ವೆಲ್ಡಿಂಗ್ ಗ್ಲಾಸ್…. ಪಾಕ್ ಆಟಗಾರನನ್ನು ಹೀಯಾಳಿಸಿದ ಮಾಜಿ ನಾಯಕ
Pakistan vs South Africa, 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 378 ರನ್ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ಸೌತ್ ಆಫ್ರಿಕಾ ತಂಡವು 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 216 ರನ್ಗಳಿಸಿದೆ.
ಲಾಹೋರ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ-ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಪಾಕ್ ತಂಡದ ಮಾಜಿ ನಾಯಕ ರಮೀಝ್ ರಾಜಾ. ಈ ಪಂದ್ಯದ ವೇಳೆ ಕಾಮೆಂಟೇರ್ ಆಗಿ ಕಾಣಿಸಿಕೊಂಡಿರುವ ರಮೀಝ್ ನೀಡುತ್ತಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ.
ಈ ಪಂದ್ಯದ ಮೊದಲ ದಿನದಾಟದಲ್ಲಿ ಬಾಬರ್ ಆಝಂ ಅವರನ್ನು ನಾಟಕ ಮಾಡ್ತಾನೆ ಎನ್ನುವ ಮೂಲಕ ರಮೀಝ್ ರಾಜಾ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದ್ದರು. ಇದೀಗ ಪಾಕ್ ಸ್ಪಿನ್ನರ್ ನೊಮಾನ್ ಅಲಿ ಧರಿಸಿರುವ ಗ್ಲಾಸ್ ಬಗ್ಗೆ ಕಾಮೆಂಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೌಲಿಂಗ್ ವೇಳೆ ನೊಮಾನ್ ಅಲಿ ಧರಿಸಿದ್ದ ಸನ್ ಗ್ಲಾಸ್ ಅನ್ನು ನೋಡಿ, ಈ ಕನ್ನಡಕ ವೆಲ್ಡಿಂಗ್ ಗ್ಲಾಸ್ ರೀತಿ ಇದೆ ಎಂದು ರಮೀಝ್ ರಾಜಾ ಹೀಯಾಳಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ರಮೀಝ್ ರಾಜಾ ಅವರ ಕಾಮೆಂಟ್ರೆ ಬಗ್ಗೆ ಚಕಾರವೆತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 378 ರನ್ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ಸೌತ್ ಆಫ್ರಿಕಾ ತಂಡವು 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 216 ರನ್ಗಳಿಸಿದೆ.

