AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH ತಂಡ ಗೆದ್ದರೆ ಎರಡು ತಂಡಗಳು ಪ್ಲೇಆಫ್​ಗೆ ಎಂಟ್ರಿ..!

IPL 2026 CSK vs SRH: ಇಂಡಿಯನ್ ಪ್ರೀಮಿಯರ್ ಲೀಗ್​ನ 63ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ SRH ಗೆದ್ದರೆ ಪ್ಲೇಆಫ್​ಗೇರುವುದು ಖಚಿತ. ಹಾಗೆಯೇ ಮತ್ತೊಂದು ತಂಡ ಕೂಡ ಪ್ಲೇಆಫ್​ಗೆ ಪ್ರವೇಶಿಸಲಿದೆ.

ಝಾಹಿರ್ ಯೂಸುಫ್
|

Updated on:May 18, 2026 | 12:54 PM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 18 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಇನ್ನುಳಿದ ಮೂರು ಸ್ಥಾನಗಳಿಗಾಗಿ ಸನ್​ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ನಡುವೆ ನೇರ ಹಣಾಹಣಿ ಇದೆ. (PC: IPL)

1 / 5
ಆದರೆ ಇಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯವು ಇಡೀ ಟೂರ್ನಿಯ ಚಿತ್ರಣವನ್ನೇ ಬದಲಿಸಲಿದೆ. ಏಕೆಂದರೆ ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡ ಗೆದ್ದರೆ ಅತ್ಯುತ್ತಮ ನೆಟ್ ರನ್ ರೇಟ್​ನೊಂದಿಗೆ ಪ್ಲೇಆಫ್​ಗೇರುವುದು ಕನ್ಫರ್ಮ್ ಆಗಲಿದೆ. (PC: IPL)

2 / 5
ಸನ್‌ರೈಸರ್ಸ್ ಹೈದರಾಬಾದ್ ಎಂಟ್ರಿ: CSK ವಿರುದ್ಧ SRH ಗೆದ್ದರೆ ಅದರ ಒಟ್ಟು ಅಂಕಗಳು 16ಕ್ಕೆ ಏರುತ್ತವೆ. ಪ್ರಸ್ತುತ ಸನ್​ರೈಸರ್ಸ್​ ಹೈದರಾಬಾದ್​ ತಂಡವು +0.331ರಷ್ಟು ಅತ್ಯುತ್ತಮ ನೆಟ್ ರನ್ ರೇಟ್ (NRR) ಹೊಂದಿದೆ. ಹೀಗಾಗಿ 16 ಅಂಕ ತಲುಪುತ್ತಿದ್ದಂತೆ, SRH ತಂಡಕ್ಕೆ ಪ್ಲೇಆಫ್ ಟಿಕೆಟ್ ಖಚಿತಪಡಿಸುತ್ತದೆ. (PC: IPL)

3 / 5
 ಗುಜರಾತ್ ಟೈಟಾನ್ಸ್ ನಿರಾಳ: ಗುಜರಾತ್ ಟೈಟಾನ್ಸ್​ ಈಗಾಗಲೇ 16 ಅಂಕಗಳನ್ನು ಗಳಿಸಿದ್ದರೂ ಇನ್ನೂ ಕೂಡ ಅಧಿಕೃತವಾಗಿ ಕ್ವಾಲಿಫೈ ಆಗಿಲ್ಲ. ಆದರೆ ಸಿಎಸ್​ಕೆ ವಿರುದ್ಧ ಎಸ್​ಆರ್​ಹೆಚ್ ಗೆದ್ದರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಗರಿಷ್ಠ ಅಂಕಗಳ ಮಿತಿ 14 ರಲ್ಲೇ ಉಳಿಯಲಿದೆ. ಇದರಿಂದ ಆ ನಾಲ್ಕು ತಂಡಗಳ ಟೈ ಸಮೀಕರಣ ಧೂಳೀಪಟವಾಗಿ, ಗುಜರಾತ್ ಟೈಟಾನ್ಸ್ 16 ಅಂಕಗಳೊಂದಿಗೆ ಯಾವುದೇ ಆತಂಕವಿಲ್ಲದೆ ನೇರವಾಗಿ ಪ್ಲೇಆಫ್‌ಗೆ ಲಗ್ಗೆ ಇಡಲಿದೆ. (PC: IPL)

4 / 5
ರಾಜಸ್ಥಾನ್ ರಾಯಲ್ಸ್: ಪ್ರಸ್ತುತ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ 16 ಅಂಕಗಳನ್ನು ಪಡೆಯಲಿದೆ. ಈ ಮೂಲಕ ನಾಲ್ಕನೇ ತಂಡವಾಗಿ ಪ್ಲೇಆಫ್​ಗೇರಲು ಆರ್​ಆರ್ ಪಡೆಗೆ ಅವಕಾಶ ದೊರೆಯಲಿದೆ. ಇತ್ತ ಸಿಎಸ್​ಕೆ ವಿರುದ್ಧ ಎಸ್​ಆರ್​ಹೆಚ್ ಗೆದ್ದ ಬಳಿಕ, ಆರ್​ಆರ್ ತಂಡ ಒಂದು ಮ್ಯಾಚ್​ನಲ್ಲಿ ಸೋತರೆ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ 15 ಅಂಕಗಳೊಂದಿಗೆ ಪ್ಲೇಆಫ್​ಗೇರಲು ಅವಕಾಶ ಸಿಗಲಿದೆ. ಹೀಗಾಗಿ ಮುಂಬರುವ ಪಂದ್ಯಗಳ ಫಲಿತಾಂಶಗಳು ಆರ್​ಆರ್​, ಪಂಜಾಬ್ ಕಿಂಗ್ಸ್​ ಹಾಗೂ ಕೆಕೆಆರ್​ಗೆ ನಿರ್ಣಾಯಕ.  (PC: IPL)

5 / 5

Published On - 12:53 pm, Mon, 18 May 26

ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು

ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ

ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ

ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ

ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು

ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ

ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?

‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್