ಏಷ್ಯಾಕಪ್ ಪಾಯಿಂಟ್ಸ್ ಟೇಬಲ್ ಹೇಗಿದೆ?, ಅತಿ ಹೆಚ್ಚು ರನ್, ವಿಕೆಟ್ ಪಡೆದವರು ಯಾರು?

|

Updated on: Sep 03, 2023 | 8:06 AM

Asia Cup 2023 Updated Points Table, Most Runs, Most Wickets: ಏಷ್ಯಾಕಪ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧ ಇವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲವಾದರೂ ನೇಪಾಳ ವಿರುದ್ಧ ಅಬ್ಬರಿಸಿದ ಕಾರಣ 151 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಏಷ್ಯಾಕಪ್ ಪಾಯಿಂಟ್ಸ್ ಟೇಬಲ್ ಹೇಗಿದೆ?, ಅತಿ ಹೆಚ್ಚು ರನ್, ವಿಕೆಟ್ ಪಡೆದವರು ಯಾರು?
Asia Cup 2023 Points Table
Follow us on

ಏಷ್ಯಾಕಪ್ 2023 (Asia Cup 2023) ಟೂರ್ನಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಈವರೆಗೆ ಒಟ್ಟು ಮೂರು ಪಂದ್ಯಗಳು ನಡೆದಿದ್ದು, ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ ಜಯಿಸಿ ಖಾತೆ ತೆರೆದಿತ್ತು. ಬಳಿಕ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಅಮೋಘ ಗೆಲುವು ಕಂಡಿತು. ಶನಿವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ. ಇದರಿಂದ ಪಾಕಿಸ್ತಾನ ತಂಡ ಸೂಪರ್-4 ಹಂತಕ್ಕೆ ತೇರ್ಗಡೆ ಆಗಿದೆ. ಸದ್ಯ ಏಷ್ಯಾಕಪ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?, ಗರಿಷ್ಠ ರನ್ ಗಳಿಸಿದವರು ಯಾರು?, ವಿಕೆಟ್ ಟೇಕರ್ ಯಾರು? ಎಂಬುದನ್ನು ನೋಡೋಣ.

ಏಷ್ಯಾಕಪ್ 2023 ಪಾಯಿಂಟ್ಸ್ ಟೇಬಲ್:

ಏಷ್ಯಾಕಪ್ 2023 ರ ಪಾಯಿಂಟ್ಸ್ ಟೇಬಲ್ ಗಮನಿಸಿದರೆ ಗ್ರೂಪ್ ಎ ನಲ್ಲಿ ಪಾಕಿಸ್ತಾನ, ಭಾರತ ಹಾಗೂ ನೇಪಾಳ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಪಾಕ್ ಒಟ್ಟು 3 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಜಯ ಹಾಗೂ ಮತ್ತೊಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 3 ಅಂಕದೊಂದಿಗೆ ಸೂಪರ್-4 ಹಂತಕ್ಕೆ ಪ್ರವೇಶಿಸಿದೆ. ಭಾರತ 1 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಒಂದು ಪಂದ್ಯದಲ್ಲಿ ಸೋತಿರುವ ನೇಪಾಳ ಯಾವುದೇ ಅಂಕ ಪಡೆಯದೆ ಕೊನೆಯ ಸ್ಥಾನದಲ್ಲಿದೆ.

ಭಾರತ-ಪಾಕ್ ಪಂದ್ಯ ರದ್ದು: ಸೂಪರ್-4 ಹಂತಕ್ಕೇರಿದ ಪಾಕಿಸ್ತಾನ್

ಇದನ್ನೂ ಓದಿ
ಟೀಂ ಇಂಡಿಯಾ ಆಟಗಾರರ ಕಾಲೆಳೆದ ಪಾಕ್ ಮಾಜಿ ಪ್ರಧಾನಿ
ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಸಂಪೂರ್ಣ ಮಾಹಿತಿ
ಹಾಟ್‌ಸ್ಟಾರ್​ನಲ್ಲಿ ದಾಖಲೆಯ ವೀಕ್ಷಣೆ ಕಂಡ ಭಾರತ- ಪಾಕ್ ಪಂದ್ಯ!
ಇಶಾನ್ ಕಿಶನ್ - ಹಾರ್ದಿಕ್ ಪಾಂಡ್ಯ ಅಬ್ಬರಕ್ಕೆ ಹಲವು ದಾಖಲೆ ನಿರ್ನಾಮ

ಗ್ರೂಪ್ ಬಿಯಲ್ಲಿ ಶ್ರೀಲಂಕಾ ಅಗ್ರಸ್ಥಾನದಲ್ಲಿದೆ. ಆಡಿರುವ ಒಂದು ಪಂದ್ಯದಲ್ಲಿ ಗೆದ್ದು 2 ಅಂಕ ಪಡೆದುಕೊಂಡಿದೆ. ಅಫ್ಘಾನಿಸ್ತಾನ ದ್ವಿತೀಯ ಸ್ಥಾನದಲ್ಲಿದ್ದು, ಇನ್ನು ಯಾವುದೇ ಪಂದ್ಯವನ್ನು ಆಡಿಲ್ಲ. ಇಂದು ಬಾಂಗ್ಲಾವನ್ನು ಎದುರಿಸಲಿದೆ. ಮೂರನೇ ಸ್ಥಾನದಲ್ಲಿ ಬಾಂಗ್ಲಾದೇಶ ತಂಡವಿದೆ. ಆಡಿರುವ ಒಂದು ಪಂದ್ಯದಲ್ಲಿ ಸೋತು -0.951 ರನ್​ರೇಟ್ ಹೊಂದಿದೆ.

ಅತಿ ಹೆಚ್ಚು ರನ್ ಗಳಿಸಿದವರು:

ಏಷ್ಯಾಕಪ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧ ಇವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲವಾದರೂ ನೇಪಾಳ ವಿರುದ್ಧ ಅಬ್ಬರಿಸಿದ ಕಾರಣ 151 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪಾಕ್​ನ ಇಫ್ತಿಖರ್ ಅಹ್ಮದ್ ಇದ್ದು 109 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನಜ್ಮುಲ್ ಹುಸೈನ್ 89 ರನ್ ಗಳಿಸಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದು 87 ರನ್ ಕಲೆಹಾಕಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದವರು:

ಅತಿ ಹೆಚ್ಚು ವಿಕೆಟ್ ಪಡೆದವರು ಪೈಕಿ ಶಾಹಿನ್ ಅಫ್ರಿದಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಆಡಿರುವ ಎರಡು ಪಂದ್ಯಗಳಲ್ಲಿ ಒಟ್ಟು 6 ವಿಕೆಟ್ ಕಬಳಿಸಿದ್ದಾರೆ. ಹ್ಯಾರಿಸ್ ರೌಫ್ ಎರಡು ಪಂದ್ಯಗಳಿಂದ 5 ವಿಕೆಟ್ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ. ನಸೀಂ ಶಾ ಕೂಡ ಎರಡು ಪಂದ್ಯಗಳಿಂದ 4 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ಮಥೀಶಾ ಪಥಿರನಾ ಒಂದು ಪಂದ್ಯದಿಂದ 4 ವಿಕೆಟ್ ಕಬಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ