ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 1-0ಯಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು. 109 ರನ್ಗಳ ಅಂತರದ ಗೆಲುವು ಪಾಕಿಸ್ತಾನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಲು ಸಹಾಯ ಮಾಡಿದೆ. ಈ ಬಾರಿ ತಂಡದ ನಾಯಕ ಬಾಬರ್ ಅಜಮ್ ಮತ್ತು ಯುವ ಬೌಲರ್ ಶಾಹೀನ್ ಅಫ್ರಿದಿ ಹೆಚ್ಚು ಲಾಭ ಪಡೆದಿದ್ದಾರೆ. ಇಬ್ಬರೂ ಅಗ್ರ 10 ಕ್ಕೆ ತಲುಪಿದ್ದಾರೆ.
ಪಾಕಿಸ್ತಾನದ 21 ವರ್ಷದ ಶಾಹೀನ್ ಟೆಸ್ಟ್ ಶ್ರೇಯಾಂಕದಲ್ಲಿ 10 ಸ್ಥಾನ ಮೇಲಕ್ಕೇರಿ ಅಗ್ರ 10 ಕ್ಕೆ ತಲುಪಿದ್ದಾರೆ. ಶಾಹೀನ್ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶಾಹೀನ್ 51 ರನ್ ಗಳಿಸಿ 6 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ನಂತರ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 43 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಹೀಗಾಗಿ, ಶಾಹೀನ್ ಇಡೀ ಪಂದ್ಯದಲ್ಲಿ 94 ರನ್ಗೆ 10 ವಿಕೆಟ್ ಪಡೆದರು. ಅವರ ಪ್ರದರ್ಶನದ ಕಾರಣ, ಅವರು 783 ಅಂಕಗಳೊಂದಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.
ರಿಷಬ್ ಪಂತ್ ಹಿಂದಿಕ್ಕಿದ ಕ್ಯಾಪ್ಟನ್ ಬಾಬರ್
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮೊದಲ ಇನ್ನಿಂಗ್ಸ್‌ನಲ್ಲಿ 75 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 33 ರನ್ ಗಳಿಸುವ ಮೂಲಕ ತನ್ನ ಟೆಸ್ಟ್ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ. ಅವರು ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಹಿಂದಿಕ್ಕಿ ಏಳನೇ ಸ್ಥಾನ ಪಡೆದಿದ್ದಾರೆ. ಬಾಬರ್ 749 ಅಂಕಗಳೊಂದಿಗೆ ಏಳನೇ ಮತ್ತು ಪಂತ್ 736 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.
Pakistan captain Babar Azam has climbed a spot on the @MRFWorldwide ICC Men’s Test Batting rankings ⬆️
Full list: https://t.co/17s2PmICbp pic.twitter.com/uFHHbpeRAE
— ICC (@ICC) August 25, 2021