U19 World cup: ದಾಖಲೆ ಬರೆದ ರಾಜ್ ಬಾವಾ: ಭಾರತಕ್ಕೆ 326 ರನ್​ಗಳ ಗೆಲುವು, ಕಲೆಹಾಕಿದ ರನ್​ ಎಷ್ಟು ಗೊತ್ತೇ?

| Updated By: Vinay Bhat

Updated on: Jan 23, 2022 | 8:37 AM

Raj Bawa, India U19 vs Uganda U19: ಶನಿವಾರ ಬ್ರಿಯಾನ್ ಲಾರ ಸ್ಟೇಡಿಯಂನಲ್ಲಿ ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ತಂಡ ಬರೋಬ್ಬರಿ 326 ರನ್​ಗಳ ದಾಖಲೆಯ ಗೆಲುವು ಕಂಡಿತು. ಅಜೇಯ 162 ರನ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ ರಾಜ್ ಬಾವಾ ಉಗಾಂಡ ಬೌಲರ್​ಗಳನ್ನು ಧೂಳೀಪಟ ಮಾಡಿದರು.

U19 World cup: ದಾಖಲೆ ಬರೆದ ರಾಜ್ ಬಾವಾ: ಭಾರತಕ್ಕೆ 326 ರನ್​ಗಳ ಗೆಲುವು, ಕಲೆಹಾಕಿದ ರನ್​ ಎಷ್ಟು ಗೊತ್ತೇ?
Raj Bawa, India U19 vs Uganda U19
Follow us on

ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ – 19 ವಿಶ್ವಕಪ್​ನಲ್ಲಿ (ICC U19 World cup) ಭಾರತದ ಕಿರಿಯ ಆಟಗಾರರು ಧೂಳೆಬ್ಬಿಸುತ್ತಿದ್ದಾರೆ. ಶನಿವಾರ ಬ್ರಿಯಾನ್ ಲಾರ ಸ್ಟೇಡಿಯಂನಲ್ಲಿ ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ತಂಡ (India U19 vs Uganda U19) ಬರೋಬ್ಬರಿ 326 ರನ್​ಗಳ ದಾಖಲೆಯ ಗೆಲುವು ಕಂಡಿತು. ಅಜೇಯ 162 ರನ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ ರಾಜ್ ಬಾವಾ (Raj Bawa) ಉಗಾಂಡ ಬೌಲರ್​ಗಳನ್ನು ಧೂಳೀಪಟ ಮಾಡಿದರು. ರಾಜ್ ಅವರು ಟೀಮ್ ಇಂಡಿಯಾ ಆರಂಭಿಕ ಶಿಖರ್ ಧವನ್ ದಾಖಲೆಯನ್ನು ಕೂಡ ಮುರಿದು ಹಾಕಿದ್ದಾರೆ. ರಘವಂಶಿ 144 ರನ್ ಚಚ್ಚಿದರು. ಈ ಬಾರಿಯ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಸೂಪರ್ ಲೀಗ್ ಕ್ವಾರ್ಟರ್​ ಫೈನಲ್ -2 ನಲ್ಲಿ ಭಾರತ ತಂಡ ಬಾಂಗ್ಲಾದೇಶ ಅಂಡರ್-19 ತಂಡವನ್ನು ಎದುರಿಸಲಿದೆ. ಕೊರೊನಾ ಕಾರಣದಿಂದ ಐಸೋಲೇಶನ್​ನಲ್ಲಿರುವ ನಾಯಕ ಯಶ್ ಧುಲ್ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಬೊಂಬಾಟ್ ಪ್ರದರ್ಶನ ನೀಡುತ್ತಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಬೇಗನೆ 15 ರನ್ ಗಳಿಸಿದ್ದ ಹರ್ನೂರ್ ಸಿಂಗ್ ಹಾಗೂ ನಾಯಕ ನಿಶಾಂತ್ ಸಿಂಧೂ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಮೂರನೇ ವಿಕೆಟ್​ಗೆ ಜೊತೆಯಾದ ರಘುವಂಶಿ ಹಾಗೂ ರಾಜ್ ಬಾವಾ ಅಮೋಘ ಆಟವಾಡಿದರು. ಉಗಾಂಡ ಬೌಲರ್​ಗಳ ಮೈಚಳಿ ಬಿಡಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಈ ಜೋಡಿ ದ್ವಿಶತಕದ ಜೊತೆಯಾಟ ಆಡಿತು. ರಘುವಂಶಿ 120 ಎಸೆತಗಳಲ್ಲಿ 22 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 144 ರನ್​ಗೆ ಔಟಾದರು.

ನಂತರ ಮನಬಂದಂತೆ ಬ್ಯಾಟ್ ಬೀಸಿದ ರಾಜ್ ತಂಡದ ರನ್ ಗತಿಯನ್ನ ಮತ್ತಷ್ಟು ಏರಿಸಿದರು. ಇವರು ಕೇವಲ 108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿ ಅಜೇಯ 162 ರನ್ ಚಚ್ಚಿದರು. ಪರಿಣಾಮ ಭಾರತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 405 ರನ್ ಕಲೆಹಾಕಿತು.

406 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಉಗಾಂಡ ಈ ಮೊತ್ತದ ಹತ್ತಿರ ಕೂಡ ಸಮೀಪಿಸಲಿಲ್ಲ. ತಂಡದ ಮೊತ್ತ 100ರ ಗಡಿ ಕೂಡ ದಾಟಲಿಲ್ಲ. ಭಾರತೀಯ ಬೌಲಿಂಗ್ ದಾಳಿಗೆ ನೆಲಕಚ್ಚಿದ ಉಗಾಂಡ ಬ್ಯಾಟರ್​ಗಳು 19.4 ಓವರ್​ನಲ್ಲಿ ಕೇವಲ 79 ರನ್​ಗೆ ಆಲೌಟ್ ಆಯಿತು. ಭಾರತ ಪರ ನಾಯಕ ನಿಶಾಂತ್ 4 ವಿಕೆಟ್ ಕಿತ್ತರೆ, ರಾಜ್​​ವರ್ಧನ್ 2, ವಾಸು ಮತ್ತು ವಿಕ್ಕಿ ತಲಾ 1 ವಿಕೆಟ್ ಪಡೆದರು.

ಧವನ್ ದಾಖಲೆ ರಾಜಾ ಉಡೀಸ್:

ಉಗಾಂಡಾ ವಿರುದ್ಧ ನಡೆದ ಅಂಡರ್​-19 ವಿಶ್ವಕಪ್​​ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಜಾ ಬಾವಾ ವಿಶೇಷ ದಾಖಲೆ ಬರೆದಿದ್ದಾರೆ. ಪ್ರಸ್ತುತ ವಿಶ್ವಕಪ್​ನಲ್ಲಿ ಅಜೇಯ 162ರನ್ ​ಗಳಿಕೆ ಮಾಡಿರುವ ಬಾವಾ ವಿಶ್ವಕಪ್ ಇತಿಹಾಸದಲ್ಲೇ ವೇಗವಾಗಿ 150ರನ್ ​ಗಳಿಕೆ ಮಾಡಿರುವ ಆಟಗಾರ​ ಎಂಬ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಈ ಹಿಂದೆ 2004 ರಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಶಿಖರ್ ಧವನ್​ ಸಿಡಿಸಿದ್ದ ಅಜೇಯ 155 ರನ್​ಗಳ ದಾಖಲೆ ಬ್ರೇಕ್ ಮಾಡಿದರು.

South Africa vs India: ಇಂದು ಅಂತಿಮ ಏಕದಿನ: ಮೂರನೇ ಪಂದ್ಯ ಗೆದ್ದು ವೈಟ್​ವಾಷ್​ನಿಂದ ಪಾರಾಗುವತ್ತ ಭಾರತ ಚಿತ್ತ