Yashasvi Jaiswal Century: ಯಶಸ್ವಿ ಜೈಸ್ವಾಲ್​ನ ಈ ಶಾಟ್​ಗೆ ದಂಗಾದ ರಾಹುಲ್ ದ್ರಾವಿಡ್: ಏನು ಮಾಡಿದ್ರು ನೋಡಿ

|

Updated on: Feb 18, 2024 | 7:48 AM

Rahul Dravid and Yashasvi Jaiswal: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ ಬಿರುಸಿನ ಶತಕವನ್ನು ಗಳಿಸಿದರು. ತನ್ನ ಅದ್ಭುತ ಹೊಡೆತದ ಮೂಲಕ ಗಮನ ಸೆಳೆದ ಇವರು, ಲೆಗ್-ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್​ನಲ್ಲಿ ರಿವರ್ಸ್ ಸ್ವೀಪ್ ಆಡಿದ್ದು ಅಮೋಘವಾಗಿತ್ತು. ಇದನ್ನು ಕಂಡು ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ.

Yashasvi Jaiswal Century: ಯಶಸ್ವಿ ಜೈಸ್ವಾಲ್​ನ ಈ ಶಾಟ್​ಗೆ ದಂಗಾದ ರಾಹುಲ್ ದ್ರಾವಿಡ್: ಏನು ಮಾಡಿದ್ರು ನೋಡಿ
Jaiswal reverse sweep and Rahul Dravid
Follow us on

ಇಂಗ್ಲೆಂಡ್ ವಿರುದ್ಧದ ರಾಜ್​ಕೋಟ್ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತದ ಬ್ಯಾಟಿಂಗ್​ನಿಂದ ರನ್ ಮಳೆ ಸುರಿಯಿತು. ಇದು ಬಂದಿದ್ದು ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಬ್ಯಾಟ್‌ನಿಂದ. ಯಶಸ್ವಿ ಅದ್ಭುತ ಶತಕ ಗಳಿಸಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಭಾರಿ ಮುನ್ನಡೆ ತಂದುಕೊಟ್ಟರು. ಇದು ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅವರ ಎರಡನೇ ಶತಕವಾಗಿದೆ, ಮತ್ತು ಟೆಸ್ಟ್ ವೃತ್ತಿಜೀವನದ ಮೂರನೇ ಶತಕ. ಭಾರತ ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಇಂಗ್ಲೆಂಡ್ ವಿರುದ್ಧ 126 ರನ್​ಗಳ ಮುನ್ನಡೆ ಸಾಧಿಸಿತ್ತು, ಆದ್ದರಿಂದ ಎರಡನೇ ಇನ್ನಿಂಗ್ಸ್​ನಲ್ಲಿ ದೊಡ್ಡ ಸ್ಕೋರ್ ಮಾಡಬೇಕಾಗಿತ್ತು. ಇಲ್ಲಿ ಈ ಜವಾಬ್ದಾರಿ ಹೊತ್ತಿದ್ದು ಯಶಸ್ವಿ ಜೈಸ್ವಾಲ್.

ಆರಂಭದಲ್ಲಿ ಜೈಸ್ವಾಲ್ ಸ್ವಲ್ಪ ನಿಧಾನವಾಗಿ ಬ್ಯಾಟ್ ಮಾಡಿದರೂ ನಂತರ ಕೊನೆಯ ಸೆಷನ್‌ನಲ್ಲಿ ಸಂಪೂರ್ಣವಾಗಿ ಇಂಗ್ಲೆಂಡ್ ಮೇಲೆ ದಾಳಿ ನಡೆಸಿದರು. ತನ್ನ ಅದ್ಭುತ ಶಾಟ್ ಮೂಲಕ ಗಮನ ಸೆಳೆದರು. ಅದರಲ್ಲೂ ಇವರು ಹೊಡೆದ ​ಗೆ ಸ್ವತಃ ಕೋಚ್ ರಾಹುಲ್ ದ್ರಾವಿಡ್ ಫಿದಾ ಆದರು. ರೆಹಾನ್ ಅಹ್ಮದ್ ಬೌಲಿಂಗ್​ನಲ್ಲಿ ಒಂದಲ್ಲ ಎರಡು ರಿವರ್ಸ್ ಸ್ವೀಪ್ ಹೊಡೆದು ಚೆಂಡನ್ನು ಬೌಂಡರಿಗೆ ಅಟ್ಟಿದರು. ಇದನ್ನು ಕಂಡು ಮುಖ್ಯ ಕೋಚ್ ರಾಹುಲ್ ಅವರು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ನಗುತ್ತಿರುವುದು ಕಂಡುಬಂತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯಶಸ್ವಿ ಜೈಸ್ವಾಲ್ ಅಮೋಘ ಶತಕಕ್ಕೆ 3 ಕ್ರಿಕೆಟಿಗರ ವೃತ್ತಿಜೀವನ ಅಂತ್ಯ: ಯಾರು ನೋಡಿ

ಯಶಸ್ವಿ ಜೈಸ್ವಾಲ್ ರಿವರ್ಸ್ ಸ್ವೀಪ್ ಶಾಟ್​ಗೆ ದ್ರಾವಿಡ್ ರಿಯಾಕ್ಷನ್ ವಿಡಿಯೋ:

 

ಯಶಸ್ವಿ ಜೈಸ್ವಾಲ್ ಈ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು. ಮೊದಲು ಅವರು 54 ಎಸೆತಗಳಲ್ಲಿ ಗಳಿಸಿದ್ದು ಕೇವಲ 19 ರನ್ ಮಾತ್ರ. ಆದರೆ ನಂತರ ಅವರು ಕೇವಲ 122 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಜೈಸ್ವಾಲ್ ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಜೊತೆಗೆ ಕೆಲ ದಾಖಲೆಯನ್ನು ಕೂಡ ಸೃಷ್ಟಿಸಿದರು.

ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಯಶಸ್ವಿ ಜೈಸ್ವಾಲ್..!

ಯಶಸ್ವಿ ಜೈಸ್ವಾಲ್ ಅವರ ವೃತ್ತಿ ಜೀವನದ ಮೂರನೇ ಶತಕ ಇದಾಗಿದ್ದು, ಇದರೊಂದಿಗೆ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಜೈಸ್ವಾಲ್ ತಮ್ಮ ವೃತ್ತಿಜೀವನದ ಮೊದಲ 3 ಶತಕಗಳನ್ನು ಕೇವಲ 13 ಇನ್ನಿಂಗ್ಸ್‌ಗಳಲ್ಲಿ ಪೂರ್ಣಗೊಳಿಸಿದರು, ಸೆಹ್ವಾಗ್ ಕೂಡ ಅದೇ ಸಾಧನೆ ಮಾಡಿದ್ದರು. ಮೊದಲ 13 ಇನ್ನಿಂಗ್ಸ್‌ಗಳಲ್ಲಿ ಸೆಹ್ವಾಗ್ ಅವರ ಸರಾಸರಿ 53 ಮತ್ತು 3 ಶತಕಗಳು ಇದ್ದವು, ಜೈಸ್ವಾಲ್ ಅವರ ಸರಾಸರಿ 62 ಮತ್ತು 3 ಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ 3 ಶತಕಗಳನ್ನು ಗಳಿಸಿದ ಜೈಸ್ವಾಲ್, ಒಟ್ಟಾರೆಯಾಗಿ ಏಳನೇ ಬ್ಯಾಟ್ಸ್‌ಮನ್ ಆಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ