Shoaib Akhtar: ಚಾನೆಲ್​ ಚರ್ಚೆಯಿಂದ ಎಸ್ಕೇಪ್ ಆಗಿದ್ದ ಅಖ್ತರ್ ವಿರುದ್ದ 10 ಕೋಟಿ ರೂ. ಮಾನನಷ್ಟ

| Updated By: ಝಾಹಿರ್ ಯೂಸುಫ್

Updated on: Nov 08, 2021 | 2:57 PM

ಟಿ20 ವಿಶ್ವಕಪ್​ ಸಂದರ್ಭದಲ್ಲಿ ಕ್ರೀಡಾ ಕಾರ್ಯಕ್ರಮದ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಚರ್ಚೆ ವೇಳೆ ನಿರೂಪಕ ಡಾ ನೌಮಾನ್ ನಿಯಾಜ್ ಹಾಗೂ ಶೋಯೆಬ್ ಅಖ್ತರ್ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿತ್ತು.

Shoaib Akhtar: ಚಾನೆಲ್​ ಚರ್ಚೆಯಿಂದ ಎಸ್ಕೇಪ್ ಆಗಿದ್ದ ಅಖ್ತರ್ ವಿರುದ್ದ 10 ಕೋಟಿ ರೂ. ಮಾನನಷ್ಟ
Shoaib Akhtar
Follow us on

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ವಿವಾದಕ್ಕೆ ಸಿಲುಕಿದ್ದಾರೆ. ಪಾಕಿಸ್ತಾನ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಅಖ್ತರ್ ವಿರುದ್ದ 100 ಮಿಲಿಯನ್ ರೂ. (ಸುಮಾರು 10 ಕೋಟಿ) ಮಾನನಷ್ಟ ನೋಟಿಸ್ ಕಳುಹಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಅಖ್ತರ್ ಪಿಟಿವಿ ಸ್ಪೋರ್ಟ್ಸ್‌ಗೆ ತಮ್ಮ ನೇರ ರಾಜೀನಾಮೆ ನೀಡಿದ್ದರು. ಪಿಟಿವಿ ಸ್ಪೋರ್ಟ್ಸ್​ ಚಾನೆಲ್​ನ ಚರ್ಚೆಯಲ್ಲಿ ಭಾಗವಹಿಸಲು ಅಖ್ತರ್ ಈ ಮೊದಲು ಒಪ್ಪಂದ ಮಾಡಿಕೊಂಡಿದ್ದರು. ಇದೀಗ ರಾಜೀನಾಮೆ ನೀಡಿರುವುದು ಒಪ್ಪಂದದ ಉಲ್ಲಂಘನೆ ಎಂದು ಪಿಟಿವಿ ಹೇಳಿದೆ. ಹೀಗಾಗಿ ಅವರಿಗೆ ಮಾನನಷ್ಟದ ನೋಟಿಸ್ ನೀಡಿರುವುದಾಗಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖ್ತರ್, ಪಿಟಿವಿಯ ಈ ನಡೆಯಿಂದ ನಾನು ಸಂಪೂರ್ಣ ನಿರಾಶೆಗೊಂಡಿದ್ದೇನೆ. ನಾನು ಪಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಗೌರವಕ್ಕೆ ಚ್ಯುತಿ ಬಂದಿತ್ತು. ಇದೀಗ ಅವರು ನನಗೆ ಪರಿಹಾರ ನೋಟಿಸ್ ಕಳುಹಿಸಿದ್ದಾರೆ. ನಾನೊಬ್ಬ ಹೋರಾಟಗಾರ, ಛಲ ಬಿಡುವುದಿಲ್ಲ. ನಾನು ಸಹ ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

PTV ಶೋಯೆಬ್‌ಗೆ ಕಳುಹಿಸಿದ ನೋಟಿಸ್‌ನಲ್ಲಿ, “ಒಪ್ಪಂದದ ಷರತ್ತು -22 ರ ಪ್ರಕಾರ, ತಮ್ಮ ಒಪ್ಪಂದವನ್ನು 3 ತಿಂಗಳ ಲಿಖಿತ ಸೂಚನೆಯನ್ನು ನೀಡಿ ಅಥವಾ ಅದರ ಬದಲಿಗೆ ಮೊತ್ತ ಪಾವತಿಸುವ ಮೂಲಕ ಕೊನೆಗೊಳಿಸಬೇಕು. ಆದರೆ, ಶೋಯೆಬ್ ಅಖ್ತರ್ ಅಕ್ಟೋಬರ್ 26 ರಂದು ದಿಢೀರ್ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪಿಟಿವಿ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಿದೆ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ ವೇಳೆ PTVC ಆಡಳಿತಕ್ಕೆ ಯಾವುದೇ ಪೂರ್ವ ಸೂಚನೆ ನೀಡದೆ, ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೊಂದಿಗೆ ಭಾರತೀಯ ಟಿವಿ ಶೋನಲ್ಲಿ ನೇರ ಚರ್ಚೆಯಲ್ಲಿ ತೊಡಗಿದ್ದರು. ಇದು ಕೂಡ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.

ಹೀಗಾಗಿ ಅಖ್ತರ್ 3 ತಿಂಗಳ ವೇತನವನ್ನು ಪಿಟಿವಿಗೆ ಹಿಂತಿರುಗಿಸಬೇಕಾಗುತ್ತದೆ. PTV ಯ ಮೂರು ತಿಂಗಳ ಸಂಬಳಕ್ಕೆ ಸಮಾನವಾದ 100 ಮಿಲಿಯನ್ ನಷ್ಟದ ಜೊತೆಗೆ 33,33000 ರೂಪಾಯಿಗಳನ್ನು ಪಾವತಿಸಲು PTVC ಕೇಳಿದೆ. ಅಖ್ತರ್ ಹಾಗೆ ಮಾಡದಿದ್ದರೆ, PTV ಅವರ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದೆ.

ಏನಿದು ಅಖ್ತರ್-ಪಿಟಿವಿ ವಿವಾದ?
ಟಿ20 ವಿಶ್ವಕಪ್​ ಸಂದರ್ಭದಲ್ಲಿ ಕ್ರೀಡಾ ಕಾರ್ಯಕ್ರಮದ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಚರ್ಚೆ ವೇಳೆ ನಿರೂಪಕ ಡಾ ನೌಮಾನ್ ನಿಯಾಜ್ ಹಾಗೂ ಶೋಯೆಬ್ ಅಖ್ತರ್ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿ, ನೀವು ಕಾರ್ಯಕ್ರಮದಿಂದ ಹೊರನಡೆಯಬಹುದು ಎಂದು ನಿರೂಪಕರು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಶೋಯೆಬ್ ಅಖ್ತರ್ ಕೂಡ ಅರ್ಧದಲ್ಲೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದ ಅಖ್ತರ್, ನನ್ನ ಗೌರವಕ್ಕೆ ಚ್ಯುತಿ ಬಂದಿದ್ದು, ಹೀಗಾಗಿ ಮುಂದೆ ಪಿಟಿವಿಯ ಪ್ಯಾನೆಲ್​ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದೇ ವಿಚಾರವಾಗಿ ಇದೀಗ ಪಿಟಿವಿ ಶೋಯೆಬ್ ಅಖ್ತರ್ ವಿರುದ್ದ ಮಾನನಷ್ಟ ನೋಟಿಸ್ ನೀಡಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(Pakistan TV News Channel Sends 100 Million rs Defamation Notice to Shoaib Akhtar)