AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಒಂದೇ ಒಂದು ಕ್ಯಾಚ್ ಹಿಡಿದಿಲ್ಲ; ವೈಭವ್ ಫೀಲ್ಡಿಂಗ್ ಬಗ್ಗೆ ಕೈಫ್ ಕಳವಳ

Vaibhav Suryavanshi fielding: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್‌ನ ಬ್ಯಾಟಿಂಗ್ ಬೆನ್ನೆಲುಬಾಗಿರುವ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ಫೀಲ್ಡಿಂಗ್ ಕಳಪೆ ಮಟ್ಟದ್ದಾಗಿದೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ವೈಭವ್ ಒಂದೂ ಕ್ಯಾಚ್ ಹಿಡಿಯದ ಬಗ್ಗೆ ಪ್ರಶ್ನಿಸಿದ್ದಾರೆ. ಇಡೀ ಐಪಿಎಲ್‌ನಲ್ಲಿ ಕಳಪೆ ಫೀಲ್ಡಿಂಗ್‌ನಿಂದ ಹಲವು ಪಂದ್ಯಗಳ ಫಲಿತಾಂಶ ಬದಲಾಗಿದೆ ಎಂದು ಕೈಫ್ ಕಳವಳ ವ್ಯಕ್ತಪಡಿಸಿದ್ದಾರೆ.

IPL 2026: ಒಂದೇ ಒಂದು ಕ್ಯಾಚ್ ಹಿಡಿದಿಲ್ಲ; ವೈಭವ್ ಫೀಲ್ಡಿಂಗ್ ಬಗ್ಗೆ ಕೈಫ್ ಕಳವಳ
Vaibhav Sooryavanshi
ಪೃಥ್ವಿಶಂಕರ
|

Updated on: May 18, 2026 | 9:59 PM

Share

ಐಪಿಎಲ್ 2026 (IPL 2026) ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ರಾಜಸ್ಥಾನ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ವೈಭವ್ ಅವರ ಫೀಲ್ಡಿಂಗ್‌ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ. ವಾಸ್ತವವಾಗಿ ಸೀಸನ್ ಆರಂಭದಲ್ಲಿ ವೈಭವ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗುತ್ತಿತ್ತು. ಆದರೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡಿದ್ದ ವೈಭವ್ ಅವರ ಕಳಪೆ ಫೀಲ್ಡಿಂಗ್‌ ಬಗ್ಗೆ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಫೀಲ್ಡಿಂಗ್ ಬಗ್ಗೆ ನಿರಾಶೆ ವ್ಯಕ್ತಪಡಿಸಿ ಮೊಹಮ್ಮದ್ ಕೈಫ್ ಮಾಜಿ ಪೋಸ್ಟ್ ಮಾಡಿದ್ದು, ‘ಐಪಿಎಲ್ ಉದ್ದಕ್ಕೂ ವೈಭವ್ ಒಂದೇ ಒಂದು ಕ್ಯಾಚ್ ಹಿಡಿದಿಲ್ಲ ಎಂದು ಅವರು ತಮ್ಮ ಪೋಸ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಒಂದೇ ಒಂದು ಕ್ಯಾಚ್ ತೆಗೆದುಕೊಂಡಿಲ್ಲ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ವೈಭವ್ ಅವರನ್ನು ಕ್ಯಾಚಿಂಗ್ ಸ್ಥಾನದಲ್ಲಿ ನಿಯೋಜಿಸಲಾಗಿಲ್ಲ ಎಂದಿದ್ದಾರೆ.

ಕೈಫ್ ಪೋಸ್ಟ್​ನಲ್ಲಿ ಏನಿದೆ?

“ಪ್ರಸ್ತುತ ಐಪಿಎಲ್‌ನಲ್ಲಿ ಫೀಲ್ಡಿಂಗ್ ಮಟ್ಟವನ್ನು ನೋಡುವುದು ನೋವಿನ ಸಂಗತಿ” ಎಂದಿರುವ ಕೈಫ್, ಭಾನುವಾರದ ಪಂದ್ಯದಲ್ಲಿ ಯಶ್‌ರಾಜ್, ಕೆಎಲ್ ರಾಹುಲ್ ಸೊನ್ನೆಗ ನೀಡಿದ ಕ್ಯಾಚ್ ಅನ್ನು ಕೈಬಿಟ್ಟರು. ಇತ್ತ ವೈಭವ್ ಸೂರ್ಯವಂಶಿ ಕೂಡ ಕಳಪೆ ಫೀಲ್ಡಿಂಗ್ ಮಾಡಿದರು. ವೈಭವ್ ಈ ಆವೃತ್ತಿಯಲ್ಲಿ ಒಂದೇ ಒಂದು ಕ್ಯಾಚ್ ತೆಗೆದುಕೊಂಡಿಲ್ಲ. ಅವರು ಭಾರತದ ಪರ ಆಡಲು ಬಯಸಿದರೆ, ಅವರು ಫೀಲ್ಡಿಂಗ್‌ನಲ್ಲಿ ಹೆಚ್ಚು ಚುರುಕಾಗಿರಬೇಕು. ಯುವಕರಿಗೆ ಫೀಲ್ಡಿಂಗ್ ಕೌಶಲ್ಯಗಳನ್ನು ಕಲಿಸುವುದು ತಂಡದ ತರಬೇತುದಾರರ ಕರ್ತವ್ಯ. ಯುವಕರು ಫೀಲ್ಡಿಂಗ್ ಅನ್ನು ಆನಂದಿಸಬೇಕು ಎಂದಿದ್ದಾರೆ.

153 ಕ್ಯಾಚ್‌ ಡ್ರಾಪ್

ಮೊಹಮ್ಮದ್ ಕೈಫ್ ಕಳವಳಕ್ಕೆ ಕಾರಣವೂ ಇದ್ದು, ಅಂಕಿಅಂಶಗಳ ಪ್ರಕಾರ ಐಪಿಎಲ್ 2026 ರಲ್ಲಿ ಇದುವರೆಗೆ 153 ಕ್ಯಾಚ್‌ಗಳನ್ನು ಕೈಬಿಡಲಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿವೆ. ಕೆಲವು ತಂಡಗಳು ಪ್ರಮುಖ ಆಟಗಾರರ ಕ್ಯಾಚ್ ಕೈಚೆಲ್ಲಿದ ಪರಿಣಾಮವಾಗಿ ಪಂದ್ಯವನ್ನು ಸೋತಿವೆ. ಹೀಗಾಗಿ ಈ ಬಗ್ಗೆ ಅನೇಕ ಮಾಜಿ ಆಟಗಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!