AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆ ಕಡಿಮೆಯಾದರೆ ಮೂಳೆ-ಕೀಲುಗಳ ಆರೋಗ್ಯಕ್ಕೆ ಅಪಾಯ! ಡಾ. ಯೋಗೀಶ್ ಕಾಮತ್ ಸಲಹೆ

ನಿದ್ರೆ ಕಡಿಮೆಯಾಗುವುದನ್ನು ಕೇವಲ ಆಯಾಸದ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ನಿದ್ರೆಯ ಗುಣಮಟ್ಟ, ಸರಿಯಾದ ದೇಹದ ಭಂಗಿ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಇವೆಲ್ಲವೂ ಮೂಳೆ, ಕೀಲು ಮತ್ತು ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯ. ನಿರಂತರ ನೋವು ಅಥವಾ ಚಲನೆಗೆ ತೊಂದರೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ನಿದ್ರೆ ಕಡಿಮೆಯಾದರೆ ಮೂಳೆ-ಕೀಲುಗಳ ಆರೋಗ್ಯಕ್ಕೆ ಅಪಾಯ! ಡಾ. ಯೋಗೀಶ್ ಕಾಮತ್ ಸಲಹೆ
Sleeping Less Can Trigger Back and Joint Pain
ಪ್ರೀತಿ ಭಟ್​, ಗುಣವಂತೆ
|

Updated on: Aug 09, 2026 | 3:53 PM

Share

ಮುಖ್ಯಾಂಶಗಳು

  • ನಿದ್ರಾಹೀನತೆ ಕೇವಲ ಆಯಾಸವಲ್ಲ; ಮೂಳೆ ಮತ್ತು ಸ್ನಾಯುಗಳ ಮೇಲೂ ಬೀರುತ್ತೆ ಗಂಭೀರ ಪರಿಣಾಮ!
  • ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವವರಿಗೆ ಅಪಾಯ
  • ಸರಿಯಾದ ಭಂಗಿಯಲ್ಲಿ ಮಲಗದಿದ್ದರೆ ಏನಾಗಬಹುದು?

ನಿದ್ರೆಯ ಕೊರತೆಯು ಕೇವಲ ಆಯಾಸ ಮತ್ತು ಅಸ್ವಸ್ಥತೆಯ ಭಾವನೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದು ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುವ ಮೂಲಕ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ಮೂಳೆಗಳು, ಕೀಲುಗಳು ಮತ್ತು ಸ್ನಾಯುಗಳ ಆರೋಗ್ಯದ ಮೇಲೆ ಇದರ ಪರಿಣಾಮವು ಗಮನಾರ್ಹವಾಗಿದ್ದರೂ, ಹೆಚ್ಚಿನವರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಯುವಜನರಲ್ಲಿ ನಿದ್ರೆಯ ಅವಧಿ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಉದ್ಯೋಗ ಅಥವಾ ವೈಯಕ್ತಿಕ ಜೀವನದ ಒತ್ತಡಗಳಿಂದಾಗಿ ಅರ್ಧಕ್ಕಿಂತ ಹೆಚ್ಚು ಯುವ ಉದ್ಯೋಗಿಗಳು ಸಮರ್ಪಕ ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾದರೆ ನಿದ್ರೆಯ ಕೊರತೆ ಮತ್ತು ಮೂಳೆ-ಕೀಲುಗಳ ಆರೋಗ್ಯದ ನಡುವಿನ ಸಂಬಂಧ ಯಾಕೆ ಈ ರೀತಿ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ಸ್, ಹಿಪ್ ಮತ್ತು ಮೊಣಕಾಲು ಕೀಲು ಬದಲಾವಣೆ ತಜ್ಞರು ಹಾಗೂ ಕ್ರೀಡಾ ಗಾಯಗಳ ತಜ್ಞರಾಗಿರುವ ಡಾ. ಯೋಗೀಶ್ ಕಾಮತ್ ಅವರು ನಿದ್ರೆಯ ಕೊರತೆ ಮತ್ತು ಮೂಳೆ-ಕೀಲುಗಳ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು ನಿದ್ರಾಹೀನತೆಗೆ ಕಾರಣವಾಗುವ ಅಂಶಗಳು ತಪ್ಪಾದ ಭಂಗಿ, ಅಸಮರ್ಪಕ ದಿನಚರಿ ಮತ್ತು ಜೀವನಶೈಲಿಯಾಗಿದೆ. ಅಷ್ಟೇಅಲ್ಲ, ಮಾನಸಿಕ ಒತ್ತಡ ಮತ್ತು ಆತಂಕದಿಂದ ಸ್ನಾಯುಗಳ ಬಿಗಿತ ಉಂಟಾಗುತ್ತದೆ. ಜೊತೆಗೆ ನಿದ್ರೆಯ ಅವಧಿ ಹಾಗೂ ಕ್ರಮದಲ್ಲಿನ ವ್ಯತ್ಯಾಸಗಳು ಮೂಳೆ, ಸ್ನಾಯು ಮತ್ತು ಕೀಲುಗಳ ಮೇಲೆ ಬೀರುವ ಪರಿಣಾಮ ಬೀರುತ್ತದೆ. ಇನ್ನು, ಮಲಗುವ ವಾತಾವರಣ, ಹಾಸಿಗೆ ಗುಣಮಟ್ಟ ಕೂಡ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವವರಿಗೆ ಅಪಾಯ

ವಿದ್ಯಾರ್ಥಿಗಳು ಮತ್ತು ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತು ಕೆಲಸ ಮಾಡುವ ವೃತ್ತಿಪರರು ಸಾಮಾನ್ಯವಾಗಿ ಬಾಗಿದ ದೇಹದ ಭಂಗಿಯನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗುವುದರ ಜೊತೆಗೆ ತೊಡೆಯ ಹಿಂಭಾಗದ (ಹ್ಯಾಮ್‌ಸ್ಟ್ರಿಂಗ್) ಮತ್ತು ಕಾಲಿನ ಹಿಂಭಾಗದ (ಕ್ಯಾಫ್) ಸ್ನಾಯುಗಳು ಬಿಗಿಯಾಗುತ್ತವೆ. ಇದರ ಪರಿಣಾಮವಾಗಿ ಮೊಣಕಾಲಿನ ನೋವು ಕಾಣಿಸಿಕೊಳ್ಳಬಹುದು ಮತ್ತು ಮುಂದಿನ ದಿನಗಳಲ್ಲಿ ಮೊಣಕಾಲು ಹಾಗೂ ಬೆನ್ನಿನ ಕೀಲುಗಳಲ್ಲಿ ಸವೆತ (ಆರ್ಥ್ರೈಟಿಸ್) ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಕುತ್ತಿಗೆ ಮತ್ತು ತೊಡೆಯ ಸ್ನಾಯುಗಳ ಬಿಗಿತದಿಂದ ಆರಾಮವಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ. ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಮಲಗುವುದರಿಂದ ಸ್ನಾಯುಗಳಲ್ಲಿ ಆಯಾಸ ಮತ್ತು ನೋವು ಹೆಚ್ಚಾಗಿ ನಿದ್ರೆಗೆ ಅಡ್ಡಿಯಾಗುತ್ತದೆ.

ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಅನೇಕರು ಸಾಮಾಜಿಕ ಮುಜುಗರ ಅಥವಾ ತಿರಸ್ಕಾರದ ಭಯದಿಂದ ಮರೆಮಾಚುತ್ತಾರೆ. ಹೀಗಾಗಿ ಇಂತಹ ಸಮಸ್ಯೆಗಳ ನೈಜ ಪ್ರಮಾಣ ವರದಿಯಾಗಿರುವುದಕ್ಕಿಂತ ಹೆಚ್ಚಿರಬಹುದು. ಆದ್ದರಿಂದ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಅಗತ್ಯ ಬೆಂಬಲ ಒದಗಿಸುವುದು ಅಗತ್ಯವಾಗಿದೆ. ದೇಹದ ಯಾವುದೇ ನೋವು ಅಥವಾ ಆರೋಗ್ಯ ಸಮಸ್ಯೆಯೊಂದಿಗೆ ವೈದ್ಯರನ್ನು ಸಂಪರ್ಕಿಸುವಾಗ ಅದರ ಹಿಂದೆ ಮಾನಸಿಕ ಒತ್ತಡವೂ ಕಾರಣವಾಗಿದೆಯೇ ಎಂಬುದನ್ನು ವೈದ್ಯರು ಪರಿಶೀಲಿಸುವುದು ಮುಖ್ಯ.

ನಿದ್ರೆಯ ಕೊರತೆಯಿಂದ ನೋವು ಇನ್ನಷ್ಟು ಹೆಚ್ಚಾಗಬಹುದೇ?

ಸಾಕಷ್ಟು ನಿದ್ರೆ ಇಲ್ಲದಿದ್ದಾಗ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಮತ್ತು ಚೇತರಿಕೆಯ ಸಮಯ ಕಡಿಮೆಯಾಗುತ್ತದೆ. ಗಾಢ ನಿದ್ರೆಯ ಸಮಯದಲ್ಲಿ ಸ್ನಾಯುಗಳು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಕಡಿಮೆ ಅವಧಿಯ ನಿದ್ರೆ ಅಥವಾ ಅಸಮರ್ಪಕ ನಿದ್ರೆಯ ಕ್ರಮ ಮುಂದುವರಿದರೆ ಸ್ನಾಯುಗಳಲ್ಲಿ ಆಯಾಸ, ಬಿಗಿತ ಮತ್ತು ನೋವು ಹೆಚ್ಚಾಗಬಹುದು. ಈಗಾಗಲೇ ಕುತ್ತಿಗೆ, ಬೆನ್ನು ಅಥವಾ ಕೀಲು ನೋವಿನಿಂದ ಬಳಲುತ್ತಿರುವವರಲ್ಲಿ ಇದು ಸಮಸ್ಯೆಯನ್ನು ಮತ್ತಷ್ಟು ಕಿರಿಕಿರಿ ಉಂಟುಮಾಡುವಂತೆ ಮಾಡಬಹುದು.

ತಪ್ಪಾದ ಭಂಗಿಯಲ್ಲಿ ಮಲಗುವುದರಿಂದ ಏನಾಗಬಹುದು?

ಅತಿಯಾದ ಮೃದುವಾದ ಸೋಫಾ, ರಿಕ್ಲೈನರ್ ಅಥವಾ ಫೋಮ್ ಮೆತ್ತೆಗಳು ಬೆನ್ನುಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಸೂಕ್ತವಲ್ಲ. ಇವು ಬೆನ್ನುಮೂಳೆಗೆ ಅಗತ್ಯವಾದ ಬೆಂಬಲವನ್ನು ನೀಡುವುದಿಲ್ಲ. ದಿನವಿಡೀ ಕುಳಿತು ಕೆಲಸ ಮಾಡುವವರು, ನಿರಂತರ ಪ್ರಯಾಣ ಮಾಡುವವರು ಮತ್ತು ಹೋಟೆಲ್‌ಗಳಲ್ಲಿ ಹೆಚ್ಚಾಗಿ ತಂಗುವ ಉದ್ಯೋಗಿಗಳಲ್ಲಿ ಇಂತಹ ಮೃದುವಾದ ಹಾಸಿಗೆಗಳು ಬೆನ್ನುನೋವು ಹಾಗೂ ಕ್ಷೀಣತೆಯ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಕೀಲುಗಳ ಸವೆತ ಮತ್ತು ಆರ್ಥ್ರೈಟಿಸ್‌ನ್ನು ಆರಂಭದಲ್ಲೇ ತಡೆಗಟ್ಟುವುದು ಅತ್ಯುತ್ತಮ ಮಾರ್ಗವಾಗಿದೆ. ಸರಿಯಾದ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು, ನಿಗದಿತ ಸಮಯದಲ್ಲಿ ಮಲಗುವುದು, ಸಮತೋಲಿತ ಆಹಾರ ಸೇವಿಸುವುದು ಹಾಗೂ ಉತ್ತಮ ನಿದ್ರೆಯ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಲು ಅತ್ಯಗತ್ಯ. ನಿದ್ರಾಹೀನತೆ ಮತ್ತು ದೇಹ ಅಥವಾ ಕೀಲು ನೋವು ನಿರಂತರವಾಗಿ ಕಂಡುಬಂದರೆ ವಿಳಂಬ ಮಾಡದೆ ಮೂಳೆ ಮತ್ತು ಕೀಲು ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ