KL Rahul: ಮೆಗಾ ಹರಾಜಿಗೂ ಮುನ್ನ ಬಿಗ್ ಶಾಕ್: ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್ನಿಂದ ಅಚ್ಚರಿ ಹೇಳಿಕೆ
KL Rahul Leaving Punjab Kings: 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಕೆ. ಎಲ್ ರಾಹುಲ್ರನ್ನು 11 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಸದ್ಯ ಮುಂದಿನ ವರ್ಷದ ಐಪಿಎಲ್ 2022ಕ್ಕೆ ಮೆಗಾ ಹರಾಜು ಇರುವಾಗ ಪಂಜಾಬ್ ಫ್ರಾಂಚೈಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 14ನೇ ಆವೃತ್ತಿ ಮುಕ್ತಾಯಗೊಂಡು ಐಸಿಸಿ ಟಿ20 ವಿಶ್ವಕಪ್ (ICC T20 World Cup) ನಡೆಯುತ್ತಿದೆ. ಇದಾದ ಬೆನ್ನಲ್ಲೇ ಐಪಿಎಲ್ 2022ಕ್ಕೆ ಮೆಗಾ ಆಕ್ಷನ್ (IPL 2022 Mega Auction) ನಡೆಯಲಿದೆ. ಈಗಾಗಲೇ ಅಹಮದಾಬಾದ್ ಮತ್ತು ಲಕ್ನೋ (Ahmedabad and Lucknow) ಹೆಸರಿನ ಎರಡು ಹೊಸ ತಂಡಗಳು ಸೇರಿ ಒಟ್ಟು ಹತ್ತು ಟೀಮ್ ಒಂದು ಪ್ರಶಸ್ತಿಗಾಗಿ ಮುಂದಿನ ಆವೃತ್ತಿಯಿಂದ ಹೋರಾಟ ನಡೆಸಲಿದೆ. ಹೀಗಾಗಿ ಪ್ರತಿ ತಂಡ 15ನೇ ಆವೃತ್ತಿಯ ಐಪಿಎಲ್ಗು ಮುನ್ನ ಸಂಪೂರ್ಣ ಬದಲಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೂಡ ಇದರಿಂದ ಹೊರತಾಗಿಲ್ಲ. ಹೀಗಿರುವಾಗ ಕಳೆದ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಮುನ್ನಡೆಸುತ್ತಾ ಬರುತ್ತಿರುವ ಕೆ. ಎಲ್ ರಾಹುಲ್ (KL Rahul) ಬಗ್ಗೆ ಫ್ರಾಂಚೈಸಿಯ ಸಹ ಮಾಲೀಕ ನೆಸ್ ವಾಡಿಯಾ (Ness Wadia) ಅಚ್ಚರಿಕಯ ಹೇಳಿಕೆ ನೀಡಿದ್ದಾರೆ.
2018ರ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ರಾಹುಲ್ರನ್ನು 11 ಕೋಟಿ ಕೊಟ್ಟು ಖರೀದಿ ಮಾಡಿತ್ತು. 2020 ರಲ್ಲಿ ಇವರನ್ನು ನಾಯಕನಾಗಿ ಆಯ್ಕೆ ಮಾಡಿತ್ತು. ಸದ್ಯ ಮುಂದಿನ ವರ್ಷದ ಸೀಸನ್ಗೆ ಮೆಗಾ ಹರಾಜು ಇರುವಾಗ ಪಂಜಾಬ್ ಫ್ರಾಂಚೈಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮುಂದಿನ ವರ್ಷ ಪಂಜಾಬ್ ಕಿಂಗ್ಸ್ ತಂಡದಲ್ಲಿ ರಾಹುಲ್ ಆಡುವುದಿಲ್ಲ ಎಂಬ ಸುದ್ದಿ ಬಂದಿದೆ. ಇದರೊಂದಿಗೆ ದೀರ್ಘಾವಧಿಯ ನಂತರ ಪಂಜಾಬ್‌ಗೆ ಹೊಸ ನಾಯಕ ದೊರೆಯಲಿದ್ದಾರೆ.
ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದಲ್ಲಿ ಉಳಿಸಿಕೊಳ್ಳುವುದರ ಕುರಿತು ಪ್ರತಿಕ್ರಿಯೆ ನೀಡಿರುವ ನೆಸ್ ವಾಡಿಯಾ “ತಂಡದಲ್ಲಿ ಕೆ. ಎಲ್ ರಾಹುಲ್ ಹೊರತುಪಡಿಸಿ ಹಲವಾರು ಆಟಗಾರರಿದ್ದಾರೆ. ಮೊದಲಿಗೆ, ಓರ್ವ ಆಟಗಾರನಿಂದ ಇಡೀ ತಂಡವಾಗುವುದಿಲ್ಲ. ನಾನು ಯಾವಾಗಲೂ ಹೇಳುವ ಹಾಗೆ ತಂಡದ ಪ್ರತಿಯೊಬ್ಬ ಆಟಗಾರನೂ ಸಹ ತನ್ನದೇ ಆದ ವಿಶೇಷ ಮೌಲ್ಯಗಳನ್ನು ಹೊಂದಿರುತ್ತಾನೆ. ಅದನ್ನು ಅರಿತು ನಾವು ಅನುಸರಿಸಿಕೊಂಡು ಮತ್ತು ಅಳವಡಿಸಿಕೊಂಡು ಮುಂದೆ ಸಾಗಬೇಕು. ಯಾವುದೇ ತಂಡ ಕೂಡ ಓರ್ವ ಆಟಗಾರನ ಮೇಲೆ ಅವಲಂಬಿತವಾಗಿರಬಾರದು” ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು, ‘ಕೆ. ಎಲ್ ರಾಹುಲ್ ಒಬ್ಬ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದೆರಡು ವರ್ಷಗಳಲ್ಲಿ ಕಷ್ಟದ ಸಮಯದಲ್ಲಿಯೂ ರಾಹುಲ್ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ, ಆಸರೆಯಾಗಿದ್ದಾರೆ. ಆದರೆ ಓರ್ವ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿರುವುದಿಲ್ಲ. ಕ್ರಿಕೆಟ್ 11 ಆಟಗಾರರ ಆಟ, ಸದ್ಯ ರಿಟೆನ್ಷನ್ ಪಾಲಿಸಿ ಹೊರಬಿದ್ದಿದ್ದು ಮುಂದಿನ ದಿನಗಳಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆಯೋ ನೋಡೋಣ” ಎಂದು ಹೇಳಿಕೆ ನೀಡುವುದರ ಮೂಲಕ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿಯೇ ಉಳಿದುಕೊಳ್ಳುವುದು ಅನುಮಾನ ಎಂಬ ರೀತಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಹೇಳಿರುವಂತೆ ಮುಂದಿನ ವರ್ಷಕ್ಕೆ ಮೆಗ ಆಕ್ಷನ್ ನಡೆಯಲಿದೆ. ಇದರಲ್ಲಿ ಕೆ. ಎಲ್ ರಾಹುಲ್ ಹೆಸರಿಗೂ ಬಿಡ್ ನಡೆಯಲಿದೆ. ಅದುದೊಡ್ಡ ಮೊತ್ತ ಆಗುವುದು ಖಚಿತ. ಇನ್ನು ಕೆಲವು ತಂಡಗಳು ಕೂಡ ರಾಹುಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನೇರವಾಗಿ ಮಾತನಾಡಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದರಲ್ಲಿ ಆರ್ಸಿಬಿ ಕೂಡ ಒಂದು. ವಿರಾಟ್ ಕೊಹ್ಲಿ ನಾಯಕತ್ವ ಬಿಡುತ್ತಿರುವ ಕಾರಣ ರಾಹುಲ್ ಆರ್ಸಿಬಿಯ ನೂತನ ನಾಯಕನಾಗಲಿದ್ದಾರೆ ಎಂಬ ಸುದ್ದಿಯೂ ಈ ಹಿಂದೆ ಹರಿದಾಡಿತ್ತು.
India vs New Zealand: ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಬೆವರಿಳಿಸುತ್ತಿರುವ ಮೆಂಟರ್ ಧೋನಿ
(PBKS co-owner Ness Wadia has addressed KL Rahul future with Punjab Kings ahead of mega auction)