ಏಷ್ಯಾಕಪ್ ಫೈನಲ್‌ನಲ್ಲಿ (Asia Cup 2022 Final) ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ( Pakistan and Sri Lanka) ತಂಡಗಳು ಮುಖಾಮುಖಿಯಾಘಿವೆ. ಇದರ ಭಾಗವಾಗಿ ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಏಷ್ಯಾಕಪ್ನಲ್ಲಿ ಶ್ರೀಲಂಕಾ 5 ಬಾರಿ ಚಾಂಪಿಯನ್ ಆಗಿದ್ದು, ಏತನ್ಮಧ್ಯೆ, ಈ ಮೆಗಾ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 2 ಬಾರಿ ಗೆದ್ದಿದೆ. ಇದರೊಂದಿಗೆ ಬಾಬರ್ ಸೇನೆ ಈ ಬಾರಿ ಗೆದ್ದು ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಇಲ್ಲಿ ಪಾಕಿಸ್ತಾನಕ್ಕೆ ಹತ್ತು ವರ್ಷಗಳ ನಂತರ ವಿಜೇತರಾಗುವ ಅವಕಾಶವಿದೆ. ಏತನ್ಮಧ್ಯೆ, ಶ್ರೀಲಂಕಾ 8 ವರ್ಷಗಳ ನಂತರ ಪ್ರಶಸ್ತಿ ಗೆಲ್ಲಲು ಬಯಸಿದೆ. ಈ ಕ್ರೀಡಾಕೂಟದಲ್ಲಿ ಕಳೆದ 16 ದಿನಗಳಲ್ಲಿ 13 ಪಂದ್ಯಗಳಲ್ಲಿ 6 ತಂಡಗಳು ತಮ್ಮ ಶಕ್ತಿ ಪ್ರದರ್ಶಿಸಿವೆ.
ಉಭಯ ತಂಡಗಳ ನಡುವೆ ಇದುವರೆಗೆ 22 ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 13 ಮತ್ತು ಶ್ರೀಲಂಕಾ 9 ಗೆಲುವು ಸಾಧಿಸಿದೆ. ಇದೇ ವೇಳೆ ಏಷ್ಯಾಕಪ್ ಕುರಿತು ಮಾತನಾಡುವುದಾದರೆ, ಉಭಯ ತಂಡಗಳು ಮೂರನೇ ಬಾರಿಗೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 8 ವರ್ಷಗಳ ಹಿಂದೆ ಉಭಯ ತಂಡಗಳು ಕೊನೆಯ ಬಾರಿ ಫೈನಲ್‌ನಲ್ಲಿ ಆಡಿದ್ದವು. ಆದರೆ 2014ರಲ್ಲಿ ನಡೆದಿದ್ದ ಫೈನಲ್‌ನಲ್ಲಿ ಶ್ರೀಲಂಕಾ ಗೆದ್ದಿತ್ತು.
ಎರಡೂ ತಂಡಗಳು 2000 ಮತ್ತು 1986 ರಲ್ಲಿ ಏಷ್ಯಾಕಪ್ ಫೈನಲ್ ತಲುಪಿದ್ದವು. ಈ ಎರಡೂ ಫೈನಲ್ಗಳಲ್ಲೂ ಶ್ರೀಲಂಕಾ ಗೆಲುವು ಗೆಲುವು ಸಾಧಿಸಿತ್ತು. ಆದರೆ 2000ದಲ್ಲಿ ನಡೆದಿದ್ದ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟಕ್ಕೇರಿತ್ತು.
ಫೈನಲ್ಗೆ ಉಭಯ ತಂಡಗಳು
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸನೇನ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ದನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ
Published On - 7:14 pm, Sun, 11 September 22