
ಫ್ಘಾನಿಸ್ತಾನ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಅವರ ಮಾರಕ ಬೌಲಿಂಗ್ ಅಫ್ಘನ್ ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಪರಿಣಾಮವಾಗಿ, ಅಫ್ಘಾನಿಸ್ತಾನದ ಅಗ್ರ ಕ್ರಮಾಂಕದ ನಾಲ್ಕು ವಿಕೆಟ್ಗಳು ಪವರ್ಪ್ಲೇನಲ್ಲೇ ಉರುಳಿದವು. ಪ್ರಸಿದ್ಧ್ ಪಡೆದ ಈ ನಾಲ್ಕು ವಿಕೆಟ್ಗಳಲ್ಲಿ ಮೂರು ವಿಕೆಟ್ಗಳು ಉರುಳಿಸುವುದರ ಹಿಂದೆ ರೋಹಿತ್ ಶರ್ಮಾ (Rohit Sharma) ಅವರ ಪಾತ್ರವೂ ಅಪಾರವಾಗಿತ್ತು. ಅಂದರೆ ಪ್ರಸಿದ್ಧ್ ಉರುಳಿಸಿದ ಮೊದಲ 3 ವಿಕೆಟ್ಗಳು ರೋಹಿತ್ ಹಿಡಿದ ಅದ್ಭುತ ಕ್ಯಾಚ್ನಿಂದಲೇ ಬಂದವು.
ಈ ಮೂಲಕ ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಅನ್ನು ಸಹ ಪೂರ್ಣಗೊಳಿಸಿದರು. ಇದರೊಂದಿಗೆ ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಪಂದ್ಯದಲ್ಲಿ ಮೊದಲ ಸ್ಲಿಪ್ನಲ್ಲಿ ಫಿಲ್ಡಿಂಗ್ಗೆ ನಿಂತಿದ್ದ ರೋಹಿತ್ ಮೊದಲಿಗೆ ಅಫ್ಘನ್ ಆರಂಭಿಕ ರಹಮಾನಲ್ಲಾ ಗುರ್ಬಾಜ್ ಅವರ ಕ್ಯಾಚ್ ತೆಗೆದುಕೊಂಡರು. ನಂತರ ರಹಮತ್ ಶಾ ನೀಡಿದ ಕ್ಯಾಚ್ ಕೂಡ ರೋಹಿತ್ ಕೈ ಸೇರಿತು. ಮೂರನೇ ಕ್ಯಾಚ್ ರೂಪದಲ್ಲಿ ರೋಹಿತ್, ಇಬ್ರಾಹಿಂ ಜದ್ರಾನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ರೋಹಿತ್ ಅಫ್ಘಾನಿಸ್ತಾನದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು.
THE HATTRICK OF C ROHIT B PRASIDH. 🔥
– Rohit Sharma at slips having a busy day. 😄 pic.twitter.com/0vzz1ApECM
— Mufaddal Vohra (@mufaddal_vohra) June 20, 2026
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಒಂದೇ ಬೌಲರ್‌ನ ಬೌಲಿಂಗ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದು, ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಏಕದಿನ ಪಂದ್ಯಗಳಲ್ಲಿ ಒಬ್ಬ ಬೌಲರ್‌ನ ಬೌಲಿಂಗ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರರಾಗಿದ್ದರು. ಲಕ್ಷ್ಮಣ್ 2004 ರಲ್ಲಿ ಇರ್ಫಾನ್ ಪಠಾಣ್ ಬೌಲಿಂಗ್‌ನಲ್ಲಿ ಈ ಸಾಧನೆ ಮಾಡಿದ್ದರೆ, ಶಿಖರ್ ಧವನ್ 2018 ರಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಈ ಸಾಧನೆ ಮಾಡಿದ್ದರು. ಈಗ, 8 ವರ್ಷಗಳ ನಂತರ, ಅಂದರೆ 2026 ರಲ್ಲಿ, ರೋಹಿತ್ ಈ ಸಾಧನೆ ಮಾಡಿದ್ದಾರೆ.
IND vs AFG: 6 ರನ್ಗೆ 4 ವಿಕೆಟ್..! ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘನ್
ಅಫ್ಘಾನಿಸ್ತಾನ ವಿರುದ್ಧದ ಪವರ್‌ಪ್ಲೇನಲ್ಲಿ ಪ್ರಸಿದ್ಧ್ ಕೃಷ್ಣ ಐದು ಓವರ್‌ಗಳನ್ನು ಬೌಲ್ ಮಾಡಿ ಕೇವಲ ಆರು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಪ್ರಸಿದ್ಧ್ ಕೃಷ್ಣ ಏಕದಿನ ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದು ಇದೇ ಮೊದಲು. ಹಾಗೆಯೇ ಪವರ್‌ಪ್ಲೇನಲ್ಲಿ ಭಾರತೀಯ ಬೌಲರ್‌ನ ಎರಡನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿರುವ ಮೊಹಮ್ಮದ್ ಸಿರಾಜ್, ಕೇವಲ ಏಳು ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.