AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾವಣನ ತವರಿನಲ್ಲಿ ಝೇಂಕರಿಸಿದ ರಾಮ್ ಸಿಯಾ ರಾಮ್ ಹಾಡು; ಮೈನವರೇಳಿಸುವ ವಿಡಿಯೋ ನೋಡಿ

India vs Pakistan: ಪಾಕ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಈ ಇಬ್ಬರು ಸರಾಗವಾಗಿ ಬ್ಯಾಟ್ ಬೀಸಿದರು. ಈ ನಡುವೆ ಹಾರ್ದಿಕ್- ಕಿಶನ್ ಬ್ಯಾಟಿಂಗ್ ಜೊತೆಗೆ ಮೈದಾನದಲ್ಲಿ ಝೇಂಕರಿಸಿದ ರಾಮ್ ಸಿಯಾ ರಾಮ್ ಹಾಡು ಭಾರತೀಯರನ್ನು ರೋಮಾಂಚನಗೊಳಿಸಿತು. ಟೀಂ ಇಂಡಿಯಾದಿಂದ ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಸಿಡಿದಾಗಲೂ ಈ ಹಾಡನ್ನು ಪ್ಲೇ ಮಾಡಲಾಯಿತು.

ರಾವಣನ ತವರಿನಲ್ಲಿ ಝೇಂಕರಿಸಿದ ರಾಮ್ ಸಿಯಾ ರಾಮ್ ಹಾಡು; ಮೈನವರೇಳಿಸುವ ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ- ಇಶಾನ್ ಕಿಶನ್
ಪೃಥ್ವಿಶಂಕರ
|

Updated on: Sep 03, 2023 | 9:51 AM

Share

ಶ್ರೀಲಂಕಾ ಪಲ್ಲೆಕೆಲೆಯಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಮಳೆಯಿಂದ ರದ್ದಾಗಿರಬಹುದು. ಆದರೆ ಬದ್ಧವೈರಿಗಳ ಈ ಕ್ರಿಕೆಟ್ ಮೈದಾನ ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಯಿತು. ಒಂದೆಡೆ ಪಾಕ್ ವೇಗಿಗಳ ಮಾರಕ ದಾಳಿಗೆ ಟೀಂ ಇಂಡಿಯಾದ (Team India) ವಿಕೆಟ್​ಗಳು ತರಗೆಲೆಗಳಂತೆ ಉದುರುತ್ತಿದ್ದರೆ, ಇನ್ನೊಂದೆಡೆ ವಿಕೆಟ್​ಗಳ ಪತನದ ನಡುವೆಯೂ ಭಾರತದ ಇನ್ನಿಂಗ್ಸ್ ನಿಭಾಯಿಸಿದ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಈ ನಡುವೆ ರಾವಣನ ನಾಡಿನಲ್ಲಿ ರಾಮನ ಹಾಡು ಕೂಡ ಝೇಂಕರಿಸಿದ ಘಟನೆ ಕೂಡ ನಡೆಯಿತು.

ವಾಸ್ತವವಾಗಿ ಗೆಲುವಿನೊಂದಿಗೆ ಏಷ್ಯಾಕಪ್ ಆರಂಭಿಸಬೇಕೆಂಬ ಟೀಂ ಇಂಡಿಯಾದ ಕನಸು ಮಳೆಯಿಂದಾಗಿ ನುಚ್ಚು ನೂರಾಯಿತು. ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಏಷ್ಯಾಕಪ್ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕಗಳನ್ನು ನೀಡಲಾಗಿದ್ದು, ಪ್ರಸ್ತುತ 3 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ನೇರವಾಗಿ ಸೂಪರ್ 4ಗೆ ಪ್ರವೇಶ ಪಡೆದಿದೆ. ಇತ್ತ ಟೀಂ ಇಂಡಿಯಾ ಕೂಡ ನೇಪಾಳ ವಿರುದ್ಧ ಗೆದ್ದು ಸೂಪರ್ 4 ತಲುಪುವ ನಿರೀಕ್ಷೆಯಲ್ಲಿದೆ.

IND vs PAK: ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್! ವಿಡಿಯೋ ನೋಡಿ

138 ರನ್​ಗಳ ಜೊತೆಯಾಟ

ಇನ್ನು ಉಭಯ ತಂಡಗಳ ನಡುವೆ ಪೂರ್ಣ ಪಂದ್ಯ ನಡೆಯದ್ದಿದ್ದರೂ ಅಭಿಮಾನಿಗಳಿಗೆ ಮಾತ್ರ ಟೀಂ ಇಂಡಿಯಾದ ಬ್ಯಾಟಿಂಗ್ ನೋಡುವ ಭಾಗ್ಯ ಒದಗಿ ಬಂದಿತು. ಆರಂಭದಲ್ಲಿ ಪಾಕ್ ಬೌಲರ್​ಗಳು ಟೀಂ ಇಂಡಿಯಾದ ಮೇಲೆ ಸವಾರಿ ಮಾಡಿದರೆ, ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಭಾರತದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ 138 ರನ್​ಗಳ ಜೊತೆಯಾಟ ಹಂಚಿಕೊಂಡರು.

ಆದರೆ ಇಬ್ಬರಿಗೂ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಬ್ಯಾಟರ್‌ ಇಶಾನ್ ಕಿಶನ್ ಸ್ಫೋಟಕ 82 ರನ್​ಗಳ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರೆ, ಉಪನಾಯಕ ಹಾರ್ದಿಕ್ ಪಾಂಡ್ಯ 87 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಪಾಕ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಈ ಇಬ್ಬರು ಸರಾಗವಾಗಿ ಬ್ಯಾಟ್ ಬೀಸಿದರು. ಈ ನಡುವೆ ಹಾರ್ದಿಕ್- ಕಿಶನ್ ಬ್ಯಾಟಿಂಗ್ ಜೊತೆಗೆ ಮೈದಾನದಲ್ಲಿ ಝೇಂಕರಿಸಿದ ರಾಮ್ ಸಿಯಾ ರಾಮ್ ಹಾಡು ಭಾರತೀಯರನ್ನು ರೋಮಾಂಚನಗೊಳಿಸಿತು.

ಕ್ರೀಡಾಂಗಣದಲ್ಲಿ ‘ರಾಮ್ ಸಿಯಾ ರಾಮ್’ ಹಾಡು

ಭಾರತದ ಇನ್ನಿಂಗ್ಸ್​ನ 37ನೇ ಓವರ್‌ನ ಮೊದಲ ಎಸೆತದಲ್ಲಿ ಇಶಾನ್ ಕಿಶನ್, ಮೊಹಮ್ಮದ್ ನವಾಜ್ ಎಸೆತವನ್ನು ಅದ್ಭುತ ಬೌಂಡರಿ ಬಾರಿಸಿದರು. ನಂತರ ಕ್ರೀಡಾಂಗಣದಲ್ಲಿ ರಾಮ್ ಸಿಯಾ ರಾಮ್ ಹಾಡು ಝೇಂಕರಿಸಲು ಪ್ರಾರಂಭಿಸಿತು. ಆ ಬಳಿಕ ಓವರ್​ನ ನಾಲ್ಕನೇ ಎಸೆತವನ್ನು ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್ ಬಾರಿಸಿದರು. ಆಗಲೂ ಈ ಹಾಡು ಮೈದಾನದ ತುಂಬೆಲ್ಲ ಕೇಳಿಬಂತು. ಅಲ್ಲದೆ ಟೀಂ ಇಂಡಿಯಾದಿಂದ ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಸಿಡಿದಾಗಲೂ ಈ ಹಾಡನ್ನು ಪ್ಲೇ ಮಾಡಲಾಯಿತು. ವಾಸ್ತವವಾಗಿ ಒಂದು ಪಂದ್ಯದಲ್ಲಿ ಬೌಂಡರಿ ಅಥವಾ ಸಿಕ್ಸರ್ ಸಿಡಿದ ಬಳಿಕ ಆಗಾಗ್ಗೆ ಒಂದು ಹಾಡು ಅಥವಾ ಕೆಲವು ಸಂಗೀತವನ್ನು ನುಡಿಸಲಾಗುತ್ತದೆ. ಇದು ಪಲ್ಲೆಕೆಲೆಯಲ್ಲೂ ಸಂಭವಿಸಿತು. ಭಾರತದ ಇನ್ನಿಂಗ್ಸ್ ವೇಳೆ ಡಿಜೆ ಆದಿಪುರುಷ ಚಿತ್ರದ ರಾಮ್ ಸಿಯಾ ರಾಮ್ ಹಾಡನ್ನು ಪ್ಲೇ ಮಾಡಿ, ಭಾರತೀಯರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ