IND vs PAK: ಹಾಟ್‌ಸ್ಟಾರ್​ನಲ್ಲಿ ದಾಖಲೆಯ ವೀಕ್ಷಣೆ ಕಂಡ ಭಾರತ- ಪಾಕ್ ಪಂದ್ಯ! ಮೈದಾನ ಮಾತ್ರ ಖಾಲಿ ಖಾಲಿ

IND vs PAK: ಪಲ್ಲೆಕೆಲೆ ಸುತ್ತಲೂ ಭಾರತ-ಪಾಕಿಸ್ತಾನ ಧ್ವಜಗಳು ಹಾರಾಡುತ್ತಿದ್ದವು. ಆದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಖ್ಯೆ ಮಾತ್ರ ತೀರ ಕಡಿಮೆ ಇತ್ತು. ಇದಕ್ಕೆ ದೂರದರ್ಶನದ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಗಳೇ ಸಾಕ್ಷಿ. ಅಲ್ಲದೆ ಈ ಉಭಯ ತಂಡಗಳ ಕದನದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

IND vs PAK: ಹಾಟ್‌ಸ್ಟಾರ್​ನಲ್ಲಿ ದಾಖಲೆಯ ವೀಕ್ಷಣೆ ಕಂಡ ಭಾರತ- ಪಾಕ್ ಪಂದ್ಯ! ಮೈದಾನ ಮಾತ್ರ ಖಾಲಿ ಖಾಲಿ
ಭಾರತ- ಪಾಕಿಸ್ತಾನ
Follow us
TV9 Web
| Updated By: ಪೃಥ್ವಿಶಂಕರ

Updated on: Sep 03, 2023 | 7:10 AM

ಹೈವೋಲ್ಟೇಜ್ ಪಂದ್ಯ ಎಂದಾಗ ಕ್ರೀಡಾಂಗಣಗಳು ಭರ್ತಿಯಾಗುವುದು ಸರ್ವೆ ಸಾಮಾನ್ಯ. ಆದರೆ ಕ್ಯಾಂಡಿಯಲ್ಲಿ ಅಂತಹ ದೃಶ್ಯ ಕಂಡುಬರಲೆ ಇಲ್ಲ. ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಬರೋಬ್ಬರಿ 4 ವರ್ಷಗಳ ಬಳಿಕ ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗಿದ್ದವು. ಹೀಗಾಗಿ ಈ ಪಂದ್ಯವನ್ನು ವೀಕ್ಷಿಸಲು ಸಾಹಸ್ರಾರು ಪ್ರೇಕ್ಷಕರು ಮೈದಾನಕ್ಕೆ ಬರುವ ನಿರೀಕ್ಷೆ ಇತ್ತು. ಹೀಗಾಗಿ ಕ್ರೀಡಾಂಗಣ ಭರ್ತಿಯಾಗಿ ಲಂಕಾ ಮಂಡಳಿಯ (Sri Lanka Cricket) ಜೇಬು ತುಂಬುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಈ ಹೈವೋಲ್ಟೇಜ್ ಕದನವನ್ನು ವೀಕ್ಷಿಸಲು ಮೈದಾನಕ್ಕೆ ಪ್ರೇಕ್ಷಕರು ಆಗಮಿಸಿದ್ದರಾದರೂ ಆದರೆ ನಿರೀಕ್ಷಿಸಿದಷ್ಟು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕಂಡುಬರಲಿಲ್ಲ. ಆದರೆ ಮಳೆ ಬರುವ ಸೂಚನೆ ಮುಂಚೆಯೇ ಇದ್ದ ಕಾರಣ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರದಿರುವ ಮನಸ್ಸು ಮಾಡಿರಬಹುದು. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮೊಬೈಲ್‌ನಲ್ಲಿ ಹೆಚ್ಚು ವೀಕ್ಷಣೆ ಕಂಡು ದಾಖಲೆ ಬರೆದಿದೆ.

ಪಲ್ಲೆಕೆಲೆ ಸುತ್ತಲೂ ಭಾರತ-ಪಾಕಿಸ್ತಾನ ಧ್ವಜಗಳು ಹಾರಾಡುತ್ತಿದ್ದವು. ಆದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಖ್ಯೆ ಮಾತ್ರ ತೀರ ಕಡಿಮೆ ಇತ್ತು. ಇದಕ್ಕೆ ದೂರದರ್ಶನದ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಗಳೇ ಸಾಕ್ಷಿ. ಅಲ್ಲದೆ ಈ ಉಭಯ ತಂಡಗಳ ಕದನದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

IND vs PAK: ಭಾರತ- ಪಾಕ್ ಪಂದ್ಯಕ್ಕೆ ಮಳೆಕಾಟ; ಟಾಸ್ ವಿಳಂಬ ಸಾಧ್ಯತೆ

ಎಲ್ಲಾ ಟಿಕೆಟ್‌ಗಳು ಮಾರಾಟವಾಗಿಲ್ಲ

ಭಾರತ-ಪಾಕ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗದ ಕಾರಣ ಸಂಘಟಕರು ನಿರಾಶೆಗೊಂಡಿದ್ದಾರೆ. ಅಲ್ಲದೆ ಭಾರತ-ಪಾಕ್ ಪಂದ್ಯದಲ್ಲಿ ಮೈದಾನ ಭರ್ತಿಯಾಗದಿರುವುದು ಅಚ್ಚರಿ ಮೂಡಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಧಿಕಾರಿಯ ಪ್ರಕಾರ, ಟಿಕೆಟ್ ದರವನ್ನು ತುಲನಾತ್ಮಕವಾಗಿ ಹೆಚ್ಚು ಇರಿಸಲಾಗಿದೆ. ಆದರೆ ಅನೇಕರು ಖರೀದಿಸಬಹುದಾದ ಟಿಕೆಟ್‌ಗಳೂ ಇದ್ದವು. ವಾರಾಂತ್ಯದಲ್ಲಿ ಈ ಪಂದ್ಯ ವೀಕ್ಷಿಸಲು ಹಲವರು ಬರಬಹುದಿತ್ತು. ಬಹುಶಃ ಈ ಪಂದ್ಯದಲ್ಲಿ ಮಳೆ ಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಪ್ರೇಕ್ಷಕರು ಟಿಕೆಟ್ ಖರೀದಿಸಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

1.3 ಕೋಟಿಗೂ ಹೆಚ್ಚು ವೀಕ್ಷಕರು

ಮೈದಾನಕ್ಕೆ ಹೋಗಿ ಪಂದ್ಯ ವೀಕ್ಷಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದ್ದರಿಂದ ಹೆಚ್ಚಿನವರು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೊರೆಹೋಗುತ್ತಾರೆ. ಈ ಬಾರಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಏಷ್ಯಾಕಪ್ ಪಂದ್ಯಗಳನ್ನು ಮೊಬೈಲ್‌ನಲ್ಲಿ ಉಚಿತವಾಗಿ ತೋರಿಸುತ್ತಿದೆ. ಹಾಗಾಗಿ ಪ್ರೇಕ್ಷಕರು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ಕ್ಯಾಂಡಿಯಲ್ಲಿ ನಡೆದ ಭಾರತ-ಪಾಕ್ ಪಂದ್ಯವನ್ನು ಹಾಟ್‌ಸ್ಟಾರ್‌ನಲ್ಲಿ 1.3 ಕೋಟಿಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಉಚಿತವಾಗಿ ಸ್ಟ್ರೀಮ್ ಮಾಡಲು ನಿರ್ಧರಿಸಿತ್ತು

ಏಷ್ಯಾಕಪ್ ನಂತರ, ಏಕದಿನ ವಿಶ್ವಕಪ್ ಕೂಡ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಇತ್ತೀಚೆಗೆ, Hotstar ನಲ್ಲಿ ಬಳಕೆದಾರರ ಸಂಖ್ಯೆಯು ತೀವ್ರವಾಗಿ ಕುಸಿದಿದೆ. ಚಂದಾದಾರರ ಸಂಖ್ಯೆಯಲ್ಲಿನ ಕುಸಿತದ ಹಿಂದಿನ ಎರಡು ಪ್ರಮುಖ ಕಾರಣಗಳೆಂದರೆ ಜಿಯೋಸಿನಿಮಾ ಫುಟ್‌ಬಾಲ್ ವಿಶ್ವಕಪ್ ಮತ್ತು ಐಪಿಎಲ್‌ನ ಲೈವ್ ಸ್ಟ್ರೀಮಿಂಗ್ ಹಕ್ಕನ್ನು ಹೊಂದಿತ್ತು. ಆರಂಭದಲ್ಲಿ ಹಾಟ್‌ಸ್ಟಾರ್, ಭಾರತೀಯರು ಚಂದಾದಾರರಾಗುವ ಮೂಲಕ ಪಂದ್ಯ ವೀಕ್ಷಿಸುತ್ತಾರೆ ಎಂದು ಭಾವಿಸಿತ್ತು. ಆದರೆ ಪ್ರೇಕ್ಷಕರು ಹಣ ನೀಡಿ ಪಂದ್ಯ ವೀಕ್ಷಿಸುವ ಮನಸ್ಸು ಮಾಡಲಿಲ್ಲ. ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗದೆ ಅನೇಕ ಜನರು ತಮ್ಮ ಚಂದಾದಾರಿಕೆಯನ್ನು ರದ್ದುಗೊಳಿಸಿದ್ದರು. ಹೀಗಾಗಿ ಹಾಟ್‌ಸ್ಟಾರ್ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ಸ್ಟ್ರೀಮ್ ಮಾಡಲು ನಿರ್ಧರಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ