
ಪಂಜಾಬ್ ತಂಡವನ್ನು ಡೆಲ್ಲಿ 15 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಪಂಜಾಬ್‌ನ ಪ್ಲೇಆಫ್‌ನ ಕನಸು ಭಗ್ನಗೊಂಡಿದೆ. ಪಂಜಾಬ್ ಬ್ಯಾಟ್ಸ್‌ಮನ್ ಲಿವಿಂಗ್‌ಸ್ಟನ್ 94 ರನ್ ಬಾರಿಸಿ ಕೊನೆಯ ಎಸೆತದಲ್ಲಿ ಔಟಾದರು. ದೆಹಲಿಯ 214 ರನ್‌ಗಳ ಮುಂದೆ ಪಂಜಾಬ್ ತಂಡ 198 ರನ್ ಗಳಿಸಲಷ್ಟೇ ಶಕ್ತವಾಯಿತು.
19ನೇ ಓವರ್‌ನ ಮೂರನೇ ಎಸೆತದಲ್ಲಿ ಹರ್ ಪ್ರೀತ್ ಬ್ರಾರ್ ರನೌಟ್ ಆದರು.
19ನೇ ಓವರ್‌ನ ಎರಡನೇ ಎಸೆತದಲ್ಲಿ ನೋಕಿಯಾ ಅವರು ಸ್ಯಾಮ್ ಕರನ್ ಅವರನ್ನು ಬೌಲ್ಡ್ ಮಾಡಿದರು. ಪಂಜಾಬ್ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ.
ಮುಖೇಶ್ ಬೌಲ್ ಮಾಡಿದ 18ನೇ ಓವರ್ನಲ್ಲಿ 21 ರನ್ ಬಂದವು
ಈ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಬಂತು.
18 ಓವರ್ ಅಂತ್ಯಕ್ಕೆ 176/5
ಲಿವಿಂಗ್ಸ್ಟನ್ 17ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ್ದಾರೆ.
ಈ ಓವರ್ನಲ್ಲಿ ಲಿವಿಂಗ್ಸ್ಟನ್ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು
ಈ ಓವರ್ನಲ್ಲಿ 17 ರನ್ ಬಂದವು
17 ಓವರ್ ಅಂತ್ಯಕ್ಕೆ 155/5
16ನೇ ಓವರ್ನಲ್ಲಿ 4ನೇ ವಿಕೆಟ್ ಪತನವಾಗಿದೆ
ಶೂನ್ಯಕ್ಕೆ ಜಿತೇಶ್ ಕ್ಯಾಚಿತ್ತು ಔಟಾದರು.
ಇದೇ ಓವರ್ನಲ್ಲಿ ಶಾರುಖ್ ಸಿಕ್ಸ್ ಬಾರಿಸಿದರು
16 ಓವರ್ ಅಂತ್ಯಕ್ಕೆ 135/4
ಪಂಜಾಬ್ ಇನ್ನಿಂಗ್ಸ್ನ 15 ಓವರ್ ಮುಗಿದಿದೆ.
ಈ ಓವರ್ನಲ್ಲಿ ಲಿವಿಂಗ್ಸ್ಟನ್ 2 ಬೌಂಡರಿ ಹೊಡೆದರು
ಇದರೊಂದಿಗೆ ಓವರ್ನಲ್ಲಿ 11 ರನ್ ಬಂದವು
15 ಓವರ್ ಅಂತ್ಯಕ್ಕೆ 128/2
ಸಿಕ್ಕ ಜೀವದಾನಗಳನ್ನು ಸದುಪಯೋಗ ಪಡಿಸಿಕೊಂಡಿರುವ ಅಥರ್ವ್ ಟೈಡೆ ಅರ್ಧಶತಕ ಪೂರೈಸಿದ್ದಾರೆ.
ಈ 13ನೇ ಓವರ್ನಲ್ಲಿ ಲಿವಿಂಗ್ಸ್ಟನ್ ಸಿಕ್ಸರ್ ಕೂಡ ಬಾರಿಸಿದರು.
13 ಓವರ್ ಅಂತ್ಯಕ್ಕೆ 112/2
12ನೇ ಓವರ್ನಲ್ಲಿ 3 ಬೌಂಡರಿ ಬಂದವು.
ಇದರೊಂದಿಗೆ ಒಟ್ಟು 15 ರನ್ ಓವರ್ನಿಂದ ಬಂದವು.
ಹಾಗೆಯೇ ಪಂಜಾಬ್‌ನ ಶತಕ ಕೂಡ ಪೂರ್ಣಗೊಂಡಿದೆ.
12 ಓವರ್ ಅಂತ್ಯಕ್ಕೆ 100/2
ಕುಲ್ದೀಪ್ ಮಾಡಿದ 2 ಓವರ್ಗಳಲ್ಲಿ ಇಬ್ಬರೂ ಬ್ಯಾಟರ್ಗಳಿಗೆ ಜೀವದಾನ ಸಿಕ್ಕಿದೆ
ಲಿವಿಂಗ್ಸ್ಟನ್ ಕ್ಯಾಚನ್ನು ನೋಕಿಯಾ ಬಿಟ್ಟರೆ, ಟೈಡೆ ಕ್ಯಾಚನ್ನು ಯಶ್ ಧುಲ್ ಬಿಟ್ಟರು.
10ನೇ ಓವರ್ನಲ್ಲಿ ಭರ್ಜರಿ ಸಿಕ್ಸರ್ ಕೂಡ ಬಂತು.
10 ಓವರ್ ಅಂತ್ಯಕ್ಕೆ 75/2.
ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಓವರ್‌ನಲ್ಲಿ ಪ್ರಭಾಸಿಮ್ರಾನ್ ಸಿಂಗ್ 22 ರನ್ ಗಳಿಸಿ ಔಟಾದರು.
ಈ ಇನ್ನಿಂಗ್ಸ್‌ನಲ್ಲಿ ಅವರು 4 ಬೌಂಡರಿಗಳನ್ನು ಬಾರಿಸಿದರು.
ಅಲ್ಲದೆ ಇದೇ ಓವರ್ನಲ್ಲಿ ಪಂಜಾಬ್ 50 ರನ್ ಕೂಡ ಪೂರ್ಣಗೊಳಿಸಿತು.
ಮುಖೇಶ್ ಬೌಲ್ ಮಾಡಿದ 6ನೇ ಓವರ್ನಲ್ಲಿ 11 ರನ್ ಬಂದವು
ಓವರ್ನಲ್ಲಿ ಟೈಡೆ ಮತ್ತೊಮ್ಮೆ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
6 ಓವರ್ ಅಂತ್ಯಕ್ಕೆ 47/1
ನೋಕಿಯಾ ಬೌಲ್ ಮಾಡಿದ 5ನೇ ಓವರ್ನಲ್ಲಿ 13ನ ರನ್ ಬಂದವು
ಓವರ್ನಲ್ಲಿ ಟೈಡೆ 1 ಬೌಂಡರಿ ಹಾಗೂ 1 ಸಿಕ್ಸರ್ ಬಂತು
4ನೇ ಓವರ್ನಲ್ಲಿ 13 ರನ್ ಬಂದವು
ಓವರ್‌ನ ಕೊನೆಯ 3 ಎಸೆತಗಳಲ್ಲಿ ಪ್ರಭ್ಸಿಮ್ರಾನ್ ಬೌಂಡರಿ ಬಾರಿಸಿದರು
4 ಓವರ್ ಅಂತ್ಯಕ್ಕೆ 23/1
214 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕಳಪೆ ಆರಂಭ ಪಡೆದಿದೆ. ಶಿಖರ್ ಧವನ್ ಇಶಾಂತ್ ಶರ್ಮಾ ಓವರ್ನಲ್ಲಿ 0 ರನ್ ಗಳಿಸಿ ಔಟಾದರು. ಆರಂಭಿಕರಾಗಿ ಶಿಖರ್ ಧವನ್ 10ನೇ ಬಾರಿಗೆ ಡಕ್ ಆಗಿದ್ದಾರೆ. 3 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 10/1
ಪಂಜಾಬ್ ಇನ್ನಿಂಗ್ಸ್ ಆರಂಭವಾಗಿದೆ. ಪಂಜಾಬ್ ನಾಯಕ ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಇನಿಂಗ್ಸ್ ಆರಂಭಿಸಲು ಬಂದಿದ್ದಾರೆ. ದೆಹಲಿ ಪರ ಖಲೀಲ್ ಅಹ್ಮದ್ ಮೊದಲ ಓವರ್ ಎಸೆಯುತ್ತಿದ್ದಾರೆ.
20 ನೇ ಓವರ್ನಲ್ಲಿ 23 ರನ್ ಬಂದವು
ಬ್ರಾರ್ ಓವರ್ನಲ್ಲಿ ರುಸ್ಸೋ 2 ಸಿಕ್ಸರ್, 1 ಬೌಂಡರಿ ಬಾರಿಸಿದರು
ಕೊನೆಯ ಎಸೆತದಲ್ಲಿ ಸಾಲ್ಟ್ ಬೌಂಡರಿ ಬಾರಿಸಿದರು
20 ಓವರ್ ಅಂತ್ಯಕ್ಕೆ ಡೆಲ್ಲಿ 213 ರನ್ ಬಾರಿಸಿದೆ.
19ನೇ ಓವರ್ನಲ್ಲಿ 18 ರನ್ ಬಂದವು
ಈ ಓವರ್ನಲ್ಲಿ ಸಾಲ್ಟ್ 2 ಸಿಕ್ಸರ್, 1 ಬೌಂಡರಿ ಹೊಡೆದರು
19 ಓವರ್ ಅಂತ್ಯಕ್ಕೆ ಡೆಲ್ಲಿ 190/2
ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಕೋಲ್ಟ್ 5 ಮತ್ತು ರುಸ್ಸೋ 62 ರನ್‌ಗಳಿಸಿ ಆಡುತ್ತಿದ್ದಾರೆ.
ಈ ಓವರ್‌ನ ಮೊದಲ ಎಸೆತವನ್ನು ರಸ್ಸೋ ಬೌಂಡರಿಗಟ್ಟಿದರು.
18 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 172/2.
ಶಾ ಬಳಿಕ ರಿಲೆ ರುಸ್ಸೋ ಕೂಡ ಅರ್ಧಶತಕ ಪೂರೈಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಕೇವಲ 25 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಅರ್ಧಶತಕ ಗಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಸಾಲ್ಟ್ 2 ಹಾಗೂ ರುಸ್ಸೋ 49 ರನ್‌ಗಳಿಸಿ ಆಡುತ್ತಿದ್ದಾರೆ.
16 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 154/2
ಪೃಥ್ವಿ ಶಾ ಐಪಿಎಲ್‌ನಲ್ಲಿ 13ನೇ ಅರ್ಧಶತಕ ಗಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 54 ರನ್ ಮತ್ತು ರುಸ್ಸೋ 36 ರನ್ ಬಾರಿಸಿ ಆಡುತ್ತಿದ್ದಾರೆ.
ಈ ಓವರ್‌ನಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಂತು.
14 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 138/1
ರಬಾಡ ಬೌಲ್ ಮಾಡಿದ 13ನೇ ಓವರ್ನಲ್ಲಿ 17 ರನ್ ಬಂತು
ಓವರ್ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಬಂತು
ಡೆಲ್ಲಿ 125/1
ಸ್ಯಾಮ್ ಕರನ್ ಓವರ್ ನಲ್ಲಿ ವಾರ್ನರ್ 46 ರನ್ ಗಳಿಸಿ ಕ್ಯಾಚ್ ಔಟ್ ಆದರು.
ನಾಯಕ ಶಿಖರ್ ಧವನ್ ಈ ಕ್ಯಾಚ್ ಪಡೆದು ಪಂಜಾಬ್ ಕಿಂಗ್ಸ್ಗೆ ಯಶಸ್ಸು ನೀಡಿದರು.
ಇದೇ ಓವರ್ನಲ್ಲಿ ಡೆಲ್ಲಿ ಶತಕ ಕೂಡ ಪೂರೈಸಿತು.
11 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 103/1
ಡೆಲ್ಲಿ ಇನ್ನಿಂಗ್ಸ್ನ 10 ಓವರ್ ಮುಗಿದಿದೆ.
ಈ 10 ಓವರ್ಗಳಲ್ಲಿ ತಂಡ ವಿಕೆಟ್ ನಷ್ಟವಿಲ್ಲದೆ 93 ರನ್ ಬಾರಿಸಿದೆ.
ಪೃಥ್ವಿ 45* (30)
ವಾರ್ನರ್46* (30)
9ನೇ ಓವರ್‌ನ ಕೊನೆಯ ಎಸೆತದಲ್ಲಿ ಪೃಥ್ವಿ ಮಿಡ್ ವಿಕೆಟ್ ಮೇಲೆ ಬೌಂಡರಿ ಬಾರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 35 ರನ್ ಹಾಗೂ ಡೇವಿಡ್ ವಾರ್ನರ್ 35 ರನ್ ಗಳಿಸಿ ಆಡುತ್ತಿದ್ದಾರೆ.
ವಾರ್ನರ್ ಮತ್ತು ಪೃಥ್ವಿ ಈ ಸೀಸನ್ನಲ್ಲಿ ಮೊದಲ ಬಾರಿಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.
7 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 71/0
ಡೆಲ್ಲಿ ಪವರ್ ಪ್ಲೇ ಮುಗಿದಿದ್ದು, 6 ಓವರ್ಗಳಲ್ಲಿ ಡೆಲ್ಲಿ 60 ರನ್ ಗಳಿಸಿದೆ.
6ನೇ ಓವರ್ನಲ್ಲೂ 2 ಬೌಂಡರಿ ಬಂದವು.
ಅರ್ಶ್ದೀಪ್ ಓವರ್ನಲ್ಲಿ 2 ಬೌಂಡರಿ 1 ಸಿಕ್ಸರ್ ಬಂತು
ಇಷ್ಟೂ ಬೌಂಡರಿಗಳನ್ನು ಪೃಥ್ವಿ ಬಾರಿಸಿದರು.
ಇದರೊಂದಿಗೆ ಡೆಲ್ಲಿ ಅರ್ಧಶತಕ ಪೂರೈಸಿದೆ.
5 ಓವರ್ ಅಂತ್ಯಕ್ಕೆ 51/0
ರಬಾಡ ಬೌಲ್ ಮಾಡಿದ 4ನೇ ಓವರ್ನಲ್ಲಿ 17 ರನ್ ಬಂತು
ಮೊದಲ ಎಸೆತವನ್ನು ಪೃಥ್ವಿ ಬೌಂಡರಿಗಟ್ಟಿದರು
4 ಮತ್ತು 6ನೇ ಎಸೆತವನ್ನು ವಾರ್ನರ್ ಸಿಕ್ಸರ್ಗಟ್ಟಿದರು.
DC 35/0
3ನೇ ಓವರ್ನಲ್ಲಿ ತಂಡದ ಮೊದಲ ಬೌಂಡರಿ ಬಂತು
ಓವರ್‌ನ 5ನೇ ಎಸೆತವನ್ನು ವಾರ್ನರ್ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರು.
ಕೊನೆಯ ಎಸೆತದಲ್ಲೂ ಬೌಂಡರಿ ಬಂತು
ಡೆಲ್ಲಿ 18/0
ಡೆಲ್ಲಿ ಪರ ವಾರ್ನರ್ ಹಾಗೂ ಪೃಥ್ವಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕರನ್ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಕೇವಲ 4 ರನ್ ಬಂದವು.
ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಶ್ದೀಪ್ ಸಿಂಗ್
ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಿಲೆ ರೊಸ್ಸೊ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಯಶ್ ಧೂಲ್, ಕುಲದೀಪ್ ಯಾದವ್, ಎನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್
ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
10 ವರ್ಷಗಳ ನಂತರ ಧರ್ಮಶಾಲಾದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 15 ರನ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನೊಂದಿಗೆ ಪಂಜಾಬ್ ತಂಡವನ್ನು ಪ್ಲೇ ಆಫ್ನಿಂದ ಹೊರದಬ್ಬಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಾದ ವಾರ್ನರ್ ಮತ್ತು ಪೃಥ್ವಿ ಶಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಲ್ಲದೆ ತಂಡದ ಪರ ಅಬ್ಬರಿಸಿದ ರುಸ್ಸೋ 82 ರನ್ ಬಾರಿಸಿದರು. ಅಂತಿಮವಾಗಿ 20 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಪರ ಲಿವಿಂಗ್ಸ್ಟನ್ 94ರನ್‌ಗಳ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಇದೀಗ ಪಂಬಾಜ್ ಸೋತಿರುವುದು ಆರ್ಸಿಬಿಗೆ ಪ್ಲಸ್ ಪಾಯಿಂಟ್ ತಂದಿದೆ.
Published On - 7:00 pm, Wed, 17 May 23