ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ್ ತಂಡದ ಮುಂದಿನ ಎದುರಾಳಿ ಝಿಂಬಾಬ್ವೆ

|

Updated on: Oct 14, 2024 | 10:09 AM

Pakistan vs Zimbabwe 2024: ಬಾಂಗ್ಲಾದೇಶ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ್ ತಂಡವು 2-0 ಅಂತರದಿಂದ ಸೋಲನುಭವಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಈ ಸೋಲುಗಳ ನಡುವೆಯೇ ಇದೀಗ ಪಾಕ್ ತಂಡ ಝಿಂಬಾಬ್ವೆ ವಿರುದ್ಧ ಸರಣಿ ಆಡಲು ನಿರ್ಧರಿಸಿದೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ್ ತಂಡದ ಮುಂದಿನ ಎದುರಾಳಿ ಝಿಂಬಾಬ್ವೆ
PAK vs ZIM
Follow us on

ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ್ ತಂಡವು ನವೆಂಬರ್​ನಲ್ಲಿ ಝಿಂಬಾಬ್ವೆ ವಿರುದ್ಧ 6 ಪಂದ್ಯಗಳ ಸರಣಿ ಆಡಲಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಪಾಕ್ ಪಡೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಇದಾದ ಬಳಿಕ ಝಿಂಬಾಬ್ವೆ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗಾಗಿ ತೆರಳಲಿದೆ.

ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಈಗಾಗಲೇ ಈ ಸರಣಿಗೆ ಅನುಮೋದನೆ ನೀಡಿದ್ದು, ಅದರಂತೆ ನವೆಂಬರ್ 24 ರಿಂದ ಪಾಕ್-ಝಿಂಬಾಬ್ವೆ ನಡುವಣ ಏಕದಿನ ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡಲಿದೆ. ಏಕದಿನ ಸರಣಿಯ ಮುಕ್ತಾಯದ ಬಳಿಕ ಡಿಸೆಂಬರ್ 1 ರಿಂದ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ.

ಉಭಯ ತಂಡಗಳ ಮುಖಾಮುಖಿ:

ಪಾಕಿಸ್ತಾನ್ ಮತ್ತು ಝಿಂಬಾಬ್ವೆ ಏಕದಿನ ಕ್ರಿಕೆಟ್​ನಲ್ಲಿ ಈವರೆಗೆ 62 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಪಾಕ್ ತಂಡವು 54 ಬಾರಿ ಜಯ ಸಾಧಿಸಿದರೆ, ಝಿಂಬಾಬ್ವೆ 5 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಟೈ ಆದರೆ, ಉಳಿದೆರಡು ಮ್ಯಾಚ್​ಗಳು ಕಾರಣಾಂತರಗಳಿಂದ ರದ್ದಾಗಿದೆ.
ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಉಭಯ ತಂಡಗಳು 18 ಬಾರಿ ಎದುರುಬದುರಾಗಿದೆ. ಈ ವೇಳೆ ಪಾಕಿಸ್ತಾನ್ ತಂಡವು 16 ಸಲ ಗೆಲುವಿನ ನಗೆ ಬೀರಿದೆ. ಇನ್ನು ಝಿಂಬಾಬ್ವೆ ಗೆದ್ದಿರುವುದು ಕೇವಲ 2 ಬಾರಿ ಮಾತ್ರ.

ಅದರಲ್ಲೂ 2022ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಝಿಂಬಾಬ್ವೆ 1 ರನ್​ಗಳ ರೋಚಕ ಜಯ ಸಾಧಿಸಿ ಇತಿಹಾಸ ಬರೆದಿತ್ತು. ಈ ಸೋಲಿನ ಬಳಿಕ ಪಾಕಿಸ್ತಾನ್ ತಂಡವು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ಝಿಂಬಾಬ್ವೆ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಈ ಬಾರಿ ಸಲ ಉಭಯ ತಂಡಗಳಿಂದ ರೋಚಕ ಪೈಪೋಟಿ ನಿರೀಕ್ಷಿಸಬಹುದು.

ಪಾಕಿಸ್ತಾನ್ – ಝಿಂಬಾಬ್ವೆ ಸರಣಿ ವೇಳಾಪಟ್ಟಿ:

ಸಂಖ್ಯೆ ದಿನಾಂಕ ತಂಡಗಳು ಪಂದ್ಯ ಮೈದಾನ ಆತಿಥ್ಯ
1 24-11-2024 ಝಿಂಬಾಬ್ವೆ vs ಪಾಕಿಸ್ತಾನ್ 1ನೇ ಏಕದಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ ಝಿಂಬಾಬ್ವೆ
2 26-11-2024 ಝಿಂಬಾಬ್ವೆ vs ಪಾಕಿಸ್ತಾನ್ 2ನೇ ಏಕದಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ ಝಿಂಬಾಬ್ವೆ
3 28-11-2024 ಝಿಂಬಾಬ್ವೆ vs ಪಾಕಿಸ್ತಾನ್ 3ನೇ ಏಕದಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ ಝಿಂಬಾಬ್ವೆ
4 01-12-2024 ಝಿಂಬಾಬ್ವೆ vs ಪಾಕಿಸ್ತಾನ್ 1ನೇ ಟಿ20 ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ ಝಿಂಬಾಬ್ವೆ
5 03-12-2024 ಝಿಂಬಾಬ್ವೆ vs ಪಾಕಿಸ್ತಾನ್ 2ನೇ ಟಿ20 ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ ಝಿಂಬಾಬ್ವೆ
6 05-12-2024 ಝಿಂಬಾಬ್ವೆ vs ಪಾಕಿಸ್ತಾನ್ 3ನೇ ಟಿ20 ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ ಝಿಂಬಾಬ್ವೆ