Shaheen Afridi: ಶಾಹಿನ್ ಅಫ್ರಿದಿ ಡೆಡ್ಲಿ ಯಾರ್ಕರ್​​​ಗೆ ಆಸ್ಪತ್ರೆ ಸೇರಿಕೊಂಡ ಅಫ್ಘಾನಿಸ್ತಾನ ಬ್ಯಾಟರ್: ವಿಡಿಯೋ ನೋಡಿ

| Updated By: Vinay Bhat

Updated on: Oct 20, 2022 | 8:23 AM

PAK vs AFG, T20 World Cup warm-up: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾರಕ ವೇಗಿ ಶಾಹಿನ್ ಅಫ್ರಿದಿ ಫಿಟ್ನೆಸ್ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಹೀಗಿರುವಾಗ ಅಫ್ರಿದಿ ಸ್ಟನ್ನಿಂಗ್ ಯಾರ್ಕರ್ ಮೂಲಕ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

Shaheen Afridi: ಶಾಹಿನ್ ಅಫ್ರಿದಿ ಡೆಡ್ಲಿ ಯಾರ್ಕರ್​​​ಗೆ ಆಸ್ಪತ್ರೆ ಸೇರಿಕೊಂಡ ಅಫ್ಘಾನಿಸ್ತಾನ ಬ್ಯಾಟರ್: ವಿಡಿಯೋ ನೋಡಿ
Shaheen Afridi yorker
Follow us on

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಈಗ ಅರ್ಹಾತ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಇದರ ನಡುವೆ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿರುವ ತಂಡಗಳು ಅಭ್ಯಾಸ ಪಂದ್ಯವನ್ನು ಆಡಿವೆ. ಒಂದು ತಂಡಕ್ಕೆ ತಲಾ ಎರಡು ಅಧಿಕೃತ ವಾರ್ಮ್-ಅಪ್ ಮ್ಯಾಚ್ ಆಯೋಜಿಸಲಾಗಿತ್ತು. ಇದರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ನ್ಯೂಜಿಲೆಂಡ್ (India vs New Zealand) ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇತ್ತ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಸೋತರೆ ಅಫ್ಘಾನಿಸ್ತಾನ (Pakistan vs Afghanistan) ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳದೆ ಅರ್ಧದಲ್ಲೇ ಮೊಟಕುಗೊಳಿಸ ಬೇಕಾಯಿತು. ಬುಧವಾರ ಬ್ರಿಸ್ಬೇನ್​ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಣ ಕೊನೆಯ ಅಭ್ಯಾಸ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾರಕ ವೇಗಿ ಶಾಹಿನ್ ಅಫ್ರಿದಿ ಫಿಟ್ನೆಸ್ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಹೀಗಿರುವಾಗ ಅಫ್ರಿದಿ ಸ್ಟನ್ನಿಂಗ್ ಯಾರ್ಕರ್ ಮೂಲಕ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಕ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್​ನಲ್ಲೇ ಅಫ್ಘಾನ್ ವಿಕೆಟ್ ಕಳೆದುಕೊಂಡಿತು. ಶಾಹಿನ್ ಅಫ್ರಿದಿ ಎಸೆದ ಮಾರಕ ಯಾರ್ಕರ್ ವಿಕೆಟ್ ಕೀಪರ್ ಬ್ಯಾಟರ್ ರೆಹ್ಮತುಲ್ಲ ಗುರ್ಬಜ್ ಅವರ ಕಾಲಿಗೆ ಬಡಿದು ಔಟಾದರು.

ಇದನ್ನೂ ಓದಿ
T20 World Cup: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಭಾರತ- ಪಾಕ್ ಮುಖಾಮುಖಿಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
T20 World Cup 2022: ಟಿ20 ವಿಶ್ವಕಪ್​ನಲ್ಲಿನ ಈ 5 ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ..!
Team India: ತಲೆಕೆಳಗಾದ ರೋಹಿತ್ ಶರ್ಮಾ ಲೆಕ್ಕಚಾರ: ಮೂವರಲ್ಲಿ ಯಾರಿಗೆ ಅವಕಾಶ..?
T20 World Cup 2022: ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುತ್ತಾ? ಅಚ್ಚರಿಯ ಉತ್ತರ ನೀಡಿದ ಕಪಿಲ್ ದೇವ್

ಚೆಂಡು ಕಾಲಿಗೆ ಬಡಿದ ರಭಸಕ್ಕೆ ರೆಹ್ಮತುಲ್ಲ ಗುರ್ಬಜ್ ಅವರಿಗೆ ತಡೆಯಲಾರದ ನೋವಾಗಿದೆ. ನಡೆಯಲೂ ಸಾಧ್ಯವಾಗದೆ ಪಿಚ್​ನಲ್ಲಿ ಒಂದು ಕಾಲ ಮೇಲೆ ನಿಂತರು. ನಂತರ ಸಹ ಆಟಗಾರ ಬಂದು ಗುರ್ಬಜ್ ಅವರನ್ನು ಪೆವಿಲಿಯನ್​ಗೆ ಕರೆದುಕೊಂಡು ಹೋಗಿದ್ದಾರೆ. ನೋವು ಅತಿಯಾಗಿ ಇದ್ದ ಕಾರಣ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಾಹಿನ್ ಅಫ್ರಿದಿ ತನ್ನ ಎರಡನೇ ಓವರ್​ನಲ್ಲಿ ಹಜ್ರತುಲ್ಲ ಜಜಾಯ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮತ್ತೊಂದು ವಿಕೆಟ್ ಕೂಡ ಪಡೆದುಕೊಂಡರು.

 

ಅಫ್ಘಾನ್ ಪರ ದಾರ್ವಿಶ್ ರಸೂಲಿ 3 ಹಾಗೂ ನಜಿಬುಲ್ಲ 6 ರನ್​ಗೆ ನಿರ್ಗಮಿಸಿದರು. ನಂತರ ಇಬ್ರಾಹೀಂ ಜರ್ದನ್ ಹಾಗೂ ನಾಯಕ ಮೊಹಮ್ಮದ್ ನಬಿ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಆಧಾರವಾಗಿ ನಿಂತರು. ಜರ್ದನ್ 34 ಎಸೆತಗಳಲ್ಲಿ 35 ರನ್ ಗಳಿಸಿದರೆ, ನಬಿ 37 ಎಸೆತಗಳಲ್ಲಿ ಅಜೇಯ 51 ರನ್ ಸಿಡಿಸಿದರು. ಕೊನೆಯಲ್ಲಿ ಉಸ್ಮಾನ್ ಘನಿ ಕೂಡ 20 ಎಸೆತಗಳಲ್ಲಿ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಪರಿಣಾಮ ಅಫ್ಘಾನಿಸ್ತಾನ 20 ಒವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ 2.2 ಒವರ್​ನಲ್ಲಿ 19 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಕೊಂಚ ಸಮಯ ಕಾದರೂ ಮಳೆ ಕಡಿಮೆಯಾಗದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಯಿತು. ಈ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿದ್ದ ತಂಡಗಳ ಎಲ್ಲ ಅಭ್ಯಾಸ ಪಂದ್ಯ ಮುಕ್ತಾಯಗೊಂಡಿದೆ. ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುವ ಮೂಲಕ ಗ್ರೂಪ್ 1 ರಲ್ಲಿ ಮೊದಲ ಸೂಪರ್ 12 ಆರಂಭವಾಗಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 23 ರಂದು ಮುಖಾಮುಖಿ ಆಗುವ ಮೂಲಕ ಟಿ20 ವಿಶ್ವಕಪ್ 2022 ರಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

Published On - 8:12 am, Thu, 20 October 22