ICC World Cup 2023 Pakistan vs Netherlands Highlights: ನೆದರ್ಲೆಂಡ್ಸ್ ವಿರುದ್ಧ 81 ರನ್​ಗಳಿಂದ ಗೆದ್ದ ಪಾಕಿಸ್ತಾನ

|

Updated on: Oct 06, 2023 | 9:29 PM

ICC World Cup 2023 Pakistan vs Netherlands Match Highlights: ಏಕದಿನ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ದುರ್ಬಲ ನೆದರ್ಲೆಂಡ್ಸ್ ತಂಡವನ್ನು 81 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಇದು ನೆದರ್ಲೆಂಡ್ಸ್ ವಿರುದ್ಧ ಏಕದಿನ ಮಾದರಿಯಲ್ಲಿ ಪಾಕಿಸ್ತಾನದ ಸತತ ಏಳನೇ ಗೆಲುವಾಗಿದೆ.

ICC World Cup 2023 Pakistan vs Netherlands Highlights: ನೆದರ್ಲೆಂಡ್ಸ್ ವಿರುದ್ಧ 81 ರನ್​ಗಳಿಂದ ಗೆದ್ದ ಪಾಕಿಸ್ತಾನ
ಪಾಕಿಸ್ತಾನ- ನೆದರ್ಲೆಂಡ್ಸ್

ಏಕದಿನ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ದುರ್ಬಲ ನೆದರ್ಲೆಂಡ್ಸ್ ತಂಡವನ್ನು 81 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಇದು ನೆದರ್ಲೆಂಡ್ಸ್ ವಿರುದ್ಧ ಏಕದಿನ ಮಾದರಿಯಲ್ಲಿ ಪಾಕಿಸ್ತಾನದ ಸತತ ಏಳನೇ ಗೆಲುವಾಗಿದೆ. ಅವರು ಇದುವರೆಗೆ ಆಡಿರುವ ಒಂದೇ ಒಂದು ಪಂದ್ಯದಲ್ಲೂ ಪಾಕ್ ತಂಡವನ್ನು ನೆದರ್ಲೆಂಡ್ಸ್ ತಂಡ ಮಣಿಸಿಲ್ಲ. ಇನ್ನು ವಿಶ್ವಕಪ್ ಬಗ್ಗೆ ಮಾತನಾಡುವುದಾದರೆ, ಇದು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವಿನ ಮೂರನೇ ಪಂದ್ಯವಾಗಿದ್ದೂ, ಆಡಿರುವ ಮೂರು ಪಂದ್ಯಗಳಲ್ಲೂ ಪಾಕಿಸ್ತಾನ ಗೆದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 286 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 205 ರನ್​ಗಳಿಗೆ ಆಲೌಟ್ ಆಗುವ ಮೂಲಕ 81 ರನ್​ಗಳ ಸೋಲನುಭವಿಸಿತು.

LIVE NEWS & UPDATES

The liveblog has ended.
  • 06 Oct 2023 09:21 PM (IST)

    ಪಾಕಿಸ್ತಾನಕ್ಕೆ ಭರ್ಜರಿ ಜಯ

    ಅಂತಿಮವಾಗಿ ನೆದರ್ಲೆಂಡ್ಸ್ ತಂಡ 205 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ 81 ರನ್‌ಗಳ ಜಯ ಸಾಧಿಸಿದೆ.

  • 06 Oct 2023 09:08 PM (IST)

    ಆರ್ಯನ್ ದತ್ ಔಟ್

    ಆರ್ಯನ್ ದತ್ ವಿಕೆಟ್ ಪತನವಾಗುವ ಮೂಲಕ ನೆದರ್ಲೆಂಡ್ಸ್ ತಂಡದ 9ನೇ ವಿಕೆಟ್ ಪತನವಾಗಿದೆ. ಈ ಮೂಲಕ ತಂಡದ ಸೋಲು ಖಚಿತವಾದಂತ್ತಿದೆ.

    ನೆದರ್ಲೆಂಡ್ಸ್: 186/9

  • 06 Oct 2023 09:07 PM (IST)

    8ನೇ ವಿಕೆಟ್ ಪತನ

    ರೋಲೋಫ್ ವ್ಯಾನ್ ಡೆರ್ ಮೆರ್ವೆ ರನೌಟ್​ಗೆ ಬಲಿಯಾಗಿದ್ದಾರೆ. ಈ ಮೂಲಕ ತಂಡದ 8ನೇ ವಿಕೆಟ್ ಪತನವಾಗಿದೆ.

    ನೆದರ್ಲೆಂಡ್ಸ್: 176/8

  • 06 Oct 2023 09:05 PM (IST)

    ಡಿ ಲೀಡೆ ಔಟ್

    ನೆದರ್ಲೆಂಡ್ಸ್ ಏಳನೇ ವಿಕೆಟ್ ಪತನವಾಗಿದೆ. 67 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಡಿ ಲೀಡೆ ಔಟಾದರು. 33.2 ಓವರ್‌ಗಳಲ್ಲಿ ನೆದರ್ಲೆಂಡ್ಸ್ ಸ್ಕೋರ್ 164-7.

  • 06 Oct 2023 08:38 PM (IST)

    6ನೇ ವಿಕೆಟ್ ಪತನ

    ಒಂದೆಡೆ ಡಿ ಲೀಡೆ ಗೆಲುವಿಗಾಗಿ ಹೋರಾಡುತ್ತಿದ್ದರೆ, ಇನ್ನೊಂದೆಡೆ ತಂಡದ ಸತತ ವಿಕೆಟ್​ಗಳು ಪತನವಾಗುತ್ತಿವೆ. ಸಾಕಿಬ್ ಜುಲ್ಫಿಕರ್ ಕೇವಲ 10 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 06 Oct 2023 08:21 PM (IST)

    ಬಾಸ್ ಡಿ ಲೀಡೆ ಅರ್ಧಶತಕ

    28ನೇ ಓವರ್​ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆಯುವ ಮೂಲಕ ಬಾಸ್ ಡಿ ಲೀಡೆ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿ ಕಾಣುತ್ತಿದ್ದ ನೆದರ್ಲೆಂಡ್ಸ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕೆ ಸಿಲುಕಿದೆ.

  • 06 Oct 2023 08:08 PM (IST)

    ಒಂದೇ ಓವರ್​ನಲ್ಲಿ 2 ವಿಕೆಟ್

    27ನೇ ಓವರ್​ನಲ್ಲಿ ನೆದರ್ಲೆಂಡ್ಸ್ ತಂಡ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ. ಓವರ್​ನ 2ನೇ ಎಸೆತದಲ್ಲಿ ತೇಜ ನಿಡಮನೂರು 5 ರನ್​ಗಳಿಸಿ ಔಟಾದರೆ, ಅದೇ ಓವರ್​ನ 4ನೇ ಎಸೆತದಲ್ಲಿ ಸ್ಕಾಟ್ ಎಡ್ವರ್ಡ್ಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 06 Oct 2023 07:58 PM (IST)

    ವಿಕ್ರಮಜಿತ್ ಸಿಂಗ್ ಔಟ್

    ಅರ್ಧಶತಕ ಸಿಡಿಸಿದ ಬೆನ್ನಲ್ಲೇ ವಿಕ್ರಮಜಿತ್ ಸಿಂಗ್ ವಿಕೆಟ್ ಒಪ್ಪಿಸಿದ್ದಾರೆ. 24ನೇ ಓವರ್​ನ ಐದನೇ ಎಸೆತದಲ್ಲಿ ವಿಕ್ರಮಜಿತ್ ಮಿಡ್ ವಿಕೆಟ್​ನಲ್ಲಿ ಕ್ಯಾಚಿತ್ತು ಔಟಾದರು.

    ವಿಕ್ರಮಜಿತ್ ಸಿಂಗ್ 52 (67)

  • 06 Oct 2023 07:56 PM (IST)

    ಅರ್ಧಶತಕ ಸಿಡಿಸಿದ ವಿಕ್ರಮಜಿತ್ ಸಿಂಗ್

    ಪಾಕಿಸ್ತಾನದ ಬಲಿಷ್ಠ ಬೌಲಿಂಗ್ ಮುಂದೆ ಉತ್ತಮ ಆಟ ಪ್ರದರ್ಶಿಸುತ್ತಿರುವ ವಿಕ್ರಮಜಿತ್ ಸಿಂಗ್ ಸ್ಮರಣೀಯ ಅರ್ಧಶತಕ ಸಿಡಿಸಿದ್ದಾರೆ. 23ನೇ ಓವರ್​ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ವಿಕ್ರಮಜಿತ್ ಸಿಂಗ್ ತಮ್ಮ ಅರ್ಧಶತಕ ಪೂರೈಸಿದರು.

  • 06 Oct 2023 07:41 PM (IST)

    ಶತಕ ಪೂರೈಸಿದ ನೆದರ್ಲೆಂಡ್ಸ್

    ನೆದರ್ಲೆಂಡ್ಸ್ ತಂಡ 21ನೇ ಓವರ್​ನಲ್ಲಿ ಶತಕ ಪೂರೈಸಿದೆ. ಈ ಓವರ್​ನಲ್ಲಿ ಲೀಡೆ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ಇದರೊಂದಿಗೆ ಲೀಡೆ ಹಾಗೂ ವಿಕ್ರಮಜಿತ್ ಸಿಂಗ್ ನಡುವೆ ಅರ್ಧಶತಕದ ಜೊತೆಯಾಟವೂ ನಡೆದಿದೆ.

    ಬಾಸ್ ಡಿ ಲೀಡೆ 33* (32)

    ವಿಕ್ರಮಜಿತ್ ಸಿಂಗ್ 42* (56)

  • 06 Oct 2023 07:25 PM (IST)

    ಲೀಡೆ ಸಿಕ್ಸರ್

    ಮೊಹಮ್ಮದ್ ನವಾಜ್ ಬೌಲ್ ಮಾಡಿದ 17ನೇ ಓವರ್​ನ 4ನೇ ಎಸೆತವನ್ನು ಬಾಸ್ ಡಿ ಲೀಡೆ ಲಾಂಗ್ ಆನ್‌ನಲ್ಲಿ ಸಿಕ್ಸರ್​ಗಟ್ಟಿದರು.

    ನೆದರ್ಲೆಂಡ್ಸ್:  80/2

  • 06 Oct 2023 07:08 PM (IST)

    2ನೇ ವಿಕೆಟ್ ಪತನ

    ಇಫ್ತಿಕರ್ ಅಹ್ಮದ್, ಕಾಲಿನ್ ಅಕರ್ಮನ್ ಅವರ ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ನೆದರ್ಲೆಂಡ್ಸ್ ತಂಡ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ.

    ಕಾಲಿನ್ ಅಕರ್ಮನ್ 17 (21)

  • 06 Oct 2023 06:58 PM (IST)

    10 ಓವರ್‌ ಮುಕ್ತಾಯ

    ಪಾಕಿಸ್ತಾನ ಮೊದಲ 10 ಓವರ್‌ಗಳಲ್ಲಿ 42 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ರನ್ ಚೇಸ್‌ನಲ್ಲಿ ನೆದರ್ಲೆಂಡ್ಸ್ ಉತ್ತಮ ಆರಂಭವನ್ನು ಪಡೆದುಕೊಂಡು ಮೊದಲ ಪವರ್ ಪ್ಲೇನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 48 ರನ್ ಕಲೆಹಾಕಿದೆ.

  • 06 Oct 2023 06:40 PM (IST)

    ಒ’ಡೌಡ್ ಔಟ್

    ಹಸನ್ ಅಲಿ ಅವರ ಶಾರ್ಟ್ ಪಿಚ್ ಎಸೆತದಲ್ಲಿ ಮ್ಯಾಕ್ಸ್ ಒ’ಡೌಡ್ ಪುಲ್ ಶಾಟ್ ಆಡಿದರು. ಆದರೆ ಚೆಂಡು ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ಗೆ ಹೋಯಿತು. ಕಾಲಿನ್ ಅಕರ್ಮನ್ ಕ್ರೀಸ್‌ನಲ್ಲಿದ್ದಾರೆ.

  • 06 Oct 2023 06:22 PM (IST)

    ನೆದರ್ಲೆಂಡ್ಸ್ ಬ್ಯಾಟಿಂಗ್ ಆರಂಭ

    ಭಾರತ ಮೂಲದ ವಿಕ್ರಮಜಿತ್ ಸಿಂಗ್ ಮತ್ತು ಮ್ಯಾಕ್ಸ್ ಒ’ಡೌಡ್ ನೆದರ್ಲೆಂಡ್ಸ್ ಆರಂಭಿಕರಾಗಿ ಕ್ರೀಸ್‌ನಲ್ಲಿದ್ದಾರೆ. ಶಾಹೀನ್ ಅಫ್ರಿದಿ ಬೌಲಿಂಗ್ ಓಪನ್ ಮಾಡಿದ್ದಾರೆ.

  • 06 Oct 2023 05:50 PM (IST)

    286 ರನ್​ಗಳಿಗೆ ಪಾಕ್ ಆಲೌಟ್

    ಸಂಪೂರ್ಣ 50 ಓವರ್​ಗಳನ್ನು ಆಡದ ಪಾಕ್ ತಂಡ 49ನೇ ಓವರ್​ವೊಳಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿದೆ. ತಂಡದ ಪರ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಜ್ವಾನ್ ಅರ್ಧಶತಕ ಸಿಡಿಸಿದರೆ, ಕೆಳಕ್ರಮಾಂಕದಲ್ಲಿ ನವಾಜ್ 39 ರನ್ ಹಾಗೂ ಶಾದಾಬ್ 32 ರನ್​ಗಳ ಇನ್ನಿಂಗ್ಸ್ ಆಡಿದರು.

  • 06 Oct 2023 05:36 PM (IST)

    ಸತತ ಎರಡು ಎಸೆತಗಳಲ್ಲಿ 2 ವಿಕೆಟ್

    ಬಸ್ ಡಿ-ಲೀಡ್ ಸತತ ಎರಡು ಎಸೆತಗಳಲ್ಲಿ ಶಾದಾಬ್ ಖಾನ್ ಮತ್ತು ಹಸನ್ ಅಲಿ ಅವರನ್ನು ಔಟ್ ಮಾಡುವ ಮೂಲಕ ಪಾಕ್ ತಂಡಕ್ಕೆ ಶಾಕ್ ನೀಡಿದರು. ಬಾಸ್ ಡಿ ಲೈಡ್ ವಿಶ್ವಕಪ್ ವೇದಿಕೆಯಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ನೆದರ್ಲೆಂಡ್ಸ್ ಬೌಲರ್ ಆಗುವ ಅವಕಾಶವನ್ನು ಹೊಂದಿದ್ದರು. ಆದರೆ ಶಾಹಿನ್ ಅಫ್ರಿದಿ ಅದಕ್ಕೆ ಅವಕಾಶ ನೀಡಲಿಲ್ಲ. ಒಂದು ಪೂರ್ವನಿದರ್ಶನವನ್ನು ಅಲ್ಪಾವಧಿಗೆ ಹೊಂದಿಸಲಾಗಿಲ್ಲ.

  • 06 Oct 2023 05:02 PM (IST)

    40 ಓವರ್‌ಗಳ ಆಟ ಅಂತ್ಯ

    40 ಓವರ್‌ಗಳ ನಂತರ ಪಾಕಿಸ್ತಾನ ಸ್ಕೋರ್ 6 ವಿಕೆಟ್‌ಗೆ 227 ಆಗಿದೆ. ನವಾಜ್ 19 ಮತ್ತು ಶಾದಾಬ್ 23 ರನ್ ಗಳಿಸಿ ಆಡುತ್ತಿದ್ದಾರೆ.

  • 06 Oct 2023 04:53 PM (IST)

    ಶಾದಾಬ್ ಖಾನ್ ಸಿಕ್ಸರ್

    39ನೇ ಓವರ್​ನ 5ನೇ ಎಸೆತವನ್ನು ಶಾದಾಬ್ ಖಾನ್ ಡೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

  • 06 Oct 2023 04:41 PM (IST)

    ದ್ವಿಶತಕ ಪೂರ್ಣ

    ಪಾಕ್ ತಂಡದ ದ್ವಿಶತಕ ಪೂರ್ಣವಾಗಿದೆ.36ನೇ ಓವರ್​ನಲ್ಲಿ ಪಾಕ್ ತಂಡ 200 ರನ್​ಗಳ ಗಡಿ ದಾಟಿದೆ.ಇದಕ್ಕಾಗಿ ಪಾಕ್ ತಂಡ 6 ವಿಕೆಟ್ ಕಳೆದುಕೊಂಡಿದ್ದು, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ಕ್ರೀಸ್​ನಲ್ಲಿದ್ದಾರೆ.

  • 06 Oct 2023 04:30 PM (IST)

    6ನೇ ವಿಕೆಟ್ ಪತನ

    ಪಾಕ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಗಿದೆ. ಅರ್ಧಶತಕ ಸಿಡಿಸಿದ್ದ ರಿಜ್ವಾನ್ ಔಟಾದ ಬಳಿಕ ಇದೀಗ ಇಫ್ತಿಕರ್ ಕೂಡ 9 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.

  • 06 Oct 2023 04:25 PM (IST)

    ರಿಜ್ವಾನ್ ಔಟ್; 5ನೇ ವಿಕೆಟ್ ಪತನ

    32ನೇ ಓವರ್​ನಲ್ಲಿ ಪಾಕಿಸ್ತಾನ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ. 68 ರನ್ ಸಿಡಿಸಿದ್ದ ರಿಜ್ವಾನ್, ಬಾಸ್ ಡಿ ಲೀಡೆಗೆ ವಿಕೆಟ್ ಒಪ್ಪಿಸಿದ್ದಾರೆ.

    ಮುಹಮ್ಮದ್ ರಿಜ್ವಾನ್ 68 (75)

    ಪಾಕ್- 185/5

  • 06 Oct 2023 04:08 PM (IST)

    ಶಕೀಲ್ ಔಟ್

    ಪಾಕ್ ತಂಡದ 4ನೇ ವಿಕೆಟ್ ಪತನವಾಗಿದೆ. 68 ರನ್ ಸಿಡಿಸಿದ್ದ ಸೌದ್ ಶಕೀಲ್ 28ನೇ ಓವರ್​ನ ಮೊದಲ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು.

  • 06 Oct 2023 03:58 PM (IST)

    ರಿಜ್ವಾನ್ ಅರ್ಧಶತಕ

    ಪಾಕ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 58 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.

    26 ಓವರ್​ಗಳ ಅಂತ್ಯಕ್ಕೆ: 153/3

    ಸೌದ್ ಶಕೀಲ್ 60* (44)

    ಮೊಹಮ್ಮದ್ ರಿಜ್ವಾನ್ 51* (60)

  • 06 Oct 2023 03:52 PM (IST)

    ಶತಕದ ಜೊತೆಯಾಟ

    ಮೊಹಮ್ಮದ್ ರಿಜ್ವಾನ್ ಮತ್ತು ಶಕೀಲ್ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದ್ದಾರೆ. 38 ರನ್‌ಗಳಾಗುವಷ್ಟರಲ್ಲಿ ಮೂರನೇ ವಿಕೆಟ್‌ ಕಳೆದುಕೊಂಡಿದ್ದ ಪಾಕ್ ತಂಡದ ಇನ್ನಿಂಗ್ಸ್ ಚೇತರಿಸಿಕೊಂಡಿದೆ.

    ಸೌದ್ ಶಕೀಲ್ 56* (39)

    ಮುಹಮ್ಮದ್ ರಿಜ್ವಾನ್ 47* (55)

    ಪಾಕ್ ತಂಡ 25 ಓವರ್ ಅಂತ್ಯಕ್ಕೆ; 143/3

  • 06 Oct 2023 03:44 PM (IST)

    ಶಕೀಲ್ ಸ್ಫೋಟಕ ಅರ್ಧಶತಕ

    ಪಾಕಿಸ್ತಾನದ 100 ರನ್‌ಗಳು ಪೂರ್ಣಗೊಂಡಿವೆ. ಆರಂಭಿಕ ಆಘಾತದಿಂದ ಪಾಕಿಸ್ತಾನ ಚೇತರಿಸಿಕೊಂಡಿದೆ. ಮೊಹಮ್ಮದ್ ರಿಜ್ವಾನ್ ಮತ್ತು ಶಕೀಲ್ ನಾಲ್ಕನೇ ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ನೀಡಿದರು.ಇದಲ್ಲದೆ ಶಕೀಲ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

    23 ಓವರ್​ಗಳ ಅಂತ್ಯಕ್ಕೆ ಪಾಕ್; 132/3

  • 06 Oct 2023 03:35 PM (IST)

    ಶತಕ ಪೂರೈಸಿದ ಪಾಕ್

    20ನೇ ಓವರ್​ನಲ್ಲಿ ಪಾಕ್ ತಂಡ ಶತಕದ ಗಡಿ ದಾಟಿದೆ. 38 ರನ್‌ಗಳಾಗುವಷ್ಟರಲ್ಲಿ ಮೂರನೇ ವಿಕೆಟ್‌ ಕಳೆದುಕೊಂಡಿದ್ದ ಪಾಕ್ ತಂಡಕ್ಕೆ ಮೊಹಮ್ಮದ್ ರಿಜ್ವಾನ್ ಮತ್ತು ಸಯೀದ್ ಶಕೀಲ್ ನೆರವಾಗಿದ್ದಾರೆ.

  • 06 Oct 2023 03:19 PM (IST)

    ರಿಜ್ವಾನ್ ಮತ್ತು ಶಕೀಲ್ ಕ್ರೀಸ್‌ನಲ್ಲಿ

    ಕೇವಲ 38 ರನ್‌ಗಳಿಗೆ ಮೂರು ವಿಕೆಟ್‌ಗಳು ಪತನಗೊಂಡ ನಂತರ ರಿಜ್ವಾನ್ ಮತ್ತು ಶಕೀಲ್ ಪಾಕಿಸ್ತಾನದ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 41 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟವಾಡಿದರು. ರಿಜ್ವಾನ್ 24 ಮತ್ತು ಶಕೀಲ್ 23 ರನ್ ಗಳಿಸಿ ಆಡುತ್ತಿದ್ದಾರೆ.

  • 06 Oct 2023 02:59 PM (IST)

    ಅರ್ಧಶತಕ ಪೂರ್ಣ

    ಪಾಕ್ ತಂಡದ ಅರ್ಧಶತಕ ಪೂರ್ಣಗೊಂಡಿದೆ.11 ಓವರ್​ನಲ್ಲಿ ಪಾಕ್ ತಂಡ ಅರ್ಧಶತಕ ಗಡಿ ದಾಟಿದ್ದು ತಂಡದ 3 ವಿಕೆಟ್​ಗಳು ಪತನಗೊಂಡಿವೆ.

  • 06 Oct 2023 02:45 PM (IST)

    3ನೇ ವಿಕೆಟ್ ಪತನ, ಪವರ್ ಪ್ಲೇ ಅಂತ್ಯ

    ಪಾಕ್ ತಂಡದ 3ನೇ ವಿಕೆಟ್ ಪತನವಾಗಿದೆ. ಆರಂಭಿಕ ಫಖರ್ ಜಮಾನ್ ಹುಕ್ ಶಾಟ್ ಆಡುವ ಯತ್ನದಲ್ಲಿ ಆರ್ಯನ್​ಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ. ಇದರೊಂದಿಗೆ ಪಾಕ್ ತಂಡದ ಬ್ಯಾಟಿಂಗ್ ಪವರ್ ಪ್ಲೇ ಕೂಡ ಮುಗಿದಿದ್ದು, ಇದರಲ್ಲಿ ತಂಡ ಪ್ರಮುಖ 3 ವಿಕೆಟ್ ಕಳೆದುಕೊಂಡು 43 ರನ್ ಕಲೆಹಾಕಿದೆ.

  • 06 Oct 2023 02:37 PM (IST)

    ಬಾಬರ್ ಔಟ್, ಪಾಕ್ 34/2

    ಪಾಕ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ನಾಯಕ ಬಾಬರ್ ಕೇವಲ 5 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಕಾಲಿನ್ ಅಕರ್ಮನ್ ಬೌಲ್ ಮಾಡಿದ 9ನೇ ಓವರ್ 3ನೇ ಎಸೆತದಲ್ಲಿ ಆಝಂ ವಿಕೆಟ್ ಪತನವಾಯಿತು.

  • 06 Oct 2023 02:30 PM (IST)

    7 ಓವರ್​ಗಳ ಆಟ ಅಂತ್ಯ

    ಪಾಕಿಸ್ತಾನ ಇನ್ನಿಂಗ್ಸ್​ನ 7 ಓವರ್​ಗಳ ಆಟ ಮುಗಿದಿದೆ. ಇದರಲ್ಲಿ ಪಾಕ್ ತಂಡ 1 ವಿಕೆಟ್ ಕಳೆದುಕೊಂಡು 28 ರನ್ ಕಲೆಹಾಕಿದೆ. ಬಾಬರ್ ಹಾಗೂ ಇಮಾಮ್ ಕ್ರೀಸ್​ನಲ್ಲಿದ್ದಾರೆ.

  • 06 Oct 2023 02:18 PM (IST)

    ಮೊದಲ ವಿಕೆಟ್ ಪತನ

    ಆರಂಭಿಕ ಫಖರ್ ಜಮಾನ್ 4ನೇ ಓವರ್​ನಲ್ಲಿ ಲೋಗನ್ ವ್ಯಾನ್ ಬೀಕ್​ಗೆ ವಿಕೆಟ್ ಒಪ್ಪಿಸಿದ್ದಾರೆ.

    ಫಖರ್ ಜಮಾನ್: 12 ರನ್ (15 ಎಸೆತ)

  • 06 Oct 2023 02:13 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಲೋಗನ್ ವ್ಯಾನ್ ಬೌಲ್ ಮಾಡಿದ 2ನೇ ಓವರ್​ನಲ್ಲಿ ಫಖರ್ ಜಮಾನ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು. ಈ ಓವರ್​ನಲ್ಲಿ 9 ರನ್ ಬಂದವು.

    ಪಾಕ್ 15/0

  • 06 Oct 2023 02:05 PM (IST)

    ಪಾಕ್ ಇನ್ನಿಂಗ್ಸ್ ಆರಂಭ

    ಪಾಕ್ ತಂಡದ ಬ್ಯಾಟಿಂಗ್ ಆರಂಭವಾಗಿದ್ದು, ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ನೆದರ್ಲೆಂಡ್ಸ್ ಪರ ಆರ್ಯನ್ ದತ್ ಮೊದಲ ಓವರ್ ಬೌಲ್ ಮಾಡಿ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ನೀಡಿದರು.

  • 06 Oct 2023 01:55 PM (IST)

    Karnataka News Live: ನಮ್ಮ ಸರ್ಕಾರ ಹೊಸ ಮದ್ಯದ ಅಂಗಡಿ ತೆಗೆಯಲ್ಲ; ಸಿಎಂ

    ಚಿತ್ರದುರ್ಗ: ಮದ್ಯದಂಗಡಿ ತೆರೆಯುವ ಬಗ್ಗೆ ಸಚಿವರು ಚಿಂತನೆ ನಡೆಸಿದ್ದರು. ನಮ್ಮ ಸರ್ಕಾರ ಹೊಸ ಮದ್ಯದ ಅಂಗಡಿ ತೆಗೆಯಲ್ಲ. ಬಿಜೆಪಿ ಆಡಳಿತದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  • 06 Oct 2023 01:52 PM (IST)

    ಪಾಕಿಸ್ತಾನ ತಂಡ

    ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

  • 06 Oct 2023 01:51 PM (IST)

    ನೆದರ್ಲ್ಯಾಂಡ್ಸ್ ತಂಡ

    ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಒ’ಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್ .

  • 06 Oct 2023 01:40 PM (IST)

    ಟಾಸ್ ಗೆದ್ದ ನೆದರ್ಲೆಂಡ್ಸ್

    ಟಾಸ್ ಗೆದ್ದ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.

Published On - 1:39 pm, Fri, 6 October 23

Follow us on