WTC Final 2023: ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​ಗೆ ಇಂಜುರಿ..!

|

Updated on: May 19, 2023 | 9:28 PM

WTC Final 2023: ಈ ಗಾಯದ ಗಂಭೀರತೆಯ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಟೀಂ ಇಂಡಿಯಾಗೆ ಇದು ಖಂಡಿತವಾಗಿಯೂ ಆತಂಕಕಾರಿ ವಿಷಯವಾಗಿದೆ.

WTC Final 2023: ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​ಗೆ ಇಂಜುರಿ..!
ಟೀಂ ಇಂಡಿಯಾ
Follow us on

ಐಪಿಎಲ್ 16ನೇ (IPL 2023) ಸೀಸನ್ ನಂತರ ಟೀಂ ಇಂಡಿಯಾ (Team India) ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್ ಪಂದ್ಯವನ್ನು ಆಡಲಿದೆ. ಮೊದಲ ಆವೃತ್ತಿಯಲ್ಲಿ ಟೀಂ ಇಂಡಿಯಾಕ್ಕೆ ಕಿವೀಸ್ ಎದುರಾಳಿಯಾಗಿದ್ದರೆ, ಎರಡನೇ ಆವೃತ್ತಿಯಲ್ಲಿ ಆಸೀಸ್ ಎದುರಾಗಿದೆ. ಈ ಗ್ರ್ಯಾಂಡ್ ಫೈನಲ್ ಪಂದ್ಯಕ್ಕೆ ಎರಡೂ ತಂಡಗಳನ್ನು ಪ್ರಕಟಿಸಲಾಗಿದೆ. ಆದರೆ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಹಲವು ಆಟಗಾರರ ಗಾಯದ ಸಮಸ್ಯೆಯಿಂದ ಚಿಂತೆಗೀಡಾಗಿದೆ. ಟೀಂ ಇಂಡಿಯಾದ ನಂಬಿಕಸ್ತ ಬ್ಯಾಟರ್ ಕೆಎಲ್ ರಾಹುಲ್ (KL Rahul) ಗಾಯಗೊಂಡಿರುವ ಕಾರಣ ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದ್ದಾರೆ. ಹಾಗಾಗಿ ರಾಹುಲ್ ಬದಲಿಗೆ ಇಶಾನ್ ಕಿಶನ್​ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಮತ್ತೊಂದೆಡೆ ಶಾರ್ದೂಲ್ ಠಾಕೂರ್ ಮತ್ತು ಜಯದೇವ್ ಉನದ್ಕಟ್ (Shardul Thakur and Jaydev Unadkat) ಗಾಯಗೊಂಡಿದ್ದು, ಈ ಇಬ್ಬರ ಬಗ್ಗೆ ಬಿಸಿಸಿಐ (BCCI) ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಅಶ್ವಿನ್​ಗೆ ಇಂಜುರಿ

ಈ ಗಾಯದ ಆಘಾತದಿಂದ ಟೀಮ್ ಇಂಡಿಯಾ ಚೇತರಿಸಿಕೊಳ್ಳುವ ಮೊದಲೆ ಮತ್ತೊಂದು ಆಘಾತ ಎದುರಾಗಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಆರ್ ಅಶ್ವಿನ್ ಗಾಯದ ಸಮಸ್ಯೆಯಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ನಡೆಯುತ್ತಿದೆ. ಬೆನ್ನಿನ ಗಾಯದಿಂದಾಗಿ ಅಶ್ವಿನ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗಾಗಿ ಅಶ್ವಿನ್ ಬದಲಿಗೆ ಆಡಮ್ ಝಂಪಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

IPL 2023 DC vs CSK Live Streaming: ಗೆದ್ದರಷ್ಟೇ ಚೆನ್ನೈಗೆ ಉಳಿಗಾಲ! ಪಂದ್ಯ ಎಷ್ಟು ಗಂಟೆಗೆ ಆರಂಭ?

ಈ ಗಾಯದ ಗಂಭೀರತೆಯ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಟೀಂ ಇಂಡಿಯಾಗೆ ಇದು ಖಂಡಿತವಾಗಿಯೂ ಆತಂಕಕಾರಿ ವಿಷಯವಾಗಿದೆ. ಏತನ್ಮಧ್ಯೆ, ಈ ಗಾಯದಿಂದ ಅಶ್ವಿನ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

WTC ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್.

WTC ಫೈನಲ್‌ಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ ಮತ್ತು ಮ್ಯಾಥ್ಯೂ ರೆನ್ಶಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ