್ಯಾಚ್ ಆಗಿ ಪರಿವರ್ತಿಸಿದ್ದು.
ಆರಂಭದಲ್ಲಿ ಎಲ್ಲರೂ ಇದು ಸಿಕ್ಸರ್ ಎಂದು ಭಾವಿಸಿದ್ದರು. ಆದರೆ ಸೂರ್ಯಕುಮಾರ್ ಯಾದವ್ ತನ್ನ ಸಮಯ ಪ್ರಜ್ಞೆ ಮೆರೆದು, ಸಿಕ್ಸರ್ ಹೊಗುತ್ತಿದ್ದ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸಿದರು. ಈ ಕ್ಯಾಚ್ ಟೀಂ ಇಂಡಿಯಾವನ್ನು ಚಾಂಪಿಯನ್ ಆಗಿ ಮಾಡಿತ್ತು. ಇದೀಗ ಈ ಕ್ಯಾಚ್ ಬಗ್ಗೆ ಸೂರ್ಯಕುಮಾರ್ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

