Saud Shakeel: ದ್ವಿಶತಕ ಸಿಡಿಸಿದ ಸೌದ್ ಶಕೀಲ್: ಬೃಹತ್ ಮೊತ್ತ ಪೇರಿಸಿದ ಪಾಕ್

| Updated By: ಝಾಹಿರ್ ಯೂಸುಫ್

Updated on: Jul 18, 2023 | 6:14 PM

Sri Lanka vs Pakistan, 1st Test: ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು 101 ರನ್​ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Saud Shakeel: ದ್ವಿಶತಕ ಸಿಡಿಸಿದ ಸೌದ್ ಶಕೀಲ್: ಬೃಹತ್ ಮೊತ್ತ ಪೇರಿಸಿದ ಪಾಕ್
Saud Shakeel
Follow us on

Sri Lanka vs Pakistan, 1st Test: ಗಾಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ಬ್ಯಾಟರ್ ಸೌದ್ ಶಕೀಲ್ (Saud Shakeel) ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಧನಂಜಯ ಡಿಸಿಲ್ವಾ (122) ಅವರ ಶತಕದ ನೆರವಿನಿಂದ ಪ್ರಥಮ ಇನಿಂಗ್ಸ್​ನಲ್ಲಿ 312 ರನ್​ ಕಲೆಹಾಕಿತ್ತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು 101 ರನ್​ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಸೌದ್ ಶಕೀಲ್ ಹಾಗೂ ಅಘ ಸಲ್ಮಾನ್ ಶತಕದ ಜೊತೆಯಾಟವಾಡಿದರು. ಆದರೆ ಮೂರನೇ ದಿನದಾಟದ ಆರಂಭದಲ್ಲೇ ಅಘ ಸಲ್ಮಾನ್ (83) ವಿಕೆಟ್ ಪಡೆಯುವಲ್ಲಿ ರಮೇಶ್ ಮೆಂಡಿಸ್ ಯಶಸ್ವಿಯಾದರು.

ಆದರೆ ಮತ್ತೊಂದೆಡೆ ಬಂಡೆಯಂತೆ ನೆಲೆಯೂರಿದ್ದ ಸೌದ್ ಶಕೀಲ್ ಲಂಕಾ ಬೌಲರ್​ಗಳ ತಂತ್ರಕ್ಕೆ ಬ್ಯಾಟ್​ ಮೂಲಕವೇ ಪ್ರತಿತಂತ್ರ ಹೂಡಿದರು. ರಕ್ಷಣಾತ್ಮಕ ಆಟದೊಂದಿಗೆ ರನ್​ಗಳಿಸುತ್ತಾ ಸಾಗಿದ ಸೌದ್ 352 ಎಸೆತಗಳಲ್ಲಿ 19 ಫೋರ್​ಗಳೊಂದಿಗೆ ದ್ವಿಶತಕ ಪೂರೈಸಿದ್ದರು.

ಇತ್ತ ಸೌದ್ ಶಕೀಲ್ ಕ್ರೀಸ್ ಕಚ್ಚಿ ನಿಂತಿದ್ದರೆ ಅತ್ತ ಪಾಕಿಸ್ತಾನ್ ತಂಡದ ಕೆಳ ಕ್ರಮಾಂಕದ ಬ್ಯಾಟರ್​ಗಳನ್ನು ಔಟ್ ಮಾಡುವಲ್ಲಿ ಲಂಕಾ ಬೌಲರ್​ಗಳು ಯಶಸ್ವಿಯಾದರು. ಪರಿಣಾಮ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 461 ರನ್​ಗಳಿಸಿ ಆಲೌಟ್ ಆಯಿತು.

ವಿಶೇಷ ಎಂದರೆ 361 ಎಸೆತಗಳನ್ನು ಎದುರಿಸಿದ್ದ ಸೌದ್ ಶಕೀಲ್ 208 ರನ್​ಗಳಿಸಿ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ರಮೇಶ್ ಮೆಂಡಿಸ್ 136 ರನ್ ನೀಡಿ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಇನ್ನು ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್​ನಲ್ಲಿ 149 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಈ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 14 ರನ್​ಗಳಿಸಿದೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಖ್, ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) , ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘ ಸಲ್ಮಾನ್ , ನೌಮಾನ್ ಅಲಿ , ಅಬ್ರಾರ್ ಅಹ್ಮದ್ , ಶಾಹೀನ್ ಅಫ್ರಿದಿ , ನಸೀಮ್ ಶಾ.

ಇದನ್ನೂ ಓದಿ: Zimbabwe: ಝಿಂಬಾಬ್ವೆ ಅಬ್ಬರಕ್ಕೆ ಪಾಕಿಸ್ತಾನ್ ದಾಖಲೆ ಧೂಳೀಪಟ

ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ (ನಾಯಕ) , ನಿಶಾನ್ ಮದುಷ್ಕ , ಕುಸಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ಧನಂಜಯ ಡಿ ಸಿಲ್ವಾ , ದಿನೇಶ್ ಚಂಡಿಮಲ್ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ವಿಶ್ವ ಫೆರ್ನಾಂಡೋ , ಕಸುನ್ ರಜಿತ.

 

Published On - 6:11 pm, Tue, 18 July 23