ಪಾಕಿಸ್ತಾನ್ vs ಅಫ್ಘಾನಿಸ್ತಾನ್ ನಡುವೆ ಖೇಲ್ ಖತಂ?

Pakistan vs Afghanistan: ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಪಾಕಿಸ್ತಾನಿ ವಾಯುಪಡೆಯು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ, ತಾಲಿಬಾನಿಗಳು ಪಾಕಿಸ್ತಾನದ ಮೇಲೂ ದಾಳಿ ನಡೆಸಿದೆ. ಈ ಸಂಘರ್ಷವು ಇದೀಗ ಕ್ರಿಕೆಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಪಾಕಿಸ್ತಾನ್ vs ಅಫ್ಘಾನಿಸ್ತಾನ್ ನಡುವೆ ಖೇಲ್ ಖತಂ?
Pak Vs Afg

Updated on: Oct 14, 2025 | 8:06 AM

ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಿನ ಮಿಲಿಟರಿ ಸಂಘರ್ಷವು ಎರಡೂ ದೇಶಗಳಲ್ಲಿನ ಕ್ರಿಕೆಟ್‌ನ ಮೇಲೂ ಪರಿಣಾಮ ಬೀರಿದೆ. ಇದು 2025ರ ಏಷ್ಯಾ ಕಪ್‌ನಲ್ಲೂ ಪ್ರತಿಬಿಂಬಿಸಿದೆ. ಇದೀಗ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ (PAK vs AFG) ನಡುವೆ ಮಿಲಿಟರಿ ಸಂಘರ್ಷ ಏರ್ಪಟ್ಟಿದೆ. ಈ ಸಂಘರ್ಷವು ಇದೀಗ ಕ್ರಿಕೆಟ್ ಸರಣಿ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ವರದಿಯ ಪ್ರಕಾರ, ಅಫ್ಘಾನ್-ಪಾಕ್ ನಡುವಣ ಸಂಘರ್ಷವು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಲಿರುವ ಮೂರು ರಾಷ್ಟ್ರಗಳ ಟಿ20 ಸರಣಿಯ ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ಈ ಸರಣಿಯಿಂದ ಅಫ್ಘಾನಿಸ್ತಾನ್ ತಂಡವನ್ನು ಹೊರಗಿಡುವ ಸಾಧ್ಯತೆಯಿದೆ.

ಇತ್ತೀಚೆಗೆ, ಪಾಕಿಸ್ತಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿ ಮಿಲಿಟರಿ ಸಂಘರ್ಷ ಏರ್ಪಟ್ಟಿದೆ. ಪಾಕಿಸ್ತಾನಿ ವಾಯುಪಡೆಯು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಅಂದಿನಿಂದ, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ನಡುವಿನ ಡ್ಯುರಾಂಡ್ ರೇಖೆಯ ಉದ್ದಕ್ಕೂ ತೀವ್ರವಾದ ಹೋರಾಟ ಮತ್ತು ವಿವೇಚನಾರಹಿತ ಶೆಲ್ ದಾಳಿಗಳು ನಡೆಯುತ್ತಿವೆ.

ಈ ಮಿಲಿಟರಿ ಸಂಘರ್ಷವು ಎರಡೂ ದೇಶಗಳ ನಡುವಿನ ಸಂಬಂಧಗಳಿಗೆ ಅಪಾಯವನ್ನುಂಟು ಮಾಡಿದೆ. ಇದರಿಂದ ಕ್ರಿಕೆಟ್ ಮೈದಾನದಲ್ಲಿನ ಸಂಬಂಧಗಳು ಸಹ ಹದಗೆಡುವ ಸಾಧ್ಯತೆಯಿದೆ.

ತ್ರಿಕೋನ ಸರಣಿಯಿಂದ ಔಟ್:

ಮುಂದಿನ ತಿಂಗಳು ನಡೆಯಲಿರುವ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ್ ತಂಡವನ್ನು ಬದಲಾಯಿಸುವ ಸಾಧ್ಯತೆಯನ್ನು ಮಂಡಳಿಯು ಪರಿಶೀಲಿಸುತ್ತಿದೆ ಎಂದು ಪಿಸಿಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಟಿ20 ಸರಣಿಯನ್ನು ಯಾವುದೇ ವೆಚ್ಚದಲ್ಲಿ ನಡೆಸಲು ದೃಢನಿಶ್ಚಯ ಹೊಂದಿರುವುದರಿಂದ ಪರ್ಯಾಯಗಳನ್ನು ಅನ್ವೇಷಿಸಲು ಕೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೀಗಾಗಿ ನವೆಂಬರ್​ನಲ್ಲಿ ನಡೆಯಲಿರುವ ಪಾಕಿಸ್ತಾನ್, ಶ್ರೀಲಂಕಾ ತಂಡಗಳೊಂದಿಗಿನ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ್ ತಂಡವನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: IND vs WI: ಪಂದ್ಯದ ನಡುವೆ ಪ್ರಣಯದಾಟ… ಗರ್ಲ್ ​​ಫ್ರೆಂಡ್​ನಿಂದ ಬಿತ್ತು ಏಟು..!

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ಅಫ್ಘಾನಿಸ್ತಾನ್ ತಂಡವನ್ನು ತ್ರಿಕೋನ ಸರಣಿಯಿಂದ ಹೊರಗಿಟ್ಟರೆ, ಪಾಕ್-ಅಫ್ಘಾನ್ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಕೂಡ ಸ್ಥಗಿತಗೊಳ್ಳಬಹುದು. ಹೀಗಾಗಿ ಮುಂದಿನ ತಿಂಗಳು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.