AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್​ಗೆ ಟೀಂ ಇಂಡಿಯಾ ಬರದಿದ್ದರೆ ವಿಶ್ವಕಪ್​ಗೆ ನಾವೂ ಸಹ ಬರುವುದಿಲ್ಲ! ಪಾಕ್ ಮಂಡಳಿ; ವರದಿ

ಮುಂದಿನ ವರ್ಷ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಎಂಬ ಎರಡು ದೊಡ್ಡ ಟೂರ್ನಿಗಳು ನಡೆಯಲಿವೆ. ಏಷ್ಯಾಕಪ್ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಪಾಕಿಸ್ತಾನ ಈ ಟೂರ್ನಿಗೆ ಆತಿಥ್ಯ ವಹಿಸಲಿದೆ. ಇದಾದ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.

ಏಷ್ಯಾಕಪ್​ಗೆ ಟೀಂ ಇಂಡಿಯಾ ಬರದಿದ್ದರೆ ವಿಶ್ವಕಪ್​ಗೆ ನಾವೂ ಸಹ ಬರುವುದಿಲ್ಲ! ಪಾಕ್ ಮಂಡಳಿ; ವರದಿ
ind vs pak
TV9 Web
| Edited By: |

Updated on:Oct 19, 2022 | 10:47 AM

Share

ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಮುಂದಿನ ಆವೃತ್ತಿಯ ಏಷ್ಯಾಕಪ್​ನಿಂದ (Asia Cup 2023) ಟೀಂ ಇಂಡಿಯಾ ಹಿಂದೆ ಸರಿಯುವ ನಿರ್ಧಾರವನ್ನು ಬಿಸಿಸಿಐನ (BCCI) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡಿದ್ದು, ಈ ಮಾಹಿತಿಯನ್ನು ಮಂಡಳಿಯ ಕಾರ್ಯದರ್ಶಿ ಜೈ ಶಾ (Jay Shah) ಕೂಡ ನಿನ್ನೆ ಬಹಿರಂಗಗೊಳಿಸಿದ್ದರು. ಕ್ರಿಕೆಟ್​ ಬಿಗ್​ಬಾಸ್​ಗಳ ಈ ನಿರ್ಧಾರದಿಂದ ಕಂಗೆಟ್ಟಿರುವ ಪಾಕ್ ಮಂಡಳಿ ಕೂಡ ಬಿಸಿಸಿಐಗೆ ಟಕ್ಕರ್ ನೀಡಲು ಸಿದ್ಧವಾಗಿದ್ದು, ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್​ಗೆ ಟೀಂ ಇಂಡಿಯಾ ಬರದಿದ್ದರೆ, ನಾವು ಸಹ ಮುಂದಿನ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ನಿಂದ (ODI World Cup) ಹಿಂದೆ ಸರಿಯುವುದಾಗಿ ಪಾಕ್ ಮಂಡಳಿ ನಿರ್ಧರಿಸಿರುವುದಾಗಿ ವರದಿಯಾಗಿದೆ.

ಮುಂದಿನ ವರ್ಷ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಎಂಬ ಎರಡು ದೊಡ್ಡ ಟೂರ್ನಿಗಳು ನಡೆಯಲಿವೆ. ಏಷ್ಯಾಕಪ್ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಪಾಕಿಸ್ತಾನ ಈ ಟೂರ್ನಿಗೆ ಆತಿಥ್ಯ ವಹಿಸಲಿದೆ. ಇದಾದ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಏಷ್ಯಾಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಬಿಟ್ಟು ಬೇರೆ ಸ್ಥಳದಲ್ಲಿ ಆಯೋಜಿಸುವುದಾದರೆ ಟೀಂ ಇಂಡಿಯಾ ಏಷ್ಯಾಕಪ್ ಆಡಲಿದೆ ಎಂದು ಜೈ ಶಾ ಹೇಳಿದ್ದರು. ಈ ಹಿಂದೆಯೂ ಕೂಡ ಪಾಕ್​ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್​ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ: Big News: ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಾವು ಸಿದ್ಧ ಎಂದ ಬಿಸಿಸಿಐ..! ಆದರೆ..?

ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುತ್ತಾ ಪಾಕಿಸ್ತಾನ

ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜಕೀಯ ಅರಾಜಕತೆಯಿಂದಾಗಿ ಈ ಎರಡು ದೇಶಗಳು ಕಳೆದ ಹಲವು ವರ್ಷಗಳಿಂದ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ. ಹೀಗಾಗಿ ಏಷ್ಯಾಕಪ್ ಮತ್ತು ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಎರಡು ತಂಡಗಳು ಪರಸ್ಪರ ಆಡುತ್ತಿವೆ. 2008 ರಲ್ಲಿ ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಆದರೆ ಪಾಕಿಸ್ತಾನ ಕೊನೆಯ ಬಾರಿಗೆ 2012 ರಲ್ಲಿ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿತು. ಆದರೀಗ ಬಿಸಿಸಿಐನ ಈ ನಿರ್ಧಾರ ಪಾಕ್ ಮಂಡಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಏಕೆಂದರೆ ಏಷ್ಯಾಕಪ್​ನಲ್ಲಿ ಭಾರತ ಆಡದಿದ್ದರೆ, ಪಾಕ್ ಮಂಡಳಿ ಹಾಗೂ ಎಸಿಸಿಗೆ ಭಾರೀ ನಷ್ಟ ಉಂಟಾಗಲಿದೆ. ಹೀಗಾಗಿ ಭಾರತದ ಈ ನಿಲುವಿಗೆ ಪಾಕಿಸ್ತಾನ ಕೂಡ ಟಕ್ಕರ್ ನಿಡಲು ಮುಂದಾಗಿದ್ದು, ಶಾ ಅವರ ಹೇಳಿಕೆಯ ನಂತರ ಪಾಕಿಸ್ತಾನ ಕೂಡ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ಚಿಂತಿಸಲಿದೆ ಎಂದು ಪಾಕ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಅವರ ನಿಕಟ ಮೂಲಗಳು ತಿಳಿಸಿವೆ.

ಐಸಿಸಿ ಮತ್ತು ಎಸಿಸಿಗೆ ನಷ್ಟ

ಪಿಟಿಐ ವರದಿ ಮಾಡಿರುವ ಸುದ್ದಿ ಪ್ರಕಾರ, ಪಿಸಿಬಿ ಈಗ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಾಗಿದ್ದು, ಈ ಎರಡು ಕ್ರೀಡಾಕೂಟಗಳಲ್ಲಿ ಪಾಕಿಸ್ತಾನ ಮತ್ತು ಭಾರತ ಆಡದಿದ್ದರೆ, ಐಸಿಸಿ ಮತ್ತು ಎಸಿಸಿಗೆ ಖಜಾನೆಗೆ ಬರುವ ಆದಾಯವೂ ಕಡಿಮೆಯಾಗುವುದಲ್ಲದೆ, ಭಾರೀ ನಷ್ಟ ಉಂಟಾಗಲಿದೆ. ಆದರೆ, ಜೈ ಶಾ ಹೇಳಿಕೆಗೆ ಪಾಕಿಸ್ತಾನ ಮಂಡಳಿ ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಕ್ ತನ್ನ ವರಸೆ ಬದಲಾಯಿಸಿ ಏಷ್ಯಾಕಪ್ ಟೂರ್ನಿಯನ್ನು ಬೇರೆಡೆ ಆಯೋಜಿಸಲು ಮುಂದಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಎಸಿಸಿಯ ತುರ್ತು ಸಭೆ ಕರೆಯಲು ಮುಂದಾದ ಪಾಕಿಸ್ತಾನ

ಮುಂದಿನ ತಿಂಗಳು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಐಸಿಸಿ ಮಂಡಳಿ ಸಭೆಯಲ್ಲಿ ಈ ವಿಚಾರವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ. ಶಾ ಅವರ ಹೇಳಿಕೆಯಿಂದ ರಮೀಜ್ ರಾಜಾ ಸೇರಿದಂತೆ ಅನೇಕ ಅಧಿಕಾರಿಗಳು ಆಘಾತಕ್ಕೊಳಗಾಗಿದ್ದು, ಭಾರತದ ಈ ನಿಲುವಿನ ವಿರುದ್ಧ ಕೆಲವು ದೊಡ್ಡ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ವರದಿಗಳ ಪ್ರಕಾರ, ರಮೀಜ್ ರಾಜಾ ಈ ವಿಷಯದ ಬಗ್ಗೆ ಎಸಿಸಿಗೆ ಪತ್ರವನ್ನು ಬರೆಯಲು ನಿರ್ಧರಿಸಿದ್ದು, ಬಿಸಿಸಿಐನ ಈ ಹೇಳಿಕೆಯನ್ನು ಚರ್ಚಿಸಲು ಮೆಲ್ಬೋರ್ನ್‌ನಲ್ಲಿ ಎಸಿಸಿಯ ತುರ್ತು ಸಭೆಯನ್ನು ಕರೆಯುವಂತೆ ಒತ್ತಾಯಿಸಲಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Wed, 19 October 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್