IND vs ENG 3rd Test: ಯಶಸ್ವಿ ಜೈಸ್ವಾಲ್ ಅಮೋಘ ಶತಕಕ್ಕೆ 3 ಕ್ರಿಕೆಟಿಗರ ವೃತ್ತಿಜೀವನ ಅಂತ್ಯ: ಯಾರು ನೋಡಿ

Yashasvi Jaiswal: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸುತ್ತಿರುವ ಭಾರತದ ಯುವ ಸ್ಟಾರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕೆಲ ಟೀಮ್ ಇಂಡಿಯಾ ಆಟಗಾರರ ಬಾಗಿಲು ಮುಚ್ಚಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

Vinay Bhat
|

Updated on: Feb 18, 2024 | 7:09 AM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತದ ಪರ ಅದ್ಭುತ ಶತಕ ಬಾರಿಸಿ ಆಂಗ್ಲರ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡಿದರು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿನ ಆಸೆ ದೂರವಾಗಿದೆ.

1 / 7
ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಸಂಚಲನ ಮೂಡಿಸಿದ ರೀತಿ, ಅವರು ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವುದು. 22 ವರ್ಷದ ಯುವ ಆಟಗಾರ ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ 3 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ ಮೂರು ಟೆಸ್ಟ್ ಶತಕಗಳನ್ನು ಗಳಿಸಿದ ವೇಗದ ಭಾರತೀಯರ ಪಟ್ಟಿಯಲ್ಲಿ ಸಹ ಸೇರಿಕೊಂಡಿದ್ದಾರೆ.

2 / 7
ಹೀಗಿರುವಾಗ ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಸ್ಥಾನ ಖಾತ್ರಿಯಾಗಿದೆ. ಇದರೊಂದಿಗೆ ಕೆಲ ಸ್ಪರ್ಧಿಗಳ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಇವರ ಬ್ಯಾಟಿಂಗ್ ಅಬ್ಬರದಿಂದ ಕೆಲ ಟೀಮ್ ಇಂಡಿಯಾ ಆಟಗಾರರ ಬಾಗಿಲು ಮುಚ್ಚಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

3 / 7
ಪೃಥ್ವಿ ಶಾ: 24 ವರ್ಷದ ಪೃಥ್ವಿ ಶಾ ಭಾರತಕ್ಕಾಗಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 2020 ರಲ್ಲಿ ಕೊನೆಯ ಟೆಸ್ಟ್ ಆಡಿದ್ದಾರೆ. ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರವಿದ್ದ ಅವರು ಇತ್ತೀಚೆಗಷ್ಟೇ ವಾಪಸಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಟೀಮ್ ಇಂಡಿಯಾಗೆ ಮರಳುವುದು ಕಷ್ಟ ಎನಿಸುತ್ತಿದೆ.

4 / 7
ಮಯಾಂಕ್ ಅಗರ್ವಾಲ್: 33 ವರ್ಷದ ಮಯಾಂಕ್ ಭಾರತದ ಓಪನರ್ ಆಗಿದ್ದರು, ಆದರೆ ಅವರು 2022 ರಿಂದ ತಂಡದಿಂದ ಹೊರಗಿದ್ದಾರೆ. ಮಯಾಂಕ್ ಅವರು ಭಾರತಕ್ಕಾಗಿ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅವರ ಹೆಸರಿನಲ್ಲಿ 4 ಶತಕಗಳಿವೆ. ಆದರೆ ಇದೀಗ ರೋಹಿತ್-ಜೈಸ್ವಾಲ್ ಜೋಡಿ ಕನ್ಫರ್ಮ್ ಆಗಿರುವುದರಿಂದ ಅವರ ಹಾದಿ ಸುಲಭವಲ್ಲ.

5 / 7
ಅಭಿಮನ್ಯು ಈಶ್ವರನ್: 28 ವರ್ಷದ ಅಭಿಮನ್ಯು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ, ಅವರಿಗೆ ಟೀಮ್ ಇಂಡಿಯಾ ಎರಡು-ಮೂರು ಬಾರಿ ಅವಕಾಶ ನೀಡಿದೆ. ಆದರೆ ಪ್ಲೇಯಿಂಗ್-11 ರಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಇದೀಗ ಟೀಮ್ ಇಂಡಿಯಾದಲ್ಲಿ ಹಲವು ಓಪನರ್‌ಗಳಿರುವುದರಿಂದ ಅವರ ವಾಪಸಾತಿ ಕೂಡ ಸಾಧ್ಯವಾಗಿಲ್ಲ.

6 / 7
ಈ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಇದುವರೆಗೆ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 435 ರನ್ ಗಳಿಸಿದ್ದಾರೆ. ಇದು ಬ್ಯಾಟ್ಸ್‌ಮನ್‌ ಒಬ್ಬರ ಗರಿಷ್ಠ ಸ್ಕೋರ್ ಆಗಿದೆ. ಜೈಸ್ವಾಲ್ ವೃತ್ತಿಜೀವನದಲ್ಲಿ ಇದುವರೆಗೆ ಕೇವಲ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರಷ್ಟೆ. ಆದರೆ, ಅವರ ಸರಾಸರಿ 60 ರಷ್ಟಿದೆ. ಇವುಗಳಲ್ಲಿ ಒಂದು ದ್ವಿಶತಕ, ಎರಡು ಶತಕ ಸಿಡಿಸಿದ್ದಾರೆ.

7 / 7
Follow us