AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತ ಐರ್ಲೆಂಡ್ ವಿರುದ್ಧ ಸೋತಿಲ್ವ?’; ಮುಖಭಂಗ ತಪ್ಪಿಸಲು ನೆಪ ಹುಡುಕಿದ ಮೊಹ್ಸಿನ್ ನಖ್ವಿ

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ತಂಡದ ಕಳಪೆ ಪ್ರದರ್ಶನಕ್ಕೆ ಅವರನ್ನೇ ದೂಷಿಸಲಾಗುತ್ತಿದೆ. ನಖ್ವಿ, ಟೀಕೆಗಳಿಂದ ತಪ್ಪಿಸಿಕೊಳ್ಳಲು ಟೀಮ್ ಇಂಡಿಯಾದ ಉದಾಹರಣೆ ನೀಡಿದ್ದಾರೆ. ಅಲ್ಲದೆ, ಪಾಕಿಸ್ತಾನದ ಟಿ20 ಮತ್ತು ಏಕದಿನ ಶ್ರೇಯಾಂಕಗಳಲ್ಲಿನ ಸುಧಾರಣೆಯನ್ನು ಎತ್ತಿ ಹಿಡಿದು, ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ.

‘ಭಾರತ ಐರ್ಲೆಂಡ್ ವಿರುದ್ಧ ಸೋತಿಲ್ವ?’; ಮುಖಭಂಗ ತಪ್ಪಿಸಲು ನೆಪ ಹುಡುಕಿದ ಮೊಹ್ಸಿನ್ ನಖ್ವಿ
ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ
ಪೃಥ್ವಿಶಂಕರ
|

Updated on:Sep 03, 2026 | 5:01 PM

Share

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿರುವ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಟಗಾರರಿಂದ ಹಿಡಿದು ಕೋಚ್ ಕೂಡ ಬದಲಾಗಿದ್ದಾರೆ. ಆದಾಗ್ಯೂ ಪಾಕ್ ತಂಡದ ಮೇಲಿನ ಟೀಕೆಗಳು ನಿಂತಿಲ್ಲ. ಅದರಲ್ಲೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಯನ್ನು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಲಾಗುತ್ತಿದೆ. ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ನಖ್ವಿ ಮೇಲೆ ಪ್ರಶ್ನೆಗಳ ಮಳೆಗರೆಯುತ್ತಿದ್ದಾರೆ. ಹೀಗಾಗಿ ಟೀಕೆಗಳಿಂದ ತಪ್ಪಿಸಿಕೊಳ್ಳಲು ತಂತ್ರವೊಂದನ್ನು ಕಂಡುಕೊಂಡಿರುವ ಮೊಹ್ಸಿನ್ ನಖ್ವಿ, ಟೀಂ ಇಂಡಿಯಾದ ಉದಾಹರಣೆ ನೀಡುವ ಮೂಲಕ ಟೀಕೆಗಳಿಂದ ಪಾರಾಗಲು ಯತ್ನಿಸಿದ್ದಾರೆ. ಅಲ್ಲದೆ ಟೀಕೆಗಳನ್ನು ಮಾಡುವುದಕ್ಕೂ ಮೊದಲು ಪಾಕಿಸ್ತಾನ ಕ್ರಿಕೆಟ್‌ ತಂಡದ ಶ್ರೇಯಾಂಕಗಳನ್ನು ನೋಡುವಂತೆ ಕಾರವಾಗಿ ಉತ್ತರಿಸಿದ್ದಾರೆ.

ನಾನು ಎಂದಿಗೂ ಟೀಕೆಗಳಿಗೆ ಹೆದರುವುದಿಲ್ಲ

ಪಾಕ್ ತಂಡದ ಸತತ ಕಳಪೆ ಪ್ರದರ್ಶನಕ್ಕೆ ಮೊಹ್ಸಿನ್ ನಖ್ವಿಯನ್ನು ದೂರಲಾಗುತ್ತಿದೆ. ಅಲ್ಲದೆ ನಖ್ವಿ ಪಾಕಿಸ್ತಾನ ಕ್ರಿಕೆಟ್ ಅನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಖ್ವಿ ನಿರ್ಧಾರಗಳು ಸರಿ ಇಲ್ಲ. ಅವರ ಈ ನಿರ್ಧಾರಗಳು ತಂಡವನ್ನು ವಿನಾಶದತ್ತ ಕರೆದುಕೊಂಡು ಹೋಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಈ ಆರೋಪಗಳಿಗೆಲ್ಲ ಜಿಯೋ ನ್ಯೂಸ್ ಜೊತೆ ಮಾತನಾಡಿದ ನಖ್ವಿ, ‘ನಾನು ಎಂದಿಗೂ ಟೀಕೆಗಳಿಗೆ ಹೆದರುವುದಿಲ್ಲ. ನಾನು ಪಿಸಿಬಿ ಅಧ್ಯಕ್ಷರಾದಾಗಿನಿಂದ ಪಾಕಿಸ್ತಾನ ಕ್ರಿಕೆಟ್ ಹಾಳಾಗಿದೆ ಎಂದು ಆರೋಪ ಮಾಡುವವರು ಮೊದಲು ಪಾಕಿಸ್ತಾನ ತಂಡದ ಶ್ರೇಯಾಂಕವನ್ನು ನೋಡಬೇಕು. ಕ್ರಿಕೆಟ್ ಸಮಸ್ಯೆಗಳನ್ನು ಆಲಿಸಲು ತಾನು ಸಿದ್ಧನಿದ್ದೇನೆ, ಆದರೆ ವಾಸಿಮ್ ಅಕ್ರಮ್ ಅವರಂತಹ ಕ್ರಿಕೆಟಿಗರು ಮಾತನಾಡಿದರೆ ಮಾತ್ರ. ಅದನ್ನು ಹೊರತುಪಡಿಸಿ ಇತರರಿಂದ ಬರುವ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಟೀಕಿಸುವವ ವಿರುದ್ಧ ವಾಗ್ದಾಳಿ

ಇನ್ನು ತಂಡದ ಕಳಪೆ ಪ್ರದರ್ಶನಕ್ಕೆ ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾದ ಉದಾಹರಣೆಗಳನ್ನು ನೀಡಿರುವ ಮೊಹ್ಸಿನ್ ನಖ್ವಿ, ‘ದಕ್ಷಿಣ ಆಫ್ರಿಕಾ, ನಮೀಬಿಯಾ ವಿರುದ್ಧ ಸೋತಿತು. ಹಾಗೆಯೇ ಭಾರತ, ಐರ್ಲೆಂಡ್ ವಿರುದ್ಧ ಸೋತಿತು. ಇದರರ್ಥ ಅವರ ಕ್ರಿಕೆಟ್ ಮುಗಿದಿದೆಯೇ? ಯಾವುದೇ ತಂಡ ರಾತ್ರೋರಾತ್ರಿ ಚಾಂಪಿಯನ್ ಆಗುವುದಿಲ್ಲ. ಪಾಕಿಸ್ತಾನ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದೆ. ಟಿ20ಕ್ರಿಕೆಟ್​ನಲ್ಲಿ 9 ರಿಂದ 6 ನೇ ಸ್ಥಾನಕ್ಕೆ ಮತ್ತು ಏಕದಿನ ಮಾದರಿಯಲ್ಲಿ, 8 ರಿಂದ 5 ನೇ ಸ್ಥಾನಕ್ಕೆ ಏರಿದೆ ಎಂದಿದ್ದಾರೆ.

ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಯಾವಾಗ, ಎಲ್ಲಿ ಆಡಲಿದೆ?

ನಖ್ವಿ ಕಡೆಗೆ ಬೆರಳು ತೋರಿಸಿದ್ದು ಏಕೆ?

ಲಾರ್ಡ್ಸ್ ಟೆಸ್ಟ್‌ನಲ್ಲಿನ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡದ ಏಳು ಆಟಗಾರರನ್ನು ಇಂಗ್ಲೆಂಡ್‌ನಿಂದ ಮನೆಗೆ ಕಳುಹಿಸಲಾಯಿತು. ಅವರ ಬದಲಿಗೆ ಹೊಸ ಮುಖಗಳನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು. ಇದಲ್ಲದೆ, ಪಾಕಿಸ್ತಾನ ಟೆಸ್ಟ್ ತಂಡದ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ಅವರ ಹುದ್ದೆಯಿಂದ ಕೆಳಗಿಳಿಸಲಾಯಿತು. ಪಿಸಿಬಿ ಈ ನಿರ್ಧಾರಗಳಿಗೆ ಮೊಹ್ಸಿನ್ ನಖ್ವಿಯೇ ಕಾರಣ ಎಂದು ಆರೋಪಿಸಲಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Thu, 3 September 26

Follow Us