South Africa vs India: ಇಂದು ಅಂತಿಮ ಏಕದಿನ: ಮೂರನೇ ಪಂದ್ಯ ಗೆದ್ದು ವೈಟ್​ವಾಷ್​ನಿಂದ ಪಾರಾಗುವತ್ತ ಭಾರತ ಚಿತ್ತ

ಇಂದು ಕೇಪ್​ಟೌನ್​ನ ನ್ಯೂಲೆಂಡ್ಸ್ ಮೈದಾನದಲ್ಲಿ ಭಾರತ- ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಆಫ್ರಿಕಾ ಕ್ಲೀನ್​ಸ್ವೀಪ್ ಮಾಡುವತ್ತ ಚಿತ್ತ ನೆಟ್ಟದ್ದರೆ ಇತ್ತ ಟೀಮ್ ಇಂಡಿಯಾ ವೈಟ್​ವಾಷ್​ನಿಂದ ಪಾರಾಗಿ ಕೊನೇ ಪಂದ್ಯವನ್ನಾದರು ಗೆದ್ದು ಮಾನ ಉಳಿಸಿಕೊಳ್ಳುವ ಪ್ಲಾನ್​ನಲ್ಲಿದೆ.

South Africa vs India: ಇಂದು ಅಂತಿಮ ಏಕದಿನ: ಮೂರನೇ ಪಂದ್ಯ ಗೆದ್ದು ವೈಟ್​ವಾಷ್​ನಿಂದ ಪಾರಾಗುವತ್ತ ಭಾರತ ಚಿತ್ತ
India vs South Africa 3rd ODI
Follow us
TV9 Web
| Updated By: Vinay Bhat

Updated on: Jan 23, 2022 | 7:30 AM

ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೊದಲ ಎರಡೂ ಏಕದಿನ ಪಂದ್ಯಗಳಲ್ಲಿ ಸೋಲು ಕಂಡ ಭಾರತ (India) ಸರಣಿಯನ್ನು ಕಳೆದುಕೊಂಡಾಗಿದೆ. ಉಳಿದಿರುವುದು ಒಂದು ಪಂದ್ಯ. ಅದು ಇಂದು ಕೇಪ್​ಟೌನ್​ನ ನ್ಯೂಲೆಂಡ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ದಕ್ಷಿಣ ಆಫ್ರಿಕಾ ಕ್ಲೀನ್​ಸ್ವೀಪ್ ಮಾಡುವತ್ತ ಚಿತ್ತ ನೆಟ್ಟದ್ದರೆ ಇತ್ತ ಟೀಮ್ ಇಂಡಿಯಾ ವೈಟ್​ವಾಷ್​ನಿಂದ ಪಾರಾಗಿ ಕೊನೇ ಪಂದ್ಯವನ್ನಾದರು ಗೆದ್ದು ಮಾನ ಉಳಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಟೀಮ್ ಇಂಡಿಯಾಕ್ಕೆ ಈ ಗೆಲುವು ಕೂಡ ಸುಲಭ ಅಂತು ಕಂಡಿತಾ ಇಲ್ಲ. ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕವನ್ನು ಪೆವಿಲಿಯನ್​ಗೆ ಅಟ್ಟುವುದೇ ರಾಹುಲ್ (KL Rahul) ಪಡೆಗಿರುವ ಮೊದಲ ಸವಾಲು. ಬೌಲರ್​ಗಳ ಪಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಭಾರತ ಮಧ್ಯಮ ಕ್ರಮಾಂಕ ಮತ್ತು ಮಧ್ಯಮ ಓವರ್​ಗಳಲ್ಲಿ ಎಡವುತ್ತಿದೆ. ಈ ಹಿಂದಿನ ಎರಡೂ ಪಂದ್ಯ ಸೋಲಲು ಇದೇ ಕಾರಣ. ಟೆಸ್ಟ್ ಸರಣಿ ಸೋಲು. ಏಕದಿನ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ನಿರಾಶೆ ಅನುಭವಿಸಿರುವ ಪ್ರವಾಸಿ ಬಳಗವು ಇಂದಿನ ಅಂತಿಮ ಕದನಕ್ಕೆ ಕೆಲವು ಆಟಗಾರರ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸರಣಿ ಆರಂಭಕ್ಕೂ ಮುನ್ನ, ಗೆಲ್ಲುವುದಕ್ಕಿಂತ ನಾವು ಆಟಗಾರರ ಪ್ರದರ್ಶನ ಹಾಗೂ ಇತರೆ ವಿಷಯಗಳ ಕಡೆ ಗಮನ ಹರಿಸಲಿದ್ದೇವೆ ಎಂದು ಹೇಳಿದ್ದರು. ಆದರೆ, ಇಡೀ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಫಾರ್ಮ್​ನಲ್ಲಿ ಇಲ್ಲದ ಹಾಗೂ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಅಂತಿಮ ಪಂದ್ಯಕ್ಕೆ ಯಂಗ್ ಇಂಡಿಯಾವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ ಅಷ್ಟೇ ಪಂದ್ಯಗಳ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಯೋಜನೆ ರೂಪಿಸಿಕೊಂಡಿತ್ತು. ಆದರೆ ಮೊದಲನೇ ಪಂದ್ಯದಲ್ಲಿ 31 ರನ್‌ನಿಂದ ಸೋಲು ಅನುಭವಿಸಿದ್ದ ಟೀಮ್‌ ಇಂಡಿಯಾ, ಎರಡನೇ ಓಡಿಐನಲ್ಲಿಯೂ 7 ವಿಕೆಟ್‌ಗಳಿಂದ ಸೋಲಿಗೆ ಶರಣಾಗಿತ್ತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ.

ದಕ್ಷಿಣ ಆಫ್ರಿಕಾದ ಈ ಅಮೋಘ ಯಶಸ್ಸಿಗೆ ಮಧ್ಯಮ ಕ್ರಮಾಂಕ ಪ್ರಮುಖ ಕಾರಣ, ನಾಯಕ ಟೆಂಬಾ ಬವುಮಾ, ರಾಸಿ ವಾನ್ ಡೆರ್ ಡುಸ್ಸೆನ್ ಅವರಿಂದಾಗಿ ತುಂಬಾ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಆರಂಭಿಕ ಜೋಡಿಯೂ ಮಿಂಚಿತ್ತು. ಆದ್ದರಿಂದ ಮೊದಲ ಐದು ಕ್ರಮಾಂಕದ ಬ್ಯಾಟಿಂಗ್‌ ಬಲವನ್ನು ಕಟ್ಟಿಹಾಕುವ ಸವಾಲು ಭಾರತದ ಮುಂದಿದೆ. ಜಸ್‌ಪ್ರೀತ್ ಬೂಮ್ರಾ ಮತ್ತು ಶಾರ್ದೂಲ್ ಠಾಕೂರ್ ಉತ್ತಮ ಲಯದಲ್ಲಿದ್ದಾರೆ. ಠಾಕೂರ್ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದ್ದಾರೆ. ರಾಹುಲ್, ಶಿಖರ್ ಉತ್ತಮ ಆರಂಭ ನೀಡಿದರೆ ತಂಡದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಬಹುದು. ವಿರಾಟ್ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಅವರು ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚಬಹುದು. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತೊಮ್ಮೆ ಮಿಂಚಬೇಕಾಗಿದೆ.

ಉಭಯ ತಂಡಗಳು ಇಂತಿವೆ:

ಭಾರತ ತಂಡ: ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.

ದ. ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಯನಮಾನ್ ಮಲನ್, ಜುಬೇರ್ ಹಮ್ಜಾ, ಮಾರ್ಕೊ ಯಾನ್ಸನ್, ಸಿಸಂದಾ ಮಂಗ್ಲಾ, ಏಡನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೇಯ್ನ್ ಪ್ರಿಟೋರಿಯಸ್, ಕಾಗಿಸೋ ರಬಡಾ , ತಬ್ರೇಜ್ ಶಂಬಾಡಾ , ರಾಸಿ ವಾನ್ ಡೆರ್ ಡುಸ್ಸೆನ್, ಕೈಲ್ ವೆರೆನ್.

IPL 2022: ಐಪಿಎಲ್ ಸೀಸನ್ 15 ಆರಂಭ ಯಾವಾಗ? ಸುಳಿವು ನೀಡಿದ ಬಿಸಿಸಿಐ