IND vs PAK: ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್! ವಿಡಿಯೋ ನೋಡಿ

IND vs PAK: ರೌಫ್ ಎಸೆದ ಆ ಎಕ್ಸ್‌ಪ್ರೆಸ್ ವೇಗದ ಎಸೆತವು ಅಯ್ಯರ್ ಅವರ ಬ್ಯಾಟ್‌ಗೆ ಬಡಿಯಿತು. ರೌಫ್ ಎಸೆದ ಎಸೆತದ ವೇಗ ಎಷ್ಟಿತ್ತಂದರೆ, ಚೆಂಡು ಬಡಿದ ಕೂಡಲೇ ಶ್ರೇಯರ್ ಬ್ಯಾಟ್ ಎರಡು ಪೀಸ್ ಆಯಿತು. ಇಲ್ಲಿ ಇನ್ನೊಂದು ಮೋಜಿನ ಸಂಗತಿಯೆಂದರೆ, ಬ್ಯಾಟ್ ಹೊಳಾದ ನಂತರವೂ ಚೆಂಡು ಬೌಂಡರಿ ಗೆರೆ ದಾಟಿತು. ಇದೀಗ ಆ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

IND vs PAK: ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್! ವಿಡಿಯೋ ನೋಡಿ
ಶ್ರೇಯಸ್ ಅಯ್ಯರ್
Follow us
ಪೃಥ್ವಿಶಂಕರ
|

Updated on: Sep 03, 2023 | 9:05 AM

ನಿರೀಕ್ಷಿಸಿದಂತೆ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಮಳೆಯಿಂದ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ಪಿಚ್​ನಲ್ಲಿ ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲಕಾರಿ ಎಂಬುಂದು ಗೊತ್ತಿದ್ದರೂ, ಮಳೆ ಬೀಳುವುದು ಖಚಿತವಾಗಿದ್ದರಿಂದ ನಾಯಕ ರೋಹಿತ್ (Rohit Sharma) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಮತ್ತೊಮ್ಮೆ ಪಾಕ್ ಬೌಲರ್​ಗಳ ಮುಂದೆ ಭಾರತದ ಟಾಪ್ ಆರ್ಡರ್ ಮಂಕಾಯಿತು. ಹೀಗಾಗಿ ಆರಂಭದಲ್ಲೇ ಟೀಂ ಇಂಡಿಯಾ (Team India) ಸಂಕಷ್ಟಕ್ಕೆ ಸಿಲುಕಿತು. ಪಾಕ್ ವೇಗಿಗಳ ಘಾತುಕ ವೇಗಕ್ಕೆ ಉತ್ತರ ಹುಡುಕುವ ಗೊಜಿಗೆ ಹೋಗದ ಭಾರತದ ಬ್ಯಾಟರ್​ಗಳು ಒಬ್ಬೊಬ್ಬರಾಗಿ ಪೆವಲಿಯನ್ ಸೇರಿಕೊಂಡರು. ಈ ನಡುವೆ ಮೈದಾನದಲ್ಲಿ ನಡೆದ ಅದೊಂದು ಘಟನೆ ಪಾಕ್ ಬೌಲರ್​ಗಳ ಪರಾಕ್ರಮವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿತು.

ವಾಸ್ತವವಾಗಿ ಬಹಳ ವರ್ಷಗಳಿಂದ ಟೀಂ ಇಂಡಿಯಾವನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್. ಯುವರಾಜ್ ಸಿಂಗ್ ಬಳಿಕ ಈ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟ್ ಬೀಸುವ ಮತ್ತೊಬ್ಬ ಆಟಗಾರ ಟೀಂ ಇಂಡಿಯಾಕ್ಕೆ ಸಿಕ್ಕಿಲ್ಲ. ಆದರೆ ಶ್ರೇಯಸ್ ಅಯ್ಯರ್ ರೂಪದಲ್ಲಿ ಈ ಸ್ಥಾನಕ್ಕೆ ಕೊಂಚ ನ್ಯಾಯ ಒದಗಿಸಲಬಲ್ಲ ಆಟಗಾರ ಸಿಕ್ಕಿದ್ದಾನೆ. ಆದರೆ ಇಂಜುರಿಯಿಂದ ಚೇತರಿಸಿಕೊಂಡು ಬಹಳ ದಿನಗಳ ಬಳಿಕ ಮೈದಾನಕ್ಕೆ ಮರಳಿರುವ ಅಯ್ಯರ್ ಕೂಡ ಪಾಕ್ ವಿರುದ್ಧ ಹೆಚ್ಚು ಸದ್ದು ಮಾಡಲಿಲ್ಲ.

ಮಳೆ ಬೀಳುವುದು ಖಚಿತ; ಭಾರತ- ನೇಪಾಳ ನಡುವಿನ ಪಂದ್ಯ ನಡೆಯುವುದು ಡೌಟ್..!

ಎರಡು ಬೌಂಡರಿ ಬಾರಿಸಿದ ಅಯ್ಯರ್

ಆರಂಭಿಕ ಆಘಾತದ ನಡುವೆ ಮೈದಾನಕ್ಕೆ ಬಂದ ಶ್ರೇಯಸ್ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಇದರಿಂದ ಶ್ರೇಯಸ್ ಉತ್ತಮ ಇನ್ನಿಂಗ್ಸ್ ಆಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 14 ರನ್ ಗಳಿಸಿ ಆಡುತ್ತಿದ್ದ ಅಯ್ಯರ್​ ಅವರನ್ನು ಪಾಕ್ ವೇಗಿ ಹ್ಯಾರಿಸ್ ರೌಫ್ 10 ನೇ ಓವರ್‌ನಲ್ಲಿ ಔಟ್ ಮಾಡಿದರು. ಆದರೆ ಇದಕ್ಕೂ ಮುನ್ನ ರೌಫ್ ಎಸೆದ ಮಾರಕ ಬಾಲ್ ಅಯ್ಯರ್ ಅವರ ಬ್ಯಾಟನ್ನು ಎರಡು ಹೊಳಾಗುವಂತೆ ಮಾಡಿತು. ವಾಸ್ತವವಾಗಿ ಅಯ್ಯರ್ ಬಾರಿಸಿದ 2 ಬೌಂಡರಿಗಳಲ್ಲಿ ಒಂದು ಬೌಂಡರಿ ರೌಫ್ ಎಸೆತದಲ್ಲಿ ಬಂತು. ಆದರೆ ಆ ಬೌಂಡರಿ ಬಂದಿದ್ದು ಮಾತ್ರ ವಿಚಿತ್ರವಾಗಿತ್ತು.

ಬ್ಯಾಟ್ ಮುರಿದರೂ ಬೌಂಡರಿ ದಾಟಿದ ಚೆಂಡು

ರೌಫ್ ಎಸೆದ ಆ ಎಕ್ಸ್‌ಪ್ರೆಸ್ ವೇಗದ ಎಸೆತವು ಅಯ್ಯರ್ ಅವರ ಬ್ಯಾಟ್‌ಗೆ ಬಡಿಯಿತು. ರೌಫ್ ಎಸೆದ ಎಸೆತದ ವೇಗ ಎಷ್ಟಿತ್ತಂದರೆ, ಚೆಂಡು ಬಡಿದ ಕೂಡಲೇ ಶ್ರೇಯರ್ ಬ್ಯಾಟ್ ಎರಡು ಪೀಸ್ ಆಯಿತು. ಇಲ್ಲಿ ಇನ್ನೊಂದು ಮೋಜಿನ ಸಂಗತಿಯೆಂದರೆ, ಬ್ಯಾಟ್ ಹೊಳಾದ ನಂತರವೂ ಚೆಂಡು ಬೌಂಡರಿ ಗೆರೆ ದಾಟಿತು. ಇದೀಗ ಆ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ