ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ (Sri Lanka vs Afghanistan) ತಂಡಗಳ ನಡುವಿನ ಕದನದ ಮುಕ್ತಾಯದ ಬಳಿಕ 2023ರ ಏಷ್ಯಾಕಪ್ನ (Asia Cup 2023) ಲೀಗ್ ಹಂತಕ್ಕೂ ತೆರೆಬಿದ್ದಿದೆ. ಈ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 2 ರನ್‌ಗಳ ಗೆಲುವು ಸಾಧಿಸಿದ ಶ್ರೀಲಂಕಾ ಈ ಗೆಲುವಿನೊಂದಿಗೆ ಸೂಪರ್ 4 ಹಂತಕ್ಕೆ ಬಿ ಗುಂಪಿನಲ್ಲಿ ಅಗ್ರ ತಂಡವಾಗಿ ಎಂಟ್ರಿಕೊಟ್ಟಿದೆ. ಸೆಪ್ಟೆಂಬರ್ 6 ಬುಧವಾರದಂದು ಸೂಪರ್ 4 ಸುತ್ತು ಆರಂಭವಾಗಲಿದ್ದು ಈ ಹಂತದ ಮೊದಲ ಪಂದ್ಯ ಪಾಕಿಸ್ತಾನದ ಹಾಗೂ ಬಾಂಗ್ಲಾದೇಶ (Pakistan vs Bangladesh) ತಂಡಗಳ ನಡುವೆ ನಡೆಯಲಿದೆ. ಇದೀಗ ಈ ಸೂಪರ್ 4 ರ ಮೊದಲ ಪಂದ್ಯಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡವು ತಮ್ಮ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ತಂಡದಲ್ಲಿ ಒಂದು ಬದಲಾವಣೆ ಮಾಡಿದೆ.
ಪಾಕಿಸ್ತಾನ ತಂಡ ತನ್ನ ಪ್ಲೇಯಿಂಗ್ ಇಲೆವೆನ್ಲ್ಲಿ ಒಂದು ಬದಲಾವಣೆ ಮಾಡಿದ್ದು, ಮೊಹಮ್ಮದ್ ನವಾಜ್ ಬದಲಿಗೆ ತಂಡದಲ್ಲಿ ಬೌಲಿಂಗ್ ಆಲ್ ರೌಂಡರ್ ಫಹೀಮ್ ಅಶ್ರಫ್ಗೆ ಅವಕಾಶ ನೀಡಲಾಗಿದೆ. ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನವಾಜ್ 8 ಓವರ್ ಬೌಲ್ ಮಾಡಿ 6.90 ಎಕಾನಮಿ ದರದಲ್ಲಿ 55 ರನ್ ನೀಡಿದ್ದರು. ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಅವರನ್ನು ಆಡುವ ಹನ್ನೊಂದರಿಂದ ಕೈಬಿಟ್ಟಿದೆ.
ಏಷ್ಯಾಕಪ್ ಪಾಯಿಂಟ್ಸ್ ಟೇಬಲ್ ಹೇಗಿದೆ?, ಅತಿ ಹೆಚ್ಚು ರನ್, ವಿಕೆಟ್ ಪಡೆದವರು ಯಾರು?
ಸೂಪರ್ 4 ರ ಮೊದಲ ಪಂದ್ಯ ಸೆಪ್ಟೆಂಬರ್ 6 ರಂದು ಬುಧವಾರ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ (ಎ1) ಬಾಂಗ್ಲಾದೇಶವನ್ನು (ಬಿ2) ಎದುರಿಸಲಿದೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ಟಾಸ್ ಮಧ್ಯಾಹ್ನ 2.30ರ ನಂತರ ನಡೆಯಲಿದೆ. ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಹೀಮ್ ಅಶ್ರಫ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್.
Our playing XI for the Super 4 match against Bangladesh 🇵🇰💪#AsiaCup2023 | #BackTheBoysInGreen pic.twitter.com/kEfGMsvsgr
— Pakistan Cricket (@TheRealPCB) September 5, 2023
ಏಷ್ಯಾಕಪ್ಗೆ ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್, ತಂಜೀದ್ ಹಸನ್, ತೋಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಮೆಹದಿ ಹಸನ್ ಮಿರಾಜ್, ತಸ್ಕೀನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ನಸುಮ್ ಅಹ್ಮದ್, ಶಮೀಮ್ ಹುಸೇನ್ ಇಸ್ಲಾಂ, ಇಸ್ಲಾಮ್ ಹುಸೇನ್, ಅಫೀದ್ ಮತ್ತು ಮೊಹಮ್ಮದ್ ನಯೀಮ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ